Watermelon: ಕಲ್ಲಂಗಡಿ ಹಣ್ಣಿನ ಪಕ್ವತೆಯನ್ನು ಪರಿಶೀಲಿಸುವ ಸುಲಭ ಸಲಹೆಗಳು

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 12, 2023 | 4:24 PM

ಕಲ್ಲಂಗಡಿ ಹಣ್ಣು ಸಂಪೂರ್ಣವಾಗಿ ಮಾಗಿದೆಯೇ, ಅದು ತಿನ್ನಲು ಯೋಗ್ಯವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಕಷ್ಟಕರವಾಗುತ್ತಿದೆಯೇ, ಕಲ್ಲಂಗಡಿ ಹಣ್ಣಾಗಿದೆಯೇ, ಮಾಗಿದೆಯೇ ಮತ್ತು ಅದು ಉತ್ತಮವಾಗಿದೆಯೇ ಎಂದು ತಿಳಿಯಲು 5 ಸರಳ ಸಲಹೆಗಳು ಇಲ್ಲಿವೆ.

Watermelon: ಕಲ್ಲಂಗಡಿ ಹಣ್ಣಿನ ಪಕ್ವತೆಯನ್ನು ಪರಿಶೀಲಿಸುವ ಸುಲಭ ಸಲಹೆಗಳು
ಸಾಂದರ್ಭಿಕ ಚಿತ್ರ
Follow us on

ಈ ಬೇಸಿಗೆ ಸಮಯದಲ್ಲಿ ಹೆಚ್ಚಾಗಿ ಕಲ್ಲಂಗಡಿ ಹಣ್ಣುಗಳು (Watermelon) ಮಾರುಕಟ್ಟೆಯಲ್ಲಿ ಕಾಣಸಿಗುತ್ತವೆ. ಕಲ್ಲಂಗಡಿ ಹೆಚ್ಚಿನ ಪ್ರಮಾಣದ ನೀರಿನಾಂಶವನ್ನು ಹೊಂದಿದೆ ಮತ್ತು ಇದು ಉತ್ಕರ್ಷಣ ನಿರೋಧಕ ಅಂಶದಲ್ಲಿ ಸಮೃದ್ಧವಾಗಿರುವುದರಿಂದ ಇದು ಬೇಸಿಗೆಯಲ್ಲಿ ತಿನ್ನಲು ಉತ್ತಮವಾದ ಹಣ್ಣಾಗಿದೆ. ಕಲ್ಲಂಗಡಿ ಉರಿಯೂತದ ವಿರುಧ್ಧ ಹೋರಾಡಲು ಮತ್ತು ಹೊಟ್ಟೆಯನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಹೆಚ್ಚಿನವರು ಬೇಸಿಗೆಯ ಶಾಖದಿಂದ ದೇಹವನ್ನು ತಂಪಾಗಿರಿಸಲು ಕಲ್ಲಂಗಡಿ ಹಣ್ಣುಗಳನ್ನು ಆಗಾಗ್ಗೆ ಖರೀದಿಸುತ್ತಿರುತ್ತಾರೆ. ಕಲ್ಲಂಗಡಿಯನ್ನು ಖರೀದಿಸುವುದರ ಜೊತೆಗೆ ಅದು ಉತ್ತಮವಾಗಿದೆಯೇ, ಸರಿಯಾಗಿ ಮಾಗಿದೆಯೇ ಎಂದು ತಿಳಿಯುವುದು ಮುಖ್ಯವಾಗಿರುತ್ತದೆ. ಹೆಚ್ಚಿನ ಜನರಿಗೆ ಇದೊಂದು ಸವಾಲಿನ ಸಂಗಾತಿಯಾಗಿದೆ. ಕೆಲವು ವರ್ಷಗಳ ಹಿಂದೆ ಗ್ರಾಹಕರು ಕಲ್ಲಂಗಡಿಯ ರುಚಿಯನ್ನು ಪರೀಕ್ಷಿಸಲು ಮಾರಾಟಗಾರರು ಕಲ್ಲಂಗಡಿ ತುಂಡುಗಳನ್ನು ಕತ್ತರಿಸಿ ಕೊಡುತ್ತಿದ್ದರು. ಇದರಿಂದ ಹಣ್ಣು ಮಾಗಿದೆಯೇ ಎಂದು ಸುಲಭವಾಗಿ ತಿಳಿಯಬಹುದಾಗಿತ್ತು. ಆದರೆ ಇತ್ತೀಚಿನ ದಿನಗಳಲಲ್ಲಿ ನೈರ್ಮಲ್ಯದ ಕಾರಣಕ್ಕಾಗಿ ಹಣ್ಣುಗಳನ್ನು ತುಂಡರಿಸಿ ಇಡುವುದಿಲ್ಲ. ಹಾಗಾದರೆ ಕಲ್ಲಂಗಡಿ ಸಂಪೂರ್ಣವಾಗಿ ಮಾಗಿದೆಯೇ ಎಂದು ನಾವು ಹೇಗೆ ನೋಡಬಹುದು ಎಂಬ ಯೋಚನೆಯಲ್ಲಿದ್ದೀರಾ? ಕಲ್ಲಂಗಡಿ ಹಣ್ಣಿನ ಪಕ್ವತೆಯನ್ನು ನಿರ್ಧರಿಸಲು ಕೆಲವು ಸುಲಭ ಮಾರ್ಗಗಳಿವೆ. ಈ ಸಲಹೆಗಳನ್ನು ಪಾಲಿಸುವ ಮೂಲಕ ಮಾಗಿದ ಕಲ್ಲಂಗಡಿ ಹಣ್ಣನ್ನು ಕೊಂಡುಕೊಳ್ಳಬಹುದು.

ಕಲ್ಲಂಗಡಿ ಹಣ್ಣಾಗಿದೆಯೇ ಎಂದು ಪರಿಶೀಲಿಸಲು ಇರುವ 5 ಸುಲಭ ಮಾರ್ಗಗಳು:

ತೂಕವನ್ನು ಪರಿಶೀಲಿಸಿ: ಕಲ್ಲಂಗಡಿ ಹಣ್ಣಾಗಿದೆಯೇ ಎಂದು ಕಂಡುಹಿಡಿಯಲು ಅದರ ತೂಕವನ್ನು ಪರಿಶೀಲಿಸುವುದು ಉತ್ತಮ ಮಾರ್ಗವಾಗಿದೆ. ಸರಿಸುಮಾರು ಒಂದೇ ಗಾತ್ರದ ಎರಡು ಕಲ್ಲಂಗಡಿಗಳನ್ನು ಹೋಲಿಕೆ ಮಾಡಿ ಮತ್ತು ಅವುಗಳನ್ನು ನಿಮ್ಮ ಕೈಯಲ್ಲಿ ಅಂದಾಜಿಗೆ ತೂಕ ಮಾಡಿ, ಅದರಲ್ಲಿ ಹೆಚ್ಚು ಭಾರವಾಗಿರುವ ಕಲ್ಲಂಗಡಿ ಹೆಚ್ಚು ರಸಭರಿತ ಮತ್ತು ಮಾಗಿದ ಸಾಧ್ಯತೆ ಇರುತ್ತದೆ.

ಕಲ್ಲಂಗಡಿಯನ್ನು ತಟ್ಟಿ ನೋಡಿ: ಬಾಗಿಲನ್ನು ತಟ್ಟುವಂತೆ ಕಲ್ಲಂಗಡಿಯನ್ನು ತಟ್ಟುವ ಮೂಲಕ ಅದು ಮಾಗಿದೆಯೇ ಎಂದು ಪರೀಕ್ಷಿಸಬಹುದು. ಮಾಗಿದ ಹಾಗೂ ರಸಭರಿತ ಕಲ್ಲಂಗಡಿ ಆಳವಾದ ಶಬ್ಧವನ್ನು ನೀಡುತ್ತದೆ. ಅದು ಟೊಳ್ಳಾಗಿದ್ದರೆ ಹೆಚ್ಚು ಪಕ್ವವಾಗಿರುತ್ತದೆ.

ವಾಸನೆಯನ್ನು ನೋಡಿ: ಕಲ್ಲಂಗಡಿ ಹಣ್ಣಿನ ವಾಸನೆಯನ್ನು ಪರಿಸೀಲಿಸಿ. ಕಲ್ಲಂಗಡಿಯ ಸಿಹಿಯಾದ ಪರಿಮಳವು ಸಾಕಷ್ಟು ವಿಶಿಷ್ಟವಾಗಿರುತ್ತದೆ. ಅದರ ಸುವಾಸನೆಯು ಹೆಚ್ಚು ಪ್ರಬಲವಾಗಿದ್ದರೆ ಅದು ಮಾಗಿದ ಹಣ್ಣು ಎಂದರ್ಥ.

ಇದನ್ನೂ ಓದಿ: Watermelon: ಕತ್ತರಿಸದೆ ಕಲ್ಲಂಗಡಿ ಹಣ್ಣನ್ನು ಕೆಂಪಾಗಿದೆಯೇ ಎಂದು ತಿಳಿಯುವುದು ಹೇಗೆ? ಇಲ್ಲಿದೆ ಟಿಪ್ಸ್​​​

ವಿನ್ಯಾನವನ್ನು ಪರಿಶೀಲಿಸಿ: ಕಲ್ಲಂಗಡಿಯ ಸಿಪ್ಪೆಯ ವಿನ್ಯಾಸವನ್ನು ನೀವು ಪರಿಸೀಲಿಸಿ ನೋಡಬಹುದು. ಸಾಮಾನ್ಯವಾಗಿ ಕಲ್ಲಂಗಡಿಯ ಸಿಪ್ಪೆ ಗಟ್ಟಿಯಾಗಿರುತ್ತದೆ. ಆದರೆ ಸಂಪೂರ್ಣವಾಗಿ ಮಾಗಿದ ಕಲ್ಲಂಗಡಿ ಹಣ್ಣನ್ನು ಬೆರಳಿನಿಂದ ಒತ್ತಿದಾಗ ಅದು ಸ್ವಲ್ಪ ಮೃದುತ್ವ ಹೊಂದಿದಂತೆ ಭಾಸವಾಗುತ್ತದೆ. ಅಂತಹ ಕಲ್ಲಂಗಡಿ ಖರೀದಿಸಲು ಯೋಗ್ಯವಾಗಿದೆ.

ಬಣ್ಣವನ್ನು ಪರಿಶೀಲಿಸಿ: ಇದು ಕಲ್ಲಂಗಡಿ ಹಣ್ಣಾಗಿದೆಯೇ ಅಥವಾ ಇಲ್ಲವೇ ಎಂದು ನೋಡಲು ಇರುವ ಸುಲಭ ಮಾರ್ಗವಾಗಿದೆ. ಕಡು ಹಸಿರು ಬಣ್ಣ ಮತ್ತು ತಿಳಿ ಹಸಿರು ಬಣ್ಣ ಕಲ್ಲಂಗಡಿ ಹಣ್ಣಾಗಿರುತ್ತದೆ. ನೀವು ಬಣ್ಣದ ತೇಪೆಗಾಗಿ ಕಲ್ಲಂಗಡಿಯ ಹಣ್ಣಿನ ಬದಿಯನ್ನು ಪರೀಕ್ಷಿಸಬಹುದು. ಆ ತೇಪೆ ಹಳದಿ ಬಣ್ಣದ್ದಾಗಿದ್ದರೆ, ಅದು ಹೊಲದಲ್ಲಿ ಬಳ್ಳಿಯಲ್ಲಿಯೇ ಹಣ್ಣಾಗಿದೆ ಎಂದರ್ಥ. ಒಂದು ವೇಳೆ ಆ ತೇಪೆಯು ಬಿಳಿಯಾಗಿದ್ದರೆ, ಕಲ್ಲಂಗಡಿಯನ್ನು ಹಣ್ಣಾಗುವ ಮೊದಲೇ ಬಳ್ಳಿಯಿಂದ ಕಿತ್ತಿರಬಹುದು. ಆದ್ದರಿಂದ ಬಣ್ನವನ್ನು ಪರಿಶೀಲಿಸಿ ಕಲ್ಲಂಗಡಿಯನ್ನು ಆರಿಸಿ.