ಕರಾವಳಿಗರ ಸಾಂಪ್ರದಾಯಿಕ ತಿನಿಸು ಕಲ್ತಪ್ಪ ಮಾಡೋದು ಸುಲಭ, ಇಲ್ಲಿದೆ ರೆಸಿಪಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 26, 2024 | 4:03 PM

ತುಳುನಾಡು ಹಾಗೂ ಮಲೆನಾಡು ಭಾಗಗಳಲ್ಲಿ ವಿವಿಧ ಸಾಂಪ್ರದಾಯಿಕ ತಿನಿಸನ್ನು ಕಾಣಬಹುದು. ಅಂತಹ ರುಚಿಕರವಾದ ತಿನಿಸಲ್ಲಿ ಕಲ್ತಪ್ಪ ಕೂಡ ಸೇರಿದೆ. ಒಂದು ಕಾಲದಲ್ಲಿ ಬಳಪದ ಕಲ್ಲಿನ ವಿಶಿಷ್ಟವಾದ ತವಾದಲ್ಲಿ ತಯಾರಾಗುವ ತಿಂಡಿ ಕಲ್ಲಿನ ಅಪ್ಪ ಎಂದು ಕರೆಯಲಾಗುತಿತ್ತು, ಇಂದು ಕಲ್ಲಿನ ಬದಲು ಲೋಹದ ತವಾದಲ್ಲಿ ಸಿದ್ಧವಾಗುತ್ತಿದ್ದರೂ ಅದರ ಹೆಸರು 'ಕಲ್ತಪ್ಪ' ಎಂದೇ ಉಳಿದುಕೊಂಡಿದೆ. ಕರಾವಳಿಗರ ಸಾಂಪ್ರದಾಯಿಕ ತಿನಿಸು ಕಲ್ತಪ್ಪ ಮಾಡುವುದು ಹೇಗೆ ಎನ್ನುವುದರ ಸಂಪೂರ್ಣ ಮಾಹಿತಿಯು ಇಲ್ಲಿದೆ.

ಕರಾವಳಿಗರ ಸಾಂಪ್ರದಾಯಿಕ ತಿನಿಸು ಕಲ್ತಪ್ಪ ಮಾಡೋದು ಸುಲಭ, ಇಲ್ಲಿದೆ ರೆಸಿಪಿ
ಸಾಂದರ್ಭಿಕ ಚಿತ್ರ (ಕಲ್ತಪ್ಪ)
Follow us on

ಕರಾವಳಿ ಹಾಗೂ ಮಲೆನಾಡಿಗರ ಮನೆಯಲ್ಲಿ ಅಡುಗೆ ಮನೆಯಲ್ಲಿ ಮಾಡುವ ಸಾಂಪ್ರದಾಯಿಕ ತಿನಿಸು ಈ ಕಲ್ತಪ್ಪ. ತುಳು ಭಾಷೆಯಲ್ಲಿ ಇದನ್ನು ಗೆಂಡದಡ್ಯ ಎಂದು ಹೇಳುತ್ತಾರೆ. ಈ ವಿಶೇಷ ತಿನಿಸನ್ನು ಕೆಂಡದಲ್ಲಿಯೇ ಬೇಯಿಸುವ ಕಾರಣ ಇದಕ್ಕೆ ಈ ಹೆಸರು ಬಂದಿದೆ. ಆದರೆ ಈ ಹೆಸರನ್ನು ಇಟ್ಟವರು ಕೇರಳಿಗರು ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಈ ತಿನಿಸನ್ನು ಹಲವು ಬಗೆಯಲ್ಲಿ ಮಾಡಬಹುದಾದರೂ ಹದ ಗೊತ್ತಿದ್ದರೆ ಮಾಡೋದು ಬಲು ಸುಲಭ. ಮನೆಯಲ್ಲಿರುವ ಕೆಲವೇ ಸಾಮಗ್ರಿಗಳಿಂದ ಮಾಡಬಹುದಾದ ತಿನಿಸು ಇದಾಗಿದೆ.

ಕಲ್ತಪ್ಪ ಮಾಡಲು ಬೇಕಾಗುವ ಸಾಮಗ್ರಿಗಳು

*ಅಕ್ಕಿ(ಬೆಳ್ಳಿಗೆ ಮತ್ತು ಕುಚ್ಚುಲಕ್ಕಿ ಸಮಪ್ರಮಾಣದಲ್ಲಿ)

* ಕಪ್ ಬೆಲ್ಲ

* ಸೌತೆಕಾಯಿ

* ಒಂದು ಕಪ್ ತುರಿದ ತೆಂಗಿನಕಾಯಿ

* ಏಲಕ್ಕಿ ಪುಡಿ

* ಈರುಳ್ಳಿ

* ಕರಿಬೇವು

* ಎಣ್ಣೆ

* ಸಾಸಿವೆ

* ಬೆಳ್ಳುಳ್ಳಿ ಎಸಳು

* ರುಚಿಗೆ ತಕ್ಕಷ್ಟು ಉಪ್ಪು

ಇದನ್ನೂ ಓದಿ; ಉತ್ತರ ಕರ್ನಾಟಕದ ಸಾಂಪ್ರದಾಯಿಕ ಸಿಹಿ ತಿನಿಸು ಸುರುಳಿ ಹೋಳಿಗೆ, ಇಲ್ಲಿದೆ ರೆಸಿಪಿ

ಕಲ್ತಪ್ಪ ಮಾಡುವ ವಿಧಾನ

* ಮೊದಲು ಅಕ್ಕಿಯನ್ನು ಕೆಲಹೊತ್ತು ನೀರಿನಲ್ಲಿ ನೆನೆಸಿಟ್ಟುಕೊಳ್ಳಬೇಕು.

* ಬೆಲ್ಲ ಮತ್ತು ಸೌತೆಕಾಯಿಯನ್ನು ಸಣ್ಣಗೆ ಹೆಚ್ಚಿ ತಯಾರಾಗಿ ಇಟ್ಟುಕೊಳ್ಳಿ.

* ನೆನೆಸಿಟ್ಟ ಅಕ್ಕಿ ಜೊತೆಗೆ ಬೆಲ್ಲ, ಸೌತೆಕಾಯಿ, ತೆಂಗಿನ ತುರಿ, ಏಲಕ್ಕಿ ಪುಡಿ ಮತ್ತು ಉಪ್ಪನ್ನು ಸೇರಿಸಿ ರುಬ್ಬಿಕೊಳ್ಳಿ.

* ರುಬ್ಬಿದ ಹಿಟ್ಟನ್ನು ಅರ್ಧಗಂಟೆಗಳ ಕಾಲ ಹಾಗೆ ಬಿಡಿ.

* ನಂತರದಲ್ಲಿ ಒಂದು ಅಗಲವಾದ ಪಾತ್ರೆಗೆ ಎಣ್ಣೆ ಹಾಕಿ, ಬಿಸಿಯಾಗುತ್ತಿದ್ದಂತೆ ಸಾಸಿವೆ, ಬೆಳ್ಳುಳ್ಳಿ ಎಸಳು, ಕರಿಬೇವು ಹಾಕಿ ಒಗ್ಗರಣೆ ಮಾಡಿ.

* ಕತ್ತರಿಸಿದ ಈರುಳ್ಳಿಯನ್ನು ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿಕೊಳ್ಳಿ.

* ಈ ಪಾತ್ರೆಗೆ ರುಬ್ಬಿದ ಹಿಟ್ಟನ್ನು ಹಾಕಿ ಸರಿಯಾಗಿ ಮುಚ್ಚಳ ಮುಚ್ಚಿ, ಹತ್ತರಿಂದ ಹದಿನೈದು ನಿಮಿಷಗಳ ಕಾಲ ಬೇಯಿಸಿಕೊಳ್ಳಬೇಕು.

* ಆ ಬಳಿಕ ಇನ್ನೊಂದು ಮಣ್ಣಿನ ಪಾತ್ರೆಯಲ್ಲಿ ಕೆಂಡವನ್ನು ಹಾಕಿಕೊಂಡು ಬೆಂದ ಈ ತಿನಿಸನ್ನು ಕತ್ತರಿಸಿಕೊಂಡು ಕೆಂಡದಲ್ಲಿ ಕೆಲ ಹೊತ್ತು ಹುರಿದರೆ ರುಚಿಕರವಾದ ಕಲ್ತಪ್ಪ ಸವಿಯಲು ಸಿದ್ಧವಾಗಿರುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 3:06 pm, Fri, 26 July 24