ನಿಮ್ಮ ಬಾಯ್ ಫ್ರೆಂಡ್ ಪ್ರೀತಿಯ ಹೆಸರಿನಲ್ಲಿ ನಿಮ್ಮನ್ನು ಬಳಸಿಕೊಳ್ಳುತ್ತಿದ್ದಾನಾ, ಕಂಡು ಹಿಡಿಯುವುದು ಹೇಗೆ?
ಪ್ರೀತಿ ಅಂದ್ರೇನೆ ಹಾಗೆ, ಯಾರ ಮೇಲೆ, ಯಾವಾಗ, ಹೇಗೆ ಚಿಗುರೊಡೆಯುತ್ತದೆ ಎಂದು ಹೇಳಲು ಅಸಾಧ್ಯ. ಪ್ರೀತಿಗೆ ಜಾತಿ, ಅಂತಸ್ತು, ಆಸ್ತಿ, ಧರ್ಮ ಇದ್ಯಾವುದು ಬೇಕಾಗಿಲ್ಲ. ಆದರೆ ಈಗಿನ ಕಾಲದಲ್ಲಿ ಯಾರು ನಿಜವಾಗಿ ಪ್ರೀತಿಸುತ್ತಾರೆ ಎಂದು ಹೇಳುವುದೇ ಕಷ್ಟ. ಜೀವಕ್ಕಿಂತ ಹೆಚ್ಚು ಎಂದು ಹೇಳುತ್ತಿದ್ದ ವ್ಯಕ್ತಿಯು ಕೈ ಕೊಡಬಹುದು. ನಿಮ್ಮ ಪ್ರೇಮಿಗೆ ನಿಮ್ಮ ಮೇಲೆ ಪ್ರೀತಿ ಇರುವುದು ನಿಜವೇ ಎಂದು ತಿಳಿಯುವುದು ಹೇಗೆ, ಆ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
ಪ್ರೀತಿ ಎನ್ನುವುದು ಮಧುರವಾದ ಭಾವನೆ. ಆದರೆ ಈಗಿನ ಕಾಲದಲ್ಲಿ ಪರಿಶುದ್ಧವಾಗಿ ಪ್ರೀತಿಸೋರು ಸಿಗೋದು ಕಷ್ಟ. ಈ ಹುಡುಗ ಹುಡುಗಿಯರ ನಡುವಿನ ಪ್ರೀತಿಗೆ ಗ್ಯಾರಂಟಿ ಅನ್ನೋದೇ ಇಲ್ಲ. ಸಣ್ಣ ಪುಟ್ಟ ಕಾರಣಗಳಿಂದಲೂ ಬ್ರೇಕಪ್ ಮಾಡಿಕೊಳ್ಳುವವರು ಹೆಚ್ಚು. ಇಲ್ಲದಿದ್ದರೆ ಲವ್ ಎನ್ನುವ ಹೆಸರಿನಲ್ಲಿ ಮೋಸ ಮಾಡುವುದು ಇದೆ. ಹೀಗಾಗಿ ನಿಮ್ಮ ಮುಂದೆ ಇರುವ ವ್ಯಕ್ತಿಯ ಪ್ರೀತಿಯಲ್ಲಿ ತೇಲಿಹೋಗುವ ಮುನ್ನ ಆತನು ಈ ಸಂಬಂಧದಲ್ಲಿ ಪ್ರಾಮಾಣಿಕರಾಗಿ ಇದ್ದಾರಾ ಎಂದು ತಿಳಿಯುವುದು ಮುಖ್ಯ.
* ಜೊತೆಗೆ ಇದ್ದರೂ ಕಾಡುತ್ತೆ ಒಂಟಿತನ : ನಿಜವಾಗಿ ಪ್ರೀತಿಯಲ್ಲಿರುವ ವ್ಯಕ್ತಿಯು ನಿಮ್ಮೊಂದಿಗೆ ಸಾಧ್ಯವಾದಷ್ಟು ಸಮಯವನ್ನು ಕಳೆಯಲು ಬಯಸುತ್ತಾರೆ. ಪ್ರೇಮಿಯು ನಿಮ್ಮ ಜೊತೆಗೆ ಇದ್ದಾಗಲೂ ಸರಿಯಾಗಿ ಮಾತನಾಡದೇ ಮೊಬೈಲ್ ನಲ್ಲೇ ಬ್ಯುಸಿಯಾಗಿದ್ದರೆ ಆತನು ನಿಮ್ಮನ್ನು ನಿಜವಾಗಿಯೂ ಪ್ರೀತಿಸುವುದಿಲ್ಲ ಎನ್ನುವುದನ್ನು ತಿಳಿದುಕೊಳ್ಳಿ. ಜೊತೆಗೆ ಇದ್ದರೂ ಕೆಲವೊಮ್ಮೆ ನೀವು ಒಂಟಿಯೆನಿಸಬಹುದು. ಈ ಎಲ್ಲವು ನಿಮಗೆ ಅನುಭವವಾಗುತ್ತಿದ್ದರೆ ನಿಮ್ಮ ಪ್ರೀತಿಯನ್ನು ಟೈಮ್ ಪಾಸ್ ಎಂದು ತಿಳಿದು, ನಿಮ್ಮನ್ನು ಬಳಸಿಕೊಳ್ಳುತ್ತಿದ್ದಾನೆ ಎನ್ನುವುದು ಅರಿವಿಗೆ ಬರುತ್ತದೆ.
* ಕೆಟ್ಟ ಸಮಯದಲ್ಲಿ ನಿಮ್ಮ ಜೊತೆಗೆ ಇರಲ್ಲ : ಪ್ರೀತಿಯಿದ್ದ ಕಡೆ ಸುಖ ದುಃಖಗಳಲ್ಲಿ ಒಬ್ಬರಿಗೊಬ್ಬರು ನೆರಳಾಗಿರಬೇಕು. ನಿಜವಾಗಿ ಪ್ರೀತಿಸುವ ವ್ಯಕ್ತಿಯು ಕೆಟ್ಟ ಸಂದರ್ಭಗಳಲ್ಲಿಯೂ ನಿಮ್ಮನ್ನು ಯಾವತ್ತೂ ಬಿಟ್ಟುಕೊಡುವುದಿಲ್ಲ. ಹೆಗಲಿಗೆ ಹೆಗಲು ಕೊಟ್ಟು ದುಃಖಕ್ಕೆ ಸಾಂತ್ವನ ನೀಡುತ್ತಾನೆ. ನಿಮ್ಮ ಹುಡುಗನಿಗೆ ನಿಮ್ಮ ಮೇಲೆ ನಿಜವಾದ ಪ್ರೀತಿ ಇದೆಯೇ ಎಂದು ತಿಳಿಯಲು ಇದಕ್ಕಿಂತ ಒಂದೊಳ್ಳೆ ಸಮಯ ಬೇಕಾಗಿಲ್ಲ. ನೀವು ಸಮಸ್ಯೆಯಲ್ಲಿದ್ದಾಗ ಆದರಿಂದ ನಿಮ್ಮನ್ನು ಹೊರ ತರಲು ಪ್ರಯತ್ನಿಸುತ್ತಾನೆ. ಟೈಮ್ ಪಾಸ್ ಎಂದು ಭಾವಿಸುವ ವ್ಯಕ್ತಿಯು ನಿಮಗೆ ಕಷ್ಟ ಬಂದಾಗ ಆತನಿಂದ ಯಾವುದೇ ಸ್ಪಂದನೆ ಸಿಗದೇ ಹೋಗಬಹುದು.
* ಭಾವನಾತ್ಮಕ ಬೆಂಬಲದ ಕೊರತೆ : ಪ್ರೀತಿಯ ಸಂಬಂಧದಲ್ಲಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಪರಸ್ಪರ ಬೆಂಬಲಿಸುವುದು ಅತೀ ಮುಖ್ಯ. ಇದು ನಿಜವಾದ ಪ್ರೀತಿಯನ್ನು ತೋರ್ಪಡಿಸುತ್ತದೆ. ಪ್ರೇಮಿಯೂ ನಿಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳದಿದ್ದರೆ ಮತ್ತು ನಿಮ್ಮನ್ನು ನಿರ್ಲಕ್ಷಿಸುತ್ತಿದ್ದರೆ, ಆತನ ಪ್ರೀತಿಯು ನಿಜವಾಗಿರುವುದಿಲ್ಲ.
ಇದನ್ನೂ ಓದಿ: ಕರಾವಳಿಗರ ಸಾಂಪ್ರದಾಯಿಕ ತಿನಿಸು ಕಲ್ತಪ್ಪ ಮಾಡೋದು ಸುಲಭ, ಇಲ್ಲಿದೆ ರೆಸಿಪಿ
* ಎಲ್ಲಾ ವಿಷಯವನ್ನು ಮುಚ್ಚಿಡುವುದು : ದಿನನಿತ್ಯ ವರದಿಯನ್ನು ಒಪ್ಪಿಸುವ ಹುಡುಗನು ನಿಮ್ಮ ಜೊತೆಗೆ ಇದ್ದರೆ ಆತನದ್ದು ನಿಸ್ವಾರ್ಥ ಪ್ರೀತಿ ಎನ್ನುವುದು ಖಚಿತವಾಗುತ್ತದೆ. ಒಂದು ವೇಳೆ ಪ್ರೇಮಿಯು ನಿಮ್ಮಿಂದ ವಿಷಯಗಳನ್ನು ಮರೆಮಾಚುತ್ತಿದ್ದರೆ, ಪದೇ ಪದೇ ಸುಳ್ಳು ಹೇಳುತ್ತಿದ್ದರೆ ನೀವು ಮೋಸದ ಪ್ರೀತಿಗೆ ಬಲಿಯಾಗುತ್ತಿದ್ದೀರಾ ಎಂದರ್ಥ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ