ಜಂಕ್ ಫುಡ್ ತಿನ್ನುವುದರಿಂದ ಈ ಒತ್ತಡಗಳು ಕಾಡಬಹುದು!

ಜಂಕ್ ಫುಡ್​​ಗಳನ್ನು ತಿನ್ನುವ ಮುನ್ನ ಯೋಚನೆ ಮಾಡಿ ಏಕೆಂದರೆ, ಇದು ನಿಮ್ಮ ಆರೋಗ್ಯದ ಮೇಲೆ ಮಾತ್ರವಲ್ಲ, ದೈಹಿಕ ಮಾನಸಿಕ ಒತ್ತಡವನ್ನು ಕೂಡ ಹೆಚ್ಚು ಮಾಡುತ್ತದೆ. ಇದರಿಂದ ಈ ರೋಗ ಲಕ್ಷಣಗಳು ಕಾಡಬಹುದು. ಹಾಗಾಗಿ ಜಂಕ್ ಫುಡ್ ಸೇವನೆ ಮಾಡುವ ಮುನ್ನ ಯೋಚನೆ ಮಾಡಿ. ಯಾವೆಲ್ಲ ಒತ್ತಡಗಳು ನಿಮ್ಮನ್ನು ಕಾಡಬಹುದು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ಜಂಕ್ ಫುಡ್ ತಿನ್ನುವುದರಿಂದ ಈ ಒತ್ತಡಗಳು ಕಾಡಬಹುದು!
ಸಾಂದರ್ಭಿಕ ಚಿತ್ರ
Edited By:

Updated on: May 15, 2025 | 3:30 PM

ಜಂಕ್ ಫುಡ್  (junk food) ಎಲ್ಲರೂ ತುಂಬಾ ಇಷ್ಟಪಡುತ್ತಾರೆ. ಅದರಲ್ಲಿರುವ ರುಚಿ ಎಲ್ಲೂ ಸಿಗಲ್ಲ ಎಂಬುದು ಅವರ ಭಾವನೆ, ಆದರೆ ಅದರಲ್ಲಿರುವ ರೋಗ ಕೂಡ ಎಲ್ಲೂ ಸಿಗದು, ಹೌದು ಜಂಕ್ ಫುಡ್ ತಿನ್ನುವುದರ ಬಗ್ಗೆ ವೈದ್ಯರೇ ಸಲಹೆಗಳನ್ನು ನೀಡುತ್ತಾರೆ. ಅದರ ಬಗ್ಗೆ ಅವರ ಅಭಿಪ್ರಾಯ ಕೂಡ ಅದರ ವಿರುದ್ಧವಾಗಿರುತ್ತದೆ. ಜಂಕ್ ಫುಡ್ ತಿನ್ನುವುದರಿಂದ ದೇಹದ ಆರೋಗ್ಯ ಮಾತ್ರವಲ್ಲ ಮಾನಸಿಕ ಆರೋಗ್ಯದ ಮೇಲೆಯೂ ಇದು ಪರಿಣಾಮವನ್ನು ಉಂಟು ಮಾಡುತ್ತದೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ಇದು ಒತ್ತಡವನ್ನು ಉಂಟು ಮಾಡುತ್ತದೆ. ಇದು ಸಕ್ಕರೆ, ಉಪ್ಪು, ಅನಾರೋಗ್ಯಕರ ಕೊಬ್ಬುಗಳು ಜತೆಗೆ ದೇಹದ ಹಾರ್ಮೋನುಗಳ ಸಮತೋಲನ, ರಕ್ತದಲ್ಲಿನ ಸಕ್ಕರೆ ಮಟ್ಟಗಳು ಮತ್ತು ಕರುಳಿನ ಆರೋಗ್ಯವನ್ನು ಅಡ್ಡಿಪಡಿಸಬಹುದು. ತಾತ್ಕಾಲಿಕವಾಗಿ ಇಂದು ನಾಲಿಗೆ ಖುಷಿ ನೀಡಬಹುದು, ಆದರೆ ಇದು ನಂತರದಲ್ಲಿ ಕಿರಿಕಿರಿ, ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು ನೀಡಬಹುದು. ಜಂಕ್ ಫುಡ್​​ನಿಂದ ಕಳಪೆ ಪೋಷಣೆ, ಮೆದುಳಿನ ಆರೋಗ್ಯಕ್ಕೆ, ದೈನಂದಿನ ಒತ್ತಡಗಳನ್ನು ನಿಭಾಯಿಸುವ ದೇಹದ ಸಾಮರ್ಥ್ಯ ಕೂಡ ಕಡಿಮೆ ಮಾಡುತ್ತದೆ. ಆತಂಕ ಮತ್ತು ಮನಸ್ಸಿನಲ್ಲಿ ಒಂದು ಕೆಟ್ಟ ಭಾವನೆಯನ್ನು ಇದು ಸೃಷ್ಟಿಸುತ್ತದೆ.

ಅತಿಯಾಗಿ ಜಂಕ್ ತಿನ್ನುವುದರಿಂದ ಒತ್ತಡದ ಮಟ್ಟ ಹೇಗೆ ಹೆಚ್ಚಾಗುತ್ತದೆ?

  • ರಕ್ತದಲ್ಲಿನ ಸಕ್ಕರೆಯ ಏರಿಕೆ ಮತ್ತು ಕುಸಿತ : ಜಂಕ್ ಫುಡ್‌ನಲ್ಲಿ ಹೆಚ್ಚಾಗಿ ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳು ಮತ್ತು ಸಕ್ಕರೆ ಅಧಿಕವಾಗಿರುತ್ತದೆ, ಇದು ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಏರಿಕೆಯನ್ನು ಮಾಡುತ್ತದೆ. ಈ ಏರಿಳಿತದಿಂದ ಆತಂಕ, ಆಯಾಸ ಮತ್ತು ದುರ್ಬಲ ಮನಸ್ಥಿತಿಗೆ ಒಳಗಾಗಿಸಬಹುದು. ಭಾವನಾತ್ಮಕ ಸಮತೋಲನಕ್ಕೆ ಸ್ಥಿರವಾದ ರಕ್ತದಲ್ಲಿನ ಸಕ್ಕರೆ ಅತ್ಯಗತ್ಯ, ಹಾಗಾಗಿ ಈ ರೀತಿಯ ಆಹಾರ ಸೇವನೆಯಿಂದ ರಕ್ತದಲ್ಲಿನ ಸಕ್ಕರೆಯಲ್ಲಿ ಏರಿಳಿತವನ್ನು ಉಂಟು ಮಾಡುತ್ತದೆ.
  • ಕರುಳಿನ ಆರೋಗ್ಯದಲ್ಲಿ ಬದಲಾವಣೆ: ಕರುಳು ಮಾನಸಿಕ ಆರೋಗ್ಯಕ್ಕೆ ನೇರವಾದ ಸಂಪರ್ಕವನ್ನು ಹೊಂದಿರುತ್ತದೆ. ಇದನ್ನು ದೇಹದ ಎರಡನೇ ಮೆದುಳು ಎಂದು ಹೇಳುತ್ತಾರೆ. ಜಂಕ್ ಫುಡ್‌ನಲ್ಲಿ ಫೈಬರ್ ಕೊರತೆಯಿದೆ ಮತ್ತು ಕರುಳಿನ ಬ್ಯಾಕ್ಟೀರಿಯಾಕ್ಕೆ ಹಾನಿ ಮಾಡುವ ಕೃತಕ ಪದಾರ್ಥಗಳು ಇದರಲ್ಲಿದೆ. ಹೀಗಾಗಿ ಇದು ಕರುಳು ಉರಿಯೂತಕ್ಕೆ ಕಾರಣವಾಗಬಹುದು ಮತ್ತು ಸಿರೊಟೋನಿನ್‌ನಂತಹ ಮನಸ್ಥಿತಿ-ನಿಯಂತ್ರಿಸುವ ನರಪ್ರೇಕ್ಷಕಗಳ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ, ಒತ್ತಡ ಮತ್ತು ಆತಂಕದ ಭಾವನೆಗಳನ್ನು ಹೆಚ್ಚಿಸುತ್ತದೆ.
  • ಮೆದುಳಿನಲ್ಲಿ ಉರಿಯೂತ: ಅತಿಯಾಗಿ ಸಂಸ್ಕರಿಸಿದ ಆಹಾರಗಳನ್ನು ದೀರ್ಘಕಾಲದವರೆಗೆ ಸೇವನೆ ಮಾಡಿದ್ರೆ ಮೆದುಳು ಸೇರಿದಂತೆ ಇತರ ಭಾಗಗಳಲ್ಲಿ ಊರಿ ಕಾಣಿಸಬಹುದು. ಉರಿಯೂತವು ಮೆದುಳಿನ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಒತ್ತಡವನ್ನು ನಿರ್ವಹಿಸುವ ದೇಹದ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ.
  • ಹಾರ್ಮೋನುಗಳ ಬದಲಾವಣೆ: ಜಂಕ್ ಫುಡ್ ಕಾರ್ಟಿಸೋಲ್ (ಒತ್ತಡದ ಹಾರ್ಮೋನ್) ಮತ್ತು ಇನ್ಸುಲಿನ್ ನಂತಹ ಹಾರ್ಮೋನುಗಳಿಗೆ ತೊಂದರೆ ಮಾಡುತ್ತದೆ. ಕಳಪೆ ಆಹಾರ ಪದ್ಧತಿಯಿಂದಾಗಿ ಕಾರ್ಟಿಸೋಲ್ ಮಟ್ಟವು ಹೆಚ್ಚಾಗುವುದರಿಂದ ಆತಂಕ ಮತ್ತು ಉದ್ವೇಗ ಹೆಚ್ಚಾಗುತ್ತದೆ, ಆದರೆ ಇನ್ಸುಲಿನ್ ಪ್ರತಿರೋಧವು ಆಯಾಸ ಮತ್ತು ಮನಸ್ಥಿತಿಯ ಅಸ್ಥಿರತೆ ಉಂಟು ಮಾಡುತ್ತದೆ.
  • ಮಾನಸಿಕ ಆರೋಗ್ಯಕ್ಕೆ ಕಡಿಮೆ ಪೋಷಕಾಂಶ: ಜಂಕ್ ಫುಡ್ ಸೇವಿಸಿದಾಗ ಮನಸ್ಥಿತಿಯನ್ನು ನಿಯಂತ್ರಿಸಲು ಮತ್ತು ಒತ್ತಡವನ್ನು ನಿರ್ವಹಿಸಲು ಅಗತ್ಯವಾದ ಪೋಷಕಾಂಶಗಳಾದ ಮೆಗ್ನೀಸಿಯಮ್, ಬಿ ಜೀವಸತ್ವಗಳು, ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ಸತುವುಗಳಂತಹ ಅಂಶಗಳನ್ನು ಕಳೆದುಕೊಳ್ಳುತ್ತೀರಾ. ಇದರಿಂದ ದೇಹದ ನೈಸರ್ಗಿಕ ಒತ್ತಡ ಪ್ರತಿಕ್ರಿಯೆ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ.
  • ನಿದ್ರೆಯಲ್ಲಿ ಕುಂಠಿತ: ಜಂಕ್ ಫುಡ್‌ನಲ್ಲಿರುವ ಕೆಫೀನ್ ಮತ್ತು ಸಕ್ಕರೆಯಂತಹ ಕೃತಕ ಆಹಾರಗಳು ಸೇರಿದಾಗ ನಿದ್ರೆ ಸರಿಯಾಗಿ ಆಗದಿರುವಿಕೆ ಅಥವಾ ನಿದ್ರಾಹೀನತೆಗೆ ಕಾರಣವಾಗಬಹುದು. ವಿಶ್ರಾಂತಿ ಇಲ್ಲದಿರುವುದು ಕಾರ್ಟಿಸೋಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಆಯಾಸ, ಆತಂಕ ಮತ್ತು ಕಿರಿಕಿರಿಯನ್ನು ಉಂಟು ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ