Eid al-Adha 2023: ಬಕ್ರೀದ್ ಹಬ್ಬಕ್ಕೆ ಟೀ ಚಿಕನ್ ಪಿಕಾಟಾ ಮಾಡಿ, ಇಲ್ಲಿದೆ ರುಚಿಕರ ಖಾದ್ಯ ಮಾಡುವ ವಿಧಾನ

| Updated By: ಅಕ್ಷಯ್​ ಪಲ್ಲಮಜಲು​​

Updated on: Jun 28, 2023 | 3:39 PM

ಈದ್ ಅಲ್-ಅಧಾ ಹಬ್ಬವನ್ನು ರುಚಿಕರವಾದ ಖಾದ್ಯ ತಯಾರಿಸಿ ಆಚರಿಸಲು ಬಯಸುವಿರಾ? ಮಾನ್ಸೂನ್ ಅನ್ನು ಸ್ವಾಗತಿಸುವುದರ ಜೊತೆಗೆ ಬಕ್ರೀದ್​​​ನಲ್ಲಿ ಟೀ ಚಿಕನ್ ಪಿಕಾಟಾ ರೆಸಿಪಿಯನ್ನು ಮಾಡಿ. ಇಲ್ಲಿದೆ ಮಾಡುವ ವಿಧಾನದ ಬಗ್ಗೆ ಮಾಹಿತಿ.

Eid al-Adha 2023: ಬಕ್ರೀದ್ ಹಬ್ಬಕ್ಕೆ ಟೀ ಚಿಕನ್ ಪಿಕಾಟಾ ಮಾಡಿ, ಇಲ್ಲಿದೆ ರುಚಿಕರ ಖಾದ್ಯ ಮಾಡುವ ವಿಧಾನ
ಸಾಂದರ್ಭಿಕ ಚಿತ್ರ
Follow us on

ಈದ್-ಉಲ್-ಅಧಾ (ಬಕ್ರಾ ಈದ್, ಬಕ್ರೀದ್, ಈದ್ ಅಲ್-ಅಧಾ, ಈದ್ ಕುರ್ಬಾನ್, ಕುರ್ಬಾನ್ ಬಯಾರಾಮಿ ಅಥವಾ ತ್ಯಾಗದ ಹಬ್ಬ ಎಂದೂ ಕರೆಯಲ್ಪಡುತ್ತದೆ) ಹಬ್ಬವು ಆಚರಣೆಯ ಕೇಂದ್ರ ಬಿಂದುವಾಗಿದೆ, ಈ ದಿನ ರುಚಿಕರವಾದ ಮತ್ತು ಹೇರಳವಾದ ಖಾದ್ಯ ತಯಾರಿಸಿ ಕುಟುಂಬದ ಎಲ್ಲರೂ ಒಟ್ಟಿಗೆ ಸವಿಯುವ ಮೂಲಕ ಆನಂದಿಸುತ್ತಾರೆ. ಈ ಪ್ರಕ್ರಿಯೆ ಕುಟುಂಬಗಳು ಮತ್ತು ಸ್ನೇಹಿತರನ್ನು ಒಟ್ಟುಗೂಡಿಸುತ್ತದೆ ಮತ್ತು ಇದು ಸಾಮಾನ್ಯವಾಗಿ ಪ್ರಾಣಿಯನ್ನು ಬಲಿ ಕೊಟ್ಟ ನಂತರ ಆ ಮಾಂಸದಿಂದ ತಯಾರಿಸಿದ ವಿವಿಧ ಭಕ್ಷ್ಯಗಳನ್ನು ಒಳಗೊಂಡಿರುತ್ತದೆ. ಟೀ ಚಿಕನ್ ಪಿಕಾಟಾಗಳು ಕ್ಲಾಸಿಕ್ ಇಟಾಲಿಯನ್ ಖಾದ್ಯಕ್ಕೆ ವಿಶಿಷ್ಟ ರುಚಿ ನೀಡುವ ಮಿಶ್ರಣವಾಗಿದೆ ಮತ್ತು ಈ ಪಾಕವಿಧಾನವು ಮೃದುವಾದ ಚಿಕನ್ ಕಟ್ಲೆಟ್​​ಗಳನ್ನು ಟ್ಯಾಂಗಿ ಮತ್ತು ಸುವಾಸನೆಯುಕ್ತ ಚಹಾ ಅಥವಾ ಸಾಸ್ ಜೊತೆಯಲ್ಲಿ ಸೇವಿಸುವುದರಿಂದ ಖಾದ್ಯದ ರುಚಿ ದುಪ್ಪಟ್ಟಾಗುತ್ತದೆ. ಇದು ಈ ವರ್ಷ ಹಬ್ಬದಲ್ಲಿ ವಿಶೇಷವಾಗಿ ತಯಾರಿಸಿ ಬಡಿಸಲು ಸೂಕ್ತವಾಗಿದೆ.

ಖಾದ್ಯದ ವಿಶಿಷ್ಟವೆಂದರೆ ಸಾಸ್, ಚಹಾ, ನಿಂಬೆ ರಸ ಮತ್ತು ಕ್ಯಾಪರ್​​ಗಳ ಮಿಶ್ರಣದ ಜೊತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಈ ಭಾರಿಯ ಈದ್ ಅಲ್- ಅಧಾ ಹಬ್ಬವನ್ನು ರುಚಿಕರವಾದ ಪಾಕವಿಧಾನಗಳನ್ನು ಮಾಡುವ ಮೂಲಕ ಆಚರಿಸಲು ಬಯಸುತ್ತಿದ್ದೀರಾ? ಹಾಗಾದರೆ ಇಲ್ಲಿದೆ ಮಾಡುವ ವಿಧಾನದ ಬಗ್ಗೆ ಮಾಹಿತಿ

ಬೇಕಾಗುವ ಸಾಮಾಗ್ರಿಗಳು

2 ಟೇಬಲ್ ಸ್ಪೂನ್ ಹಿಟ್ಟು

1 ಟೇಬಲ್ ಚಮಚ ಕಾಳು ಮೆಣಸು

1/2 ಚಮಚ ಉಪ್ಪು

1/4 ಟೀ ಸ್ಪೂನ್ ಊಲಾಂಗ್ ಚಹಾ ಪುಡಿಯನ್ನು (ಒಂದು ರೀತಿಯ ಚಹಾ ಹುಡಿ) ನುಣ್ಣಗೆ ರುಬ್ಬಿಕೊಳ್ಳಿ

1 ಪೌಂಡ್ ಚರ್ಮವಿಲ್ಲದ, ಮೂಳೆ ರಹಿತ ಚಿಕನ್ ಭಾಗಗಳು

2 ಟೇಬಲ್ ಚಮಚ ಆಲಿವ್ ಎಣ್ಣೆ

2 ನಿಂಬೆ ಹಣ್ಣಿನ ರಸ

ದೊಡ್ಡ ಮೊಟ್ಟೆ – 2

1/2 ಕಪ್ ಬಿಳಿ ವೈನ್

ಇದನ್ನೂ ಓದಿ:Eid al-Adha 2023: ಬಕ್ರೀದ್ ಹಬ್ಬದಂದು ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಪ್ರಾಣಿವಧೆ ನಿಷೇಧ

ಮಾಡುವ ವಿಧಾನ:

ಹಿಟ್ಟು, ಕಾಳು ಮೆಣಸು, ಉಪ್ಪು ಮತ್ತು ಊಲಾಂಗ್ ಚಹಾ ಪುಡಿಯನ್ನು ನುಣ್ಣಗೆ ರುಬ್ಬಿಕೊಳ್ಳಿ ಬಳಿಕ ಆ ಮಿಶ್ರಣವನ್ನು ದೊಡ್ಡ ಪ್ಲಾಸ್ಟಿಕ್ ಬ್ಯಾಗ್​​ನಲ್ಲಿ ಹಾಕಿ ಅದಕ್ಕೆ ಚಿಕನ್ ಸೇರಿಸಿ, ಚೀಲವನ್ನು ಸೀಲ್ ಮಾಡಿ ಮತ್ತು ಚಿಕನ್ ಸಮನಾಗಿ ಲೇಪಿತವಾಗುವವರೆಗೆ ಚೆನ್ನಾಗಿ ಅಲ್ಲಾಡಿಸಿ. ನಂತರ ಆಲಿವ್ ಎಣ್ಣೆಯನ್ನು ಮಧ್ಯಮ ಶಾಖದ ಮೇಲೆ ದೊಡ್ಡ ನಾನ್- ಸ್ಟಿಕ್ ಬಾಣಲೆಯಲ್ಲಿ ಬಿಸಿ ಮಾಡಿ. ಚಿಕನ್ ಅನ್ನು ಬಾಣಲೆಯ ಮೇಲೆ ಇರಿಸಿ ಮತ್ತು ಎರಡೂ ಬದಿಗಳಲ್ಲಿ ಕಂದು ಬಣ್ಣ ಬರುವವರೆಗೆ ಬೇಯಿಸಿ, ಅಂದರೆ ಪ್ರತಿ ಬದಿಗೆ ಸರಿಸುಮಾರು 3 ನಿಮಿಷಗಳು. ಯಾವುದೇ ಹೆಚ್ಚುವರಿ ಎಣ್ಣೆಯನ್ನು ಹೀರಿಕೊಳ್ಳಲು ಚಿಕನ್ ಅನ್ನು ಬಾಣಲೆಯಿಂದ ತೆಗೆದು ಕಾಗದದ ಟವೆಲ್ ಹಾಳೆಯ ಮೇಲೆ ಇರಿಸಿ. ಇನ್ನೊಂದು ಬಾಣಲೆಗೆ ನಿಂಬೆ ರಸ ಮತ್ತು ಬಿಳಿ ವೈನ್ ಸೇರಿಸಿ. ಬಳಿಕ ಸಾಸ್ ಹಾಕಿ ಅದು ಅರ್ಧದಷ್ಟು ಕಡಿಮೆಯಾಗುವವರೆಗೆ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಬೇಯಿಸಿ. ಚಿಕನ್ ಅನ್ನು ಮತ್ತೆ ಬಾಣಲೆಗೆ ಸೇರಿಸಿ. ಸರ್ವ್ ಮಾಡುವ ಮೊದಲು 5 ನಿಮಿಷಗಳ ಕಾಲ ಬಿಸಿ ಮಾಡಿಕೊಳ್ಳಿ. ನಿಮಗೆ ಇಷ್ಟವಿದ್ದಲ್ಲಿ ಮೊಟ್ಟೆಯನ್ನು ಕೂಡ ಮಿಶ್ರಣಕ್ಕೆ ಸೇರಿಸಿಕೊಳ್ಳಬಹುದು. ಇಲ್ಲವಾದಲ್ಲಿ ಹಾಗೆಯೇ ತಯಾರಿಸಿಕೊಳ್ಳಬಹುದು.