Event Calendar March 2026: ಮಾರ್ಚ್‌ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ರಾಷ್ಟ್ರೀಯ-ಅಂತಾರಾಷ್ಟ್ರೀಯ ದಿನಾಚರಣೆಗಳಿವು

ವರ್ಷದ ಮೂರನೇ ತಿಂಗಳಾದ ಮಾರ್ಚ್‌ನಲ್ಲಿ ಹೋಳಿ, ರಾಮ ನವಮಿಯಂತಹ ಧಾರ್ಮಿಕ ಹಬ್ಬಗಳು ಮಾತ್ರವಲ್ಲದೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಒಂದಷ್ಟು ರಾಷ್ಟ್ರೀಯ ಅಂತಾರಾಷ್ಟ್ರೀಯ ದಿನಾಚರಣೆಗಳನ್ನು ಸಹ ಆಚರಿಸಲಾಗುತ್ತದೆ. ನಿದ್ರಾ ದಿನದಿಂದ ಹಿಡಿದು ನೇರಳೆ ದಿನದವರೆಗೆ ಮಾರ್ಚ್‌ ತಿಂಗಳಲ್ಲಿ ಯಾವೆಲ್ಲಾ ವಿಶೇಷ ದಿನಾಚರಣೆಗಳನ್ನು ಆಚರಿಸಲಾಗುತ್ತದೆ ಎಂಬುದರ ಸಂಪೂರ್ಣ ವಿವರವನ್ನು ತಿಳಿಯಿರಿ.

Event Calendar March 2026: ಮಾರ್ಚ್‌ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ರಾಷ್ಟ್ರೀಯ-ಅಂತಾರಾಷ್ಟ್ರೀಯ ದಿನಾಚರಣೆಗಳಿವು
ಮಾರ್ಚ್‌ ಈವೆಂಟ್‌ ಕ್ಯಾಲೆಂಡರ್
Image Credit source: Pinterest

Updated on: Feb 26, 2026 | 4:30 PM

ಪ್ರತಿ ತಿಂಗಳಲ್ಲೂಸಹ  ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಒಂದಷ್ಟು ವಿಶೇಷ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚರಣೆಗಳನ್ನು ಆಚರಿಸಲಾಗುತ್ತದೆ.  ಹೌದು ಒಂದೊಂದು ಉದ್ದೇಶ ಹಾಗೂ ಧ್ಯೇಯವಾಕ್ಯವನ್ನು ಇಟ್ಟುಕೊಂಡು ಜಾಗೃತಿ ಮೂಡಿಸುವಂತಹ ಸಲುವಾಗಿ ಈ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತದೆ. ಇನ್ನೇನೂ ಮಾರ್ಚ್‌ (March)  ತಿಂಗಳು ಆರಂಭವಾಗುತ್ತಿದ್ದು, ವರ್ಷದ ಈ ಮೂರನೇ ತಿಂಗಳಲ್ಲಿ ನಿದ್ರಾ ದಿನದಿಂದ ಹಿಡಿದು ವಿಶ್ವ ಅರಣ್ಯ ದಿನದವರೆಗೆ ಯಾವೆಲ್ಲಾ ರಾಷ್ಟ್ರೀಯ, ಅಂತಾರಾಷ್ಟ್ರೀಯ ಜಾಗೃತಿ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತವೆ ಎಂಬುದರ ಸಂಪೂರ್ಣ ವಿವರವನ್ನು ತಿಳಿಯಿರಿ.

ಮಾರ್ಚ್‌ ತಿಂಗಳ ರಾಷ್ಟ್ರೀಯ-ಅಂತಾರಾಷ್ಟ್ರೀಯ ದಿನಾಚರಣೆಗಳ ಪಟ್ಟಿ:

  • ಮಾರ್ಚ್ 1 – ವಿಶ್ವ ನಾಗರಿಕ ರಕ್ಷಣಾ ದಿನ
  • ಮಾರ್ಚ್‌ 1 – ವಿಶ್ವ ಅಭಿನಂದನಾ ದಿನ
  • ಮಾರ್ಚ್‌ 3 – ವಿಶ್ವ ವನ್ಯಜೀವಿ ದಿನ
  • ಮಾರ್ಚ್ 3 – ವಿಶ್ವ ಶ್ರವಣ ದಿನ
  • ಮಾರ್ಚ್‌ 4 – ಹೋಳಿ
  • ಮಾರ್ಚ್‌ 4 -ರಾಷ್ಟ್ರೀಯ ಸುರಕ್ಷತಾ ದಿನ
  • ಮಾರ್ಚ್‌ 8 – ಅಂತಾರಾಷ್ಟ್ರೀಯ ಮಹಿಳಾ ದಿನ
  • ಮಾರ್ಚ್ 11 – ಧೂಮಪಾನ ನಿಷೇಧ ದಿನ
  • ಮಾರ್ಚ್‌ 15 – ವಿಶ್ವ ಗ್ರಾಹಕರ ಹಕ್ಕುಗಳ ದಿನ
  • ಮಾರ್ಚ್ 15 – ವಿಶ್ವ ನಿದ್ರಾ ದಿನ
  • ಮಾರ್ಚ್‌ 16 – ರಾಷ್ಟ್ರೀಯ ಲಸಿಕೆ ದಿನ
  • ಮಾರ್ಚ್‌ 20 – ಅಂತಾರಾಷ್ಟ್ರೀಯ ಸಂತೋಷ ದಿನ
  • ಮಾರ್ಚ್‌ 20 – ವಿಶ್ವ ಗುಬ್ಬಚ್ಚಿ ದಿನ
  • ಮಾರ್ಚ್ 20 – ವಿಶ್ವ ಮೌಖಿಕ ಆರೋಗ್ಯ ದಿನ
  • ಮಾರ್ಚ್‌ 21 – ವಿಶ್ವ ಅರಣ್ಯ ದಿನ
  • ಮಾರ್ಚ್ 21 – ವಿಶ್ವ ಡೌನ್‌ ಸಿಂಡ್ರೋಮ್‌ ದಿನ
  • ಮಾರ್ಚ್‌ 22 – ವಿಶ್ವ ಜಲ ದಿನ
  • ಮಾರ್ಚ್‌ 23 – ವಿಶ್ವ ಹವಾಮಾನ ದಿನ
  • ಮಾರ್ಚ್‌ 23 – ಹುತಾತ್ಮರ ದಿನ
  • ಮಾರ್ಚ್‌ 24 – ವಿಶ್ವ ಕ್ಷಯರೋಗ ದಿನ
  • ಮಾರ್ಚ್ 26 – ನೇರಳೆ ದಿನ
  • ಮಾರ್ಚ್ 27 – ವಿಶ್ವ ರಂಗಭೂಮಿ ದಿನ
  • ಮಾರ್ಚ್ 28 – ವಿಶ್ವ ಪಿಯಾನೋ ದಿನ
  • ಮಾರ್ಚ್‌ 31 – ಮಹಾವೀರ ಜಯಂತಿ

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us