Relationship Tips: ನಿಮ್ಮ ಸಂಬಂಧವನ್ನು ಹಾಳುಮಾಡುವಂತಹ ನಡವಳಿಕೆಗಳಿಗೆ ತಜ್ಞರು ನೀಡಿರುವ ಸಲಹೆಗಳು ಇಲ್ಲಿವೆ

| Updated By: ಅಕ್ಷತಾ ವರ್ಕಾಡಿ

Updated on: Nov 15, 2022 | 4:50 PM

ನಿಮ್ಮ ಯಾವುದೇ ಸಂಬಂಧದಲ್ಲಿ ವಿಶೇಷವಾಗಿ ನಿಮ್ಮ ಸಂಗಾಂತಿಯೊಂದಿಗೆ ಕೇವಲ ಪ್ರಣಯವನ್ನು ಮಾತ್ರ ಅಪೇಕ್ಷಿಸದಿರಿ. ಬದಲಾಗಿ ಅವರ ಜೊತೆಗೆ ಒಂದು ಉತ್ತಮ ಗೆಳೆತನವನ್ನು ಬೆಳೆಸಿಕೊಳ್ಳಿ.

Relationship Tips: ನಿಮ್ಮ ಸಂಬಂಧವನ್ನು ಹಾಳುಮಾಡುವಂತಹ ನಡವಳಿಕೆಗಳಿಗೆ ತಜ್ಞರು ನೀಡಿರುವ ಸಲಹೆಗಳು ಇಲ್ಲಿವೆ
Relationship Tips
Image Credit source: UpJourney
Follow us on

ಇಂದಿನ ಬದಲಾದ ಜೀವನ ಶೈಲಿಯಲ್ಲಿ ಯಾವುದೇ ಸಂಬಂಧಗಳು ಶಾಶ್ವತವಾಗಿ ಉಳಿಯುವುದೇ ಕಷ್ಟವಾಗಿದೆ. ಒತ್ತಡದ ಜೀವನಶೈಲಿಯಿಂದಾಗಿ ಪರಸ್ಪರ ಸಮಯವನ್ನು ಕೊಡುವುದು ಕಷ್ಟವಾದಾಗ ಭಿನ್ನಾಭಿಪ್ರಾಯಗಳು ಹುಟ್ಟಿಕೊಳ್ಳುತ್ತದೆ. ಇದರಿಂದಾಗಿ ಸಾಕಷ್ಟು ಸಂಬಂಧಗಳು ಬಿರುಕು ಬಿಡಲು ಕಾರಣವಾಗುತ್ತದೆ.

ನಿಮ್ಮ ಯಾವುದೇ ಸಂಬಂಧದಲ್ಲಿ ವಿಶೇಷವಾಗಿ ನಿಮ್ಮ ಸಂಗಾಂತಿಯೊಂದಿಗೆ ಕೇವಲ ಪ್ರಣಯವನ್ನು ಮಾತ್ರ ಅಪೇಕ್ಷಿಸದಿರಿ. ಬದಲಾಗಿ ಅವರ ಜೊತೆಗೆ ಒಂದು ಉತ್ತಮ ಗೆಳೆತನವನ್ನು ಬೆಳೆಸಿಕೊಳ್ಳಿ. ಉತ್ತಮ ಗೆಳೆತನವು ನಿಮ್ಮಿಬ್ಬರಲ್ಲಿನ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಸಹಾಯ ಮಾಡುತ್ತದೆ. ಸಂಬಂಧಗಳು ಎಂದಾಕ್ಷಣ ಕೇವಲ ಸಂಗಾಂತಿಗಳು ,ಮಾತ್ರವಲ್ಲ ನಿಮ್ಮ ತಂದೆ ತಾಯಿಯೊಂದಿಗೆ ಕೂಡ ಸ್ನೇಹಿತರಂತಹ ಸಂಬಂಧವನ್ನು ಬೆಳೆಸಿಕೊಳ್ಳಿ. ನಿಮ್ಮ ಬಿಡುವಿನ ಸಮಯದಲ್ಲಿ ನಿಮ್ಮವರೊಂದಿಗೆ ಕಾಲ ಕಳೆಯುವುದು ಉತ್ತಮವಾಗಿದೆ.

ನಿಮ್ಮ ಸಂಬಂಧದಲ್ಲಿ ಬಿರುಕು ಬಿಡಲು ಕಾರಣವಾಗುವಂತಹ ನಿಮ್ಮ ನಡವಳಿಕೆಗಳ ಕುರಿತು ಕ್ಲಿನಿಕಲ್ ಮನಶ್ಶಾಸ್ತ್ರಜ್ಞ ಮತ್ತು ಸಂಬಂಧ ತಜ್ಞ ಆಕಾಂಶಾ ತಯಾಲ್ ಸಲಹೆಗಳನ್ನು ನೀಡಿದ್ದಾರೆ.
ನಮ್ಮವರೊಂದಿಗಿನ ಸಂಬಂಧದಲ್ಲಿ ಸಂತೋಷ, ದುಃಖ, ಕೋಪ ಮತ್ತು ಭಯಗಳು ಸಾಮಾನ್ಯ. ಅವೆಲ್ಲಾವುಗಳನ್ನು ಸಮವಾದ ಸ್ಥಿತಿಯಲ್ಲಿ, ಅಂದರೆ ಖುಷಿಯಾದಾಗ ಹಿಗ್ಗದೆ ಹಾಗೂ ದು:ಖವಾದಾಗ ಕುಗ್ಗದೆ ಸಮವಾಗಿ ಮುಂದುವರಿಸಬೇಕಿದೆ.
ನಿಮ್ಮ ಜೀವನದ ಸಂತೋಷಕ್ಕಾಗಿ ನೀವು ಸಂತೋಷವನ್ನು ಬೇರೆಲ್ಲೂ ಹುಡುಕುವ ಅವಶ್ಯಕತೆ ಎಂಬುದನ್ನು ನೀವು ತಿಳಿದಿರಬೇಕು. ನಿಮ್ಮ ಸಂತೋಷ ನಿಮ್ಮ ಜವಾಬ್ದಾರಿಯಾಗಿರುತ್ತದೆ. ಪ್ರತೀ ಬಾರಿಯೂ ನೀವು ನಿಮ್ಮ ಸಂತೋಷಕ್ಕಾಗಿ ಇತರರ ಮೇಲೆ ಅವಲಂಬಿತವಾಗಿರುತ್ತೇವೆ. ಇಂತಹ ಅಭ್ಯಾಸಗಳನ್ನು ಬಿಟ್ಟು ಬಿಡಿ. ವಾಸ್ತವವಾಗಿ ನಿಮ್ಮ ಸಂತೋಷವು ನಿಮ್ಮ ಸ್ವಂತ ಜವಾಬ್ದಾರಿಯಾಗಿದೆ ಮತ್ತು ಯಾವುದೇ ವ್ಯಕ್ತಿ ಅಥವಾ ವಸ್ತುವು ಆ ಅಗತ್ಯವನ್ನು ಎಂದಿಗೂ ಪೂರೈಸುವುದಿಲ್ಲ.

ನಿಮ್ಮವರೊಂದಿನ ಸಂಬಂಧದಲ್ಲಿ ಅಂದರೆ ಪೋಷಕರೊಂದಿಗೆ ಅಥವಾ ಇಬ್ಬರೊಂದಿಗೆ, ಅವರ ಭಾವನೆಗಳನ್ನು ಗೌರವಿಸಿ. ಇದರಿಂದಾಗಿ ನಿಮ್ಮತನಕ್ಕೆ ಅಗೌರವ ಎಂದು ತಪ್ಪಾಗಿ ಭಾವಿಸಬೇಡಿ. ಯಾಕೆಂದರೆ ಪ್ರತಿಯೊಬ್ಬರ ಆಲೋಚನೆಗಳು ಒಂದೇ ಸಮನಾಗಿ ಇರಲಾರದು.

ನೀವು ನಿಮ್ಮ ಸಂಬಂಧದ ಬಗ್ಗೆ ಮಾತನಾಡುವಾಗ, ಸಾಮಾನ್ಯವಾಗಿ ನಿಮ್ಮ ಒಡಹುಟ್ಟಿದವರು ಅಥವಾ ಸ್ನೇಹಿತರೊಂದಿಗೆ ನೀವು ಹೊಂದಿರುವ ಸಂಬಂಧವನ್ನು ವಿವರಿಸಲಾಗುತ್ತದೆ. ಆದರೆ ಪ್ರಸ್ತುತ ಪೀಳಿಗೆಗೆ ಒತ್ತಡದ ಜೀವನಶೈಲಿಯಲ್ಲಿ ಪರಸ್ಪರ ಸಮಯವನ್ನು ನೀಡಲು ಸಾಧ್ಯವಾಗುವುದಿಲ್ಲ. ಇದು ಭವಿಷ್ಯದ ಮಕ್ಕಳ ಮೇಲೆ ಪರಿಣಾಮ ಬೀರಬಹುದು.

ಸಾಮಾನ್ಯವಾಗಿ ಯಾವುದೇ ಸಂಬಂಧಗಳು ಪ್ರಾರಂಭದಲ್ಲಿ ತುಂಬಾ ಸಂತೋಷದಿಂದ ಕೂಡಿರುತ್ತದೆ, ಹಾಗೂ ತಿಂಗಳುಗಳು ಕಳೆದಂತೆ ಅವರೊಂದಿಗೆ ಉತ್ತಮ ಬಾಂಧವ್ಯ ಬೆಳೆದಿರುತ್ತದೆ. ನೀವು ಅವರನ್ನು ಸಾಕಷ್ಟು ಹಚ್ಚಿಕೊಂಡಿರುತ್ತೀರಿ. ಇದ್ದರಿಂದಾಗಿ ಅವರ ಕೆಲವೊಂದು ಚಿಕ್ಕ ಬದಲಾವಣೆಗಳು ನಿಮಗೆ ಹೆಚ್ಚು ನೋವಾನ್ನುಂಟು ಮಾಡುತ್ತದೆ. ಆದ್ದರಿಂದ ಅತಿಯಾದ ಭಾಂದವ್ಯಗಳು ಕೂಡ ನಿಮ್ಮ ಸಂಬಂಧಕ್ಕೆ ತೊಡಕಾಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳುತ್ತಾರೆ.

ಕೆಲವೊಂದು ಮಾತುಗಾರಿಕೆ ಶೈಲಿಗಳು ಕೂಡ ನಿಮ್ಮ ಸಂಬಂಧದಲ್ಲಿ ತೊಡಗಾಗುವ ಸಾಧ್ಯತೆಗಳು ಹೆಚ್ಚಿದೆ. ಕೆಲವೊಮ್ಮೆ ನಿಮ್ಮ ಮಾತುಗಳು ನಿಮ್ಮ ಸಂಗಾಂತಿಗೆ ನೋವನ್ನುಂಟು ಮಾಡುತ್ತದೆ ಎಂಬ ಕಾರಣಕ್ಕೆ ಸರಿಯಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸದೇ ಇರುವುದು.

ಇದನ್ನು ಓದಿ: ನಿಮ್ಮ ಸಂಗಾತಿ ಇದ್ದಕ್ಕಿದ್ದಂತೆ ನಿಮ್ಮನ್ನು ನಿರ್ಲಕ್ಷಿಸಲು ಪ್ರಾರಂಭಿಸಿದರೆ ಈ ಕಾರಣಗಳಿರಬಹುದು

ಉದಾಹರಣೆಗೆ ನಿಕಟ ಸ್ನೇಹದಲ್ಲಿ ಜನರು ಹಿಂದೆ ನೀಡಬೇಕಾದ ಹಣವನ್ನು ಸ್ನೇಹಿತರಿಂದ ಕೇಳುವುದನ್ನು ತಪ್ಪಿಸುತ್ತಾರೆ ಮತ್ತು ಕಾಲಾನಂತರದಲ್ಲಿ ಈ ವಿಷಯವು ಸಂಬಂಧದಲ್ಲಿ ಬಿರುಕು ಉಂಟುಮಾಡಲು ಕಾರಣವಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: