ಆಕಾಶದಲ್ಲಿ ತೇಲುತ್ತಾ ಊಟ ಸವಿಯಲು ಕರಾವಳಿಯಲ್ಲಿ ಪ್ರಾರಂಭವಾಗಿದೆ ಸ್ಕೈ ಡೈನಿಂಗ್‌

|

Updated on: Nov 30, 2024 | 5:09 PM

90–100 ಮೀಟರ್‌ ಎತ್ತರದಲ್ಲಿ ಗಾಳಿಯಲ್ಲಿ ತೇಲುತ್ತಾ ಮೋಡಗಳ ನಡುವೆ ನಿಮ್ಮ ಪ್ರೀತಿ ಪಾತ್ರರೊಂದಿಗೆ ರುಚಿಕರ ಭೋಜನವನ್ನು ಸವಿಯಲು ನೀವು ದುಬೈ ಅಥವಾ ಸಿಂಗಾಪುರಕ್ಕೆ ಹಾರಬೇಕಿಲ್ಲ. ಇದೀಗ ಮಂಗಳೂರಿನ ಮರವಂತೆ ಬೀಚ್‌ನಲ್ಲಿ ಸ್ಕೈ ಡೈನಿಂಗ್ ಆರಂಭವಾಗಿದ್ದು, ಇಲ್ಲಿ ನೀವು ಸೌಪರ್ಣಿಕಾ ನದಿ ಮತ್ತು ಅರಬ್ಬೀ ಸಮುದ್ರದ ಅದ್ಭುತ ನೋಟವನ್ನು ಕಣ್ತುಂಬಿಕೊಳ್ಳುತ್ತಾ, ಆಕಾಶದಲ್ಲಿ 360 ಡಿಗ್ರಿ ತಿರುಗುವ ಟೇಬಲ್‌ನಲ್ಲಿ ಭೋಜನವನ್ನು ಆನಂದಿಸಬಹುದು.

ಆಕಾಶದಲ್ಲಿ ತೇಲುತ್ತಾ ಊಟ ಸವಿಯಲು ಕರಾವಳಿಯಲ್ಲಿ ಪ್ರಾರಂಭವಾಗಿದೆ ಸ್ಕೈ ಡೈನಿಂಗ್‌
Sky Dining
Follow us on

ಸಾಮಾನ್ಯವಾಗಿ ಸ್ಕೈ ಡೈವಿಂಗ್, ಬಂಗೀ ಜಂಪಿಂಗ್ ಮತ್ತು ಪ್ಯಾರಾ-ಗ್ಲೈಡಿಂಗ್‌ನಂತಹ ಕ್ರೀಡೆ ಬಗ್ಗೆ ನೀವು ಕೇಳಿರುತ್ತೀರಿ. ಆದರೆ ಸ್ಕೈ ಡೈನಿಂಗ್‌ ಬಗ್ಗೆ ಕೇಳಿದ್ದೀರಾ? ಸ್ಕೈ ಡೈನಿಂಗ್‌ ಮೂಲಕ ನೀವು ನೆಲದಿಂದ 50 ಅಡಿ ಎತ್ತರದಲ್ಲಿ ಗಾಳಿಯಲ್ಲಿ ತೇಲುತ್ತಾ ಮೋಡಗಳ ನಡುವೆ ನಿಮ್ಮ ಪ್ರೀತಿ ಪಾತ್ರರೊಂದಿಗೆ ರುಚಿಕರ ಭೋಜನವನ್ನು ಸವಿಯಬಹುದು. ಆದರೆ ಇಂತಹ ಅನುಭವ ಪಡೆಯಲು ನೀವು ದುಬೈಗೆ ಅಥವಾ ಸಿಂಗಪೂರ್​​ಗೆ ಹಾರಬೇಕಿಲ್ಲ, ಬದಲಾಗಿ ಮಂಗಳೂರಿನಲ್ಲೂ ಈ ಅನುಭವವನ್ನು ಪಡೆಯಬಹುದು.

ಇದೀಗ​ ವಿಶ್ವ ಪ್ರಸಿದ್ಧ ತಾಣ ಮರವಂತೆ ಬೀಚ್‌ನಲ್ಲಿ ಶುಕ್ರವಾರ(ನ.29)ದಿಂದ ವಿನೂತನವಾದ ಸ್ಕೈ ಡೈನಿಂಗ್‌ ಆರಂಭಗೊಂಡಿದೆ. ಮಂಗಳೂರಿನ ಪಣಂಬೂರು ಬಳಿಕ ಇದು ರಾಜ್ಯದ ಎರಡನೇ ಸ್ಕೈ ಡೈನಿಂಗ್‌ ತಾಣವಾಗಿದ್ದು, ಈ ಸ್ಕೈ ಡೈನಿಂಗ್‌ ಜಿಲ್ಲೆಯ ಪ್ರವಾಸೋದ್ಯಮ ಚಟುವಟಿಕೆಗೆ ಅನುಕೂಲವಾಗಲಿದೆ ಎಂದು ಉದ್ಘಾಟನೆಗೈದ ಶಾಸಕ ಗುರುರಾಜ ಗಂಟಿಹೊಳೆ ಅಭಿಪ್ರಾಯ ವ್ಯಕ್ತಪಡಿಸಿದರು. ಸದ್ಯ ಈ ಸ್ಕೈ ಡೈನಿಂಗ್​ನ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ವೈರಲ್​ ಆಗುತ್ತಿದೆ.

ಇದನ್ನೂ ಓದಿ: ಬೆಂಗಳೂರಿಗರು ಗೋವಾಗೆ ಟ್ರಿಪ್ ಹೋಗಲು ಹಿಂದೇಟು ಹಾಕುತ್ತಿರುವುದು ಏಕೆ? ಇದೇ ನೋಡಿ ಕಾರಣ

ಇದರಲ್ಲಿ 90 – 100 ಮೀಟರ್‌ ಎತ್ತರದಲ್ಲಿ ಕುಳಿತು ಸೌಪರ್ಣಿಕಾ ನದಿ ಹಾಗೂ ಅರಬ್ಬೀ ಸಮುದ್ರವನ್ನು ವೀಕ್ಷಿಸುತ್ತಾ ನಿಮ್ಮ ಕುಟುಂಬದ 5ರಿಂದ 9 ಜನರೊಂದಿಗೆ ಆಕಾಶದಲ್ಲಿ ತೇಲುತ್ತಾ ಊಟವನ್ನು ಸವಿಯಬಹುದು. ಇಲ್ಲಿನ ಟೇಬಲ್​ಗಳು 360 ಡಿಗ್ರಿಯಲ್ಲಿ ತಿರುಗಲಿದ್ದು, ಇದರಿಂದ ಎಲ್ಲ ಭಾಗಗಳ ವೈಮಾನಿಕ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು. ಒಬ್ಬರಿಗೆ 500 ರೂ. ನಿಗದಿಪಡಿಸಲಾಗಿದೆ. ಈ ಕುರಿತು skydiningmangalore ಎಂಬ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್​​ ಆಗುತ್ತಿದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:48 pm, Sat, 30 November 24