ಬೇಸಿಗೆಯ ರಜೆಯಲ್ಲಿ ಮಕ್ಕಳಲ್ಲಿ ಕ್ರೀಡಾ ಹವ್ಯಾಸವನ್ನು ಬೆಳೆಸಲು ತಜ್ಞರ ಸಲಹೆ ಇಲ್ಲಿದೆ

| Updated By: ಅಕ್ಷತಾ ವರ್ಕಾಡಿ

Updated on: May 18, 2023 | 7:01 PM

ಬೇಸಿಗೆ ರಜೆಯಲ್ಲಿ ಮಕ್ಕಳು ಕ್ರೀಡಾ ಅಭ್ಯಾಸಗಳನ್ನು ಪ್ರಾರಂಭಿಸಲು ಹಾಗೂ ಕ್ರೀಡಾ ಹವ್ಯಾಸ ಮತ್ತು ತರಬೇತಿಯನ್ನು ಆಯ್ಕೆ ಮಾಡಲು ತಜ್ಞರು ಕೆಲವು ಸೂಕ್ತ ಸಲಹೆಗಳನ್ನು ಹಂಚಿಕೊಂಡಿದ್ದಾರೆ.

ಬೇಸಿಗೆಯ ರಜೆಯಲ್ಲಿ ಮಕ್ಕಳಲ್ಲಿ ಕ್ರೀಡಾ ಹವ್ಯಾಸವನ್ನು ಬೆಳೆಸಲು ತಜ್ಞರ ಸಲಹೆ ಇಲ್ಲಿದೆ
ಬೇಸಿಗೆಯ ರಜೆಯಲ್ಲಿ ಮಕ್ಕಳಲ್ಲಿ ಕ್ರೀಡಾ ಹವ್ಯಾಸವನ್ನು ಬೆಳೆಸಿ
Image Credit source: Siwan Public School
Follow us on

ಬೇಸಿಗೆ ರಜೆಗಳು ಮಕ್ಕಳಿಗೆ ಮತ್ತು ಯುವಕರಿಗೆ ಪಠ್ಯೇತರ ಚಟುವಟಿಕೆಗಳತ್ತ ಗಮನಹರಿಸಲು ಸೂಕ್ತ ಸಮಯವಾಗಿದ್ದು, ಚಿಕ್ಕ ವಯಸ್ಸಿನಿಂದಲೇ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಮಕ್ಕಳ ಒಟ್ಟಾರೆ ಬೆಳವಣಿಗೆಗೆ ಅದು ಸಹಾಯಕವಾಗಿದೆ. ದೈಹಿಕ ಚಟುವಟಿಕೆಗಳು ಮತ್ತು ಕ್ರೀಡೆಗಳು ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ, ಸ್ವಾಭಿಮಾನ, ತಂಡದ ಕೆಲಸ ಮತ್ತು ನಾಯಕತ್ವದ ಗುಣಗಳ ಅಂಶಗಳನ್ನು ಸಹ ಕಲಿಸುತ್ತದೆ. ಉತ್ತಮ ಅಭ್ಯಾಸಗಳನ್ನು ರೂಪಿಸಲು ದೈಹಿಕ ಚಟುವಟಿಕೆ ಮತ್ತು ಕ್ರೀಡೆಗಳು ಅತ್ಯಗತ್ಯ. ಇದು ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ದೈಹಿಕ ಚಟುವಟಿಕೆಯ ಕೊರತೆ ಮತ್ತು ಕಳಪೆ ಆಹಾರಪದ್ಧತಿಗಳು ಜೀವನಶೈಲಿ ರೋಗಗಳಾದ ಬೊಜ್ಜು, ಮಧುಮೇಹ ಮತ್ತು ಅಧಿಕ ರಕ್ತದೊತ್ತಡಗಳಂತಹ ಸಮಸ್ಯೆಯನ್ನು ಉಂಟುಮಾಡಬಹುದು. ನಿಯಮಿತ ದೈಹಿಕ ಚಟುವಟಿಕೆಗಳು ಈ ರೋಗಗಳನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಮುಲುಂಡ್ ನ ಫೋರ್ಟಿಸ್ ಆಸ್ಪತ್ರೆಯ ಕನ್ಸಲ್ಟೆಂಟ್-ಆತ್ರೋಸ್ಕೊಪಿ ಮತ್ತು ಸ್ಪೋರ್ಟ್ಸ್ ಮೆಡಿಸಿನ್ ಡಾ. ಸನೇಶ್ ತುತೇಜಾ ಹೇಳುತ್ತಾರೆ.

ಕ್ರೀಡಾ ಹವ್ಯಾಸವನ್ನು ಆಯ್ಕೆ ಮಾಡಲು ಸಲಹೆಗಳು:

ಪೋಷಕರು ಮಕ್ಕಳಿಗೆ ಮಾದರಿಯಾಗುವ ಮೂಲಕ ಕ್ರೀಡೆಯಲ್ಲಿ ತೊಡಗುವಂತೆ ಪ್ರೋತ್ಸಾಹಿಸಬಹುದು, ಪೋಷಕರು ಕ್ರೀಡೆಯನ್ನು ಆಡುವಾಗ ಮಕ್ಕಳನ್ನು ಅಲ್ಲಿಗೆ ಕರೆದುಕೊಂಡು ಹೋಗುವುದು ಒಳ್ಳೆಯದು. ಮಕ್ಕಳು ಅನೇಕ ಕ್ರೀಡೆಗಳಲ್ಲಿ ಭಾಗವಹಿಸಬಹುದು ಆಗ ಪೋಷಕರು ತಮ್ಮ ಮಗುವಿನ ಆಸಕ್ತಿಗಳು ಮತ್ತು ಪ್ರತಿಭೆಯನ್ನು ಗುರುತಿಸಲು ಸಹಾಯಕವಾಗುತ್ತದೆ. ಪೋಷಕರು ಮಗುವಿನ ಆಸಕ್ತಿ ಮತ್ತು ಸಂತೋಷವು ಅತ್ಯುನ್ನತವಾಗಿರಬೇಕು ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ ಹಾಗೂ ಮಕ್ಕಳ ದೈಹಿಕ, ಮಾನಸಿಕ ಬೆಳವಣಿಗೆಯ ಮೇಲೆ ಕೇಂದ್ರೀಕರಿಸಬೇಕು ಎಂದು ಡಾ. ಸನೇಶ್ ತುತೇಜಾ ಹೇಳುತ್ತಾರೆ.

ಇದನ್ನೂ ಓದಿ: ಬೇಸಿಗೆಯ ಆಹಾರ ಕ್ರಮದಲ್ಲಿ ಈ ಅಂಶವನ್ನು ಸೇರಿಸುವ ಮಾರ್ಗ ಇಲ್ಲಿದೆ

ಕ್ರೀಡಾ ಕಾರ್ಯಕ್ರಮಗಳನ್ನು ಪ್ರಾರಂಭಿಸಲು ಸಲಹೆಗಳು:

ಈ ಬೇಸಿಗೆಯಲ್ಲಿ ಕ್ರೀಡಾಕಾರ್ಯಕ್ರಮವನ್ನು ಪ್ರಾರಂಭಿಸಲು ಸಜ್ಜಾಗುತ್ತಿರುವವರಿಗೆ ಡಾ. ಸುನೇಶ್ ತುತೇಜ್ ಅವರು ಕೆಲವೊಂದು ಸಲಹೆಗಳನ್ನು ಶಿಫಾರಸು ಮಾಡಿದ್ದಾರೆ, ಹೊಸ ಕಾರ್ಯಕ್ರಮವನ್ನು ಪ್ರಾರಂಭಿಸುವ ಮೊದಲು, ವೈದ್ಯರಿಂದ ದೈಹಿಕ ಪರೀಕ್ಷೆಯನ್ನು ಪಡೆದುಕೊಳ್ಳುವುದು ಒಳ್ಳೆಯದು. ಇದು ದೈಹಿಕ ಚಟುವಟಿಕೆಗಳಿಂದ ಉಲ್ಬಣಗೊಳ್ಳಬಹುದಾದ ಕೆಲವೊಂದು ವೈದ್ಯಕೀಯ ಪರಿಸ್ಥಿತಿಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ಯಾವುದೇ ದೈಹಿಕ ಚಟುವಟಿಕೆಗಳನ್ನು ಪ್ರಾರಂಭಿಸುವ ಮೊದಲು ವಾರ್ಮ್ ಅಪ್ ಮಾಡಿಕೊಳ್ಳುವುದು ಅತ್ಯಗತ್ಯ. ಇದು ಸ್ನಾಯುಗಳು ಸೂಕ್ತ ತಾಪಮಾನ ಮತ್ತು ನಮ್ಯತೆಯಲ್ಲಿದೆ ಎಂದು ಖಚಿತಪಡಿಸುತ್ತದೆ. ಅಲ್ಲದೆ ಗಾಯದ ಅಪಾಯವನ್ನು ಕಡಿಮೆ ಮಾಡುತ್ತದೆ. ಅತ್ಯುತ್ತಮ ಕಾರ್ಯಕ್ಷಮತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಗಾಯಗಳನ್ನು ತಡೆಗಟ್ಟಲು ಸೂಕ್ತವಾದ ಅಥ್ಲೆಟಿಕ್ ಗೇರ್ ನ್ನು ಧರಿಸಿ. ಹಾಗೂ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಖಚಿತಪಡಿಸಿಕೊಳ್ಳಲು ಜಲಸಂಚಯನವು ನಿರ್ಣಾಯಕವಾಗಿದೆ. ಸಾಕಷ್ಟು ನೀರು ಸೇವನೆ ಮಾಡುವ ಮೂಲಕ ಜಲಸಂಚಯನವನ್ನು ಕಾಪಾಡಿಕೊಳ್ಳುವ ಪ್ರಾಮುಖ್ಯತೆಯ ಬಗ್ಗೆ ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಬೇಕು. ಸಾಕಷ್ಟು ಪ್ರೋಟೀನ್ ಗಳು, ತಾಜಾ ಹಣ್ಣುಗಳು ಮತ್ತು ತರಕಾರಿಗಳೊಂದಿಗೆ ಆರೋಗ್ಯಕರ ಮತ್ತು ಸಮತೋಲಿತ ಆಹಾರವನ್ನು ಸೇವಿಸುವುದು ಸಹ ಮುಖ್ಯವಾಗಿದೆ.

ದೈಹಿಕ ಚಟುವಟಿಕೆಯು ವ್ಯಕ್ತಿತ್ವವನ್ನು ನಿರ್ಮಿಸುವ ಪ್ರಮುಖ ಸಾಧನವಾಗಿದೆ. ಚಿಕ್ಕ ವಯಸ್ಸಿನಿಂದಲೇ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು ಮತ್ತು ಪೋಷಕರು ತಮ್ಮ ಮಕ್ಕಳಿಗೆ ಸಮರ್ಪಕವಾದ ತರಬೇತಿಯನ್ನು ನೀಡುವುದರಿಂದ ಮಕ್ಕಳಲ್ಲಿ ಬಹುಮುಖಿ ಮತ್ತು ಆತ್ಮವಿಶ್ವಾಸದ ವ್ಯಕ್ತಿತ್ವವನ್ನು ಅಭಿವೃದ್ಧಿಪಡಿಸುವುದು ಮಾತ್ರವಲ್ಲದೆ ಜೀವನಶೈಲಿ ಕಾಯಿಲೆಯ ಅಪಾಯವನ್ನು ತಡೆಯಬಹುದು ಎಂದು ಡಾ. ಸುನೇಶ್ ತುತೇಜಾ ಸಲಹೆ ನೀಡುತ್ತಾರೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 7:00 pm, Thu, 18 May 23