ಪ್ರತಿಯೊಬ್ಬರಿಗೂ ಮಳೆಗಾಲ (Monsoon) ವೆಂದರೆ ಬಹಳ ಇಷ್ಟು. ಚಿಕ್ಕ ಮಕ್ಕಳಂತೂ ಮಳೆಯನ್ನು ಆನಂದಿಸಲು ಬಯಸುತ್ತಾರೆ. ಮಳೆಯಲ್ಲಿ ಮೋಜು ಮಾಡಲು ಇಷ್ಟಪಡುತ್ತಾರೆ. ಈ ಋತುವಿನಲ್ಲಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಕೂಡ ಒಂದು ಸವಾಲಾಗಿದೆ. ಮಳೆಗಾಲದಲ್ಲಿ ಕಣ್ಣಿನ ಸಮಸ್ಯೆ ಹೆಚ್ಚುತ್ತವೆ. ಕೆಲವೊಮ್ಮೆ ಕಣ್ಣುಗಳಲ್ಲಿ ಕೊಳಕು ನೀರು ಹೋಗಿ ಸೋಂಕು ಮತ್ತು ಕಣ್ಣುಗಳು ಕೆಂಪ್ಪಾಗುವ ಸಮಸ್ಯೆಗಳು ಉಂಟು. ಮನಷ್ಯನ ಕಣ್ಣುಗಳು ಅತ್ಯಂತ ಸೂಕ್ಷ್ಮವಾಗಿರುತ್ತವೆ. ಆದ್ದರಿಂದ ಅವುಗಳ ಬಗ್ಗೆ ನಾವು ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಕಣ್ಣುಗಳಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಯಾದರೂ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಮಳೆಗಾಲದಲ್ಲಿ ಕಣ್ಣುಗಳು ಆರೋಗ್ಯವಾಗಿರಲು ಯಾವ ಸಲಹೆಗಳನ್ನು ಅನುಸರಿಬೇಕು ಎಂಬುದನ್ನು ತಜ್ಞರು ಹೇಳಿದ್ದಾರೆ ಕೇಳಿ.
ತಜ್ಞರು ಹೇಳುವುದು ಏನು?
ಬಜಾಜ್ ಐ ಕೇರ್ ಸೆಂಟರ್ನ ನೇತ್ರತಜ್ಞ ಡಾ. ರಾಜೀವ್ ಬಜಾಜ್ ಹೇಳುವ ಪ್ರಕಾರ ಮಳೆಗಾಲದಲ್ಲಿ ವೈರಲ್ ಕಾಂಜಂಕ್ಟಿವಿಟಿಸ್ ಅಪಾಯವು ಹೆಚ್ಚಾಗುತ್ತದೆ. ಸಾಮಾನ್ಯ ಭಾಷೆಯಲ್ಲಿ ಇದನ್ನು ಕಣ್ಣಿನ ಜ್ವರ ಎಂದು ಕರೆಯಲಾಗುತ್ತದೆ. ಇದಲ್ಲದೆ, ಮಳೆಗಾಲದಲ್ಲಿ ಕಾರ್ನಿಯಾಕ್ಕೆ ಸಂಬಂಧಿಸಿದ ಶಿಲೀಂಧ್ರಗಳ ಸೋಂಕಿನ ಪ್ರಕರಣಗಳು ಸಹ ಹೆಚ್ಚಾಗುತ್ತವೆ. ಪರಿಸರದಲ್ಲಿ ಹೆಚ್ಚಿದ ಆರ್ದ್ರತೆಯಿಂದಾಗಿ, ಸೋಂಕು ಮತ್ತು ವೈರಲ್ ಅಪಾಯವು ಹೆಚ್ಚಾಗುತ್ತದೆ. ಮಳೆಯ ನೀರಿನಲ್ಲಿ ಸ್ನಾನ ಮಾಡುವುದರಿಂದ ಕಣ್ಣಿಗೆ ಹಾನಿಯಾಗುವುದಿಲ್ಲ, ಆದರೆ ನಂತರ ಕಣ್ಣುಗಳನ್ನು ಶುದ್ಧ ನೀರಿನಿಂದ ತೊಳೆಯಬೇಕು.
ಕಣ್ಣುಗಳ ಕಾಳಜಿ ಹೇಗೆ:
ಡಾ. ರಾಜೀವ್ ಬಜಾಜ್ ಹೇಳುವ ಪ್ರಕಾರ ಮಳೆಗಾಲದಲ್ಲಿ ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಈ ಋತುವಿನಲ್ಲಿ ಕೈ ತೊಳೆಯಬೇಕು ಹಾಗೂ ಪದೇ ಪದೇ ಕಣ್ಣುಗಳನ್ನು ಮುಟ್ಟಬಾರದು. ದಿನಕ್ಕೆ ಎರಡು ಬಾರಿ ಶುದ್ಧ ನೀರಿನಿಂದ ಕಣ್ಣುಗಳನ್ನು ತೊಳೆಯಬೇಕು. ಕಣ್ಣಿನಲ್ಲಿ ಯಾವುದೇ ಸಮಸ್ಯೆ ಕಂಡುಬಂದರೆ, ತಕ್ಷಣ ಕಣ್ಣಿನ ತಜ್ಞರನ್ನು ಸಂಪರ್ಕಿಸಿಬೇಕು. ವೈದ್ಯರ ಸಲಹೆಯಿಲ್ಲದೆ ಕಣ್ಣುಗಳಿಗೆ ಚಿಕಿತ್ಸೆ ನೀಡಬಾರದು. ಹೀಗೆ ಮಾಡುವುದರಿಂದ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇದಲ್ಲದೆ, ಯಾವುದೇ ಕಣ್ಣಿನ ಕಾಯಿಲೆಯಿಂದ ಬಳಲುತ್ತಿರುವವರು ಈ ಋತುವಿನಲ್ಲಿ ಹೊರಗೆ ಹೋಗಬಾರದು. ಮಳೆಗಾಲದ ಸಂದರ್ಭದಲ್ಲಿ ತಜ್ಞರು ನೀಡಿರುವ ಈ ಸಲಹೆಗಳನ್ನು ಪಾಲಿಸುವುದರಿಂದ ನಮ್ಮ ಕಣ್ಣುಗಳನ್ನು ನಾವು ಸುರಕ್ಷಿತ ಮತ್ತು ಆರೋಗ್ಯವಾಗಿಟ್ಟುಕೊಳ್ಳಬಹುದು.
ಇದನ್ನೂ ಓದಿ: Personality Test: ನಿಮ್ಮ ಪಾದಗಳ ಆಕಾರಕ್ಕೂ ವ್ಯಕ್ತಿತ್ವಕ್ಕೂ ಏನು ಸಂಬಂಧ?