Relationship: ತಾವೇ ಇಷ್ಟಪಟ್ಟು ಪಡೆದ ಪ್ರೀತಿಯಿಂದ ದೂರವಾಗೋದೇಕೆ? ಸಂಬಂಧ ಉಳಿಸಿಕೊಳ್ಳೋದು ಹೇಗೆ?

| Updated By: ನಯನಾ ರಾಜೀವ್

Updated on: May 30, 2022 | 5:16 PM

Relationship:

Relationship: ತಾವೇ ಇಷ್ಟಪಟ್ಟು ಪಡೆದ ಪ್ರೀತಿಯಿಂದ ದೂರವಾಗೋದೇಕೆ? ಸಂಬಂಧ ಉಳಿಸಿಕೊಳ್ಳೋದು ಹೇಗೆ?
Relationship
Follow us on

ಪ್ರೀತಿಯಲ್ಲಿ ಇರುವ ಖುಷಿ ಎಷ್ಟು ಚೆಂದವೋ ಅದೇ ಪ್ರೀತಿಯಿಂದ ಹೊರಬರುವ ನೋವು ಕೂಡ ಅಷ್ಟೇ ಗಾಢವಾಗಿರುತ್ತದೆ. ತಾವು ಇಷ್ಟ ಪಟ್ಟ ವ್ಯಕ್ತಿಗಳಿಂದ ಜನರು ದೂರವಾಗುವುದು ಏಕೆ, ಸಂಬಂಧವನ್ನು ಸರಿಪಡಿಸುವ ಉಪಾಯಗಳ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.

ಪ್ರೀತಿ ಎಂಬುದು ಒಂದು ಸುಂದರ ಅನುಬಂಧ. ಹುಡುಗ-ಹುಡುಗಿ ಇಬ್ಬರೂ ಪರಸ್ಪರ ಅರಿತುಕೊಂಡು ಹೊಂದಾಣಿಕೆಯಿಂದ ಹೋದಾಗ ಅದೊಂದು ಸುಮಧುರ ಬಾಂಧವ್ಯವಾಗುತ್ತದೆ. ಭಿನ್ನಾಭಿಪ್ರಾಯಗಳು ಮೂಡಿದಾಗ ಸಂಬಂಧವನ್ನು ಕೊನೆಗೊಳಿಸಿ ಮುಂದೆ ಸಾಗಬೇಕಾಗುತ್ತದೆ.

ಸಂಬಂಧವನ್ನು ಹೇಗೆ ಉಳಿಸಿಕೊಳ್ಳಬಹುದು
-ಪ್ರೀತಿಯೆಂಬ ಸಂಬಂಧದಲ್ಲಿ ಸುಪೀರಿಯರ್ ಎಂಬ ಕಾಂಪ್ಲೆಕ್ಸ್ ಬರಲೇಬಾರದು. ಇದು ಇಬ್ಬರ ನಡುವೆ ಜಗಳಕ್ಕೆ ಕಾರಣವಾಗುತ್ತದೆ. ಅಧಿಕಾರ ಸ್ಥಾಪಿಸಲು ಯತ್ನಿಸಿದರೆ ಪ್ರೀತಿಯನ್ನು ಉಳಿಸಿಕೊಳ್ಳುವುದು ಕಷ್ಟ. ಈ ಥರ ನಾನೇ ಮೇಲೆಂಬ ವರ್ತನೆಯಿಂದ ಸಂಗಾತಿ ಕಂಫರ್ಟ್ ಆಗಿರಲು ಸಾಧ್ಯವಾಗುವುದಿಲ್ಲ. ಹೀಗಾಗಿ ಇದು ಬ್ರೇಕಪ್‌ಗೆ ಕಾರಣವಾಗುವ ಸಾಧ್ಯತೆಯೇ ಹೆಚ್ಚು.

-ನೀವು ಮೊದಲ ಬಾರಿ ಪ್ರೀತಿಯಲ್ಲಿ ಬಿದ್ದಾಗ ಇರುವಷ್ಟು ಖುಷಿ, ಉತ್ಸಾಹ ನಂತರದ ದಿನಗಳಲ್ಲಿ ಇರುವುದಿಲ್ಲ. ಸಂಬಂಧದಲ್ಲಿರುವ ಗಾಢತೆ ಕ್ರಮೇಣ ಕಡಿಮೆಯಾಗುತ್ತಾ ಹೋಗುತ್ತದೆ. ಸಂಬಂಧದಲ್ಲಿ ಪ್ರೀತಿ ಕಡಿಮೆಯಾಗದಂತೆ ನೋಡಿಕೊಳ್ಳಬೇಕಾದುದು ಅತೀ ಮುಖ್ಯ. ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿ ಇದು ತುಂಬಾ ದಿನಗಳ ವರೆಗೆ ಮುಂದುವರೆದರೆ ನಿಮ್ಮ ಸಂಬಂಧ ಬ್ರೇಕಪ್‌ ಆಗೋ ಹಂತದಲ್ಲಿದೆ ಎಂದರ್ಥ. ಹೀಗಾಗಿ ತಕ್ಷಣ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಳ್ಳಿ.
-ಸಂಬಂಧದಲ್ಲಿ ಪ್ರೀತಿ ಮತ್ತು ಪರಸ್ಪರ ಗೌರವ ಬಹಳ ಮುಖ್ಯ. ಗೌರವ ನೀಡದಿದ್ದಾಗ ಯಾರೂ ಅಂಥಾ ಪ್ರೀತಿಯಲ್ಲಿರಲು ಇಷ್ಟಪಡುವುದಿಲ್ಲ. ಹಂತ ಹಂತವಾಗಿ ದೂರ ಹೋಗಲು ನಿರ್ಧರಿಸುತ್ತಾರೆ. ಹೀಗಾಗಿ ಪ್ರೀತಿಯಲ್ಲಿ ಪರಸ್ಪರ ಗೌರವ ನೀಡುತ್ತಿದ್ದೀರೋ ಎಂಬುದನ್ನು ಗಮನಿಸಿಕೊಳ್ಳಿ.

-ಸಂಗಾತಿಯನ್ನು ಮತ್ತೆ ಮತ್ತೆ ನೋಯಿಸಿದರೆ ಆ ಸಂಬಂಧದ ಪರಿಣಾಮ ಒಳ್ಳೆಯದಾಗಿರುವುದಿಲ್ಲ. ಅಥವಾ ಸಂಗಾತಿಯ ಸಂವೇದನಾಶೀಲತೆಯು ನಿಮ್ಮನ್ನು ಕಾಡುತ್ತಿದ್ದರೆ, ಆ ಸಂಬಂಧವು ಹೆಚ್ಚು ಕಾಲ ಉಳಿಯುವುದಿಲ್ಲ. ಹಲವರು ಹೆಚ್ಚು ಸಂವೇದನಾಶೀಲರಾಗಿರುತ್ತಾರೆ. ಸಣ್ಣ ಪುಟ್ಟ ವಿಷಯಕ್ಕೂ ಸಿಟ್ಟುಗೊಳ್ಳುತ್ತಾರೆ. ವಿಷಯವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನ ಪಡುವುದಿಲ್ಲ. ಮೊದಲ ದಿನದಿಂದಲೇ ನಿಮ್ಮ ಸಂಗಾತಿಯ ಸೂಕ್ಷ್ಮತೆಯನ್ನು ಗೌರವಿಸಿ. ಅವರನ್ನು ನೋಯಿಸುವ ಮಾತುಗಳನ್ನಾಡದ ಬಗ್ಗೆ ಎಚ್ಚರ ವಹಿಸಿ.

-ಸಾಮಾನ್ಯವಾಗಿ ಎಲ್ಲದರ ಬಗ್ಗೆ ತಪ್ಪು ತಿಳುವಳಿಕೆ ಇರುತ್ತದೆ. ಆದರೆ ಅವುಗಳನ್ನು ಚರ್ಚಿಸಿ ಪರಿಹರಿಸಿಕೊಳ್ಳುವುದು ಉತ್ತಮ. ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ತಪ್ಪು ತಿಳುವಳಿಕೆ ಹೆಚ್ಚುತ್ತಿದ್ದರೆ, ಅದನ್ನು ಪರಿಹರಿಸಲೂ ಆಗದಿದ್ದರೆ ಅದು ಸೋಲಾಗುತ್ತದೆ. ಇದರಿಂದ ಇಬ್ಬರೂ ಬೇರೆ ಬೇರೆಯಾಗ ಬೇಕಾಗಿ ಬರಬಹುದು.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ