ಕೆಲಸದ ಸ್ಥಳದಲ್ಲಿ ಪುರುಷರಿಗಿಂತ ಮಹಿಳೆಯರು ಹೆಚ್ಚು ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ; ಕಾರಣ ಇಲ್ಲಿದೆ
ಮಹಿಳಾ ಉದ್ಯೋಗಿಗಳು ತಮ್ಮ ಪುರುಷ ಸಹೋದ್ಯೋಗಿಗಳಿಗಿಂತ ಕಳಪೆ ಮಾನಸಿಕ ಆರೋಗ್ಯವನ್ನು ಹೊಂದಿರುತ್ತಾರೆ ಎಂದು ಸಾಕಷ್ಟು ಸಂಶೋಧನೆಗಳು ತೋರಿಸಿಕೊಟ್ಟಿವೆ. ಈ ಸ್ಥಿತಿಗೆ ಕಾರಣ ಏನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಇತ್ತೀಚಿನ ಒತ್ತಡದ ಜೀವನಶೈಲಿಯಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಸಾಕಷ್ಟು ಕಾಳಜಿ ವಹಿಸುವುದು ಅಗತ್ಯವಾಗಿದೆ. ಕೆಲಸಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಕಚೇರಿಯಲ್ಲಿ ಅತಿಯಾದ ಕೆಲಸ ಅಥವಾ ಕಡಿಮೆ ಸಿಬ್ಬಂದಿ, ಜೀವನದ ಸಮತೋಲನ, ಸರಿಯಾದ ನಾಯಕತ್ವ ಇಲ್ಲದಿರುವುದು ಮಾನಸಿಕ ಆರೋಗ್ಯದ ಮೇಲೆ ನೇರವಾಗಿ ಪರಿಣಾಮವನ್ನುಂಟು ಮಾಡುತ್ತದೆ. ಕೆಲಸದ ಸ್ಥಳದಲ್ಲಿ ಪುರುಷರಿಗಿಂತ ಮಹಿಳೆಯರು ಹೆಚ್ಚು ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ ಎಂದು ಸಾಕಷ್ಟು ಸಂಶೋಧನೆಗಳು ತೋರಿಸಿಕೊಟ್ಟಿವೆ. ಎಚ್‌ಟಿ ಲೈಫ್‌ಸ್ಟೈಲ್‌ಗೆ ನೀಡಿದ ಸಂದರ್ಶನದಲ್ಲಿ, ಪುಣೆಯ ಮನೋವೈದ್ಯರಾದ ಡಾ ಸುಪ್ರಕಾಶ್ ಚೌಧರಿ ಕೆಲಸದ ಸ್ಥಳಗಳಲ್ಲಿ ಮಹಿಳೆಯರು ಮಾನಸಿಕ ಖಿನ್ನತೆಗೆ ಒಳಗಾಗಲು ಕಾರಣಗಳೇನು ಎಂಬುದನ್ನು ವಿವರಿಸಿದ್ದಾರೆ.
ಲಿಂಗ ಪಾತ್ರಗಳು :
ಮಹಿಳೆಯರು ವೃತ್ತಿಪರ ಬದುಕಿನೊಂದಿಗೆ ಮನೆಯ ಜವಾಬ್ದಾರಿ, ಮನೆಕೆಲಸಗಳನ್ನು ಹೊಂದಿರುವುರಿಂದ ತೀವ್ರ ಒತ್ತಡ ಮತ್ತು ಮಿತಿಮೀರಿದ ಭಾವನೆಗಳಿಗೆ ಕಾರಣವಾಗಬಹುದು, ಆತಂಕ ಮತ್ತು ಖಿನ್ನತೆ ಸೇರಿದಂತೆ ಮಾನಸಿಕ ಆರೋಗ್ಯ ಕಾಳಜಿಗಳ ಅಪಾಯವನ್ನು ಹೆಚ್ಚಿಸುತ್ತದೆ.
ಕೆಲಸದ ಸ್ಥಳದ ತಾರತಮ್ಯ ಮತ್ತು ಲಿಂಗ ಪಕ್ಷಪಾತ:
ಈ ಅಂಶಗಳು ಹತಾಶೆ, ಕಡಿಮೆ ಸ್ವಾಭಿಮಾನ ಮತ್ತು ಕಡಿಮೆ ಮೌಲ್ಯದ ಭಾವನೆಗೆ ಕಾರಣವಾಗಬಹುದು, ಅಂತಿಮವಾಗಿ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ.
ಇದನ್ನೂ ಓದಿ: ಮನೆಗೆ ಬಣ್ಣ ಬಣ್ಣದ ಪೈಂಟ್ ಬಳಿಯುವ ಮೊದಲು, ವಿಷಕಾರಿ ಬಣ್ಣಗಳ ಹಾನಿಕಾರಕ ಪರಿಣಾಮಗಳನ್ನು ತಿಳಿದುಕೊಳ್ಳಿ
ಕೆಲಸ-ಜೀವನದ ಸಮತೋಲನ ಮತ್ತು ಕುಟುಂಬದ ಜವಾಬ್ದಾರಿಗಳು:
ಕೆಲಸ ಮತ್ತು ವೈಯಕ್ತಿಕ ಜವಾಬ್ದಾರಿಗಳನ್ನು ಒಂಟಿಯಾಗಿ ನಿರ್ವಹಿಸುವುದು ಅಷ್ಟು ಸುಲಭವಲ್ಲ. ಇದು ನಿರಂತರ ಒತ್ತಡಕ್ಕೆ ಕಾರಣವಾಗಬಹುದು.
ತಜ್ಞರ ಸಲಹೆಗಳು:
ಪುರಿಷರಿಗಿಂತ ಮಹಿಳೆಯರೇ ಹೆಚ್ಚಾಗಿ ಮಾನಸಿಕ ಖಿನ್ನತೆಗೆ ಒಳಗಾಗಲು ಈಮೇಲಿನ ಎಲ್ಲಾ ಅಂಶಗಳು ಪ್ರಮುಖ ಕಾರಣವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಆಕೆಯ ಮಾನಸಿಕ ಆರೋಗ್ಯದ ದೃಷ್ಟಿಯಿಂದ ಕುಟುಂಬದವರು ಹಾಗೂ ಸಹೋದ್ಯೋಗಿಗಳು ಬೆಂಬಲವನ್ನು ನೀಡುವುದು ಅಗತ್ಯ ಎಂದು ಡಾ ಸುಪ್ರಕಾಶ ಚೌಧರಿ ಅವರು ಸಲಹೆ ನೀಡುತ್ತಾರೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: