ಓಮಿಕ್ರಾನ್‌ ಭೀತಿಯ ನಡುವೆ ನಿಮ್ಮ ದೇಹವನ್ನು ಸುರಕ್ಷಿತವಾಗಿಡಲು ಈ ಯೋಗಾಸನಗಳನ್ನು ಮಾಡಿ

| Updated By: preethi shettigar

Updated on: Dec 15, 2021 | 8:00 AM

Yoga Asanas: ಓಮಿಕ್ರಾನ್‌ನ ಭೀತಿಯ ನಡುವೆ, ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವ ಮತ್ತು ನಿಮ್ಮ ದೇಹವನ್ನು ಓಮಿಕ್ರಾನ್‌ನಿಂದ ಮಾತ್ರವಲ್ಲದೆ ಇತರ ಎಲ್ಲಾ ಕಾಯಿಲೆಗಳಿಂದ ರಕ್ಷಿಸಲು ಸಹಾಯಕವಾಗುವಂತಹ ಯೋಗಾಸನಗಳ ಅಭ್ಯಾಸ ಮಾಡಿ.

ಓಮಿಕ್ರಾನ್‌ ಭೀತಿಯ ನಡುವೆ ನಿಮ್ಮ ದೇಹವನ್ನು ಸುರಕ್ಷಿತವಾಗಿಡಲು ಈ ಯೋಗಾಸನಗಳನ್ನು ಮಾಡಿ
ಪ್ರಾತಿನಿಧಿಕ ಚಿತ್ರ
Follow us on

ಇತ್ತೀಚಿನ ದಿನಗಳಲ್ಲಿ, ಭಾರತ ಸೇರಿದಂತೆ ಅನೇಕ ಕಡೆ ಕೊರೊನಾ ರೂಪಾಂತರಿ ಓಮಿಕ್ರಾನ್‌ನ (Omicron)  ಭೀತಿಯಿದೆ. ಕರ್ನಾಟಕ, ಮಹಾರಾಷ್ಟ್ರ, ರಾಜಸ್ಥಾನ, ದೆಹಲಿ, ಗುಜರಾತ್, ಕೇರಳ, ಆಂಧ್ರಪ್ರದೇಶ ಮತ್ತು ಚಂಡೀಗಢ ಸೇರಿದಂತೆ ಭಾರತದಲ್ಲಿ ಇದುವರೆಗೆ 38 ಒಮಿಕ್ರಾನ್ ಪ್ರಕರಣಗಳು ವರದಿಯಾಗಿವೆ. ಅದೇ ಸಮಯದಲ್ಲಿ, ಬ್ರಿಟನ್‌ನಲ್ಲಿ ಇದರಿಂದ ಸಾವು ಕೂಡ ಸಂಭವಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಮತ್ತೊಮ್ಮೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಬಗ್ಗೆ ಜನರಲ್ಲಿ ಚರ್ಚೆ ವೇಗವಾಗಿ ನಡೆಯುತ್ತಿದೆ.

ಆರೋಗ್ಯ ತಜ್ಞರ ಪ್ರಕಾರ, ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಪ್ರಬಲವಾಗಿದೆ. ನಮ್ಮ ದೇಹವು ರೋಗಗಳ ವಿರುದ್ಧ ಹೋರಾಡಲು ಹೆಚ್ಚು ಸಮರ್ಥವಾಗಿರುತ್ತದೆ. ಓಮಿಕ್ರಾನ್‌ನ ಭೀತಿಯ ನಡುವೆ, ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವ ಮತ್ತು ನಿಮ್ಮ ದೇಹವನ್ನು ಓಮಿಕ್ರಾನ್‌ನಿಂದ ಮಾತ್ರವಲ್ಲದೆ ಇತರ ಎಲ್ಲಾ ಕಾಯಿಲೆಗಳಿಂದ ರಕ್ಷಿಸಲು ಸಹಾಯಕವಾಗುವಂತಹ ಯೋಗಾಸನಗಳ ಅಭ್ಯಾಸ ಮಾಡಿ. ಇದು ಆತ್ಮಬಲದ ಜತೆಗೆ ದೇಹಕ್ಕೂ ಶಕ್ತಿ ನೀಡುತ್ತದೆ.

ಭುಜಂಗಾಸನ
ಇದರಲ್ಲಿ ದೇಹದ ಭಂಗಿಯು ಹೆಡೆ ಎತ್ತಿದ ಹಾವಿನಂತೆ ಇರುತ್ತದೆ. ಆದ್ದರಿಂದ ಇದನ್ನು ಭುಜಂಗಾಸನ ಎಂದು ಕರೆಯಲಾಗುತ್ತದೆ. ಇದನ್ನು ಮಾಡಲು, ಮೊದಲು ನಿಮ್ಮ ಹೊಟ್ಟೆ ನೆಲಕ್ಕೆ ತಾಗುವಂತೆ ಮಲಗಿ. ನಂತರ ಎರಡೂ ಕಾಲುಗಳ ನಡುವಿನ ಅಂತರವನ್ನು ಕಡಿಮೆ ಮಾಡಿ ಮತ್ತು ಕಾಲುಗಳನ್ನು ನೇರವಾಗಿ ಇರಿಸಿ. ಈಗ ಕೈಗಳನ್ನು ನೆಲ್ಲಕ್ಕೆ ಊರಿ ತಲೆ ಎತ್ತಿ. ದೇಹದ ಭಂಗಿಯು ಹಾವಿನ ಹೆಡೆಯಂತೆ ಕಾಣುತ್ತದೆ. ಈ ಮಧ್ಯೆ ಸೊಂಟದ ಮೇಲೆ ಹೆಚ್ಚು ಒತ್ತಡ ಕೊಡಬೇಡಿ. ಈ ಭಂಗಿಯಲ್ಲಿ ಸ್ವಲ್ಪ ಸಮಯ ಇರಿ. ನಂತರ ಉಸಿರನ್ನು ಬಿಡುತ್ತಾ ಸಹಜ ಸ್ಥಿತಿಗೆ ಹಿಂತಿರುಗಿ. ಇದನ್ನು ಅನುಕ್ರಮವನ್ನು ಒಮ್ಮೆಗೆ 5 ರಿಂದ 7 ಬಾರಿ ಪುನರಾವರ್ತಿಸಿ. ಈ ಆಸನವು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಮತ್ತು ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಜತೆಗೆ ಇದು ಉಸಿರಾಟದ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಅಲ್ಲದೆ ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ.

ಪಶ್ಚಿಮೋತ್ತಾಸನ
ಪಶ್ಚಿಮೋತ್ತಾಸನವನ್ನು ಮಾಡಲು, ಮೊದಲನೆಯದಾಗಿ ಎರಡೂ ಕಾಲುಗಳನ್ನು ನೇರವಾಗಿ ಚಾಚಿ ನಂತರ ಬಲಗಾಲನ್ನು ಮಡಚಿ ಬಲಗೈಯಿಂದ ಬಲಗಾಲಿನ ಬೆರಳನ್ನು ಹಿಡಿದು ಎಡಗೈಯನ್ನು ಮೇಲಕ್ಕೆ ಎತ್ತಿ ಮುಂದಕ್ಕೆ ಬಾಗಿ. ಗರ್ಭಕೋಶ ಅಥವಾ ಬೆನ್ನುನೋವಿನ ಸಮಸ್ಯೆಯಿದ್ದರೆ ಈ ಆಸನವನ್ನು ಮಾಡಬೇಡಿ. ಪಶ್ಚಿಮೋತ್ತಾಸನವನ್ನು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದು ದೇಹದಲ್ಲಿ ನಮ್ಯತೆಯನ್ನು ತರುತ್ತದೆ ಮತ್ತು ರಕ್ತ ಪರಿಚಲನೆ ಸುಧಾರಿಸುತ್ತದೆ.

ಸೇತುಬಂಧಾಸನ
ಕಾಲುಗಳನ್ನು ಬಗ್ಗಿಸಿ ಮತ್ತು ಅವುಗಳನ್ನು ನಿಮ್ಮ ಸೊಂಟಕ್ಕೆ ಹತ್ತಿರಕ್ಕೆ ತನ್ನಿ. ನಿಧಾನವಾಗಿ ಉಸಿರಾಡುವಾಗ, ನಿಮ್ಮ ಕೆಳಗಿನ ಬೆನ್ನಿನ ಭಾರವನ್ನು ಮೇಲಕ್ಕೆತ್ತಿ. ಕೈಗಳಿಂದ ಪಾದಗಳನ್ನು ಹಿಡಿಯಿರಿ. ಪಾದಗಳನ್ನು ನೆಲದ ಮೇಲೆ ಬಲವಾಗಿ ಇರಿಸಿ. ತಲೆ ಮತ್ತು ಭುಜದ ಭಾಗವನ್ನು ಸಹ ನೆಲದಲ್ಲಿ ಇರಿಸಿ. ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಈ ಭಂಗಿಯಲ್ಲಿ ಇರಿ. ಅದರ ನಂತರ, ಸಾಮಾನ್ಯ ಭಂಗಿಗೆ ಹಿಂತಿರುಗಿ. ಸೇತುಬಂಧಾಸನವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಎದೆ, ಕುತ್ತಿಗೆ ಮತ್ತು ಬೆನ್ನುಮೂಳೆಯನ್ನು ವಿಸ್ತರಿಸುತ್ತದೆ. ಕಿಬ್ಬೊಟ್ಟೆಯ ಅಂಗಗಳು, ಶ್ವಾಸಕೋಶಗಳು ಮತ್ತು ಥೈರಾಯ್ಡ್ ಗ್ರಂಥಿಯನ್ನು ಉತ್ತೇಜಿಸುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಮೆದುಳನ್ನು ಶಾಂತಗೊಳಿಸುತ್ತದೆ.

ಇದನ್ನೂ ಓದಿ:

Yoga Asanas: ನೀವು ಉತ್ತಮ ನಿದ್ರೆ ಪಡೆಯಲು ಈ ಯೋಗ ಭಂಗಿಗಳನ್ನು ಅಭ್ಯಾಸ ಮಾಡಿ

Yoga Asanas: ಆರೋಗ್ಯಕರ ಜೀವನ ಶೈಲಿಗಾಗಿ ಈ ಕೆಲವು ಯೋಗ ಆಸನಗಳನ್ನು ಪ್ರತಿನಿತ್ಯ ಮಾಡಿ