ಬಿಸಿಲ ಶಾಖದಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಈ ಈ ಅಗತ್ಯ ಸಲಹೆಗಳನ್ನು ಪಾಲಿಸಿ

ಈ ಬೇಸಿಗೆಯ ರಣಬಿಸಿಲಿನ ಅಬ್ಬರಕ್ಕೆ ಮನೆಯಿಂದ ಹೊರಗೆ ಕಾಲಿಡುವುದೇ ಕಷ್ಟಕರವಾಗಿದೆ. ಸುಡು ಬಿಸಿಲು ಮತ್ತು ಸೂರ್ಯನ ಶಾಖದ ತಾಪಕ್ಕೆ ಜನ ಹೈರಾಣಾಗಿ ಹೋಗಿದ್ದಾರೆ. ಈ ಉರಿ ಬಿಸಿಲು ಹಲವರನ್ನು ನಿರ್ಜಲೀಕರಣ, ಶಾಖದ ಹೊಡೆತದಂತಹ ಆರೋಗ್ಯ ಸಮಸ್ಯೆಗಳಿಗೆ ಸಿಲುಕಿ ಹಿಂಡಿ ಹಿಪ್ಪೆ ಮಾಡುತ್ತಿದೆ. ಈ ಅಪಾಯಕಾರಿ ಬಿಸಿಲ ತಾಪದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ತುಂಬಾನೇ ಮುಖ್ಯವಾಗಿದೆ. ಹಾಗಾಗಿ ಮನೆಯಿಂದ ಹೊರಗೆ ಹೋಗುವ ಸಂದರ್ಭದಲ್ಲಿ ಈ ಕೆಲವೊಂದು ಪ್ರಮುಖ ವಿಚಾರಗಳನ್ನು ನೆನಪಿಡಿ.

ಬಿಸಿಲ ಶಾಖದಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಈ ಈ ಅಗತ್ಯ ಸಲಹೆಗಳನ್ನು ಪಾಲಿಸಿ
ಸಾಂದರ್ಭಿಕ ಚಿತ್ರ
Image Credit source: Getty Images

Updated on: Apr 17, 2026 | 6:40 PM

ದಿನದಿಂದ ದಿನಕ್ಕೆ ಬಿಸಿಲ ತಾಪಮಾನ ಹೆಚ್ಚುತ್ತಿದ್ದು, ಸುಡುವ ಬಿಸಿಲ ತಾಪಕ್ಕೆ (Summer Heat) ಜನ ಬೆಂದು ಹೋಗಿದ್ದಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಬಿಸಿಲ ಧಗೆಗೆ ಮನೆಯಿಂದ ಹೊರಗೆ ಕಾಲಿಡುವುದೇ ಕಷ್ಟಸಾಧ್ಯವಾಗಿದೆ. ಅದರಲ್ಲೂ ಈ ಉಷ್ಣಾಂಶ ಏರಿಕೆಯಿಂದ ನಿರ್ಜಲೀಕರಣ, ಶಾಖದ ಹೊಡೆತದಂತಹ ಸಮಸ್ಯೆಗಳಿಗೆ ಸಿಲುಕಿ ಜನ ಹೈರಾಣಾಗಿದ್ದಾರೆ. ಹೀಗಿರುವಾಗ ಈ ಹೆಚ್ಚುತ್ತಿರುವ ಬೇಸಿಗೆಯಲ್ಲಿ ನಮ್ಮ ಆರೋಗ್ಯದ ಬಗ್ಗೆ  ಸ್ವಲ್ಪ ಕಾಳಜಿ ವಹಿಸಿಕೊಳ್ಳುವುದು ತುಂಬಾನೇ ಮುಖ್ಯ. ಹೀಗಿರುವಾಗ ಶಾಖದ ಹೊಡೆತದಿಂದ ತಪ್ಪಿಸಿಕೊಳ್ಳಲು ನಿಮ್ಮನ್ನು ನೀವು ಈ ರೀತಿ ಕಾಳಜಿ ವಹಿಸಿ, ಜೊತೆಗೆ ಮನೆಯಿಂದ ಹೊರಗೆ ಹೋಗುವ ಸಂದರ್ಭದಲ್ಲಿ ಈ ಕೆಲವು ವಿಷಯಗಳನ್ನು ನೆನಪಿನಲ್ಲಿಡಿ.

ಬೇಸಿಗೆಯಲ್ಲಿ ನಿಮ್ಮನ್ನು ನೀವು ಈ ರೀತಿ ಕಾಳಜಿ ವಹಿಸಿ:

ದೇಹದ ನೀರಿನಂಶ ಕಾಪಾಡಿಕೊಳ್ಳಿ: ಬೇಸಿಗೆಯಲ್ಲಿ ದೇಹದ ನೀರಿನಂಶ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಇದಕ್ಕಾಗಿ ಸಾಕಷ್ಟು ನೀರು ಕುಡಿಯಿರಿ. ಬಾಯಾರಿಕೆಯಾಗಿದ್ದರೆ ನಿಂಬೆ ಪಾನಕ ಕುಡಿಯಬಹುದು. ಬೇಸಿಗೆಯಲ್ಲಿ ಊಟದ ಜೊತೆಗೆ ಮಜ್ಜಿಗೆ ಅಥವಾ ಲಸ್ಸಿ ಕುಡಿಯಿರಿ. ಹಣ್ಣಿನ ಜ್ಯೂಸ್‌ ಕುಡಿಯಿರಿ. ಇವು ದೇಹಕ್ಕೆ ನೀರಿನಾಂಶವನ್ನು ಒದಗಿಸುತ್ತವೆ ಮತ್ತು ದೇಹವನ್ನು ತಂಪಾಗಿಸುತ್ತವೆ. ಜೊತೆಗೆ ಮನೆಯಿಂದ ಹೊರಗೆ ಹೋಗುವ ಸಂದರ್ಭದಲ್ಲಿ ತಪ್ಪದೇ ನೀರಿನ ಬಾಟಲಿಯನ್ನು ಕೊಂಡೊಯ್ಯಿರಿ.

ಬಿಸಿಲಿಗೆ ಹೊರಗೆ ಹೋಗುವುದನ್ನು ತಪ್ಪಿಸಿ: ಬೆಳಿಗ್ಗೆ 11 ರಿಂದ ಸಂಜೆ 4 ರವರೆಗೆ, ಅಂದರೆ ಬಿಸಿಲಿನ ಝಳ ಹೆಚ್ಚಿರುವ  ಸಮಯದಲ್ಲಿ, ಹೊರಗೆ ಹೋಗುವುದನ್ನು ತಪ್ಪಿಸಿ. ಅಗತ್ಯವಿದ್ದರೆ  ಮಾತ್ರ ಹೊರಗೆ ಹೋಗಿ. ಹೊರಗೆ ಹೋಗಲೇಬೇಕಾದರೆ, ನೆರಳಿರುವ ಪ್ರದೇಶದಲ್ಲಿ  ಆಗಾಗ್ಗೆ ವಿರಾಮ ತೆಗೆದುಕೊಳ್ಳಿ.  ಶಾಖದ ಹೊಡೆತದಿಂದ ತಪ್ಪಿಸಲು ಚೆನ್ನಾಗಿ ನೀರು ಕುಡಿಯಿರಿ.

ಆರಾಮದಾಯಕ ಬಟ್ಟೆ ಧರಿಸಿ: ಹತ್ತಿ ಅಥವಾ ಲಿನಿನ್‌ನಂತಹ ಉಸಿರಾಡುವ, ಸಡಿಲವಾದ, ಹಗುರವಾದ ಮತ್ತು ತಿಳಿ ಬಣ್ಣದ ಬಟ್ಟೆಗಳನ್ನು ಧರಿಸಿ. ಇಂತಹ ಹಗುರ ಬಟ್ಟೆಗಳು ಉತ್ತಮ ಗಾಳಿಯ ಪ್ರಸರಣಕ್ಕೆ ಅವಕಾಶ ಮಾಡಿಕೊಡುತ್ತವೆ ಮತ್ತು ನಿಮ್ಮನ್ನು ತಂಪಾಗಿರಿಸುತ್ತವೆ. ಭಾರವಾದ ಮತ್ತು ಕಿರಿಕಿರಿ ಭಾವನೆಯನ್ನು ಉಂಟುಮಾಡುವ ಬಟ್ಟೆಗಳನ್ನು ಧರಿಸದಿರಿ. ನೇರ ಸೂರ್ಯನ ಬೆಳಕು ಮತ್ತು ಸುಡುವ ಗಾಳಿಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಮನೆಯಿಂದ ಹೊರಗೆ ಹೋಗುವ ಸಂದರ್ಭದಲ್ಲಿ ಅಗಲವಾದ ಅಂಚುಳ್ಳ ಟೋಪಿ, ಸನ್ಗ್ಲಾಸ್ ಮತ್ತು ಛತ್ರಿಯನ್ನು ಬಳಸಿ.

ಎಣ್ಣೆಯುಕ್ತ ಮತ್ತು ಮಸಾಲೆಯುಕ್ತ ಆಹಾರ ಸೇವನೆಯನ್ನು ತಪ್ಪಿಸಿ:   ಬೇಸಿಗೆಯಲ್ಲಿ ಹೊಟ್ಟೆ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಆದ್ದರಿಂದ, ನೀವು ಮಸಾಲೆಯುಕ್ತ ಅಥವಾ ಎಣ್ಣೆಯುಕ್ತ ಆಹಾರವನ್ನು ಈ ಸಮಯದಲ್ಲಿ ತಿನ್ನುವುದನ್ನು ತಪ್ಪಿಸಬೇಕು. ವಿಶೇಷವಾಗಿ, ಹೊರಗಿನ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ. ಆದಷ್ಟು ಹಗುರವಾದ ಆಹಾರವನ್ನು ಸೇವನೆ ಮಾಡಿ.

ಇದನ್ನೂ ಓದಿ: ನಿಮ್ಮ ದಿನವನ್ನು ಧನಾತ್ಮಕವಾಗಿ ಆರಂಭಿಸಲು ಸಲಹೆಗಳನ್ನು ಪಾಲಿಸಿ

ಪ್ರಮುಖ ವಸ್ತುಗಳನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ: ನೀವು ಮನೆಯಿಂದ ಹೊರಗೆ ಹೋಗುತ್ತಿದ್ದೀರಿ ಎಂದಾದರೆ ಮುಖ್ಯವಾಗಿ ನೀರಿನ ಬಾಟಲಿಯನ್ನು ಕೊಂಡೊಯ್ಯಿರಿ. ಸೂರ್ಯನ ಶಾಖದಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು, ಯಾವಾಗಲೂ ಸನ್ಗ್ಲಾಸ್, ಕ್ಯಾಪ್, ಟವಲ್ ಅಥವಾ ಛತ್ರಿಯನ್ನು ಕೊಂಡೊಯ್ಯಿರಿ. ಇವು ಶಾಖದಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ.

ಖಾಲಿ ಹೊಟ್ಟೆಯಲ್ಲಿ ಎಂದಿಗೂ ಹೊರಗೆ ಹೋಗಬೇಡಿ:  ಬೇಸಿಗೆಯಲ್ಲಿ ಆರೋಗ್ಯವಾಗಿರಲು, ಖಾಲಿ ಹೊಟ್ಟೆಯಲ್ಲಿ ಮನೆಯಿಂದ ಹೊರಗೆ ಹೋಗುವುದನ್ನು ತಪ್ಪಿಸುವುದು ಬಹಳ ಮುಖ್ಯ. ಬಿಸಿಲಿನಲ್ಲಿ ಖಾಲಿ ಹೊಟ್ಟೆಯಲ್ಲಿ ಹೊರಗೆ ಹೋದರೆ ತಲೆತಿರುಗುವಿಕೆಗೆ ಕಾರಣವಾಗಬಹುದು. ಹೆಚ್ಚುವರಿಯಾಗಿ, ಆಮ್ಲೀಯತೆ ಮತ್ತು ವಾಂತಿ ಮುಂತಾದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:38 pm, Fri, 17 April 26

Follow Us