ಹೆಂಗಳೆಯರೇ… ಮದುವೆಯ ಬಳಿಕ ತೂಕ ಹೆಚ್ಚಾಗದಂತೆ ತಡೆಯಬೇಕಾ? ಹಾಗಿದ್ರೆ ಈ ಅಭ್ಯಾಸಗಳನ್ನು ಪಾಲಿಸಿ

ಸಾಮಾನ್ಯವಾಗಿ ಮದುವೆಯ ನಂತರ ಮಹಿಳೆಯರ ದೇಹ ತೂಕ ಹೆಚ್ಚಾಗುತ್ತದೆ. ಜೀವನಶೈಲಿಯ ಬದಲಾವಣೆ, ಆಹಾರ ಪದ್ಧತಿಯಲ್ಲಿನ ಬದಲಾವಣೆ ಈ ಎಲ್ಲಾ ಕಾರಣಗಳಿಂದಾಗಿ ಮದುವೆಯಾದ ಬಳಿಕ ಮಹಿಳೆಯ ತೂಕ ಹೆಚ್ಚಾಗುತ್ತದೆ. ಇನ್ನೇನೂ ನಿಮ್ಮ ಮದುವೆಯೂ ಹತ್ತಿರದಲ್ಲಿದೆ, ಆದ್ರೆ ದೇಹ ತೂಕ ಹೆಚ್ಚಾಗಬಾರದು ಅಂದುಕೊಂಡಿದ್ದೀರಾ? ಹಾಗಿದ್ರೆ ಮದುವೆಯ ಬಳಿಕ ಇದ್ದಕ್ಕಿದ್ದಂತೆ ತೂಕ ಹೆಚ್ಚಾಗುವುದನ್ನು ತಪ್ಪಿಸಲು ನೀವು ಈ ಕೆಲವು ಅಭ್ಯಾಸಗಳನ್ನು ಪಾಲಿಸಬೇಕು.

ಹೆಂಗಳೆಯರೇ… ಮದುವೆಯ ಬಳಿಕ ತೂಕ ಹೆಚ್ಚಾಗದಂತೆ ತಡೆಯಬೇಕಾ? ಹಾಗಿದ್ರೆ ಈ ಅಭ್ಯಾಸಗಳನ್ನು ಪಾಲಿಸಿ
ಸಾಂದರ್ಭಿಕ ಚಿತ್ರ
Image Credit source: Getty Images

Updated on: May 13, 2025 | 3:13 PM

ಮದುವೆಯ ಬಳಿಕ (After Marriage) ಹೆಣ್ಣಿನ ಜೀವನದಲ್ಲಿ ಹಲವಾರು ಬದಲಾವಣೆಗಳಾಗುತ್ತವೆ. ಅದೇ ರೀತಿ ದೈಹಿಕ ಬದಲಾವಣೆಗಳು ಆಗುತ್ತವೆ. ಅದರಲ್ಲೂ ಮದುವೆಯ ಬಳಿಕ ಮಹಿಳೆಯರ (women)  ದೇಹ ತೂಕ (weight) ಇದ್ದಕ್ಕಿದ್ದಂತೆ ಹೆಚ್ಚಾಗುತ್ತದೆ. ಹೌದು ವಿವಾಹದ ಬಳಿಕ ನಡೆಯುವಂತಹ ಔತಣಕೂಟಗಳು, ಸಂಬಂಧಿಕರ ಮನೆಯ ಪಾರ್ಟಿ, ಆಹಾರ ಪದ್ಧತಿಯ ಬದಲಾವಣೆ, ಹನಿಮೂನ್‌ ಅಂತೆಲ್ಲಾ ಸುತ್ತಾಡುವಾಗ ವ್ಯಾಯಾಮ ಯೋಗ ಮಾಡಲು ಸಾಧ್ಯವಾಗದ ಕಾರಣಗಳಿಂದಾಗಿ ದೇಹ ತೂಕ ಹೆಚ್ಚಾಗುತ್ತದೆ. ಹೀಗೆ ಮದುವೆಯ ಬಳಿಕ ತೂಕ ಹೆಚ್ಚಾಗಬಾರದು ಎಂದಾದರೆ ನೀವು ಈ ಕೆಲವೊಂದು ಅಭ್ಯಾಸಗಳನ್ನು ತಪ್ಪದೆ ಪಾಲಿಸಬೇಕು.

ಮದುವೆಯ ಬಳಿಕ ತೂಕ ಹೆಚ್ಚಾಗಬಾರದೆಂದರೆ ಹೀಗೆ ಮಾಡಿ:

ಕಡಿಮೆ ಪ್ರಮಾಣದಲ್ಲಿ ತಿನ್ನಿರಿ: ಮದುವೆಯ ಬಳಿಕ ಔತಣಕೂಟ, ಪಾರ್ಟಿ ಅಂತೆಲ್ಲಾ ನಡೆಯುತ್ತಿರುತ್ತವೆ. ಈ ಪಾರ್ಟಿಗಳಲ್ಲಿ ನವ ವಧುವಿಗೆ ಪ್ರೀತಿಯಿಂದ ಎಲ್ಲರೂ ಹೆಚ್ಚು ಹೆಚ್ಚು ತಿನ್ನಿಸುತ್ತಾರೆ. ಹೀಗೆ ಹೆಚ್ಚು ಆಹಾರ ತಿನ್ನುವ ಕಾರಣ ಮದುವೆಯ ಬಳಿಕ ಇದ್ದಕ್ಕಿದ್ದಂತೆ ತೂಕ ಹೆಚ್ಚಾಗುತ್ತದೆ. ಆದ್ದರಿಂದ ಔತಣಕೂಟದಲ್ಲಿ ಮಿತ ಪ್ರಮಾಣದಲ್ಲಿ ಆಹಾರಗಳನ್ನು ಸೇವನೆ ಮಾಡಿ.

ಆರೋಗ್ಯಕರ ಆಹಾರ ಪದ್ಧತಿಯನ್ನು ಅನುಸರಿಸಿ: ನಿಮ್ಮ ಆಹಾರವು ನಿಮ್ಮ ತೂಕದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ, ಆದ್ದರಿಂದ ನಿಮ್ಮ ಆಹಾರಕ್ರಮದ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯ. ತಾಜಾ ಹಣ್ಣುಗಳು, ತರಕಾರಿಗಳಂತಹ ಆರೋಗ್ಯಕರ ಆಹಾರವನ್ನು ಸೇವನೆ ಮಾಡಿ. ಇವು ದೇಹಕ್ಕೆ ಅಗತ್ಯವಾದ ಪೋಷಣೆಯನ್ನು ನೀಡುವುದು ಮಾತ್ರವಲ್ಲದೆ ತೂಕ ಇಳಿಸಲು ಕೂಡಾ ಸಹಕಾರಿ.

ಇದನ್ನೂ ಓದಿ
ಉಪಾಹಾರ ಅಥವಾ ಭೋಜನ ಇದರಲ್ಲಿ ಯಾವುದು ಬಿಟ್ಟರೆ ಫಿಟ್‌ನೆಸ್​​ಗೆ ಒಳ್ಳೆಯದು?
ತೂಕ ಇಳಿಸ್ಬೇಕು ಅಂದ್ರೆ ಮನೆಯಲ್ಲಿ ಈ ಕೆಲಸಗಳನ್ನು ಮಾಡಿದ್ರೆ ಸಾಕು
ದ್ರಾಕ್ಷಿ ಬೀಜದ ಎಣ್ಣೆಯಲ್ಲಿ ಅಡಗಿದೆ ಹೆಣ್ಣಿನ ಕೇಶದ ಸೌಂದರ್ಯ!
ಗಂಡನಾದವನು ಹೆಂಡತಿಯನ್ನು ಕೇಳದೆ ಈ ಕೆಲಸಗಳನ್ನು ಮಾಡಬಾರದು

ಪ್ರತಿದಿನ ವ್ಯಾಯಾಮ ಮಾಡಿ: ಮದುವೆಯ ಬಳಿಕ ಹೆಚ್ಚಿನವರು ವ್ಯಾಯಾಮ ಮಾಡುವುದನ್ನೇ ತಪ್ಪಿಸುತ್ತಾರೆ. ಇದು ಕೂಡಾ ತೈಕ ಹೆಚ್ಚಾಗಲು ಒಂದು ಕಾರಣ. ಹಾಗಿರುವಾಗ ಪ್ರತಿನಿತ್ಯ ನಿಮಗಾಗಿ ಅರ್ಧ ಗಂಟೆ ಸಮಯವನ್ನು ಮೀಸಲಿಟ್ಟು, ಜಾಗಿಂಗ್‌, ವಾಕಿಂಗ್‌ ಸೈಕ್ಲಿಂಗ್‌ ಇತ್ಯಾದಿ ಚಟುವಟಿಕೆಗಳನ್ನು ಮಾಡಿ. ಇದು ಕ್ಯಾಲೋರಿಗಳನ್ನು ಸುಡುಲು ಮತ್ತು ನಿಮ್ಮನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಪತಂಜಲಿಯ ಈ ಔಷಧಿಯನ್ನು ತೆಗೆದುಕೊಂಡರೆ, ಕೊಲೆಸ್ಟ್ರಾಲ್‌ನಿಂದ ಮುಕ್ತಿ ಪಡೆಯಬಹುದು; ಸಂಶೋಧನೆ

ಹೆಚ್ಚು ನೀರು ಕುಡಿಯಿರಿ: ನೀರು ಕುಡಿಯುವುದರಿಂದ ದೇಹವು ಹೈಡ್ರೇಟೆಡ್ ಆಗಿರುವುದಲ್ಲದೆ, ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಪ್ರತಿದಿನ ಕನಿಷ್ಠ 8-10 ಗ್ಲಾಸ್ ನೀರು ಕುಡಿಯಿರಿ. ಹೀಗೆ ಪ್ರತಿನಿತ್ಯ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ದೇಹದಿಂದ ತ್ಯಾಜ್ಯವನ್ನು ಕೂಡಾ ಹೊರ ಹಾಕಬಹುದು.

ಆರೋಗ್ಯಕರ ಪಾನೀಯಗಳನ್ನು ಸೇವಿಸಿ: ಸ್ಮೂಥಿ, ಮಿಲ್ಕ್‌ಶೇಕ್‌ ಬದಲಿಗೆ ತಾಜಾ ಹಣ್ಣಿನ ರಸ, ಸಕ್ಕರೆ ರಹಿತ ಹಣ್ಣಿನ ಜ್ಯೂಸ್‌, ನಿಂಬೆ ಹಣ್ಣಿನ ಜ್ಯೂಸ್‌ ಸೇವನೆ ಮಾಡಿ. ಇದಲ್ಲದೆ ನೀವು ಗ್ರೀನ್‌ ಟೀ ಕುಡಿಯುವ ಅಭ್ಯಾಸವನ್ನು ಕೂಡಾ ರೂಢಿಸಿಕೊಳ್ಳಿ. ಇದು ಕೂಡಾ ತೂಕ ಇಳಿಕೆಗೆ ಸಹಕಾರಿಯಾಗಿದೆ.

ಒತ್ತಡವನ್ನು ಕಡಿಮೆ ಮಾಡಿ: ಮದುವೆಯ  ಸಮಯದಲ್ಲಿ ಎಲ್ಲಾ ಕಾರ್ಯಗಳು ಅಚ್ಚುಕಟ್ಟಾಗಬೇಕು ಅದು ಇದು ಅಂತೆಲ್ಲಾ ಒತ್ತಡಕ್ಕೊಳಗಾಗುವುದು ಸಹಜ. ಆದರೆ ಈ ಒತ್ತಡವು ನಿಮ್ಮ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುವುದಲ್ಲದೆ, ಅದು ನಿಮ್ಮ ತೂಕದ ಮೇಲೂ ನೇರ ಪರಿಣಾಮ ಬೀರುತ್ತದೆ. ಹೌದು ಒತ್ತಡವು ಕಾರ್ಟಿಸೋಲ್ ಎಂಬ ಹಾರ್ಮೋನ್ ಅನ್ನು ಹೆಚ್ಚಿಸುತ್ತದೆ, ಇದು ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಹಾಗಾಗಿ  ಒತ್ತಡವನ್ನು ನಿವಾರಿಸಲು  ಯೋಗ, ಧ್ಯಾನ, ಉಸಿರಾಟದ ವ್ಯಾಯಾಮವನ್ನು ಅಭ್ಯಾಸ ಮಾಡಿ.

ಮದುವೆಯ ಬಳಿಕ ತೂಕ ಹೆಚ್ಚಾಗದೆ ಸ್ಲಿಮ್‌ ಹಾಗೂ ಫಿಟ್‌ ಆಗಿರಬೇಕೆಂದು ಬಯಸಿದರೆ, ನೀವು ಖಂಡಿತವಾಗಿಯೂ ಈ ಅಭ್ಯಾಸಗಳನ್ನು ಪಾಲಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ