Heath Tips: ಕಾಲೋಚಿತ ಸೋಂಕು ತಪ್ಪಿಸಲು ಈ 5 ಆರೋಗ್ಯಕರ ಪಾನೀಯಗಳನ್ನು ಕುಡಿಯಿರಿ

| Updated By: preethi shettigar

Updated on: Oct 04, 2021 | 7:25 AM

ಈ ಪಾನೀಯಗಳು ನಿಮ್ಮನ್ನು ರೋಗಗಳಿಂದ ದೂರವಿರಿಸುತ್ತದೆ. ಅಲ್ಲದೆ ಹೊಸ ಚೈತನ್ಯ ನೀಡಲು ಸಹಾಯ ಮಾಡುತ್ತದೆ ಮತ್ತು ದಿನವಿಡೀ ಉತ್ಸಾಹದಿಂದ ಕೆಲಸ ಮಾಡಲು ಉಪಯುಕ್ತವಾಗಿದೆ. ನೀವು ಬೆಳಿಗ್ಗೆ ಎದ್ದ ತಕ್ಷಣ ಏನನ್ನೂ ತಿನ್ನಲು ಬಯಸದಿದ್ದರೆ, ಈ ಆರೋಗ್ಯಕರ ಪಾನೀಯಗಳನ್ನು ಕುಡಿಯಬಹುದು.

Heath Tips: ಕಾಲೋಚಿತ ಸೋಂಕು ತಪ್ಪಿಸಲು ಈ 5 ಆರೋಗ್ಯಕರ ಪಾನೀಯಗಳನ್ನು ಕುಡಿಯಿರಿ
ಸಾಂದರ್ಭಿಕ ಚಿತ್ರ
Follow us on

ನಮ್ಮ ಆರೋಗ್ಯವನ್ನು ಸದಾಕಾಲ ಕಾಪಾಡಿಕೊಳ್ಳಲು ಕೆಲವು ಉತ್ತಮ ಅಭ್ಯಾಸಗಳನ್ನು ರೂಡಿಸಿಕೊಳ್ಳುವುದು ಮುಖ್ಯ. ಹೀಗಾಗಿ ಆಹಾರ ಸೇವನೆಯ ಜೊತೆಗೆ ಕೆಲವು ಆರೋಗ್ಯಕರ ಪಾನೀಯಗಳನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಿ. ಇದು ನಿಮ್ಮ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುವುದಲ್ಲದೆ. ಜತೆಗೆ ನಿಮ್ಮನ್ನು ರೋಗಗಳಿಂದ ದೂರವಿರಿಸುತ್ತದೆ. ಅಲ್ಲದೆ ಹೊಸ ಚೈತನ್ಯ ನೀಡಲು ಇದು ಸಹಾಯ ಮಾಡುತ್ತದೆ ಮತ್ತು ದಿನವಿಡೀ ಉತ್ಸಾಹದಿಂದ ಕೆಲಸ ಮಾಡಲು ಉಪಯುಕ್ತವಾಗಿದೆ.

ನೀವು ಬೆಳಿಗ್ಗೆ ಎದ್ದ ತಕ್ಷಣ ಏನನ್ನೂ ತಿನ್ನಲು ಬಯಸದಿದ್ದರೆ, ಈ ಆರೋಗ್ಯಕರ ಪಾನೀಯಗಳನ್ನು ಕುಡಿಯಬಹುದು. ಈ ಆರೋಗ್ಯಕರ ಪಾನೀಯಗಳನ್ನು ಹೇಗೆ ತಯಾರಿಸುವುದು ಮತ್ತು ಅದರ ಪ್ರಯೋಜನಗಳೇನು ಎಂದು ಪ್ರಶ್ನಿಸುವವರಿಗೆ ಇಲ್ಲಿದೆ ಉತ್ತರ.

ಶುಂಠಿ, ಜೇನುತುಪ್ಪ ಮತ್ತು ಕಲ್ಲು ಉಪ್ಪು
ಶುಂಠಿಯ ಪುಡಿಯೊಂದಿಗೆ ಕಲ್ಲು ಉಪ್ಪು ಮತ್ತು ಜೇನುತುಪ್ಪವನ್ನು ನೀರಿನಲ್ಲಿ ಮಿಶ್ರಣ ಮಾಡಿ ಕುಡಿಯಿರಿ. ಈ ಪದಾರ್ಥಗಳು ಆಂಟಿಆಕ್ಸಿಡೆಂಟ್, ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ನಿವಾರಕ ಗುಣಗಳನ್ನು ಹೊಂದಿವೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದರ ಹೊರತಾಗಿ, ಇದು ಸ್ಥೂಲಕಾಯ, ಮುಟ್ಟಿನಿಂದ ಉಂಟಾಗುವ ಹೊಟ್ಟೆ ನೋವು. ಕೈ ಮತ್ತು ಕಾಲುಗಳಲ್ಲಿನ ನೋವನ್ನು ನಿವಾರಿಸಲು ಕೆಲಸ ಮಾಡುತ್ತದೆ. ಆದರೆ, ಬೇಸಿಗೆ ಕಾಲದಲ್ಲಿ ನಿರಂತರವಾಗಿ ಶುಂಠಿ ತಿನ್ನುವುದನ್ನು ಕಡಿಮೆ ಮಾಡಿ.

ದಾಲ್ಚಿನ್ನಿ
ದಾಲ್ಚಿನ್ನಿ ಮತ್ತು ಜೇನುತುಪ್ಪವನ್ನು ಒಂದು ಲೋಟ ನೀರಿನಲ್ಲಿ ಬೆರೆಸಿ ಕುಡಿಯಿರಿ. ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದು ಆಂಟಿವೈರಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ದಾಲ್ಚಿನ್ನಿ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಇದು ಚರ್ಮದಲ್ಲಿನ ಸೂಕ್ಷ್ಮ ಗೆರೆಗಳು ಮತ್ತು ಸುಕ್ಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕೊತ್ತಂಬರಿ ಬೀಜ
ಕೊತ್ತಂಬರಿ ಬೀಜವನ್ನು ಬಳಸಲು, ಅದನ್ನು ಹಿಂದಿನ ರಾತ್ರಿ ನೆನೆಸಿಡಿ. ನಂತರ ಆ ನೀರನ್ನು ಕುಡಿಯಿರಿ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಇದು ತುಂಬಾ ಪ್ರಯೋಜನಕಾರಿ. ಇದು ಕರುಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಇದು ನೀರಿನ ಧಾರಣದಿಂದ ರಕ್ಷಿಸುತ್ತದೆ. ಇದಲ್ಲದೇ, ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

ಜೀರಿಗೆ
ಹೊಟ್ಟೆಗೆ ಸಂಬಂಧಿಸಿದ ರೋಗಗಳನ್ನು ಕಡಿಮೆ ಮಾಡಲು ಜೀರಿಗೆ ಸಹಾಯ ಮಾಡುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಉತ್ತೇಜಿಸುತ್ತದೆ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಕಬ್ಬಿಣದ ಮುಖ್ಯ ಮೂಲವಾಗಿದೆ. ಜೀರಿಗೆ ಪುಡಿಯನ್ನು ನೀರಿನೊಂದಿಗೆ ಬೆರೆಸಿ ಕುಡಿಯಿರಿ.

ನಿಂಬೆ ರಸ ಮತ್ತು ಜೇನುತುಪ್ಪ
ನಿಂಬೆ ರಸ ಮತ್ತು ಜೇನುತುಪ್ಪವನ್ನು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಕುಡಿಯುವುದು ಯಾವಾಗಲೂ ಪ್ರಯೋಜನಕಾರಿ. ಇದು ಸುಕ್ಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಲ್ಲದೇ, ಇದು ಹೃದಯಾಘಾತಕ್ಕೆ ಸಂಬಂಧಿಸಿದ ರೋಗವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಪಾನೀಯವು ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ರಕ್ತ ಕಣಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ನೆಗಡಿ, ಕೆಮ್ಮು ಮತ್ತು ಗಂಟಲಿನ ಸೋಂಕನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ:
Health Tips: ಡ್ರೈ ಫ್ರೂಟ್ಸ್ ಸೇವಿಸುವ ಅಭ್ಯಾಸ ಇದೆಯೇ? ಆರೋಗ್ಯಕರ ಬದಲಾವಣೆಯ ಬಗ್ಗೆ ತಿಳಿಯಿರಿ

Raisin Water Benefits: ಒಣದ್ರಾಕ್ಷಿ ನೆನಸಿದ ನೀರು ಕುಡಿಯುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಬಹುದು