AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಿನ ದಿನಚರಿಯಲ್ಲಿ ಈ ಸಿಂಪಲ್‌ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ, ಒತ್ತಡದಿಂದ ಮುಕ್ತರಾಗಿ

ಇಂದಿನ ಈ ಬ್ಯುಸಿ ಜೀವನಶೈಲಿಯಲ್ಲಿ ಒತ್ತಡವು ಜೀವನದ ಭಾಗವಾಗಿ ಹೋಗಿದೆ. ಇದನ್ನು ಕಡೆಗಣಿಸಿದರೆ ದೈಹಿಕ, ಮಾನಸಿಕ ಆರೋಗ್ಯ ಸಮಸ್ಯೆಗಳು ಕಾಡಬಹುದು. ಹಾಗಾಗಿ ಈ ಒತ್ತಡವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು, ಆತಂಕದಿಂದ ಮುಕ್ತರಾಗಿ ಖುಷಿ ಖುಷಿಯಾಗಿರಲು ಬೆಳಗಿನ ದಿನಚರಿಯಲ್ಲಿ ಈ ಒಂದಷ್ಟು ಅಭ್ಯಾಸಗಳನ್ನು ರೂಢಿಸಿಕೊಳ್ಳಿ.

ಬೆಳಗಿನ ದಿನಚರಿಯಲ್ಲಿ ಈ ಸಿಂಪಲ್‌ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ, ಒತ್ತಡದಿಂದ ಮುಕ್ತರಾಗಿ
ಸಾಂದರ್ಭಿಕ ಚಿತ್ರ Image Credit source: Freepik
ಮಾಲಾಶ್ರೀ ಅಂಚನ್​
|

Updated on:Nov 25, 2025 | 6:38 PM

Share

ಇತ್ತೀಚಿನ ದಿನಗಳಲ್ಲಿ ಒತ್ತಡವು (stress) ಪ್ರತಿಯೊಬ್ಬರನ್ನೂ ಕಾಡುತ್ತಿರುವ ಬಹುದೊಡ್ಡ ಸಮಸ್ಯೆಯಾಗಿದೆ. ಇದು ಮನಸ್ಸಿನ ನೆಮ್ಮದಿಯನ್ನು ಹಾಳು ಮಾಡುವುದು ಖಿನ್ನತೆಯನ್ನು ಉಂಟುಮಾಡುವುದಲ್ಲದೆ, ಗಂಭೀರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು. ಆದ್ದರಿಂದ ಒತ್ತಡವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು ಬಹಳ ಮುಖ್ಯ. ನಿಮಗೂ ಕೂಡ ಸ್ಟ್ರೆಸ್‌ ಟೆಂಶನ್‌, ಕಿರಿಕಿರಿಯಿದ್ರೆ, ಇವುಗಳನ್ನು ನಿಯಂತ್ರಣಕ್ಕೆ ತರಲು ನಿಮ್ಮ ಬೆಳಗಿನ ದಿನಚರಿಯಲ್ಲಿ ಈ ಅಭ್ಯಾಸಗಳನ್ನು ಪಾಲಿಸಿ.

ಒತ್ತಡ ಕಡಿಮೆ ಮಾಡಲು ಬೆಳಗಿನದ ದಿನಚರಿ ಹೀಗಿರಲಿ:

ಬೆಳಗ್ಗೆ ಬೇಗ ಎದ್ದೇಳಿ: ಬೆಳಗ್ಗೆ ಬೇಗ ಏಳುವುದರಿಂದ ಮನಸ್ಸು ಶಾಂತವಾಗುತ್ತದೆ. ದೇಹಕ್ಕೆ ಶಕ್ತಿ ಸಿಗುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ.

ಆಳವಾದ ಉಸಿರಾಟ: ಬೆಳಗ್ಗೆ ಎದ್ದ ತಕ್ಷಣ 5 ನಿಮಿಷಗಳ ಕಾಲ ಉಸಿರಾಟದ ವ್ಯಾಯಾಮವನ್ನು ಅಭ್ಯಾಸ ಮಾಡಿ. ಇದು ಆಮ್ಲಜನಕ ಪೂರೈಕೆಯನ್ನು ಹೆಚ್ಚಿಸುತ್ತದೆ ಮತ್ತು ನರಮಂಡಲವನ್ನು ತಂಪಾಗಿಸುತ್ತದೆ. ಒಟ್ಟಾರೆಯಾಗಿ ಇದು ಒತ್ತಡ ಕಡಿಮೆಯಾಗಲು ಸಹಾಯ ಮಾಡುತ್ತದೆ.

ಧ್ಯಾನ, ಯೋಗ: ಬೆಳಗ್ಗೆ ಎದ್ದ ತಕ್ಷಣ ಧ್ಯಾನ ಮತ್ತು ಯೋಗ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಇದು ಮಾನಸಿಕ ಶಾಂತಿಯನ್ನು ಹೆಚ್ಚಿಸಿ, ಒತ್ತಡವನ್ನು ಕಡಿಮೆ ಮಾಡಲು ಬಹಳಷ್ಟು ಸಹಾಯ ಮಾಡುತ್ತದೆ.

ಲಘು ವ್ಯಾಯಾಮ: ಬೆಳಗ್ಗೆ ಎದ್ದ ತಕ್ಷಣ ಲಘು ವ್ಯಾಯಾಮ ಮಾಡಿ. ಇದು ನಿಮ್ಮ ಹಾರ್ಮೋನುಗಳನ್ನು ಸಮತೋಲನಗೊಳಿಸಲು, ಕಾರ್ಟಿಸೋಲ್‌ ಅನ್ನು ಕಡಿಮೆ ಮಾಡಿ ಒತ್ತಡವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.

ಸಂಗೀತ ಕೇಳಿ: ಬೆಳಗ್ಗೆ ನಿಮ್ಮ ನೆಚ್ಚಿನ ಸಂಗೀತವನ್ನು ಆಲಿಸಿ. ಇದು ಎಂಡಾರ್ಫಿನ್‌ ಎಂಬ ಸಂತೋಷದ ಹಾರ್ಮೋನು ಬಿಡುಗಡೆ ಮಾಡುತ್ತದೆ ಹಾಗೂ ಒತ್ತಡವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ಬೆಳಗಿನ ದಿನಚರಿಯಲ್ಲಿ ರೂಲ್ಸ್‌ಗಳನ್ನು ಪಾಲಿಸಿದ್ರೆ ನೀವು ಫಿಟ್‌ ಆ್ಯಂಡ್ ಹೆಲ್ತಿಯಾಗಿರಬಹುದು

ಸೂರ್ಯನ ಬೆಳಕಿಗೆ ಮೈ ಒಡ್ಡಿಕೊಳ್ಳಿ: ಬೆಳಗ್ಗೆ ಸ್ವಲ್ಪ ಹೊತ್ತು ಬಿಸಿಲಿನಲ್ಲಿ ಸಮಯ ಕಳೆಯಿರಿ. ಇದು ನಿಮಗೆ ಸಾಕಷ್ಟು ವಿಟಮಿನ್‌ ಡಿ ಪಡೆಯಲು, ಮನಸ್ಥಿತಿಯನ್ನು ಸುಧಾರಿಸಲು, ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಅಲ್ಲದೆ ದಿನವನ್ನು ಸಕಾರಾತ್ಮಕ ಆಲೋಚನೆಗಳೊಂದಿಗೆ ದಿನವನ್ನು ಪ್ರಾರಂಭಿಸಿ, ಪೌಷ್ಟಿಕಾಂಶಯುಕ್ತ ಉಪಹಾರವನ್ನು ಸೇವನೆ ಮಾಡಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:31 pm, Tue, 25 November 25