ನಿಮ್ಮ ಸ್ನೇಹಿತರನ್ನು ಕೆಟ್ಟ ಚಟದಿಂದ ಹೊರಗೆ ತರಲು ಏನು ಮಾಡಬೇಕು?

ಒಳ್ಳೆಯ ಸ್ನೇಹಿತರಿರುವ ವ್ಯಕ್ತಿ ಭೂಮಿಯ ಮೇಲಿನ ಅದೃಷ್ಟವಂತ ವ್ಯಕ್ತಿಗಳಲ್ಲಿ ಒಬ್ಬರು ಎಂದು ಹೇಳಲಾಗುತ್ತದೆ. ಕೇವಲ ಸ್ನೇಹಿತರನ್ನು ಮಾಡಿಕೊಳ್ಳುವುದು ಮಾತ್ರವಲ್ಲ, ಅವರನ್ನು ಕಾಪಾಡಿಕೊಳ್ಳುವುದು ಕೂಡ ಬಹಳ ಮುಖ್ಯವಾಗುತ್ತದೆ. ಆತನ ಕಷ್ಟ, ಸುಖದಲ್ಲಿ ಭಾಗಿಯಾಗುವ ಮೂಲಕ ಅವರ ಜೊತೆಗೆ ಸದಾಕಾಲ ಇರಬೇಕು. ಅಂದಾಗ ಮಾತ್ರ ಆ ಸಂಬಂಧಕ್ಕೊಂದು ಅರ್ಥವಿರಲು ಸಾಧ್ಯ. ಆದರೆ ಕೆಲವರ ಸ್ನೇಹಿತರು ದುಷ್ಟ ಚಟಗಳ ದಾಸರಾಗಿರುತ್ತಾರೆ. ಸ್ನೇಹಿತರಾಗಿ ಅವರನ್ನು ಅದರಿಂದ ಹೊರಗೆ ತರುವುದು ನಮ್ಮ ಕರ್ತವ್ಯವಾಗಿರುತ್ತದೆ. ಹಾಗಾದರೆ ಇದು ಹೇಗೆ ಸಾಧ್ಯ? ಯಾವ ರೀತಿಯ ಕ್ರಮಗಳನ್ನು ಅನುಸರಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ.

ನಿಮ್ಮ ಸ್ನೇಹಿತರನ್ನು ಕೆಟ್ಟ ಚಟದಿಂದ ಹೊರಗೆ ತರಲು ಏನು ಮಾಡಬೇಕು?
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ

Updated on: Jul 28, 2024 | 10:22 AM

ನಿಜವಾದ ಮತ್ತು ಒಳ್ಳೆಯ ಸ್ನೇಹಿತರಿರುವ ವ್ಯಕ್ತಿ ಭೂಮಿಯ ಮೇಲಿನ ಅದೃಷ್ಟವಂತ ವ್ಯಕ್ತಿಗಳಲ್ಲಿ ಒಬ್ಬರು ಎಂದು ಹೇಳಲಾಗುತ್ತದೆ. ಕೇವಲ ಸ್ನೇಹಿತರನ್ನು ಮಾಡಿಕೊಳ್ಳುವುದು ಮಾತ್ರವಲ್ಲ, ಅವರನ್ನು ಕಾಪಾಡಿಕೊಳ್ಳುವುದು ಕೂಡ ಬಹಳ ಮುಖ್ಯವಾಗುತ್ತದೆ. ಆತನ ಕಷ್ಟ, ಸುಖದಲ್ಲಿ ಭಾಗಿಯಾಗುವ ಮೂಲಕ ಅವರ ಜೊತೆಗೆ ಸದಾಕಾಲ ಇರಬೇಕು. ಅಂದಾಗ ಮಾತ್ರ ಆ ಸಂಬಂಧಕ್ಕೊಂದು ಅರ್ಥವಿರಲು ಸಾಧ್ಯ. ಆದರೆ ಕೆಲವರ ಸ್ನೇಹಿತರು ದುಷ್ಟ ಚಟಗಳ ದಾಸರಾಗಿರುತ್ತಾರೆ. ಸ್ನೇಹಿತರಾಗಿ ಅವರನ್ನು ಅದರಿಂದ ಹೊರಗೆ ತರುವುದು ನಮ್ಮ ಕರ್ತವ್ಯವಾಗಿರುತ್ತದೆ. ಹಾಗಾದರೆ ಇದು ಹೇಗೆ ಸಾಧ್ಯ? ಯಾವ ರೀತಿಯ ಕ್ರಮಗಳನ್ನು ಅನುಸರಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ.

ಸ್ನೇಹಿತರ ದುಷ್ಟ ಚಟಗಳನ್ನು ಬಿಡಿಸುವುದು ಹೇಗೆ?

  • ಯಾವುದೇ ಚಟವಾಗಲಿ ಅವುಗಳನ್ನು ಬಲವಂತದಿಂದ ಬಿಡಿಸಲು ಅಥವಾ ಅದರಿಂದ ದೂರವಿಡಲು ಸಾಧ್ಯವಿಲ್ಲ ಹಾಗಾಗಿ ಮೊದಲು ಅವರಿಗೆ ತಿಳಿ ಹೇಳಿ. ನಿಮ್ಮ ಮಾತನ್ನು ಅವರು ಕೇಳುತ್ತಾರೆ ಎಂದರೆ ಸರಿಯಾದ ರೀತಿಯಲ್ಲಿ ಅವರಿಗೆ ಮನವರಿಕೆ ಮಾಡಿ. ಪ್ರೀತಿಯಿಂದ ಎಲ್ಲವನ್ನು ಅರ್ಥ ಮಾಡಿಸಿ.
  • ಅವರ ಜೀವನಶೈಲಿ ಬದಲಾಯಿಸಿಕೊಳ್ಳಲು ಅವರಿಗೆ ಬೇಕಾಗುವ ಸಹಾಯ ಮಾಡಿ. ಇದರಿಂದ ಅವರು ಬದಲಾಗಬಹುದು.
  • ನಿಮ್ಮ ಸ್ನೇಹಿತರು ಯಾವ ಕಾರಣಕ್ಕೆ ದುಷ್ಟ ಚಟಗಳಿಗೆ ಅಂಟಿಕೊಂಡಿದ್ದಾರೆ ಎಂಬುದನ್ನು ಗಮನಿಸಿ, ಅದಕ್ಕೆ ಪರಿಹಾರ ನೀಡಲು ಅಥವಾ ಅದನ್ನು ಸರಿಪಡಿಸಲು ನಿಮ್ಮಿಂದ ಸಾಧ್ಯವಾ? ಎಂಬುದನ್ನು ಯೋಚಿಸಿ.
  • ನಿಮ್ಮ ಸ್ನೇಹಿತ ಯಾವುದಾದರೂ ತೊಂದರೆಯಲ್ಲಿದ್ದು ಅದನ್ನು ಹೇಳಿಕೊಳ್ಳುವುದಕ್ಕೆ ಸಾಧ್ಯವಾಗದೆ ದುಷ್ಟ ಚಟಗಳನ್ನು ರೂಢಿಸಿಕೊಂಡಿದ್ದರೆ ಮೊದಲು ಅದನ್ನು ಪರಿಹರಿಸಲು ಪ್ರಯತ್ನಿಸಿ.
  • ಕೆಟ್ಟಚಟಗಳಿಂದ ಒಮ್ಮೆಲೇ ಯಾರನ್ನು ಹೊರಗೆ ತರಲು ಸಾಧ್ಯವಿಲ್ಲ. ಹಾಗಾಗಿ ನಿಮ್ಮ ಸ್ನೇಹಿತನನ್ನು ಅದರಿಂದ ಬಿಡಿಸಲು, ಸಾಧ್ಯವಾದಷ್ಟು ಅವರನ್ನು ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಸಲು ಪ್ರಯತ್ನಿಸಿ. ಇದರಿಂದ ಅವರು ಅದನ್ನು ಮರೆಯಬಹುದು.
  • ಒಂಟಿಯಾಗಿ ಬೇರೆ ಬೇರೆ ರೀತಿಯ ಕೆಟ್ಟ ಅಭ್ಯಾಸಗಳನ್ನು ಕಲಿತಿದ್ದರೆ ಅವರನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿ, ಅವರ ಮನಸ್ಸಿಗೆ ಖುಷಿ ಕೊಡುವ ಕೆಲಸ ಮಾಡಿ.
  • ನಿಮ್ಮ ಸ್ನೇಹಿತರಿಗೆ ಇಷ್ಟವಿರುವ ಅಥವಾ ಅವರ ಆಸಕ್ತಿದಾಯಕ ವಿಷಯಗಳ ಬಗ್ಗೆ ತಿಳಿದುಕೊಂಡು ಅದರ ಬಗ್ಗೆ ಹೆಚ್ಚು ಗಮನ ಹರಿಸುವಂತೆ ಮಾಡಿ.
  • ಇದೆಲ್ಲದರ ಹೊರತಾಗಿ ನೀವು ತಜ್ಞರ ಸಲಹೆಗಳನ್ನು ಪಡೆಯಬಹುದು. ಆ ಮೂಲಕ ನಿಮ್ಮ ಸ್ನೇಹಿತರನ್ನು ಕೆಟ್ಟ ಚಟಗಳಿಂದ ದೂರವಿರಿಸಬಹುದು.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ