
ಸ್ನಾನಗೃಹವನ್ನು (bathroom) ಪ್ರತಿನಿತ್ಯ ಬಳಸುವ ಕಾರಣ ಅದರ ಶುಚಿತ್ವವನ್ನು ಕಾಪಾಡಿಕೊಳ್ಳುವುದು ಸಹ ಬಹಳ ಮುಖ್ಯವಾಗಿದೆ. ಆದ್ದರಿಂದ ಹೆಚ್ಚಿನವರು ಪ್ರತಿನಿತ್ಯ ಬಾತ್‌ರೂಮ್ ಕ್ಲೀನ್ ಮಾಡುತ್ತಾರೆ. ಹೀಗೆ ಎಷ್ಟೇ ಕ್ಲೀನ್ ಮಾಡಿದರೂ ಸಹ ಟೈಲ್ಸ್ ಮೇಲಿನ ಕಲೆಗಳು ಹಾಗೆಯೇ ಉಳಿದುಬಿಡುತ್ತವೆ. ವಿಶೇಷವಾಗಿ ಬಿಳಿ ಮತ್ತು ತಿಳಿ ಬಣ್ಣದ ಟೈಲ್ಸ್ ಅಂಚುಗಳು ಬೇಗನೆ ಹಳದಿ ಬಣ್ಣಕ್ಕೆ ತಿರುಗುತ್ತವೆ, ಇದರಿಂದಾಗಿ ಇಡೀ ಸ್ನಾನಗೃಹವು ಕೊಳಕಾಗಿ ಕಾಣುತ್ತದೆ. ಈ ಕಲೆಗಳನ್ನು ತೆಗೆದು ಹಾಕಲು ದುಬಾರಿ ಕ್ಲೀನರ್‌ಗಳನ್ನು ಬಳಸುವ ಅವಶ್ಯಕತೆಯೇ ಇಲ್ಲ. ಈ ಕೆಲವೊಂದು ಮನೆಮದ್ದುಗಳ ಸಹಾಯದಿಂದ ಸುಲಭವಾಗಿ ಬಾತ್‌ರೂಮ್ ಟೈಲ್ಸ್ ಕ್ಲೀನ್ ಮಾಡಬಹುದು.
ಬಾತ್‌ರೂಮ್ ಟೈಲ್ಸ್ ಮೇಲಿನ ಕಲೆಗಳನ್ನು ಹೋಲಾಡಿಸಲು ಈ ಟಿಪ್ಸ್ ಪಾಲಿಸಿ:
ಅಡಿಗೆ ಸೋಡಾ ಮತ್ತು ವಿನೆಗರ್: ಮೊಂಡುತನದ ಕಲೆಗಳನ್ನು ತೆಗೆದುಹಾಕಲು ಅಡಿಗೆ ಸೋಡಾ ಮತ್ತು ವಿನೆಗರ್ ದ್ರಾವಣವು ತುಂಬಾ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಇದನ್ನು ಬಳಸಲು, ಒಂದು ಬಟ್ಟಲಿನಲ್ಲಿ 2 ಟೀ ಚಮಚ ಅಡಿಗೆ ಸೋಡಾವನ್ನು ತೆಗೆದುಕೊಳ್ಳಿ. ಮತ್ತು ಅದಕ್ಕೆ ಸ್ವಲ್ಪ ನೀರು ಸೇರಿಸಿ ದಪ್ಪ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಕೊಳಕು ಟೈಲ್ಸ್‌ಗೆ ಹಚ್ಚಿ 10-15 ನಿಮಿಷಗಳ ಕಾಲ ಬಿಡಿ. ಈಗ, ಪೇಸ್ಟ್ ಮೇಲೆ ಸ್ವಲ್ಪ ಬಿಳಿ ವಿನೆಗರ್ ಸಿಂಪಡಿಸಿ. ನಂತರ, ಸ್ಕ್ರಬ್ಬರ್ ಅಥವಾ ಹಳೆಯ ಟೂತ್ ಬ್ರಷ್‌ನಿಂದ ಚೆನ್ನಾಗಿ ಸ್ಕ್ರಬ್ ಮಾಡಿ. ಇದು ಹಳದಿಗಟ್ಟಿದ ಕಲೆಯನ್ನು ಸುಲಭವಾಗಿ ತೆಗೆದುಹಾಕುತ್ತದೆ.
ವಿನೆಗರ್ ಮತ್ತು ನೀರಿನ ದ್ರಾವಣ: ವಿನೆಗರ್ ನೈಸರ್ಗಿಕ ಸೋಂಕುನಿವಾರಕವಾಗಿದ್ದು, ಇದು ಬಾತ್‌ರೂಮ್ ಟೈಲ್ಸ್ ಮೇಲೆ ಅಂಟಿರುವ ನೀರಿನ ಕಲೆಗಳು ಮತ್ತು ಸೋಪಿನ ಕಲ್ಮಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಬಿಳಿ ವಿನೆಗರ್ ಮತ್ತು ನೀರನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ. ಈ ದ್ರಾವಣವನ್ನು ಸ್ಪ್ರೇ ಬಾಟಲಿಗೆ ಸುರಿದು ಅದನ್ನು ಟೈಲ್‌ಗಳ ಮೇಲೆ ಸಿಂಪಡಿಸಿ ಮತ್ತು 5 ರಿಂದ 10 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಸ್ಪಾಂಜ್ ಅಥವಾ ಬ್ರಷ್‌ನಿಂದ ಸ್ಕ್ರಬ್ ಮಾಡಿ.
ಇದನ್ನೂ ಓದಿ: ಬಾಳೆಹಣ್ಣಿನ ಸಿಪ್ಪೆಯನ್ನು ಎಸೆಯೋ ಬದಲು ಈ ರೀತಿಯಾಗಿ ಪಾತ್ರೆ ಕ್ಲೀನ್ ಮಾಡಲು ಉಪಯೋಗಿಸಿ
ನಿಂಬೆ ಮತ್ತು ಉಪ್ಪು: ನಿಂಬೆಹಣ್ಣಿನಲ್ಲಿರುವ ಸಿಟ್ರಿಕ್ ಆಮ್ಲವು ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದಕ್ಕಾಗಿ ನಿಂಬೆಹಣ್ಣನ್ನು ಅರ್ಧದಷ್ಟು ಕತ್ತರಿಸಿ. ನಂತರ, ಕತ್ತರಿಸಿದ ನಿಂಬೆಹಣ್ಣಿನ ಮೇಲೆ ಸ್ವಲ್ಪ ಉಪ್ಪನ್ನು ಸಿಂಪಡಿಸಿ. ಈ ನಿಂಬೆಹಣ್ಣನ್ನು ನೇರವಾಗಿ ಟೈಲ್‌ಗಳ ಮೇಲೆ, ವಿಶೇಷವಾಗಿ ಕಲೆಗಳಿರುವ ಪ್ರದೇಶಗಳಿಗೆ ಉಜ್ಜಿ. 5 ನಿಮಿಷಗಳ ಕಾಲ ಹಾಗೆಯೇ ಬಿಡಿ. ಇದು ಟೈಲ್‌ಗಳನ್ನು ಹೊಸದರಂತೆ ಹೊಳೆಯುವಂತೆ ಮಾಡುತ್ತದೆ.
ಬ್ಲೀಚ್: ಕೊಳೆಗಟ್ಟಿದ ಟೈಲ್ಸ್ ಕ್ಲೀನ್ ಮಾಡಲು ಬ್ಲೀಚ್ ಅನ್ನು ಬಳಸಬಹುದು. ಇದಕ್ಕಾಗಿ ಸ್ವಲ್ಪ ನೀರಿಗೆ 8-10 ಚಮಚ ಬ್ಲೀಚ್ ಸುರಿಯಿರಿ. ನಂತರ, ಈ ದ್ರಾವಣವನ್ನು ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ ಟೈಲ್‌ಗಳ ಮೇಲೆ ಸಿಂಪಡಿಸಿ, ನಂತರ ಅದನ್ನು ಬಟ್ಟೆಯಿಂದ ಒರೆಸಿ. ಈ ಎಲ್ಲಾ ಮನೆಮದ್ದುಗಳು ಬಾತ್‌ರೂಮ್ ಟೈಲ್ಸ್ ಅನ್ನು ಹೊಳೆಯುವಂತೆ ಮಾಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ