ಬೆಳ್ಳಿಯ ಆಭರಣಗಳ ಬಣ್ಣವು ಕಪ್ಪು ಬಣ್ಣಕ್ಕೆ ತಿರುಗಿದೆಯೇ? ಮತ್ತೆ ಹೊಳಪನ್ನು ತರಲು ಈ ವಿಧಾನ ಅನುಸರಿಸಿ

| Updated By: preethi shettigar

Updated on: Mar 13, 2022 | 4:22 PM

ನಿಮ್ಮ ಮನೆಯಲ್ಲಿ ಯಾವುದೇ ಬೆಳ್ಳಿಯ ಆಭರಣಗಳು ಅಥವಾ ವಸ್ತುವು ಕಪ್ಪು ಬಣ್ಣಕ್ಕೆ ತಿರುಗಿದ್ದರೆ, ಅದನ್ನು ಸ್ವಚ್ಛಗೊಳಿಸಲು ನೀವು ಅಕ್ಕಸಾಲಿಗರ ಬಳಿಗೆ ಹೋಗಬೇಕಾಗಿಲ್ಲ. ಮನೆಯಲ್ಲಿ ಕೆಲವು ಸುಲಭ ವಿಧಾನದ ಮೂಲಕ ಬೆಳ್ಳಿಯ ಹೊಳಪನ್ನು ಹೆಚ್ಚಿಸಬಹುದು.

ಬೆಳ್ಳಿಯ ಆಭರಣಗಳ ಬಣ್ಣವು ಕಪ್ಪು ಬಣ್ಣಕ್ಕೆ ತಿರುಗಿದೆಯೇ? ಮತ್ತೆ ಹೊಳಪನ್ನು ತರಲು ಈ ವಿಧಾನ ಅನುಸರಿಸಿ
ಬೆಳ್ಳಿ (ಪ್ರಾತಿನಿಧಿಕ ಚಿತ್ರ)
Follow us on

ಬೆಳ್ಳಿಯು ಅಂತಹ ಲೋಹವಾಗಿದ್ದು, ಅದರ ಹೊಳಪು ಕಾಲಾನಂತರದಲ್ಲಿ ಮರೆಯಾಗಲು ಪ್ರಾರಂಭಿಸುತ್ತದೆ. ವಿವಿಧ ರೀತಿಯ ಆಭರಣಗಳು, ಪಾತ್ರೆಗಳು, ವಿಗ್ರಹಗಳು ಇತ್ಯಾದಿ ವಸ್ತುಗಳನ್ನು ಬೆಳ್ಳಿಯಿಂದ ತಯಾರಿಸಲಾಗುತ್ತದೆ. ಆದರೆ ಬೆಳ್ಳಿಯ ದೊಡ್ಡ ನ್ಯೂನತೆಯೆಂದರೆ ನೀವು ಅದನ್ನು ಬಳಸುತ್ತಿರುವವರೆಗೆ ಅದು ಉತ್ತಮವಾಗಿರುತ್ತದೆ. ನೀವು ಅದನ್ನು ಸ್ವಲ್ಪ ಸಮಯದವರೆಗೆ ಇರಿಸಿದರೆ, ಕ್ರಮೇಣ ಅದು ಕಪ್ಪು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ. ಆದಾಗ್ಯೂ, ಬೆಳ್ಳಿ ಕಪ್ಪಾಗುವಿಕೆಯಿಂದ ಹದಗೆಡುವುದಿಲ್ಲ ಅಥವಾ ಅದರ ಮೌಲ್ಯವನ್ನು ಕಳೆದುಕೊಳ್ಳುವುದಿಲ್ಲ. ಇದು ಕೊಳಕು ಮತ್ತು ಧೂಳಿನ ಪರಿಣಾಮವಾಗಿರುತ್ತದೆ ಅಷ್ಟೇ. ಆದರೆ ಕಪ್ಪಾದ ಬೆಳ್ಳಿ ವಸ್ತುಗಳು ಬಳಸುವ ಸ್ಥಿತಿಯಲ್ಲಿಲ್ಲದ ಸಂದರ್ಭದಲ್ಲಿ ಅದನ್ನು ಮತ್ತೆ ಸ್ವಚ್ಛಗೊಳಿಸಬೇಕು. ನಿಮ್ಮ ಮನೆಯಲ್ಲಿ ಯಾವುದೇ ಬೆಳ್ಳಿಯ ಆಭರಣಗಳು ಅಥವಾ ವಸ್ತುವು ಕಪ್ಪು ಬಣ್ಣಕ್ಕೆ ತಿರುಗಿದ್ದರೆ, ಅದನ್ನು ಸ್ವಚ್ಛಗೊಳಿಸಲು ನೀವು ಅಕ್ಕಸಾಲಿಗರ ಬಳಿಗೆ ಹೋಗಬೇಕಾಗಿಲ್ಲ. ಮನೆಯಲ್ಲಿ ಕೆಲವು ಸುಲಭ ವಿಧಾನದ ಮೂಲಕ ಬೆಳ್ಳಿಯ ಹೊಳಪನ್ನು ಹೆಚ್ಚಿಸಬಹುದು.

ಬೆಳ್ಳಿಯನ್ನು ಹೊಳಪು ಮಾಡುವ ಮಾರ್ಗಗಳು

1. ಬಿಸಿ ನೀರಿಗೆ ಬಿಳಿ ವಿನೆಗರ್ ಹಾಕಿ ಮತ್ತು ಅದಕ್ಕೆ ಉಪ್ಪು ಸೇರಿಸಿ. ಅದರಲ್ಲಿ ಬೆಳ್ಳಿಯ ವಸ್ತುಗಳನ್ನು ಹಾಕಿ ಸುಮಾರು ಅರ್ಧ ಗಂಟೆ ಬಿಡಿ. ನಂತರ ಬೆಳ್ಳಿಯ ಮೇಲೆ ಸಂಗ್ರಹವಾಗಿರುವ ಕೊಳೆಯು ಸುಲಭವಾಗಿ ಹೊರಬರುತ್ತದೆ. ಸ್ವಲ್ಪ ಸಮಯದ ನಂತರ ಬಳಸದ ಟೂತ್ ಬ್ರಶ್ ಉಪಯೋಗಿದಿ ಸ್ವಚ್ಛಗೊಳಿಸಿ. ಬೆಳ್ಳಿ ಸ್ವಲ್ಪ ಸಮಯದಲ್ಲೇ ಹೊಳೆಯುತ್ತದೆ.

2. ಬೆಳ್ಳಿ ವಸ್ತುಗಳನ್ನು ಟೂತ್‌ಪೇಸ್ಟ್ ಮತ್ತು ಟೂತ್ ಪೌಡರ್‌ನಿಂದ ಕೂಡ ಹೊಳಪುಗೊಳಿಸಬಹುದು. ಆದರೆ ಇದಕ್ಕೆ ಬಿಳಿ ಬಣ್ಣದ ಕೋಲ್ಗೇಟ್ ಟೂತ್ ಪೇಸ್ಟ್ ಮತ್ತು ಟೂತ್ ಪೌಡರ್ ಮಾತ್ರ ಚೆನ್ನಾಗಿ ಕೆಲಸ ಮಾಡುತ್ತದೆ. ಈ ಪೌಡರ್​ ಅಥವಾ ಪೇಸ್ಟ್​ ಅನ್ನು ಬ್ರಶ್‌ನಲ್ಲಿ ತೆಗೆದುಕೊಂಡು ಬೆಳ್ಳಿಯನ್ನು ಉಜ್ಜಿ ಮತ್ತು ಮಧ್ಯದಲ್ಲಿ ಬಿಸಿ ನೀರನ್ನು ಕೂಡ ಬಳಸಿ. ಕೆಲವೇ ಸಮಯದಲ್ಲಿ ಬೆಳ್ಳಿ ಹೊಳೆಯಲು ಪ್ರಾರಂಭಿಸುತ್ತದೆ.

3. ಬಿಸಿ ನೀರಿಗೆ ಒಂದು ಚಮಚ ಅಡಿಗೆ ಸೋಡಾ ಹಾಕಿ ಅದರಲ್ಲಿ ಬೆಳ್ಳಿಯ ವಸ್ತುಗಳನ್ನು ಹಾಕಿ. ಅರ್ಧ ಗಂಟೆಯ ನಂತರ ಚೆನ್ನಾಗಿ ಉಜ್ಜಿ. ಬೆಳ್ಳಿ ಶುದ್ಧವಾಗುತ್ತದೆ. ನೀವು ಉಜ್ಜಲು ಫಾಯಿಲ್ ಪೇಪರ್ ಅನ್ನು ಬಳಸಿದರೆ, ನೀವು ಉತ್ತಮ ಹೊಳಪನ್ನು ಪಡೆಯುತ್ತೀರಿ.

4. ಕೊರೊನಾ ಅವಧಿಯಿಂದ ಹ್ಯಾಂಡ್ ಸ್ಯಾನಿಟೈಸರ್ ಪ್ರತಿ ಮನೆಯಲ್ಲೂ ಇರುತ್ತದೆ. ಬೆಳ್ಳಿಯನ್ನು ಹೊಳಪು ಮಾಡಲು ಸಹ ಇದನ್ನು ಬಳಸಬಹುದು. ಇದಕ್ಕಾಗಿ, ನೀವು ಒಂದು ಪಾತ್ರೆಯಲ್ಲಿ ಸ್ವಲ್ಪ ಸ್ಪ್ರೇ ಸ್ಯಾನಿಟೈಸರ್ ಅನ್ನು ಹೊರತೆಗೆಯಿರಿ. ಅದರಲ್ಲಿ ಬೆಳ್ಳಿಯನ್ನು ಹಾಕಿ. ಅರ್ಧ ಗಂಟೆಯ ನಂತರ ಉಜ್ಜಿ ಮತ್ತೆ ಸ್ಯಾನಿಟೈಸರ್‌ನಲ್ಲಿ ಅದ್ದಿ. ಸ್ವಲ್ಪ ಸಮಯದ ನಂತರ ಅದನ್ನು ಉಜ್ಜುವಾಗ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದರಿಂದ ಬೆಳ್ಳಿ ಹೊಳೆಯುತ್ತದೆ.

5. ಬೆಳ್ಳಿ ತುಂಬಾ ಕಪ್ಪಾಗದಿದ್ದರೆ, ನಿಂಬೆ ರಸಕ್ಕೆ ಸ್ವಲ್ಪ ಉಪ್ಪು ಸೇರಿಸಿ ಕೂಡ ಸ್ವಚ್ಛಗೊಳಿಸಬಹುದು. ಇದಲ್ಲದೇ ಬಿಸಿ ನೀರಿಗೆ ಡಿಟರ್ಜೆಂಟ್ ಹಾಕಿ ಅದರಲ್ಲಿ ಬೆಳ್ಳಿಯನ್ನು ಸ್ವಲ್ಪ ಹೊತ್ತು ಇಡಬೇಕು. ಅದರ ನಂತರ ಅದನ್ನು ಉಜ್ಜಿಕೊಳ್ಳಿ. ಸ್ವಲ್ಪ ಸಮಯದ ನಂತರ ಬೆಳ್ಳಿ ಸ್ಪಷ್ಟವಾಗುತ್ತದೆ.

ಇದನ್ನೂ ಓದಿ:

ಹೋಳಿ ಬಣ್ಣ ಆಡುವ ಮುನ್ನ ನಿಮ್ಮ ಮುಖದ ಕಾಂತಿ ಬಗ್ಗೆ ಎಚ್ಚರಿಕೆ ವಹಿಸಿ

Sandalwood Face Packs: ತ್ವಚೆಯ ಕಾಂತಿ ಹೆಚ್ಚಿಸಲು ಇಲ್ಲಿದೆ ಶ್ರೀಗಂಧದ ಫೇಸ್​​ ಪ್ಯಾಕ್​ ಟಿಪ್ಸ್​