ಸಾಂದರ್ಭಿಕ ಚಿತ್ರ
ಯಾರನ್ನಾದರೂ ಹುಡುಗಿಯನ್ನು ಕಂಡ ತಕ್ಷಣ ಹಲವು ಯುವಕರಿಗೆ ಅವಳು ಇಷ್ಟವಾಗಿ ಬಿಡ್ತಾಳೆ. ಕೆಲವರಿಗೆ ಮೊದಲ ಪ್ರೀತಿ ಚಿಗುರಿದರೆ, ಇನ್ನು ಕೆಲವರು ಫ್ರೆಂಡ್ ಶಿಪ್ ಬೆಳೆಸಿಕೊಳ್ಳಲು ಮುಂದಾಗುತ್ತಾರೆ. ಆದರೆ ಆಕೆಯು ತನ್ನನ್ನು ತಪ್ಪಾಗಿ ಅರ್ಥ ಮಾಡಿಕೊಂಡರೆ, ನನ್ನ ಫ್ರೆಂಡ್ಶಿಪ್ ಬೇಡ ಎಂದರೆ ಹೀಗೆ ನಾನಾ ರೀತಿಯ ಪ್ರಶ್ನೆಗಳನ್ನು ತಲೆಯಲ್ಲಿ ಓಡುತ್ತಿರುತ್ತದೆ. ಈ ಭಯದ ನಡುವೆ ಆ ಹುಡುಗಿಯ ಗಮನ ಸೆಳೆಯಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಿರುತ್ತದೆ. ಹೀಗಾದಾಗ ಹುಡುಗರು ಈ ಕೆಲವು ವಿಷಯಗಳ ಬಗ್ಗೆ ಗಮನ ಹರಿಸಿದರೆ ಹುಡುಗಿಯ ಸ್ನೇಹ ಬೆಳೆಸುವುದು ಕಷ್ಟವೇನಲ್ಲ.
- ಪ್ರತಿಯೊಬ್ಬ ಹುಡುಗಿಯೂ ತನ್ನನ್ನು ಸದಾ ನಗಿಸುತ್ತಿರುವ ವ್ಯಕ್ತಿಯ ಒಡನಾಟವನ್ನು ಬಯಸುತ್ತಾಳೆ. ಹೀಗಾಗಿ ಹುಡುಗಿಯ ಜೊತೆಗೆ ಸ್ನೇಹವನ್ನು ಮಾಡಬೇಕೆಂದು ಕೊಂಡಿದ್ದರೆ ಮೊದಲು ಆಕೆಯ ಮುಖದಲ್ಲಿ ನಗು ಬರುವಂತೆ ಮಾಡಬಹುದು. ಈ ನಿಮ್ಮ ಸ್ವಭಾವವು ಅವಳಿಗೆ ಇಷ್ಟವಾಗಿ, ಹುಡುಗಿಯೂ ನಿಮ್ಮ ಜೊತೆಗೆ ಫ್ರೆಂಡ್ ಶಿಪ್ ಬೆಳೆಸಲು ಮುಂದಾಗಬಹುದು.
- ಹುಡುಗಿ ಜೊತೆಗೆ ಸ್ನೇಹ ಬೆಳೆಸಲು ನೀವು ಮೊದಲು ಆಕೆಗೆ ಪರಿಚಿತರಾಗುವುದು ಮುಖ್ಯ. ಅಪರಿಚಿತರು ಆಕೆಯ ಬಳಿ ಹೋಗಿ ಮಾತನಾಡುವುದನ್ನು ಆಕೆಯು ಎಂದಿಗೂ ಇಷ್ಟ ಪಡುವುದಿಲ್ಲ. ಕೆಲವೊಮ್ಮೆ ನೀವು ಹಾಗೆನಾದರೂ ಮಾಡಿದರೆ ಆ ಹುಡುಗಿಯೂ ಕಸಿವಿಸಿಗೊಳ್ಳಬಹುದು. ಆಕೆಗೆ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡುವಂತೆ ಮಾಡಿಕೊಳ್ಳಬೇಕು.
- ಮೊದಲು ನೀವೇ ನಿಮ್ಮ ಬಗ್ಗೆ ಪರಿಚಯ ಮಾಡಿಕೊಂಡು ನೀವು ಸ್ನೇಹ ಬೆಳೆಸಲು ಮುಂದಾಗಿದ್ದೀರಿ ಎನ್ನುವುದನ್ನು ಆ ಹುಡುಗಿಗೆ ತಿಳಿಸುವುದು ಮುಖ್ಯ. ಒಂದು ವೇಳೆ ಆಕೆಗೆ ಒಪ್ಪಿಗೆ ಇದ್ದರೆ ಆ ತಕ್ಷಣವೇ ಸಮ್ಮತಿ ಸೂಚಿಸಬಹುದು. ಇಲ್ಲದ್ದಿದರೆ ಸ್ವಲ್ಪ ದಿನಗಳ ಕಾಲ ನಿಮ್ಮ ನಡೆ ನುಡಿಗಳನ್ನು ಸೂಕ್ಷ್ಮವಾಗಿ ಗಮನಿಸಿ ನಂತರದಲ್ಲಿ ಸ್ನೇಹ ಸಂಬಂಧಕ್ಕೆ ಗ್ರೀನ್ ಸಿಗ್ನಲ್ ನೀಡಬಹುದು.
- ಸ್ನೇಹ ಬೆಳೆಸಿಕೊಳ್ಳಬೇಕೆನ್ನುವ ಹುಡುಗಿಯೂ ನಿಮ್ಮ ಸಹಪಾಠಿಯಾಗಿದ್ದರೆ, ಆಕೆಯು ಓದುವುದರಲ್ಲಿ ಮುಂದಿದ್ದರೆ ಅಥವಾ ಇನ್ನಿತ್ತರ ಪ್ರತಿಭೆಯನ್ನು ಹೊಂದಿದ್ದರೆ ಅದಕ್ಕೆ ಪ್ರಶಂಸೆ ವ್ಯಕ್ತಪಡಿಸುವುದು ಸ್ನೇಹಕ್ಕೆ ಮುನ್ನುಡಿಯಾಗುತ್ತದೆ. ಒಂದೊಳ್ಳೆ ಅಭಿನಂದನೆ ಮಾತಿನಿಂದಲೂ ಹುಡುಗಿಯ ಜೊತೆಗೆ ಫ್ರೆಂಡ್ಸ್ ಶಿಪ್ ಬೆಳೆಸಲು ಕಾರಣವಾಗುತ್ತದೆ.
- ಹುಡುಗಿಯ ಸ್ನೇಹ ಬೆಳೆಸುವ ಮುನ್ನ ಆಕೆಯ ವ್ಯಕ್ತಿತ್ವವನ್ನು ಅರಿಯುವುದು ಮುಖ್ಯವಾಗುತ್ತದೆ. ಹುಡುಗಿಯು ತೀರಾ ನಾಚಿಕೆ ಸ್ವಭಾವದವಳಾಗಿದ್ದರೆ ನಿಮ್ಮ ಈ ಸ್ನೇಹಕ್ಕೆ ಒಪ್ಪಿಗೆ ಸೂಚಿಸಲೂ ಹಿಂಜರಿಯಬಹುದು. ಹೀಗಾಗಿ ಆ ಹುಡುಗಿಗೆ ನಿಮ್ಮ ಮೇಲೆ ಒಳ್ಳೆಯ ಅಭಿಪ್ರಾಯ ಮೂಡುವಂತೆ ಮಾಡಬೇಕು.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ