Ridge Gourd Benefits : ಹೀರೆಕಾಯಿಯಲ್ಲಿ ಅಡಗಿದೆ ಆರೋಗ್ಯ ಪ್ರಯೋಜನ 

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 20, 2023 | 7:02 PM

ಉತ್ತಮ ಆರೋಗ್ಯಕ್ಕಾಗಿ ಹಸಿರು ತರಕಾರಿಗಳನ್ನು  ತಿನ್ನಲು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಅವುಗಳಲ್ಲಿ ಹೀರೆಕಾಯಿಯು ಬಹಳಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ತರಕಾರಿಗಳಲ್ಲಿ ಒಂದಾಗಿದೆ. ಹಲವಾರು ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಹೀರೆಕಾಯಿಯನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳಿಂದ  ಪರಿಹಾರ ಸಿಗುತ್ತದೆ. 

Ridge Gourd Benefits : ಹೀರೆಕಾಯಿಯಲ್ಲಿ ಅಡಗಿದೆ ಆರೋಗ್ಯ ಪ್ರಯೋಜನ 
ಸಾಂದರ್ಭಿಕ ಚಿತ್ರ
Follow us on
ಹಸಿರು ತರಕಾರಿಗಳನ್ನು ತಿನ್ನುವ ಮೂಲಕ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಈ ಕಾರಣಕ್ಕಾಗಿಯೇ ಆರೋಗ್ಯ ತಜ್ಞರು ಹಸಿರು ತರಕಾರಿಗಳನ್ನು ತಿನ್ನಲು ಸಲಹೆ ನೀಡುತ್ತಾರೆ. ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾದ ಹಲವಾರು ತರಕಾರಿಗಳಿವೆ. ಇವುಗಳಲ್ಲಿ ಹೀರೆಕಾಯಿ ಕೂಡ ಒಂದು. ಇದು ಫೈಬರ್, ವಿಟಮಿನ್ ಎ, ವಿಟಮಿನ್ ಸಿ, ಕಬ್ಬಿಣ, ಮೆಗ್ನೇಸಿಯಮ್, ಪೊಟ್ಯಾಸಿಯಮ್  ಮತ್ತು ಸೆಲೆನಿಯಂನಲ್ಲಿ ಸಮೃದ್ಧವಾಗಿರುವ ಕಡಿಮೆ ಕ್ಯಾಲೋರಿ ತರಕಾರಿಯಾಗಿದ್ದು, ಇದನ್ನು ಆಹಾರದ ಭಾಗವನ್ನಾಗಿ ಮಾಡುವ ಮೂಲಕ ಅನೇಕ ಪ್ರಯೋಜನಗಳನ್ನು  ಪಡೆಯಬಹುದು.  ಆದರೆ ಹೆಚ್ಚಿನವರು ಹೀರೆಕಾಯಿಯನ್ನು ತಿನ್ನಲು ಇಷ್ಟಪಡುವುದಿಲ್ಲ. ನೀವು ಕೂಡಾ ಈ ಅದ್ಭುತ ತರಕಾರಿಯನ್ನು ಸೇವಿಸಲು ಹಿಂದೇಟು ಹಾಕುತ್ತಿದ್ದೀರಾ? ಹಾಗಿದ್ದರೆ ಖಂಡಿತವಾಗಿಯು ಇದರ ಆರೋಗ್ಯ ಪ್ರಯೋಜನಗಳ ಬಗ್ಗೆ ಒಮ್ಮೆ ತಿಳಿಯಿರಿ.

 ಹೀರೆಕಾಯಿಯ ಆರೋಗ್ಯ ಪ್ರಯೋಜನಗಳು

ದೃಷ್ಟಿಯನ್ನು ಸುಧಾರಿಸುತ್ತದೆ:

ವಿಟಮಿನ್ ಎ, ಬೀಟಾ ಕ್ಯಾರೋಟಿನ್​​ಗಳಲ್ಲಿ  ಸಮೃದ್ಧವಾಗಿರುವ ಹೀರೆಕಾಯಿಯು ದೃಷ್ಟಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದನ್ನು ಆಹಾರದ ಭಾಗವಾಗಿ ಸೇರಿಸುವುದರಿಂದ ದೃಷ್ಟಿಯನ್ನು ಸುಧಾರಿಸಬಹುದು ಮತ್ತು ಇತರೆ ಕಣ್ಣಿನ ಸಂಬಂಧಿತ ಸಮಸ್ಯೆಗಳನ್ನು ಸಹ ತೊಡೆದುಹಾಕಬಹುದು.

ತೂಕ ಇಳಿಕೆಗೆ ಪ್ರಯೋಜನಕಾರಿ:

ಹೀರೆಕಾಯಿಯು ಕಡಿಮೆ ಕ್ಯಾಲೋರಿ ತರಕಾರಿಯಾಗಿದ್ದು, ಇದರಲ್ಲಿ ಹೆಚ್ಚಿನ ಪ್ರಮಾಣದ ನೀರಿನಾಂಶವಿದೆ. ಇದಲ್ಲದೆ ಇದರಲ್ಲಿ ಫೈಬರ್ ಉತ್ತಮ ಪ್ರಮಾಣದಲ್ಲಿ ಕಂಡುಬರುತ್ತದೆ, ಇದರಿಂದಾಗಿ ಹೀರೆಕಾಯಿ ತಿನ್ನುವುದರಿಂದ ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುತ್ತದೆ ಮತ್ತು ಇದು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ ಹಾಗೂ ಮತ್ತು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಕರುಳಿನ ಆರೋಗ್ಯವನ್ನು ಕಾಪಾಡಲು ಈ ಜೀವನಶೈಲಿ ರೂಢಿಸಿಕೊಳ್ಳಿ

ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ:

ಹೀರೆಕಾಯಿಯು ವಿಟಮಿನ್ ಎ ಮತ್ತು ಫೈಬರ್ ಪೋಷಕಾಂಶದಿಂದ ಸಮೃದ್ಧವಾಗಿದೆ. ಅಲ್ಲದೆ ಇದರಲ್ಲಿ ಉತ್ತಮ ಪ್ರಮಾಣದ ನೀರಿನಾಂಶವೂ ಇದೆ. ಇದು ನಿಮ್ಮ ಕರುಳಿನ ಆರೋಗ್ಯವನ್ನು ಸುಧಾರಿಸುವ ಮೂಲಕ ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.

ಮಲಬದ್ಧತೆಯಿಂದ ಪರಿಹಾರ:

ಹೀರೆಕಾಯಿಯಲ್ಲಿ ಹೇರಳವಾದ ನೀರು ಮತ್ತು ಸೆಲ್ಯುಲೋಸ್ ಇದೆ. ಇದು ನೈಸರ್ಗಿಕ ಆಹಾರದ ಫೈಬರ್ ಆಗಿದ್ದು, ಇದರಿಂದ ಮಲಬದ್ಧತೆಯಿಂದ ಪರಿಹಾರ ಪಡೆಯಬಹುದು  ಮತ್ತು ಈ ತರಕಾರಿ ಜೀರ್ಣಕ್ರಿಯೆಯನ್ನು ಸುಲಭಗೊಳಿಸುವ ಮೂಲಕ ಮಲಬದ್ಧತೆಯಿಂದ ಪರಿಹಾರವನ್ನು ನೀಡುತ್ತದೆ.

ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣ ಮಾಡುತ್ತದೆ:

ಮಧುಮೇಹಿಗಳಿಗೆ ಹೀರೆಕಾಯಿ ಸೇವನೆಯು ತುಂಬಾ ಪ್ರಯೋಜನಕಾರಿಯಾಗಿದೆ. ಇದು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುವ ತರಕಾರಿಯಾಗಿದ್ದು, ಇದರ ಹೆಚ್ಚಿನ ಫೈಬರ್ ಅಂಶವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಬುದ್ಧಿವಂತ ರೈತ ತನ್ನ ಹೀರೇಕಾಯಿ ತೋಟದಲ್ಲಿ ಹಿರಿಹಿರಿ ಹಿಗ್ಗುವ ಮಂಗನ ಫೋಟೋ ಹಾಕಿದ್ದು ಯಾಕೆ ಗೊತ್ತಾ!?

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:

ಹೀರೆಕಾಯಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಲ್ಲಿ ವಿಟಮಿ ಸಿ, ಕಬ್ಬಿಣ, ಮೆಗ್ನೇಸಿಯಮ್, ಥಯಾಮಿನ್, ರೈಬೋಫ್ಲಾವಿನ್ ಮತ್ತು ಸತು ಇತ್ಯಾದಿ ಪೋಷಕಾಂಶಗಳಿವೆ. ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ರಕ್ತಹೀನತೆಯ ಸಮಸ್ಯೆಯನ್ನು ಹೋಗಲಾಡಿಸುತ್ತದೆ:

ರಕ್ತಹೀನತೆಯ ಸಮಸ್ಯೆ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಕಬ್ಬಿಣಾಂಶದ ಕೊರತೆಯಿಂದಾಗಿ ರಕ್ತದಲ್ಲಿನ ಹಿಮೋಗ್ಲೋಬಿನ್ ಮಟ್ಟವು ಕಡಿಮೆಯಾಗುತ್ತದೆ. ಇದರಿಂದ ರಕ್ತಹೀನತೆಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ.  ಹೀರೆಕಾಯಿಯನ್ನು ಸೇವನೆ ಮಾಡುವ ಮೂಲಕ ಕಬ್ಬಿಣದ ಕೊರತೆಯನ್ನು ನೀಗಿಸಬಹುದು.

ಹೃದಯ ಆರೋಗ್ಯಕ್ಕೆ ಉತ್ತಮ:

ಹೀರೆಕಾಯಿಯಲ್ಲಿರುವ ಪೊಟ್ಯಾಸಿಯಂ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಲ್ಲದೆ ಈ ತರಕಾರಿಯಲ್ಲಿರುವ ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳು ಹೃದಯವನ್ನು ಆರೋಗ್ಯಕರವಾಗಿಡುವಲ್ಲಿ ಪ್ರಯೋಜನಕಾರಿ ಎಂದು ಸಾಬೀತಾಗಿದೆ.
ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:17 pm, Wed, 20 September 23