Red Grapes Benefits: ಕಣ್ಣಿನ ಆರೋಗ್ಯ, ಅಧಿಕ ರಕ್ತದೊತ್ತಡ  ನಿಯಂತ್ರಣಕ್ಕೆ, ಕೆಂಪು ದ್ರಾಕ್ಷಿ ಉತ್ತಮ

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 23, 2023 | 3:57 PM

ಪೋಷಕಾಂಶಗಳಿಂದ ಸಮೃದ್ಧವಾಗಿರುವ ದ್ರಾಕ್ಷಿಯನ್ನು ಸೇವಿಸುವುದರಿಂದ   ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಈ ಹಣ್ಣು ಹೆಚ್ಚಿನವರ  ನೆಚ್ಚಿನ ಹಣ್ಣು ಕೂಡಾ ಹೌದು. ಕೆಂಪು, ನೇರಳೆ, ಹಸಿರು ಹೀಗೆ ಕೆಲವು ಬಣ್ಣದ ದ್ರಾಕ್ಷಿಗಳಿವೆ.  ಅವುಗಳಲ್ಲಿ ಕೆಲವರಿಗೆ ಹಸಿರು ದ್ರಾಕ್ಷಿ ಇಷ್ಟವಾದರೆ, ಇನ್ನೂ ಕೆಲವರು ನೇರಳೆ ಬಣ್ಣದ ದ್ರಾಕ್ಷಿಯನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ  ಇವುಗಳಲ್ಲಿ ಕೆಂಪು ಬಣ್ಣದ ದ್ರಾಕ್ಷಿಯನ್ನು ಹೆಚ್ಚು ಸೇವಿಸುವುದರಿಂದ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. 

Red Grapes Benefits: ಕಣ್ಣಿನ ಆರೋಗ್ಯ, ಅಧಿಕ ರಕ್ತದೊತ್ತಡ  ನಿಯಂತ್ರಣಕ್ಕೆ, ಕೆಂಪು ದ್ರಾಕ್ಷಿ ಉತ್ತಮ
ಸಾಂದರ್ಭಿಕ ಚಿತ್ರ
Follow us on

ಕೆಲವು ಬಗೆಯ ದ್ರಾಕ್ಷಿ ಹಣ್ಣುಗಳಿವೆ. ಅವುಗಳಲ್ಲಿ ಆರೋಗ್ಯಕ್ಕೆ ಅತೀ ಉತ್ತಮವಾದದು ಯಾವುದು ಎಂದು ಹಲವರಿಗೆ ತಿಳಿದಿಲ್ಲ. ಕೆಲವರು ಹಸಿರು ಬಣ್ಣದ ದ್ರಾಕ್ಷಿಯನ್ನು ಇಷ್ಟಪಟ್ಟು ತಿಂದರೆ, ಇನ್ನೂ ಕೆಲವರು ನೇರಳೆ ಬಣ್ಣದ ದ್ರಾಕ್ಷಿಯನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ ಇವುಗಳಿಗಿಂತ ಹೆಚ್ಚಿನ ಪೋಷಕಾಂಶಗಳು ಕೆಂಪು ದ್ರಾಕ್ಷಿಯಲ್ಲಿವೆ (Red  Grapes) ಎಂದು ಹೇಳಲಾಗುತ್ತದೆ. ಈ  ಕೆಂಪು ದ್ರಾಕ್ಷಿಯನ್ನು ತಿನ್ನುವ ಮೂಲಕ ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ.  ವಿಟಮಿನ್ ಸಿ, ವಿಟಮಿನ್ ಎ, ಸತು, ತಾಮ್ರ, ಪೊಟ್ಯಾಸಿಯಂ, ಕ್ಯಾಲ್ಸಿಯಂ ಮೊದಲಾದ ಪೋಷಕಾಂಶಗಳು ಕೆಂಪು ದ್ರಾಕ್ಷಿಯಲ್ಲಿ ಉತ್ತಮ ಪ್ರಮಾಣದಲ್ಲಿದ್ದು, ಇದು ಹಲವಾರು ಕಾಯಿಲೆಗಳನ್ನು ತಡೆಗಟ್ಟಲು  ಸಹಕಾರಿಯಾಗಿದೆ. ಹಾಗಾದರೆ ಕೆಂಪು ದ್ರಾಕ್ಷಿಯನ್ನು ಸೇವಿಸುವುದರಿಂದ  ಸಿಗುವ ಹಲವು ಪ್ರಯೋಜನಗಳನ್ನು ತಿಳಿಯೋಣ.

ಕೆಂಪು ದ್ರಾಕ್ಷಿಯ ಸೇವನೆಯಿಂದ ಲಭಿಸುವ ಆರೋಗ್ಯ ಪ್ರಯೋಜನಗಳು:

ಕಣ್ಣಿನ ಆರೋಗ್ಯಕ್ಕೆ ಪ್ರಯೋಜನಕಾರಿ:

ಕೆಂಪು ದ್ರಾಕ್ಷಿಯ ಸೇವನೆಯು ದೃಷ್ಟಿಯನ್ನು ಸುಧಾರಿಸಲು ಸಹಾಯಕಾರಿಯಾಗಿದೆ. ಹಾಗೂ ಇದು ಹಲವು ಕಣ್ಣಿನ ಸಂಬಂಧಿ ಕಾಯಿಲೆಗಳನ್ನು ಸಹ ಗುಣಪಡಿಸುತ್ತದೆ. ಇದರಲ್ಲಿರುವ  ಉತ್ಕರ್ಷಣ ನಿರೋಧಕಗಳು  ಕಣ್ಣುಗಳನ್ನು ದೀರ್ಘಕಾಲ ಆರೋಗ್ಯಕರವಾಗಿಡಲು ಸಹಕಾರಿಯಾಗಿದೆ.

ಮೂತ್ರಪಿಂಡವನ್ನು ಆರೋಗ್ಯಕರವಾಗಿಡಲು ಸಹಕಾರಿ:

ಮೂತ್ರಪಿಂಡವನ್ನು ಆರೋಗ್ಯಕರವಾಗಿಡಲು ಕೆಂಪು ದ್ರಾಕ್ಷಿ ಸಹಕಾರಿ. ಇದರಲ್ಲಿ ಕಂಡುಬರುವ ಪೋಷಕಾಂಶಗಳು  ಮೂತ್ರಪಿಂಡ ಸಂಬಂಧಿ ಕಾಯಿಲೆಗಳ ಅಪಾಯವನ್ನು ಸುಲಭವಾಗಿ ಕಡಿಮೆ ಮಾಡುತ್ತದೆ. ಕೆಲವೊಮ್ಮೆ ಆಕ್ಸಿಡೇಟಿವ್ ಒತ್ತಡದಿಂದಾಗಿ ಹಠಾತ್ ಕಿಡ್ನಿ ಕಾಯಿಲೆಗಳು ಸಂಭವಿಸುವ ಸಾಧ್ಯತೆಯಿರುತ್ತದೆ. ಅಂತಹ ಸಂದರ್ಭದಲ್ಲಿ ಕೆಂಪು ದ್ರಾಕ್ಷಿಯು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುವ ಮೂಲಕ ಮೂತ್ರಪಿಂಡವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.

ಮೂಳೆಗಳನ್ನು ಬಲಪಡಿಸುತ್ತದೆ:

ಕೆಂಪುದ್ರಾಕ್ಷಿಯನ್ನು ಸೇವಿಸುವುದರಿಂದ ಮೂಳೆಗಳು ಬಳಗೊಳ್ಳುತ್ತವೆ. ಏಕೆಂದರೆ ಕೆಂಪುದ್ರಾಕ್ಷಿಯಲ್ಲಿರುವ ರೆಸ್ವೆರಾಟ್ರೋಲ್ ಅಂಶವು ಮೂಳೆಗಳನ್ನು ಬಲಪಡಿಸಲು ಮತ್ತು ಅವುಗಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.

ತ್ವಚೆಯ ಆರೋಗ್ಯಕ್ಕೆ ಪ್ರಯೋಜನಕಾರಿ:

ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳು ಕೆಂಪು ದ್ರಾಕ್ಷಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಇದು ನಮ್ಮ ಚರ್ಮವನ್ನು ಅನೇಕ ಹಾನಿಗಳಿಂದ ರಕ್ಷಿಸುತ್ತವೆ. ಇದರಲ್ಲಿ ಲೈಕೋಪೀನ್ ಮತ್ತು ರೆಸ್ವರಾಟ್ರೊಲ್ ಎಂಬ ಅಂಶಗಳಿದ್ದು, ಈ ಪೋಷಕಾಂಶಗಳು ನಮ್ಮ ಚರ್ಮವು ಹೊಳೆಯುವಂತೆ ಮಾಡಲು ಸಹಕಾರಿಯಾಗಿದೆ.

ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಕಾರಿ:

ಕೆಂಪು ದ್ರಾಕ್ಷಿಯು ರಕ್ತದೊತ್ತಡದಿಂದ ಬಳಲುತ್ತಿರುವವರಿಗೆ ಪ್ರಯೋಜನಕಾರಿ ಹಣ್ಣಾಗಿದೆ. ಇದರಲ್ಲಿ ಪೊಟ್ಯಾಸಿಯಂ ಉತ್ತಮ ಪ್ರಮಾಣದಲ್ಲಿ ಕಂಡುಬರುತ್ತದೆ. ಮತ್ತು ಈ ಪೊಟ್ಯಾಸಿಯಂ ದೇಹದಲ್ಲಿ ಸೋಡಿಯಂನ ಋಣಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡುವ ಮೂಲಕ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.

ಇದನ್ನೂ ಓದಿ: ದ್ರಾಕ್ಷಿ ಹಣ್ಣುಗಳಲ್ಲಿ ಮಾತ್ರವಲ್ಲ, ಬೀಜಗಳಲ್ಲಿಯೂ ಇದೆ ಸಾಕಷ್ಟು ಆರೋಗ್ಯ ಪ್ರಯೋಜನಗಳು

ತೂಕ ನಷ್ಟಕ್ಕೆ ಸಹಕಾರಿ:

ಕೆಂಪು ದ್ರಾಕ್ಷಿಯನ್ನು ತಿನ್ನುವುದು ತೂಕವನ್ನು ಕಳೆದುಕೊಳ್ಳಲು ಸಹಕಾರಿಯಾಗಿದೆ. ರೆಸ್ವೆರಾಟ್ರೊಲ್ ಎಂಬ ಪೋಷಕಾಂಶವು  ಕೆಂಪು ದ್ರಾಕ್ಷಿಯಲ್ಲಿ ಉತ್ತಮ ಪ್ರಮಾಣದಲ್ಲಿ ಕಂಡುಬರುತ್ತದೆ, ಇದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮತ್ತು ದೇಹವನ್ನು ಆರೋಗ್ಯಕರವಾಗಿರಿಸುತ್ತದೆ.

ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ:

ಕೆಂಪುದ್ರಾಕ್ಷಿಯ ಸೇವನೆಯು ನಮ್ಮ ಹೃದಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರ ಸೇವನೆಯಿಂದ  ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು.  ಅಲ್ಲದೆ ಇದರಲ್ಲಿರುವ ಫೈಟೊಕೆಮಿಕಲ್ ಅಂಶ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ