ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಅಮೂಲ್ಯ ಕೊಡುಗೆಯನ್ನು ನೆನಪಿಸಿಕೊಳ್ಳುವ ಮೂಲಕ ಅಕ್ಟೋಬರ್ 2 ರಂದು ಗಾಂಧಿ ಜಯಂತಿಯನ್ನು ಆಚರಿಸಲಾಗುತ್ತದೆ. ಸತ್ಯ ಹಾಗೂ ಅಹಿಂಸೆಯ ಮೂಲಕ ಜಗದ ಹೃದಯ ಗೆದ್ದ ಹಾಗೂ ಜಗತ್ತು ಕಂಡ ಮಹಾತ್ಮರಿವರು. ಸ್ವಾತಂತ್ರ್ಯ ಹೋರಾಟಗಾರ ಹಾಗೂ ಅಹಿಂಸಾ ತತ್ವವನ್ನು ಪ್ರತಿಪಾದಿಸಿದ ಮಹಾತ್ಮ ಗಾಂಧೀಜಿಯವರ 155 ನೇ ಜನ್ಮದಿನದಂದು ನೀವು ನಿಮ್ಮ ಸ್ನೇಹಿತರು ಹಾಗೂ ಆತ್ಮೀಯರಿಗೆ ಈ ರೀತಿ ಸಂದೇಶಗಳನ್ನು ಕಳಿಸಿ ಶುಭಾಶಯಗಳನ್ನು ಕೋರಬಹುದು.
ಗಾಂಧೀಜಿ ಜನ್ಮದಿನ
Follow us on
ಗಾಂಧೀಜಿ ಬ್ರಿಟಿಷರ ಆಳ್ವಿಕೆಯಿಂದ ಭಾರತವನ್ನು ಸ್ವಾತಂತ್ರ್ಯದ ಕಡೆಗೆ ಮುನ್ನಡೆಸಿದ ಮಹಾನ್ ಹೋರಾಟಗಾರ ಮಾತ್ರವಲ್ಲದೇ, ತಮ್ಮ ತತ್ವ ಸಿದ್ದಾಂತಗಳಿಂದಲೇ ಜನರಿಗೆ ಹತ್ತಿರವಾದವರು. ಹೀಗಾಗಿ ಮಹಾತ್ಮ ಗಾಂಧೀಜಿ ಅವರ ಚಿಂತನೆಗಳು ಎಂದೆಂದಿಗೂ ಪ್ರಸ್ತುತ. ರಾಷ್ಟ್ರಪಿತ ಎಂದು ಎಲ್ಲರಿಂದಲೂ ಪ್ರೀತಿಯಿಂದ ಕರೆಸಿಕೊಳ್ಳುವ ಮಹಾತ್ಮ ಗಾಂಧಿ ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು. ಇಂದು ಮಹಾತ್ಮಾ ಗಾಂಧೀಜಿಯವರ 155 ನೇ ಜನ್ಮದಿನವನ್ನು ಆಚರಿಸಲಾಗುತ್ತಿದ್ದು, ಈ ವಿಶೇಷ ದಿನದಂದು ಎಲ್ಲರೊಂದಿಗೆ ಹಂಚಿಕೊಳ್ಳಬಹುದಾದ ಶುಭ ಸಂದೇಶಗಳು ಇಲ್ಲಿದೆ.
ಗಾಂಧಿಜಯಂತಿಗೆ ಶುಭಾಶಯ ಕೋರಲು ಇಲ್ಲಿದೆ ಸಂದೇಶಗಳು
ನಿಮ್ಮನ್ನು ಹುಡುಕುವ ಅತ್ಯುತ್ತಮ ಮಾರ್ಗವೆಂದರೆ ಇತರರ ಸೇವೆಯಲ್ಲಿ ನಿಮ್ಮನ್ನು ಕಳೆದುಕೊಳ್ಳುವುದು. ಗಾಂಧಿ ಜಯಂತಿಯ ಶುಭಾಶಯಗಳು.
ಸತ್ಯ, ಶಾಂತಿ ಮತ್ತು ಅಹಿಂಸೆಯ ಮೌಲ್ಯಗಳನ್ನು ಪ್ರತಿಬಿಂಬಿಸುವ ಮಹತ್ವದ ದಿನವಿದು. ಎಲ್ಲರಿಗೂ ಗಾಂಧಿ ಜಯಂತಿಯ ಶುಭಾಶಯಗಳು.
ಪ್ರೀತಿ ಮತ್ತು ಕ್ಷಮೆ ಎಲ್ಲರನ್ನು ಗೆಲ್ಲುತ್ತದೆ ಎಂದು ಕಲಿಸಿದ ಮಹಾನ್ ವ್ಯಕ್ತಿಯ ಜನ್ಮದಿನವಾಗಿದ್ದು, ಅವರ ತತ್ವ ಸಿದ್ಧಾಂತಗಳನ್ನು ಪಾಲಿಸೋಣ. ಎಲ್ಲರಿಗೂ ಗಾಂಧಿ ಜಯಂತಿಯ ಶುಭಾಶಯಗಳು.
ರಾಷ್ಟ್ರಕ್ಕೆ ಮಹಾತ್ಮ ಗಾಂಧಿ ನೀಡಿದ ಅಮೂಲ್ಯ ಕೊಡುಗೆಗಳನ್ನು ಸ್ಮರಿಸೋಣ. ಎಲ್ಲರಿಗೂ ಗಾಂಧಿ ಜಯಂತಿಯ ಶುಭಾಶಯಗಳು.
ನಿಮ್ಮನ್ನು ಹುಡುಕುವ ಅತ್ಯುತ್ತಮ ಮಾರ್ಗವೆಂದರೆ ಇತರರ ಸೇವೆಯಲ್ಲಿ ನಿಮ್ಮನ್ನು ಕಳೆದುಕೊಳ್ಳುವುದು. ಗಾಂಧಿ ಜಯಂತಿಯ ಶುಭಾಶಯಗಳು
ಸತ್ಯ ಮತ್ತು ಅಹಿಂಸೆಯ ಮನೋಭಾವ ನಮ್ಮೊಂದಿಗೆ ಇರಲಿ. ನಿಮಗೂ ಗಾಂಧಿ ಜಯಂತಿಯ ಶುಭಾಶಯಗಳು.
ಜಗತ್ತಿಗೆ ಅಹಿಂಸೆಯ ಪಾಠವನ್ನು ಮಾಡಿದ ವಿಶೇಷ ವ್ಯಕ್ತಿಯನ್ನು ಗೌರವಿಸೋಣ. ಗಾಂಧಿ ಜಯಂತಿಯ ಶುಭಾಶಯಗಳು.