ಎಷ್ಟೇ ಪ್ರಾಬ್ಲಮ್ ಇದ್ರು ಟೆನ್ಶನ್ ಮಾಡಿಕೊಳ್ಳಬೇಡಿ ಈ ಟಿಪ್ಸ್ ಪಾಲಿಸಿ

ಚಿಂತೆಯಿಲ್ಲದವನಿಗೆ ಸಂತೆಯಲ್ಲೂ ನಿದ್ದೆ ಎನ್ನುವ ಮಾತಿದೆ. ಆದರೆ ಚಿಂತೆಯಿಲ್ಲದ ವ್ಯಕ್ತಿಯೇ ಯಾರಿದ್ದಾರೆ ಹೇಳಿ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಟೆನ್ಶನ್ ಗಳಿರುತ್ತದೆ. ಅದರಲ್ಲಿಯೇ ಮುಳುಗಿ ಜೀವನವನ್ನು ಹಾಳು ಮಾಡಿಕೊಳ್ಳುವುದು ಸರಿಯಲ್ಲ. ಸಣ್ಣ ಪುಟ್ಟ ಸಮಸ್ಯೆಗಳಿಗೆ ತಲೆಕೆಡಿಸಿಕೊಳ್ಳುವುದನ್ನು ಬಿಟ್ಟು ಪರಿಹಾರ ಕಂಡುಕೊಳ್ಳುವುದು ಗೊತ್ತಿರಬೇಕು. ಎಷ್ಟೇ ಸಮಸ್ಯೆಗಳಿದ್ರು ಹೆಚ್ಚು ಯೋಚಿಸದೇ ಬಿಟ್ಟು ಈ ಕೆಲವು ಟಿಪ್ಸ್ ಪಾಲಿಸಿ.

ಎಷ್ಟೇ ಪ್ರಾಬ್ಲಮ್ ಇದ್ರು ಟೆನ್ಶನ್ ಮಾಡಿಕೊಳ್ಳಬೇಡಿ ಈ ಟಿಪ್ಸ್ ಪಾಲಿಸಿ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Oct 02, 2024 | 5:03 PM

ಹುಟ್ಟಿದ ಪ್ರತಿಯೊಬ್ಬ ಮನುಷ್ಯನಿಗೂ ಕೂಡ ಒಂದಲ್ಲ ಒಂದು ಯೋಚನೆಗಳು, ಚಿಂತೆಗಳಿರುತ್ತದೆ. ಇಂದಿನ ಜೀವನಶೈಲಿಯಲ್ಲಿ ನಿತ್ಯ ಎಲ್ಲರಿಗೂ ಆತಂಕ, ಒತ್ತಡ ಹಾಗೂ ಚಿಂತೆಯೂ ಕಾಡುತ್ತಿರುತ್ತದೆ. ಮನೆ, ಕುಟುಂಬ ಹಾಗೂ ಕೆಲಸ ಹೀಗೆ ಕಾಡುವ ನೂರಾರು ಯೋಚನೆಗಳು ಮಾನಸಿಕ ಆರೋಗ್ಯದ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ಕೆಲವೊಮ್ಮೆ ಸುಖಾಸುಮ್ಮನೆ ಯೋಚಿಸುವುದರಿಂದ ಅನಾರೋಗ್ಯಕ್ಕೆ ಒಳಗಾಗುತ್ತೇವೆ. ಆದರೆ ಎಷ್ಟೇ ಸಮಸ್ಯೆಗಳಿದ್ದರೂ ಟೆನ್ಶನ್ ಮಾಡಿಕೊಳ್ಳದೇ ಇರುವುದು ಆರೋಗ್ಯಕ್ಕೂ ಒಳ್ಳೆಯದು.

  • ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಿ : ಚಿಂತೆ ಹಾಗೂ ಆತಂಕಕ್ಕೆ ಮೂಲ ಕಾರಣವೇ ಅತಿಯಾಗಿ ಯೋಚಿಸುವುದು. ಅದರಲ್ಲಿಯೂ ಒಬ್ಬರೇ ಇದ್ದಾಗ ಮನಸ್ಸು ಕೂಡ ಬೇಡವಾದ ವಿಷಯಗಳ ಬಗ್ಗೆ ಯೋಚಿಸಲು ಶುರು ಮಾಡುತ್ತದೆ. ಹೀಗಾಗಿ ಆದಷ್ಟು ಇಷ್ಟದ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಯೋಚಿಸಲು ಸಮಯ ಸಿಗದಷ್ಟು ಬ್ಯುಸಿಯಾಗುವುದು ಉತ್ತಮ.
  • ಎಲ್ಲವನ್ನು ಸ್ವೀಕರಿಸುವುದನ್ನು ಕಲಿಯಿರಿ : ಎಲ್ಲರಿಗೂ ಒಂದೊಂದು ಚಿಂತೆಯಿರುತ್ತದೆ. ಆದರೆ ಯೋಚಿಸುತ್ತಿದ್ದರೆ ಅದು ನಿಮ್ಮನ್ನು ಇನ್ನಷ್ಟು ಮಾನಸಿಕವಾಗಿ ಕುಗ್ಗಿಸುತ್ತದೆ. ಹೀಗಾಗಿ ಸನ್ನಿವೇಶದಲ್ಲಿ ಎದುರಾಗುವ ಸಮಸ್ಯೆಯನ್ನು ಸ್ವೀಕರಿಸಲು ಪ್ರಯತ್ನಿಸಬೇಕು. ಬದುಕಿನಲ್ಲಿ ಏನಿದೆಯೋ ಅದನ್ನು ಸ್ವೀಕರಿಸುವುದು ಕೂಡ ಅಷ್ಟೇ ಮುಖ್ಯ. ಅದಲ್ಲದೇ ಸಮಸ್ಯೆಗಳಿಗೆ ನಿವಾರಿಸಲು ಪ್ರಯತ್ನ ಮಾಡುವುದರಿಂದ ಚಿಂತೆಯನ್ನು ದೂರ ಮಾಡಬಹುದು.
  • ಇಂದಿನ ಕ್ಷಣವನ್ನು ಎಂಜಾಯ್ ಮಾಡಿ : ನಿನ್ನೆ ಏನಾಗಿದೆಯೋ ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ನಾಳೆ ನಡೆಯುವ ಘಟನೆಯ ಬಗ್ಗೆ ಯಾರಿಗೂ ತಿಳಿದಿಲ್ಲ. ಹೀಗಾಗಿ ಇಂದಿನ ಕ್ಷಣವನ್ನು ಸಂತೋಷವಾಗಿ ಕಳೆಯುವುದು ಮುಖ್ಯ. ನನ್ನ ಸಮಸ್ಯೆಯೇ ದೊಡ್ಡದು ಎಂದು ತಲೆಕೆಡಿಸಿಕೊಳ್ಳುವ ಬದಲು, ಎಲ್ಲವನ್ನು ಸ್ವೀಕರಿಸಿ ಈ ಕ್ಷಣವನ್ನು ಎಂಜಾಯ್ ಮಾಡುವುದು ಮುಖ್ಯ.
  • ಆರೋಗ್ಯವನ್ನು ಕಾಪಾಡಿಕೊಳ್ಳಿ : ಯಾವುದೇ ಟೆನ್ಶನ್ ಇಲ್ಲದೇ ಜೀವನದಲ್ಲಿ ಆರಾಮವಾಗಿರುವ ವ್ಯಕ್ತಿಯೂ ಯಾರು ಇಲ್ಲ. ಹೀಗಾಗಿ ಎಷ್ಟೇ ಆತಂಕವಿದ್ದರೂ ಊಟ, ತಿಂಡಿ ಮಾಡಿ ನೆಮ್ಮದಿಯಿಂದ ನಿದ್ರಿಸಿ. ಈ ಮೂಲಕ ಆರೋಗ್ಯದ ಬಗ್ಗೆ ಗಮನ ಹರಿಸುವುದು ಉತ್ತಮ. ಹೆಚ್ಚು ಆರೋಗ್ಯಕರವಾಗಿದ್ದರೆ ಬದುಕಿನ ಯಾವುದೇ ಸಮಸ್ಯೆಯನ್ನು ಬಗೆಹರಿಸಬಹುದು.
  • ಯೋಗ ಹಾಗೂ ವ್ಯಾಯಾಮದಲ್ಲಿ ತೊಡಗಿಕೊಳ್ಳಿ : ಸಣ್ಣ ಪುಟ್ಟ ಸಮಸ್ಯೆಗಳು ಎದುರಾದಾಗ ಅತಿಯಾದ ಆಲೋಚನೆಯೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಯೋಗ ಹಾಗೂ ವ್ಯಾಯಾಮದಂತಹ ದೈಹಿಕ ಚಟುವಟಿಕೆಯಿಂದಾಗಿ ಮನಸ್ಸು ನಿಯಂತ್ರಣಕ್ಕೆ ಬರುತ್ತದೆ. ಇದು ಕೂಡ ಅತಿಯಾದ ಆಲೋಚನೆ, ಆತಂಕ ಹಾಗೂ ಚಿಂತಿಸುವುದನ್ನು ದೂರ ಮಾಡಲು ಸಹಕಾರಿಯಾಗಿದೆ.
  • ನೋವುಗಳನ್ನು ಆತ್ಮೀಯರೊಂದಿಗೆ ಹಂಚಿಕೊಳ್ಳಿ : ಅತಿಯಾದ ಆಲೋಚನೆ ಹಾಗೂ ಚಿಂತೆಗೆ ಕಾರಣವೇ ನೋವುಗಳು. ನಿಮ್ಮ ಮನಸ್ಸಿನ ನೋವನ್ನು ನಿಮ್ಮ ಮನಸ್ಸಿನ ಮಾತಿಗೆ ಕಿವಿಯಾಗುವ, ನಿಮ್ಮನ್ನು ಅರ್ಥಮಾಡಿಕೊಳ್ಳುವ ವ್ಯಕ್ತಿಯೊಂದಿಗೆ ಹಂಚಿಕೊಳ್ಳಿ. ಇದರಿಂದ ನಿಮ್ಮ ಮನಸ್ಸು ಕೂಡ ಹಗುರವಾಗುತ್ತದೆ. ಅತಿಯಾಗಿ ಯೋಚಿಸುವುದು ಹಾಗೂ ಚಿಂತಿಸುವುದನ್ನು ಕಡಿಮೆ ಮಾಡಿಕೊಳ್ಳಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:02 pm, Wed, 2 October 24

ಧಾರವಾಡ: ಧಾರ್ಮಿಕ ಧ್ವಜದ ಕೆಳಗೆ ರಾಷ್ಟ್ರಧ್ವಜ ಅಳವಡಿಕೆ ಮಾಡಿ ಅಪಮಾನ
ಧಾರವಾಡ: ಧಾರ್ಮಿಕ ಧ್ವಜದ ಕೆಳಗೆ ರಾಷ್ಟ್ರಧ್ವಜ ಅಳವಡಿಕೆ ಮಾಡಿ ಅಪಮಾನ
ಗ್ಯಾಲಕ್ಸಿ ಹೊಸ ಸ್ಮಾರ್ಟ್​ಫೋನ್ ಭಾರತದ ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ!
ಗ್ಯಾಲಕ್ಸಿ ಹೊಸ ಸ್ಮಾರ್ಟ್​ಫೋನ್ ಭಾರತದ ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ!
ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪ್ರದೀಪ್ ಈಶ್ವರ್ ಫೋಟೋ ಹಾಕಿಲ್ಲ ಎಂದು ಗಲಾಟೆ
ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪ್ರದೀಪ್ ಈಶ್ವರ್ ಫೋಟೋ ಹಾಕಿಲ್ಲ ಎಂದು ಗಲಾಟೆ
ಗಾಂಧಿ ಜಯಂತಿ: ಪೊರಕೆ ಹಿಡಿದ ಸಚಿವ ಪ್ರಲ್ಹಾದ್ ಜೋಶಿ, ವಿಜಯೇಂದ್ರ!
ಗಾಂಧಿ ಜಯಂತಿ: ಪೊರಕೆ ಹಿಡಿದ ಸಚಿವ ಪ್ರಲ್ಹಾದ್ ಜೋಶಿ, ವಿಜಯೇಂದ್ರ!
ಸಿಎಂ ಸಿದ್ದರಾಮಯ್ಯಗೆ ಗಾಂಧಿ ಟೋಪಿ ಹಾಕಿದ ಡಿಕೆ ಶಿವಕುಮಾರ್​
ಸಿಎಂ ಸಿದ್ದರಾಮಯ್ಯಗೆ ಗಾಂಧಿ ಟೋಪಿ ಹಾಕಿದ ಡಿಕೆ ಶಿವಕುಮಾರ್​
ಗಾಂಧಿ ಜಂಯತಿ 2024: ವಿಧಾನಸೌಧದವರೆಗೂ ನಡೆದುಕೊಂಡೇ ಹೋದ ಸಿಎಂ, ಡಿಸಿಎಂ
ಗಾಂಧಿ ಜಂಯತಿ 2024: ವಿಧಾನಸೌಧದವರೆಗೂ ನಡೆದುಕೊಂಡೇ ಹೋದ ಸಿಎಂ, ಡಿಸಿಎಂ
ಇದು ಪ್ರಾರಂಭ ಅಷ್ಟೆ, ಪಿಕ್ಚರ್ ಇನ್ನೂ ಬಾಕಿ ಇದೆ ಎಂದ ಜಗದೀಶ್
ಇದು ಪ್ರಾರಂಭ ಅಷ್ಟೆ, ಪಿಕ್ಚರ್ ಇನ್ನೂ ಬಾಕಿ ಇದೆ ಎಂದ ಜಗದೀಶ್
ಗಾಂಧಿ ಜಯಂತಿ: ಮಕ್ಕಳೊಂದಿಗೆ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡ ಮೋದಿ
ಗಾಂಧಿ ಜಯಂತಿ: ಮಕ್ಕಳೊಂದಿಗೆ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡ ಮೋದಿ
ಬೆಂಗಳೂರು ಹನುಮಂತನಗರದಲ್ಲಿ ಲಾಂಗ್, ಬ್ಯಾಟ್ ಹಿಡಿದು ಪುಡಿ ರೌಡಿಗಳ ಅಟ್ಟಹಾಸ
ಬೆಂಗಳೂರು ಹನುಮಂತನಗರದಲ್ಲಿ ಲಾಂಗ್, ಬ್ಯಾಟ್ ಹಿಡಿದು ಪುಡಿ ರೌಡಿಗಳ ಅಟ್ಟಹಾಸ
ರಾಜ್​ಘಾಟ್​ನಲ್ಲಿ ರಾಷ್ಟ್ರಪಿತನಿಗೆ ಪುಷ್ಟನಮನ ಸಲ್ಲಿಸಿದ ಪ್ರಧಾನಿ ಮೋದಿ
ರಾಜ್​ಘಾಟ್​ನಲ್ಲಿ ರಾಷ್ಟ್ರಪಿತನಿಗೆ ಪುಷ್ಟನಮನ ಸಲ್ಲಿಸಿದ ಪ್ರಧಾನಿ ಮೋದಿ