Ganesh Chaturthi 2024: ಶಾಲೆಯಲ್ಲಿ ಗಣೇಶ ಚತುರ್ಥಿ ಬೋರ್ಡ್ ಅಲಂಕಾರ ಮಾಡುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 28, 2024 | 11:12 AM

ದೇಶದಾದಂತ್ಯ ಅದ್ದೂರಿಯಾಗಿ ಆಚರಿಸಲಾಗುವ ಹಬ್ಬಗಳಲ್ಲಿ ಒಂದು ಈ ಗಣೇಶ ಚತುರ್ಥಿ. ಈ ಬಾರಿ ಸೆಪ್ಟೆಂಬರ್ 7 ರಂದು ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಲಾಗುತ್ತಿದ್ದು, ಮನೆಯಲ್ಲಿ ಮಾತ್ರವಲ್ಲದೇ ಶಾಲಾ ಕಾಲೇಜುಗಳಲ್ಲಿ ಗಣೇಶನನ್ನು ಇಟ್ಟು ಪೂಜಿಸಲಾಗುತ್ತದೆ. ಈ ಹಬ್ಬಕ್ಕೆ ಶಾಲೆಗಳಲ್ಲಿ ಗಣೇಶ ಚತುರ್ಥಿ ಬೋರ್ಡ್ ಅಲಂಕಾರವನ್ನು ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರೆ ಈ ಅಲಂಕಾರಿಕ ಸಲಹೆಗಳನ್ನು ಅನುಸರಿಸಬಹುದು.

Ganesh Chaturthi 2024: ಶಾಲೆಯಲ್ಲಿ ಗಣೇಶ ಚತುರ್ಥಿ ಬೋರ್ಡ್ ಅಲಂಕಾರ ಮಾಡುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್
ಗಣೇಶ ಚತುರ್ಥಿ ಬೋರ್ಡ್ ಅಲಂಕಾರ
Follow us on

ವಿಘ್ನ ನಿವಾರಕ, ಏಕದಂತ, ವಕ್ರತುಂಡ ಹೀಗೆ ನಾನಾ ಹೆಸರುಗಳಿಂದ ಕರೆಯಲ್ಪಡುವ ಗಣೇಶನ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ತಿಥಿಯಂದು ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ. ಈ ವರ್ಷ ಗಣೇಶ ಚತುರ್ಥಿಯನ್ನು ಸೆಪ್ಟೆಂಬರ್ 7 ರಂದು ಆಚರಿಸಲಾಗುತ್ತಿದೆ. ಶಾಲಾ ಕಾಲೇಜುಗಳಲ್ಲಿ ಗಣೇಶನನ್ನು ಇಡಲಾಗುತ್ತದೆ. ಗಣೇಶ ಚತುರ್ಥಿ ಬೋರ್ಡ್ ಅಲಂಕಾರವು ಹಬ್ಬಕ್ಕೆ ಮತ್ತಷ್ಟು ರಂಗನ್ನು ತಂದುಕೊಡುತ್ತದೆ. ಶಾಲಾ ಕಾಲೇಜುಗಳಲ್ಲಿ ಹಬ್ಬವನ್ನು ವಾತಾವರಣವನ್ನು ಸೃಷ್ಟಿಸಲು ಸೃಜನಾತ್ಮಕ, ಸಂಪ್ರದಾಯಿಕ ಹಾಗೂ 3ಡಿ ಹೀಗೆ ವಿವಿಧ ವಿನ್ಯಾಸಗಳಲ್ಲಿ ಗಣೇಶ ಚತುರ್ಥಿ ಬೋರ್ಡ್ ಅಲಂಕರಿಸಿಕೊಳ್ಳಬಹುದು.

  • ಸಾಂಪ್ರದಾಯಿಕ ಹಬ್ಬದ ಥೀಮ್ ಇರಲಿ : ಕಮಲದ ಹೂವುಗಳು ಹಾಗೂ ವಿವಿಧ ರಂಗೋಲಿ ವಿನ್ಯಾಸಗಳನ್ನು ಬಳಸಿಕೊಂಡು ಗಣೇಶನ ವರ್ಣರಂಜಿತ ಚಿತ್ರದೊಂದಿಗೆ ಬೋರ್ಡ್ ಅನ್ನು ಅಲಂಕರಿಸಬಹುದು. ಅದಲ್ಲದೆ ಗಣೇಶ ಚತುರ್ಥಿ ಬೋರ್ಡ್ ಅಲಂಕಾರವನ್ನು ಹೆಚ್ಚಿಸಲು ಮಾರಿಗೋಲ್ಡ್ ಹೂವುಗಳು ಹಾಗೂ ಮಾರುಕಟ್ಟೆಯಲ್ಲಿ ಸಿಗುವ ಕೃತಕ ಹೂವುಗಳನ್ನು ಬಳಸಿಕೊಂಡರೆ ಸಾಂಪ್ರದಾಯಿಕ ಹಬ್ಬದ ಲುಕ್ ನೀಡುತ್ತದೆ.
  • ಗಣೇಶನ ಕಥೆಗಳನ್ನೊಳಗೊಂಡ ಬೋರ್ಡ್ ಅಲಂಕಾರ: ಮೊದಲ ಪೂಜೆಗೆ ಅರ್ಹನಾಗಿರುವ ಗಣೇಶನ ಕಥೆಗಳು ಹಾಗೂ ಶೌರ್ಯದ ಕಾರ್ಯಗಳ ಬಗ್ಗೆ ಮಾಹಿತಿಯನ್ನು ಸೇರಿಸಿಕೊಳ್ಳಬಹುದು. ಗಣೇಶ ಚತುರ್ಥಿಯ ಈ ರೀತಿಯ ಬೋರ್ಡ್ ಅಲಂಕಾರವು ವಿದ್ಯಾರ್ಥಿಗಳಿಗೆ ಹಬ್ಬವನ್ನು ಆಚರಣೆಯ ಜೊತೆಗೆ ಪುರಾಣದ ಕಥೆಗಳ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.
  • ಹಬ್ಬದ ಉಲ್ಲೇಖಗಳು ಮತ್ತು ಮಂತ್ರಗಳಿರಲಿ : ಗಣೇಶನಿಗೆ ಸಂಬಂಧಿಸಿದ ಸ್ಫೂರ್ತಿದಾಯಕ ಉಲ್ಲೇಖಗಳು ಮತ್ತು ಮಂತ್ರಗಳೊಂದಿಗೆ ಬೋರ್ಡ್ ಅಲಂಕಾರಕ್ಕಾಗಿ ಬಳಸಿಕೊಳ್ಳಬಹುದು. ಬೋರ್ಡ್ ಅಲಂಕಾರವು ಆಕರ್ಷಕವಾಗಿ ಕಾಣಲು ವಿವಿಧ ಅಕ್ಷರ ವಿನ್ಯಾಸಗಳನ್ನು ಬಳಸಿಕೊಳ್ಳಬಹುದು.
  • 3ಡಿ ಅಂಶಗಳೊಂದಿಗೆ ಬೋರ್ಡ್ ಅಲಂಕಾರ : ಸಣ್ಣ ಮಾದರಿಗಳು ಹಾಗೂ ಬಟ್ಟೆಯಂತಹ 3ಡಿ ಅಂಶಗಳನ್ನು ಸೇರಿಸುವ ಮೂಲಕ ಬೋರ್ಡ್ ನ್ನು ಸುಂದರವಾಗಿ ಅಲಂಕಾರ ಮಾಡಿಕೊಳ್ಳಬಹುದು. ಇದು ಆಧುನಿಕ ಸ್ಪರ್ಶವನ್ನು ನೀಡುವುದಲ್ಲದೆ ಎಲ್ಲರ ಗಮನ ಸೆಳೆಯುತ್ತದೆ.
  • ಸಾಂಸ್ಕೃತಿಕ ಆಚರಣೆಗಳ ಉಲ್ಲೇಖ : ವಿವಿಧ ರಾಜ್ಯಗಳಲ್ಲಿ ಗಣೇಶ ಚತುರ್ಥಿ ಹಬ್ಬವನ್ನು ಹೇಗೆ ಆಚರಿಸಲಾಗುತ್ತದೆ ಎನ್ನುವ ಉಲ್ಲೇಖದೊಂದಿಗೆ ಶಾಲೆಯಲ್ಲಿ ಗಣೇಶ ಚತುರ್ಥಿ ಬೋರ್ಡ್ ಅಲಂಕಾರ ಮಾಡಬಹುದು. ಇದು ವಿವಿಧ ಪ್ರದೇಶದ ಸಾಂಪ್ರದಾಯಿಕ ಶೈಲಿಯನ್ನು ಎತ್ತಿ ತೋರಿಸುತ್ತದೆ.
  • ಗಣೇಶ ಚತುರ್ಥಿ ಬುಲೆಟಿನ್ ಬೋರ್ಡ್ ಅಲಂಕಾರ : ಈ ಅಲಂಕಾರಕ್ಕಾಗಿ ಬೋರ್ಡಿನ ಮಧ್ಯದಲ್ಲಿ ಗಣೇಶನ ವರ್ಣರಂಜಿತ ಚಿತ್ರ ಅಥವಾ ಕಟೌಟ್ ಅನ್ನು ಬಳಸಿಕೊಂಡು ಅದಕ್ಕೆ ಕಾಗದದ ಹೂವುಗಳು, ಹೂಮಾಲೆಗಳೊಂದಿಗೆ ಅಲಂಕರಿಸಿಕೊಳ್ಳಬಹುದು. ಬಟ್ಟೆಯನ್ನು ಬಳಸಿ ರಂಗೋಲಿ ಮಾದರಿಗಳನ್ನು ಮಾಡಿಕೊಳ್ಳಬಹುದು. ಮಿನುಗುವ ದೀಪಗಳು, ಸಣ್ಣ ಕನ್ನಡಿಗಳಂತಹ 3D ಅಂಶಗಳನ್ನು ಸೇರಿಸಿಕೊಂಡರೆ ಆಕರ್ಷಕವಾಗಿರುತ್ತದೆ.
  • ಗಣೇಶ ಚತುರ್ಥಿ ಸಾಫ್ಟ್ ಬೋರ್ಡ್ ಅಲಂಕಾರ : ಗಣೇಶನಿಗೆ ಸಂಬಂಧಿಸಿದ ಸ್ಫೂರ್ತಿದಾಯಕ ಉಲ್ಲೇಖಗಳು ಮತ್ತು ಮಂತ್ರಗಳನ್ನು ಸೇರಿಸಿಕೊಳ್ಳಬಹುದು. ಅದಲ್ಲದೇ, ಬಣ್ಣದ ಕಾಗದದ ಮೇಲೆ ಆಕರ್ಷಕವಾಗಿ ಅಕ್ಷರವನ್ನು ಬರೆಯುವುದು. ರೇಖಾಚಿತ್ರಗಳು, ವರ್ಣಚಿತ್ರಗಳಂತಹ ವಿದ್ಯಾರ್ಥಿಗಳು ರಚಿಸಿದ ಕಲಾಕೃತಿಗಳನ್ನು ಈ ಬೋರ್ಡ್ ಅಲಂಕಾರಕ್ಕಾಗಿ ಬಳಸಿಕೊಳ್ಳಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ