Ganesh Chaturthi 2024: ಗಣೇಶನಿಗೆ ಬಲುಪ್ರಿಯ ಈ ಮೋದಕ, ಮಾಡೋದು ಹೇಗೆ?
ಗಣೇಶನಿಗೆ ಪ್ರಿಯವಾದ ತಿನಿಸುಗಳಲ್ಲಿ ಮೋದಕ ಕೂಡ ಒಂದು. ಹೀಗಾಗಿ ಚೌತಿ ಹಬ್ಬವು ಮೋದಕವಿಲ್ಲದೇ ಪೂರ್ಣವಾಗುವುದಿಲ್ಲ. ಏಕದಂತನಿಗೆ ಬಲುಪ್ರಿಯವಾದ ಮೋದಕವನ್ನು ನೈವೇದ್ಯವಾಗಿ ಇಡಲಾಗುತ್ತದೆ. ಆವಿಯಲ್ಲಿ ಬೇಯಿಸಿದ ಮೋದಕವು ನೋಡುವುದಕ್ಕೆ ಎಷ್ಟು ಆಕರ್ಷಕವೋ ಅಷ್ಟೇ ರುಚಿಕರವಾಗಿರುತ್ತದೆ. ಹಾಗಾದ್ರೆ ಈ ಮೋದಕ ರೆಸಿಪಿ ಮಾಡೋದು ಹೇಗೆ ಎನ್ನುವುದರ ಮಾಹಿತಿ ಇಲ್ಲಿದೆ.
ಗಣಪತಿ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ಈ ಬಾರಿ ಸೆಪ್ಟೆಂಬರ್ 7 ರಂದು ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಲಾಗುತ್ತದೆ. ಹೆಣ್ಣು ಮಕ್ಕಳು ಗಣೇಶನ ಹಬ್ಬಕ್ಕೆ ನೈವೇದ್ಯವಿಡಲು ಏನೇನು ಸಿಹಿತಿಂಡಿಗಳನ್ನು ಮಾಡುವ ಬಗ್ಗೆ ಸಿದ್ಧತೆ ಮಾಡಿಕೊಂಡಾಗಿದೆ. ಗಣೇಶ ಚತುರ್ಥಿಯಂದು ಗಣೇಶನಿಗೆ ಚಕ್ಕುಲಿ, ಉಂಡೆ, ಎಳ್ಳುಂಡೆ, ಕರ್ಜಿಕಾಯಿ, ಕಡುಬು, ಸಿಹಿ ಕಡುಬು, ಖಾರ ಕಡುಬು ಈ ರೀತಿ ಅನೇಕ ತಿಂಡಿಗಳನ್ನು ಮಾಡಿ ನೈವೇದ್ಯಗೆ ಇಡಲಾಗುತ್ತದೆ. ಹೀಗಾಗಿ ಮನೆಯಲ್ಲೇ ಈ ವಸ್ತುಗಳಿದ್ದರೆ ಗಣಪನಿಗೆ ನೈವೇದ್ಯವಿಡಲು ಸುಲಭವಾಗಿ ಮೋದಕವನ್ನು ಮಾಡಬಹುದು.
ಮೋದಕ ಮಾಡಲು ಬೇಕಾಗುವ ಪದಾರ್ಥಗಳು
* ಎರಡು ಚಮಚ ತುಪ್ಪ
* ಎರಡು ಕಪ್ ತುರಿದ ತೆಂಗಿನಕಾಯಿ
* ಒಂದು ಕಪ್ ಬೆಲ್ಲ
* ಅರ್ಧ ಚಮಚ ಏಲಕ್ಕಿ ಪುಡಿ
* ಎರಡು ಕಪ್ ನೀರು
* ಚಮಚ ಉಪ್ಪು
* ಎರಡು ಕಪ್ ಅಕ್ಕಿ ಹಿಟ್ಟು
ಇದನ್ನೂ ಓದಿ: ಶಾಲೆಯಲ್ಲಿ ಗಣೇಶ ಚತುರ್ಥಿ ಬೋರ್ಡ್ ಅಲಂಕಾರ ಮಾಡುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್
- ಮೊದಲನೆಯದಾಗಿ, ದೊಡ್ಡ ಬಾಣಲೆಗೆ ಚಮಚ ತುಪ್ಪ ಹಾಕಿ ಬಿಸಿ ಮಾಡಿ, ಅದಕ್ಕೆ ಎರಡು ಕಪ್ ತೆಂಗಿನಕಾಯಿ ಸೇರಿಸಿಕೊಂಡು ಪರಿಮಳ ಬರುವವರೆಗೆ ಹುರಿದುಕೊಳ್ಳಿ.
- ಆ ಬಳಿಕ ಅದಕ್ಕೆ ಒಂದು ಕಪ್ ಬೆಲ್ಲ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬೆಲ್ಲ ಕರಗುವವರೆಗೆ ಮಧ್ಯಮ ಉರಿಯಲ್ಲಿ ಬೇಯಿಸಿಕೊಳ್ಳಿ. ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಕಲಸಿಕೊಳ್ಳಿ.
- ಮೋದಕ ಹಿಟ್ಟು ತಯಾರಿಸಲು ಬಾಣಲೆಗೆ ಎರಡು ಕಪ್ ನೀರು, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಸ್ವಲ್ಪ ತುಪ್ಪ ಸೇರಿಸಿ ಚೆನ್ನಾಗಿ ಕುದಿಸಿ.
- ಈ ನೀರಿಗೆ ಎರಡು ಅಕ್ಕಿ ಹಿಟ್ಟು ಸೇರಿಸಿ ನೀರನ್ನು ಹೀರಿಕೊಳ್ಳುವವರೆಗೆ ಚೆನ್ನಾಗಿ ಕಲಸಿಕೊಳ್ಳಿ.
- ಐದು ನಿಮಿಷಗಳ ಕಾಲ ತಣ್ಣಾಗಲು ಬಿಟ್ಟು ಮೃದುವಾಗುವವರೆಗೆ ಚೆನ್ನಾಗಿದೆ ನಾದಿಕೊಳ್ಳಿ.
- ಚೆಂಡಿನ ಗಾತ್ರದ ಅಕ್ಕಿ ಹಿಟ್ಟಿನ ಹಿಟ್ಟನ್ನು ತೆಗೆದುಕೊಂಡು ಅದನ್ನು ಚಪ್ಪಟೆ ಮಾಡಿ. ಬೆಲ್ಲ ಹಾಗೂ ತೆಂಗಿನಕಾಯಿ ಮಿಶ್ರಣವನ್ನು ಅದರೊಳಗೆ ಹಾಕಿ ಎಲ್ಲ ಬದಿಗಳಿಂದ ಮೋದಕದ ಆಕಾರದಲ್ಲಿ ಒತ್ತಿರಿ.
- ಇದನ್ನು ಇಡ್ಲಿ ಪಾತ್ರೆಯಲ್ಲಿ ಹತ್ತು ನಿಮಿಷಗಳ ಕಾಲ ಬೇಯಿಸಿದರೆ ಗಣೇಶನಿಗೆ ಪ್ರಿಯವಾದ ಮೋದಕ ಸವಿಯಲು ಸಿದ್ಧ.
ಗಣೇಶ ಚತುರ್ಥಿ ಸ್ಟೋರಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ