Ghee Coffee : ಇದು ತುಪ್ಪದ ಕಾಫಿ, ಖಾಲಿ ಹೊಟ್ಟೆಗೆ ಕುಡಿದ್ರೆ ತೂಕ ಇಳಿಯೋದು ಗ್ಯಾರಂಟಿ

ಕೆಲವರಿಗೆ ದಿನಕ್ಕೆ ಮೂರು ನಾಲ್ಕು ಬಾರಿ ಕಾಫಿ ಅಥವಾ ಟೀ ಕುಡಿಯದೆ ಇದ್ದರೆ ಮನಸ್ಸಿಗೆ ಸಮಾಧಾನ ಅನ್ನೋದೇ ಇರಲ್ಲ. ಆದರೆ ಅತಿಯಾದ ಕಾಫಿ ಹಾಗೂ ಟೀ ಸೇವನೆಯು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಪ್ಪದ ಕಾಫಿ ಸೇವಿಸಿದರೆ ತೂಕ ಇಳಿಕೆಯಿಂದ ಹಿಡಿದು ಹಲವಾರು ಆರೋಗ್ಯ ಪ್ರಯೋಜನಗಳನ್ನು ಕಾಣಬಹುದು. ಹಾಗಾದ್ರೆ ತುಪ್ಪದ ಕಾಫಿ ಸೇವನೆಯಿಂದ ತೂಕ ಇಳಿಕೆಯಾಗುತ್ತ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

Ghee Coffee : ಇದು ತುಪ್ಪದ ಕಾಫಿ, ಖಾಲಿ ಹೊಟ್ಟೆಗೆ ಕುಡಿದ್ರೆ ತೂಕ ಇಳಿಯೋದು ಗ್ಯಾರಂಟಿ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 01, 2024 | 2:55 PM

ನಮ್ಮಲ್ಲಿ ಕೆಲವರಿಗೆ ಬೆಳಗ್ಗೆ ಎದ್ದ ಕೂಡಲೇ ಬೆಡ್ ಕಾಫಿ ಕುಡಿಯುವ ಅಭ್ಯಾಸವಿರುತ್ತದೆ. ಹೆಚ್ಚಿನವರು ಬೆಳಗ್ಗೆ ಎದ್ದ ತಕ್ಷಣವೇ ಮೊದಲು ಮಾಡುವ ಕೆಲಸ ಕಾಫಿ ಅಥವಾ ಟೀ ಇರುವುದು. ಇದನ್ನು ಕುಡಿಯುವುದರಿಂದ ದೇಹ ಮನಸ್ಸು ರಿಲ್ಯಾಕ್ಸ್ ಆಗುತ್ತದೆ. ಆದರೆ ಖಾಲಿ ಹೊಟ್ಟೆಯಲ್ಲಿ ಕಾಫಿ ಸೇವನೆಯು ಆರೋಗ್ಯ ಒಳ್ಳೆಯದಲ್ಲ ಎನ್ನುವ ಮಾತಿದೆ. ಆದರೆ ತುಪ್ಪದ ಕಾಫಿ ಸೇವನೆಯಿಂದ ಹಲವಾರು ಆರೋಗ್ಯ ಲಾಭಗಳು ಇರುವ ಕಾರಣ ಸೆಲೆಬ್ರಿಟಿಗಳು ಕೂಡ ತುಪ್ಪ ಕಾಫಿಯನ್ನು ಆಹಾರದಲ್ಲಿ ಸೇರಿಸಿಕೊಂಡಿದ್ದಾರೆ. ಈ ತುಪ್ಪದ ಕಾಫಿ ಕುಡಿಯುವ ಮುನ್ನ ಇದರಿಂದಾಗುವ ಆರೋಗ್ಯ ಪ್ರಯೋಜನಗಳ ಬಗ್ಗೆ ನಿಮಗೂ ತಿಳಿದಿರಲಿ.

ಖಾಲಿ ಹೊಟ್ಟೆಯಲ್ಲಿ ತುಪ್ಪದ ಕಾಫಿ ಸೇವನೆಯಿಂದ ಆಗುವ ಲಾಭಗಳು

* ಹಸಿವನ್ನು ನಿಯಂತ್ರಿಸುತ್ತದೆ : ತುಪ್ಪದಲ್ಲಿರುವ ಆರೋಗ್ಯಕರ ಕೊಬ್ಬುಗಳು ಹೊಟ್ಟೆ ತುಂಬಿರುವಂತೆ ನೋಡಿಕೊಳ್ಳುತ್ತದೆ. ಇದು ಹಸಿವನ್ನು ತಪ್ಪಿಸಿ, ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ. ಕ್ಯಾಲೊರಿಗಳನ್ನು ಕಡಿಮೆ ಮಾಡಿ ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ.

* ಮೆದುಳಿನ ಆರೋಗ್ಯಕ್ಕೆ ಪ್ರಯೋಜನಕಾರಿ : ತುಪ್ಪವು ಬ್ಯುಟರಿಕ್ ಆಮ್ಲವನ್ನು ಹೊಂದಿರುವುದರಿಂದ ಮುಂಜಾನೆ ತುಪ್ಪದ ಕಾಫಿಯು ಮೆದುಳಿನ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಿದೆ.

* ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ : ತುಪ್ಪದ ಕಾಫಿ ಜೀರ್ಣಕ್ರಿಯೆ ಹಾಗೂ ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ. ಅದಲ್ಲದೇ, ಹೊಟ್ಟೆ ಸಂಬಂಧಿತ ಆರೋಗ್ಯ ಸಮಸ್ಯೆಗಳಿಂದ ದೂರ ಉಳಿಯುವಂತೆ ಮಾಡುತ್ತದೆ.

* ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ : ತುಪ್ಪದಲ್ಲಿ ಟ್ರೈಗ್ಲಿಸರೈಡ್‌ಗಳನ್ನು ಹೊಂದಿದ್ದು, ಇದು ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ದೇಹವು ಸಂಗ್ರಹವಾಗಿರುವ ಕೊಬ್ಬನ್ನು ಶಕ್ತಿಗಾಗಿ ಪರಿವರ್ತಿಸಲು ಅನುವು ಮಾಡಿಕೊಡುತ್ತದೆ.

* ದೇಹಕ್ಕೆ ನಿರಂತರ ಶಕ್ತಿಯನ್ನು ಒದಗಿಸುತ್ತದೆ: ಕಾಫಿ ತ್ವರಿತ ಶಕ್ತಿಯನ್ನು ನೀಡುತ್ತದೆ. ಆದರೆ ಈ ತುಪ್ಪದಲ್ಲಿನ ಕೊಬ್ಬುಗಳು ಕೆಫೀನ್ ಬಿಡುಗಡೆಯನ್ನು ನಿಧಾನಗೊಳಿಸುತ್ತದೆ. ಇದು ದೇಹಕ್ಕೆ ನಿರಂತರ ಶಕ್ತಿಯನ್ನು ನೀಡಲು ಸಹಾಯ ಮಾಡುತ್ತದೆ.

* ಒತ್ತಡ ನಿವಾರಿಸುತ್ತದೆ : ತುಪ್ಪದಲ್ಲಿರುವ ಆ್ಯಂಟಿಆಕ್ಸಿಡೆಂಟ್ ಗುಣಗಳಿದ್ದು, ತುಪ್ಪದ ಕಾಫಿ ಸೇವನೆಯು ಒತ್ತಡವನ್ನು ನಿವಾರಿಸಿ, ಮನಸ್ಸನ್ನು ಶಾಂತವಾಗಿಡುತ್ತದೆ.

* ಚರ್ಮ ಹಾಗೂ ಕೂದಲ ಆರೋಗ್ಯಕ್ಕೆ ಪ್ರಯೋಜನಕಾರಿ : ತುಪ್ಪದ ಕಾಫಿಯು ಸೇವನೆಯಿಂದ ಚರ್ಮ ಆರೋಗ್ಯ ಹಾಗೂ ಕೂದಲಿನ ಆರೈಕೆಯಲ್ಲಿಯು ಪ್ರಮುಖ ಪಾತ್ರವಹಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?
ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?
ಒಬ್ಬನಿಗೆ ಮದುವೆಯಾಗಿ ಕೇವಲ 4 ತಿಂಗಳಾಗಿತ್ತು, ಮತ್ತೊಬ್ಬನ ಪತ್ನಿ ಗರ್ಭಿಣಿ!
ಒಬ್ಬನಿಗೆ ಮದುವೆಯಾಗಿ ಕೇವಲ 4 ತಿಂಗಳಾಗಿತ್ತು, ಮತ್ತೊಬ್ಬನ ಪತ್ನಿ ಗರ್ಭಿಣಿ!
ಜಿಟಿಡಿ ಹೇಳಿದ ಧಮ್ ಮಾತಿಗೆ ಬಿಜೆಪಿ ನಾಯಕ ರವಿ ಪ್ರತಿಕ್ರಿಯೆ ನೀಡಲಿಲ್ಲ
ಜಿಟಿಡಿ ಹೇಳಿದ ಧಮ್ ಮಾತಿಗೆ ಬಿಜೆಪಿ ನಾಯಕ ರವಿ ಪ್ರತಿಕ್ರಿಯೆ ನೀಡಲಿಲ್ಲ
ಬಿಗ್​ಬಾಸ್ ಮನೆಯಲ್ಲಿ ರಾಜಿ ಸಂಧಾನ, ದೂರಾದವರು ಒಂದಾದರೇ?
ಬಿಗ್​ಬಾಸ್ ಮನೆಯಲ್ಲಿ ರಾಜಿ ಸಂಧಾನ, ದೂರಾದವರು ಒಂದಾದರೇ?
ಮಡಿದವರು ಶಿಗ್ಗಾವಿ ಕ್ಷೇತ್ರದ ಸವಣೂರು ತಾಲ್ಲೂಕಿನ ತರಕಾರಿ ವ್ಯಾಪಾರಸ್ಥರು
ಮಡಿದವರು ಶಿಗ್ಗಾವಿ ಕ್ಷೇತ್ರದ ಸವಣೂರು ತಾಲ್ಲೂಕಿನ ತರಕಾರಿ ವ್ಯಾಪಾರಸ್ಥರು
ಬಾಗಲಕೋಟೆಯಲ್ಲಿ ಎದೆ ಝಲ್​ ಎನಿಸುವ ಟ್ಯ್ರಾಕ್ಟರ್​ ರೇಸ್​: ವಿಡಿಯೋ ನೋಡಿ
ಬಾಗಲಕೋಟೆಯಲ್ಲಿ ಎದೆ ಝಲ್​ ಎನಿಸುವ ಟ್ಯ್ರಾಕ್ಟರ್​ ರೇಸ್​: ವಿಡಿಯೋ ನೋಡಿ
ಬೇರೆ ಪಕ್ಷಗಳ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿಲ್ಲ: ಜಿಟಿ ದೇವೇಗೌಡ
ಬೇರೆ ಪಕ್ಷಗಳ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿಲ್ಲ: ಜಿಟಿ ದೇವೇಗೌಡ
ಶಿಲೆಸಿಕ್ಕ ಜಮೀನಲ್ಲಿ ಭವ್ಯ ರಾಮಮಂದಿರ ನಿರ್ಮಿಸಲು ಸ್ಥಳೀಯರ ಆಗ್ರಹ
ಶಿಲೆಸಿಕ್ಕ ಜಮೀನಲ್ಲಿ ಭವ್ಯ ರಾಮಮಂದಿರ ನಿರ್ಮಿಸಲು ಸ್ಥಳೀಯರ ಆಗ್ರಹ
ಮೇಲ್ಸೇತುವೆಯಲ್ಲಿ ಚಲಿಸುತ್ತಿದ್ದಾಗ ರೈಲಿನಿಂದ ಕೆಳಗೆ ಜಿಗಿದ ವ್ಯಕ್ತಿ
ಮೇಲ್ಸೇತುವೆಯಲ್ಲಿ ಚಲಿಸುತ್ತಿದ್ದಾಗ ರೈಲಿನಿಂದ ಕೆಳಗೆ ಜಿಗಿದ ವ್ಯಕ್ತಿ
ಮೈಕ್ರೋ ಫೈನಾನ್ಸ್​ಗಳ ಅಟ್ಟಹಾಸಕ್ಕೆ ಕಡಿವಾಣ ಹಾಕುತ್ತೇವೆ: ಪರಮೇಶ್ವರ್
ಮೈಕ್ರೋ ಫೈನಾನ್ಸ್​ಗಳ ಅಟ್ಟಹಾಸಕ್ಕೆ ಕಡಿವಾಣ ಹಾಕುತ್ತೇವೆ: ಪರಮೇಶ್ವರ್