ಹಬ್ಬ ಹರಿದಿನಗಳು ಹತ್ತಿರ ಬರುತ್ತಿದ್ದಂತೆ ಹೆಣ್ಣು ಮಕ್ಕಳು ಚಿನ್ನದ ಆಭರಣಗಳನ್ನು ಧರಿಸುತ್ತಾರೆ. ಆದರೆ ಈ ಒಡವೆಗಳು ಕಳೆಗುಂದಿದ್ದರೆ ನೋಡಲು ಆಕರ್ಷಕವಾಗಿ ಕಾಣುವುದಿಲ್ಲ. ಅಂಗಡಿಯಲ್ಲಿ ಪಾಲಿಶ್ ಕೊಡಲು ಸಮಯವಿಲ್ಲ ಎನ್ನುವವರು ಮನೆಯಲ್ಲಿ ಸುಲಭವಾಗಿ ನಿಮ್ಮ ಬಂಗಾರದ ಆಭರಣಗಳನ್ನು ತೊಳೆಯುವ ಮೂಲಕ ಒಡವೆಗಳನ್ನು ಫಳಫಳನೆ ಹೊಳೆಯುವಂತೆ ಮಾಡಬಹುದು.
* ಡಿಟರ್ಜೆಂಟ್ ಸೋಪ್ : ಒಂದು ಬಟ್ಟಲಿನಲ್ಲಿ ಡಿಟರ್ಜೆಂಟ್ ಸೋಪ್ ದ್ರವವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಹಾಕಿ ಮಿಶ್ರಣ ಮಾಡಿ ಚಿನ್ನದ ಆಭರಣವನ್ನು ನೆನೆಸಿಟ್ಟುಕೊಳ್ಳಿ. ಹತ್ತು ಹದಿನೈದು ನಿಮಿಷಗಳ ಬಳಿಕ ಮೃದುವಾದ ಟೂತ್ ಬ್ರಷ್ ನಿಂದ ಕೊಳೆಯಾಗಿರುವ ಒಡವೆಗಳ ಭಾಗವನ್ನು ಚೆನ್ನಾಗಿ ಉಜ್ಜಿ ತೊಳೆಯಿರಿ. ಒಣಗಿರುವ ಕಾಟನ್ ಬಟ್ಟೆಯಿಂದ ಈ ಒಡವೆಗಳನ್ನು ಒರೆಸಿದರೆ ಆಭರಣಗಳು ಫಳಫಳನೆ ಹೊಳೆಯುತ್ತದೆ.
* ವಿನೆಗರ್ : ಒಂದು ಬಟ್ಟಲಿನಲ್ಲಿ ನೀರು ತೆಗೆದುಕೊಂಡು ಅದಕ್ಕೆ ವಿನೆಗರ್ ಬೆರೆಸಿ ಮಿಶ್ರಣ ಮಾಡಿಟ್ಟುಕೊಳ್ಳಿ. ಟೂತ್ ಬ್ರಷ್ ಬಳಸಿ ಒಡವೆಗಳನ್ನು ಈ ಮಿಶ್ರಣದಿಂದ ತೊಳೆಯಿರಿ. ಆ ಬಳಿಕ ಒಣ ಬಟ್ಟೆಯಲ್ಲಿ ಒರೆಸಿದರೆ ಆಭರಣವು ಸ್ವಚ್ಛವಾಗುತ್ತದೆ.
* ಟೂತ್ ಪೇಸ್ಟ್ : ಆಭರಣಗಳು ಟೂತ್ಪೇಸ್ಟ್ ಬಳಸಬಹುದು. ಇದರಲ್ಲಿ ಫ್ಲೂರೈಡ್ ಒಡವೆಗಳನ್ನು ಸ್ವಚ್ಛಗೊಳಿಸಿ ಹೊಳಪನ್ನು ಮರಳಿ ತರುತ್ತದೆ. ಟೂತ್ ಪೇಸ್ಟ್ ನಿಂದ ಉಜ್ಜಿ ತೊಳೆದರೆ ನೀರಿನಲ್ಲಿ ತೊಳೆದರೆ ಆಭರಣಗಳು ಹೊಳಪು ಕಾಣುತ್ತವೆ.
* ಬೇಕಿಂಗ್ ಸೋಡಾ : ಕೇವಲ ಆಭರಣಗಳನ್ನು ಸ್ವಚ್ಛ ಮಾಡಲು ಬೇಕಿಂಗ್ ಸೋಡಾವನ್ನು ಬಳಸಬಹುದು. ಒಂದು ಪಾತ್ರೆಗೆ ನೀರು ಹಾಗೂ ಬೇಕಿಂಗ್ ಸೋಡಾ ಸೇರಿಸಿ ಇದರಿಂದ ಆಭರಣಗಳನ್ನು ಸ್ವಚ್ಛಗೊಳಿಸಿ ಬಟ್ಟೆಯಿಂದ ಒರೆಸಿದರೆ ಹೊಸದರಂತೆ ಕಾಣುತ್ತವೆ.
ಇದನ್ನೂ ಓದಿ: ಶ್ರೀಕೃಷ್ಣ ಜನ್ಮಾಷ್ಟಮಿಗೆ ಮನೆಯ ಅಲಂಕಾರ ಹೀಗಿರಲಿ
* ನಿಂಬೆ ರಸ : ಒಂದು ಪಾತ್ರೆಯಲ್ಲಿ ನಿಂಬೆಹಣ್ಣಿನ ರಸ ಹಿಂಡಿಕೊಂಡು ಅದರಲ್ಲಿ ಒಡವೆಗಳನ್ನು ನೆನೆಸಿಟ್ಟುಕೊಳ್ಳಿ. ಟೂತ್ ಬ್ರಷ್ ನಲ್ಲಿ ನಿಂದ ಕೊಳೆಯಿರುವಲ್ಲಿ ಉಜ್ಜಿದರೆ ಒಡವೆಗಳ ಕೊಳೆಯೂ ದೂರವಾಗಿ ಆಭರಣವು ಹೊಳೆಯುತ್ತದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ