Krishna Janmastami 2024 : ಶ್ರೀಕೃಷ್ಣ ಜನ್ಮಾಷ್ಟಮಿಗೆ ಮನೆಯ ಅಲಂಕಾರ ಹೀಗಿರಲಿ
ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯೂ ಕೂಡ ಒಂದಾಗಿದ್ದು, ಈ ದಿನದಂದು ಬಾಲಗೋಪಾಲನನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಹೀಗಾಗಿ ದೇವರ ಕೋಣೆ ಹಾಗೂ ಮನೆಯನ್ನು ಅಲಂಕಾರ ಮಾಡುವುದು ಬಹಳ ಮುಖ್ಯ.ಹಿಂದೂ ಹಬ್ಬವಾದ ಶ್ರೀಕೃಷ್ಣ ಜನ್ಮಾಷ್ಟಮಿಯಂದು ದೇವರ ಕೋಣೆಯನ್ನು ಅಲಂಕರಿಸುವ ಬಗೆಗೆ ಕೆಲವು ಸಲಹೆಗಳು ಇಲ್ಲಿದೆ.
ಬೆಣ್ಣೆ ಕಳ್ಳ ಶ್ರೀಕೃಷ್ಣನ ಜನುಮ ದಿನಕ್ಕೆ ಇನ್ನೇನು ಕೆಲವೇ ಕೆಲವು ದಿನಗಳಷ್ಟೇ ಬಾಕಿಯಿವೆ. ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಷ್ಟಮಿಯಂದು ಶ್ರೀಕೃಷ್ಣನು ಜನಿಸಿದ ದಿನವಾಗಿದ್ದು, ಈ ಬಾರಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಗಸ್ಟ್ 26 ರಂದು ಆಚರಿಸಲಾಗುತ್ತಿದೆ. ಜನ್ಮಾಷ್ಟಮಿ ಪೂಜೆಯನ್ನು ಆಚರಿಸುವ ಮುನ್ನ ಮನೆಯನ್ನು ಮತ್ತು ದೇವರ ಕೋಣೆಯನ್ನು ಅಲಂಕರಿಸುವುದು ತುಂಬಾನೇ ಮುಖ್ಯವಾಗಿರುತ್ತದೆ. ಹೀಗಾಗಿ ನೀವೂ ಈ ಬಾರಿ ಮನೆಯಲ್ಲಿ ಶ್ರೀಕೃಷ್ಣನನ್ನು ಪೂಜಿಸಲು ಬಯಸಿದರೆ ವಿಭಿನ್ನ ಕಸೂತಿ, ಹೂವಿನ ಅಲಂಕಾರ, ರಂಗೋಲಿ, ದೀಪಗಳ ಸಾಲುಗಳ ಮನೆ ಹಾಗೂ ದೇವರ ಕೋಣೆಯ ಅಲಂಕಾರವನ್ನು ಮಾಡಿಕೊಳ್ಳುವುದು ಉತ್ತಮ.
* ಸಾಂಪ್ರದಾಯಿಕ ಹೂವಿನ ಅಲಂಕಾರವಿರಲಿ : ಹಬ್ಬದ ದಿನ ಹೂವಿನಿಂದ ಪೂಜಾ ಕೊಠಡಿ ಹಾಗೂ ಮನೆಯನ್ನು ಅಲಂಕರಿಸುವುದು ಬಹಳ ಮುಖ್ಯ. ಶ್ರೀ ಕೃಷ್ಣನಿಗೆ ಮಲ್ಲಿಗೆ ಹಾಗೂ ಪಾರಿಜಾತ ಹೂವುಗಳೆಂದರೆ ಬಹಳ ಇಷ್ಟ. ಇದರೊಂದಿಗೆ ಮಾರಿಗೋಲ್ಡ್, ಗುಲಾಬಿ ಹೂವುಗಳನ್ನು ಅಲಂಕಾರಕ್ಕಾಗಿ ಬಳಸಿಕೊಳ್ಳಬಹುದು. ಈ ಪರಿಮಳಯುಕ್ತ ಹೂವುಗಳಿಂದ ಸುಂದರವಾದ ಹೂಮಾಲೆಗಳನ್ನು ಮಾಡಿ ದೇವರ ವಿಗ್ರಹ ಮತ್ತು ಪೂಜಾ ಕೊಠಡಿಯ ಪ್ರವೇಶದ್ವಾರವನ್ನು ಅಲಂಕರಿಸಿಕೊಳ್ಳಿ. ಮನೆಯ ಪ್ರವೇಶದ್ವಾರದಲ್ಲಿ ಅಥವಾ ದೇವರ ಕೋಣೆಯ ಮುಂಭಾಗದಲ್ಲಿ ಹೂವಿನ ರಂಗೋಲಿ ವಿನ್ಯಾಸಗಳು ವರ್ಣರಂಜಿತ ಸ್ಪರ್ಶವನ್ನು ನೀಡುತ್ತವೆ. ಈ ರೀತಿಯ ಅಲಂಕಾರವು ಆಧ್ಯಾತ್ಮಿಕ ವಾತಾವರಣವನ್ನು ಸೃಷ್ಟಿಸುತ್ತದೆ.
* ಲೈಟಿಂಗ್ ನಿಂದ ಅಲಂಕರಿಸಿಕೊಳ್ಳಿ : ಪೂಜಾ ಕೊಠಡಿಯನ್ನು ದೀಪಗಳು ಮತ್ತು ಮೇಣದಬತ್ತಿಗಳಿಂದ ಸುಂದರವಾಗಿ ಕಾಣುವಂತೆ ಮಾಡಬಹುದು. ಸುಂದರ ನೋಟವನ್ನು ಸೃಷ್ಟಿಸಲು ಹಿತ್ತಾಳೆ ಅಥವಾ ಜೇಡಿಮಣ್ಣಿನಿಂದ ಮಾಡಿದ ಎಣ್ಣೆ ದೀಪಗಳನ್ನು ಬಳಸಬಹುದು. ಈ ಹಬ್ಬದ ಕಳೆಯನ್ನು ಹೆಚ್ಚಿಸಲು ದೇವರ ಕೋಣೆಗೆ ಮಾರುಕಟ್ಟೆಯಲ್ಲಿ ಸಿಗುವ ಸ್ಪ್ರಿಂಗ್ ಫೇರಿ ಲೈಟ್‌ಗಳು ಅಥವಾ ಎಲ್ ಇಡಿ ದೀಪಗಳನ್ನು ಬಳಸಿಕೊಳ್ಳಬಹುದು.
* ಸೃಜನಾತ್ಮಕ ರಂಗೋಲಿ ವಿನ್ಯಾಸಗಳು: ಸಾಂಪ್ರದಾಯಿಕ ಕಲಾ ಪ್ರಕಾರವಾದ ರಂಗೋಲಿಯು ಹಬ್ಬದ ಸ್ಪರ್ಶವನ್ನು ನೀಡುತ್ತದೆ. ಹೀಗಾಗಿ ವಿವಿಧ ಬಣ್ಣ ರಂಗೋಲಿ ಪುಡಿಗಳು, ಅಕ್ಕಿ ಹಿಟ್ಟು ಅಥವಾ ಹೂವಿನ ದಳಗಳನ್ನು ಬಳಸಿ ಪೂಜಾ ಕೊಠಡಿಯ ಪ್ರವೇಶದ್ವಾರದಲ್ಲಿ ಸಂಕೀರ್ಣವಾದ ರಂಗೋಲಿ ವಿನ್ಯಾಸಗಳನ್ನು ರಚಿಸಿಕೊಳ್ಳಿ. ವಿಶೇಷವಾಗಿ ನವಿಲುಗಳು, ಕಮಲದ ಹೂವುಗಳು ಅಥವಾ ಕೃಷ್ಣನ ಹೆಜ್ಜೆಗುರುತುಗಳನ್ನು ಒಳಗೊಂಡಿರುವ ರಂಗೋಲಿ ವಿನ್ಯಾಸವು ಶ್ರೀಕೃಷ್ಣ ಜನ್ಮಾಷ್ಠಮಿಗೆ ಹೇಳಿ ಮಾಡಿಸಿದ್ದಾಗಿದೆ.
ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಎಸ್ಪಿ ಕೈಯಿಂದ ಹಾರದೆ ದೊಪ್ಪನೆ ಕೆಳ ಬಿದ್ದ ಪಾರಿವಾಳ
* ಬಣ್ಣ ಬಣ್ಣದ ಪರದೆಗಳು ಆಯ್ಕೆಯಿರಲಿ : ಸುಂದರವಾದ ಪರದೆಗಳಿಂದ ನಿಮ್ಮ ಪೂಜಾ ಕೋಣೆಯ ನೋಟವನ್ನು ಪರಿವರ್ತಿಸಿಕೊಳ್ಳಿ. ಪೂಜಾ ಪೀಠವನ್ನು ವರ್ಣರಂಜಿತ ರೇಷ್ಮೆಯಂತಹ ಪರದೆಗಳಿಂದ ಅಲಂಕರಿಸಿಕೊಳ್ಳಿ. ಅದಲ್ಲದೇ, ಹಬ್ಬದ ಥೀಮ್‌ಗೆ ಪೂರಕವಾಗಿ ಕೇಸರಿ, ರಾಯಲ್ ನೀಲಿ ಅಥವಾ ಗಾಢ ಕೆಂಪು ಬಣ್ಣದ ಪರದೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತವಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ