Good Friday 2025: ಗುಡ್ ಫ್ರೈಡೇ ಶುಭ ದಿನ ನಿಮ್ಮ ಕುಟುಂಬಸ್ಥರು ಹಾಗೂ ಪ್ರೀತಿಪಾತ್ರರಿಗೆ ಹೀಗೆ ಶುಭಾಶಯ ತಿಳಿಸಿ
ಗುಡ್ ಫ್ರೈಡೇ ಕ್ರೈಸ್ತ ಧರ್ಮದ ಪವಿತ್ರ ಹಬ್ಬಗಳಲ್ಲಿ ಒಂದಾಗಿದೆ. ಈ ಹಬ್ಬವನ್ನು ಪ್ರತಿ ವರ್ಷ ಈಸ್ಟರ್ ಭಾನುವಾರದ ಮೊದಲ ಶುಕ್ರವಾರದಂದು ಆಚರಿಸಲಾಗುತ್ತದೆ. ಏಸುವನ್ನು ಶಿಲುಬೆಗೇರಿಸಿದ ದಿನ ಇದಾಗಿರುವುದರಿಂದ ಮಾನವ ಕುಲದ ಕಲ್ಯಾಣಕ್ಕಾಗಿ ಪ್ರಾಣ ತ್ಯಾಗ ಮಾಡಿದ ಏಸು ಕ್ರಿಸ್ತರ ತ್ಯಾಗವನ್ನು ಸ್ಮರಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಏಪ್ರಿಲ್ 18 ರಂದು ಈ ಬಾರಿ ಗುಡ್ ಫ್ರೈಡೇ ಆಚರಿಸಲಾಗುತ್ತಿದ್ದು, ಈ ದಿನ ನಿಮ್ಮ ಆತ್ಮೀಯರಿಗೆ ಈ ಕೆಲವು ಶುಭ ಸಂದೇಶಗಳನ್ನು ತಿಳಿಸಿ.

ಕ್ರೈಸ್ತ ಧರ್ಮದವರು (Christian religion) ಆಚರಿಸುವ ಪ್ರಮುಖ ಹಬ್ಬಗಳಲ್ಲಿ (festival) ಗುಡ್ ಫ್ರೈಡೇ (Good Friday) ಕೂಡ ಒಂದು. ಈ ದಿನವನ್ನು ಪ್ರತಿವರ್ಷ ಈಸ್ಟರ್ (easter) ಭಾನುವಾರದ ಮೊದಲ ಶುಕ್ರವಾರದಂದು ಆಚರಿಸಲಾಗುತ್ತದೆ. ಇದು ಏಸು ಕ್ರಿಸ್ತನನ್ನು (Jesus Christ) ಶಿಲುಬೆಗೇರಿಸಿದ ದಿನವಾದ್ದರಿಂದ ಗುಡ್ ಫ್ರೈಡೇ ತನ್ನ ಹೆಸರಿನಲ್ಲಿ ಸಾಂಕೇತಿಕವಾಗಿ ಶುಭವನ್ನು ಸೂಚಿಸಿದರೂ ಕ್ರಿಶ್ಚಿಯನ್ ಸಮುದಾಯಕ್ಕೆ ಇದು ದುಃಖದ ದಿನವಾಗಿದೆ. ಈ ದಿನ ಪ್ರೀತಿ, ಜ್ಞಾನ ಮತ್ತು ಅಹಿಂಸೆಯ ಸಂದೇಶವನ್ನು ನೀಡಿದ ಹಾಗೂ ಮಾನವ ಕುಲದ ಕಲ್ಯಾಣಕ್ಕಾಗಿ ತನ್ನನ್ನು ತಾನೇ ತ್ಯಾಗ ಮಾಡಿದ ಏಸು ಕ್ರಿಸ್ತರ ತ್ಯಾಗವನ್ನು ಸ್ಮರಿಸಲಾಗುತ್ತದೆ. ಕ್ರೈಸ್ತ ಸಮುದಾಯದವರು ಈ ದಿನ ಚರ್ಚ್‌ಗಳಲ್ಲಿ ವಿಶೇಷ ಪಾರ್ಥನೆಯನ್ನು ಸಲ್ಲಿಸುತ್ತಾರೆ. ಈ ಬಾರಿ ಏಪ್ರಿಲ್ 18 ರಂದು ಗುಡ್ ಫ್ರೈಡೇ ಯನ್ನು ಆಚರಿಸಲಾಗುತ್ತಿದ್ದು, ಕ್ರೈಸ್ತರ ಈ ಪವಿತ್ರ ಹಬ್ಬದ ದಿನದಂದು ನಿಮ್ಮ ಆತ್ಮೀಯರಿಗೆ ಹೀಗೆ ಶುಭ ಸಂದೇಶಗಳನ್ನು (wishes) ಕಳುಹಿಸಿ.
ಕ್ರೈಸ್ತರ ಪವಿತ್ರ ಹಬ್ಬ ಗುಡ್ ಫ್ರೈಡೇ ದಿನ ನಿಮ್ಮ ಆತ್ಮೀಯರಿಗೆ ಹೀಗೆ ವಿಶ್ ಮಾಡಿ:
ಈ ಶುಭ ಶುಕ್ರವಾರ ನಿಮ್ಮ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ. ದೇವರ ಆಶೀರ್ವಾದದಿಂದ ನಿಮ್ಮೆಲ್ಲಾ ಕಷ್ಟಗಳು ತೊಂದರೆಗಳು ದೂರವಾಗಲಿ. ಗುಡ್ ಫ್ರೈಡೇಯ ಶುಭಾಶಯಗಳು.
ಏಸು ಕ್ರಿಸ್ತರ ಮಹಿಮೆ ಮತ್ತು ಆಶಿರ್ವಾದ ನಿಮ್ಮ ಜೀವನವನ್ನು ಉಜ್ವಲವಾಗಿ ಬೆಳಗಲಿ. ನಿಮಗೂ ನಿಮ್ಮ ಕುಟುಂಬಕ್ಕೂ ಗುಡ್ ಫ್ರೈಡೇಯ ಶುಭಾಶಯಗಳು.
ಭಗವಂತ ಏಸುವಿನ ಮೇಲೆ ನೀವು ಇಟ್ಟಿರುವ ನಂಬಿಕೆ, ಭಕ್ತಿ ಸದಾ ನಿಮಗೆ ಶಾಂತಿ ನೆಮ್ಮದಿ ಮತ್ತು ಆಯುರಾರೋಗ್ಯವನ್ನು ತರಲಿ. ನಿಮಗೂ ನಿಮ್ಮ ಕುಟುಂಬಕ್ಕೂ ಗುಡ್ ಫ್ರೈಡೇಯ ಶುಭಾಶಯಗಳು.
ಪ್ರೀತಿ ಮತ್ತು ತ್ಯಾಗದ ಮೂಲಕ ಮಾತ್ರ ನಾವು ಜೀವನದಲ್ಲಿ ನಿಜವಾದ ಶಾಂತಿ ಮತ್ತು ಸಂತೋಷವನ್ನು ಕಂಡುಕೊಳ್ಳಬಹುದು ಎಂಬ ಪಾಠವನ್ನು ಗುಡ್ ಫ್ರೈಡೇ ನಮಗೆಲ್ಲರಿಗೂ ಕಲಿಸುತ್ತದೆ. ಭಗವಂತನ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ.
ಇದನ್ನೂ ಓದಿ: ಮಾವು ಪ್ರಿಯರೇ… ನೀವು ತಪ್ಪದೇ ಹಳ್ಳಿ ಮನೆ ರೆಸ್ಟೋರೆಂಟ್ನ ಮ್ಯಾಂಗೋ ಮೇಳಕ್ಕೆ ವಿಸಿಟ್ ಮಾಡ್ಲೇಬೇಕು
ಶುಭ ಶುಕ್ರವಾರ ಕೇವಲ ಕೇವಲ ಏಸುವಿನ ತ್ಯಾಗವನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾದ ದಿನವಲ್ಲ, ಈ ತ್ಯಾಗ ಮತ್ತು ಪ್ರೀತಿಯ ಅರ್ಥವನ್ನು ನಮ್ಮ ಜೀವನದಲ್ಲಿ ಅಳವಡಿಸಬೇಕಾದ ದಿನವಾಗಿದೆ. ನಿಮಗೆ ಗುಡ್ ಫ್ರೈಡೇಯ ಶುಭಾಶಯಗಳು.
ಈ ಪವಿತ್ರ ಶುಭ ಶುಕ್ರವಾರದಂದು, ಯೇಸುವಿನ ಕೃಪೆಯು ನಿಮ್ಮ ಜೀವನವನ್ನು ಬೆಳಗಲಿ ಮತ್ತು ಪ್ರತಿ ಹೆಜ್ಜೆಯಲ್ಲೂ ನಿಮಗೆ ಯಶಸ್ಸನ್ನು ನೀಡಲಿ. ನಿಮಗೂ ನಿಮ್ಮ ಕುಟುಂಬಕ್ಕೂ ಗುಡ್ ಫ್ರೈಡೇಯ ಶುಭಾಶಯಗಳು.
ಈ ಶುಭ ಶುಕ್ರವಾರದ ಈ ಪವಿತ್ರ ಘಳಿಗೆಯಲ್ಲಿ, ಭಗವಂತನ ಕೃಪೆಯು ನಿಮ್ಮ ಜೀವನಕ್ಕೆ ಹೊಸ ಚೈತನ್ಯವನ್ನು ನೀಡಲಿ ಮತ್ತು ನಿಮ್ಮ ಕಷ್ಟ ಕಾರ್ಪಣ್ಯವನ್ನು ದೂರ ಮಾಡಿ ನಿಮ್ಮ ಬಾಳನ್ನು ಬೆಳಗಿಸಲಿ.
ಈ ಶುಭ ಶುಕ್ರವಾರ ನಿಮ್ಮ ಜೀವನದಲ್ಲಿ ಶಾಂತಿ ಮತ್ತು ಸಮೃದ್ಧಿಯನ್ನು ತರಲಿ. ಗುಡ್ ಫ್ರೈಡೇಯ ಹಾರ್ದಿಕ ಶುಭಾಶಯಗಳು.
ತ್ಯಾಗ, ಕ್ಷಮೆ, ಕರುಣೆ, ಮಾನವೀಯತೆಯ ಸಂಕೇತವಾಗಿರುವ ಗುಡ್ ಫ್ರೈಡೇ ದಿನದ ಶುಭಾಶಯಗಳು. ಏಸುವಿನ ಕೃಪೆ ಸದಾ ನಿಮ್ಮ ಮೇಲೆ ಇರಲಿ ಎಂದು ಪ್ರಾರ್ಥಿಸುತ್ತೇನೆ.
ಏಸು ಕ್ರಿಸ್ತರು ನಿಮ್ಮ ಮನದ ಎಲ್ಲಾ ಕೋರಿಕೆಗಳನ್ನು ನೆರವೇರಿಸಲಿ, ನಿಮ್ಮೆಲ್ಲರ ಮನೆ ಮನಗಳಲ್ಲಿ ಸಂತೋಷವನ್ನು ಕರುಣಿಸಲು ಎಂದು ಆಶಿಸುತ್ತೇನೆ. ಗುಡ್ ಫ್ರೈಡೇಯ ಶುಭಾಶಯಗಳು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:23 am, Fri, 18 April 25