
ನೇರಳೆ ಹಣ್ಣು ಮತ್ತು ಅದರ ಬೀಜಗಳಲ್ಲಿ ಇರುವ ಅಂಶಗಳು ಕೂದಲಿನ ಬೆಳವಣಿಗೆಯನ್ನು ಸುಧಾರಿಸುತ್ತದೆ. ಇದಲ್ಲದೆ, ಕೂದಲಿಗೆ ಹೊಳಪು ಕೂಡ ನೀಡುತ್ತದೆ. ಆದ್ದರಿಂದ ಕೂದಲ ಪೋಷಣೆಯಲ್ಲಿ ನೇರಳೆ ಹಣ್ಣಿನ ಬೀಜ ಹೇಗೆ ಬಳಸಬಹುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಅಲ್ಲದೆ, ನೇರಳೆ ಹಣ್ಣು ತಿನ್ನುವುದರಿಂದ ಚರ್ಮಕ್ಕೂ ತುಂಬಾ ಒಳ್ಳೆಯದು. ನೇರಳೆಹಣ್ಣು ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಇದಲ್ಲದೇ ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ಮೊಡವೆಗಳ ಸಮಸ್ಯೆ ಇರುವುದಿಲ್ಲ.

ನಿಮ್ಮ ಕೂದಲು ಒಣ ಅಥವಾ ಎಣ್ಣೆಯುಕ್ತವಾಗಿದ್ದರೆ, ನೇರಳೆ ಹಣ್ಣಿನ ಬೀಜದ ಮನೆಮದ್ದುಗಳು ನಿಮಗೆ ಉತ್ತಮವೆಂದು ಎಂದು ತಜ್ಞರು ಹೇಳುತ್ತಾರೆ. ಈ ಮೂಲಕ ಚಳಿಗಾಲದಲ್ಲೂ ಹೊಳೆಯುವ ಆರೋಗ್ಯಕರ ಕೂದಲನ್ನು ಪಡೆಯಬಹುದು.

ಇದಲ್ಲದೇ ಪುಡಿ ಮಾಡಿದ ನೇರಳೆ ಹಣ್ಣಿನ ಬೀಜಗಳಿಗೆ ಜೇನುತುಪ್ಪ, ಮೊಸರು ಅಥವಾ ಗೋರಂಟಿ ಪುಡಿಯನ್ನು ಸೇರಿಸಿ ಪೇಸ್ಟ್ ತಯಾರಿಸಿ ಕೂದಲಿಗೆ ಹೇರ್ ಮಾಸ್ಕ್ ರೀತಿಯಲ್ಲಿ ಬಳಸಬಹುದಾಗಿದೆ.

ನೀವು ನೇರಳೆ ಹಣ್ಣಿನ ಬೀಜಗಳನ್ನು ಎರಡು ರೀತಿಯಲ್ಲಿ ಬಳಸಬಹುದು. ಮೊದಲ ವಿಧಾನದಲ್ಲಿ, ಬೀಜಗಳನ್ನು ಬಿಸಿಲಿನಲ್ಲಿ ಒಣಗಿಸಿ ಮತ್ತು ಪುಡಿಯನ್ನು ತಯಾರಿಸಿ ಕೂದಲಿಗೆ ಹಚ್ಚಬೇಕು. ಈ ವಿಧಾನವನ್ನು ಪ್ರಯತ್ನಿಸುವುದರಿಂದ, ಹೆಚ್ಚುವರಿ ಎಣ್ಣೆಯು ಕೂದಲಿನಲ್ಲಿ ಸಂಗ್ರಹವಾಗುವುದಿಲ್ಲ.

ಹೊಟ್ಟೆಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ನೇರಳೆ ಬೀಜಗಳನ್ನು ಬಳಸಬಹುದು. ನೇರಳೆ ಬೀಜಗಳಲ್ಲಿರುವ ಫೈಬರ್ ಅಂಶವು ಜೀರ್ಣಾಂಗ ವ್ಯವಸ್ಥೆಯ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.