ಸಾಂದರ್ಭಿಕ ಚಿತ್ರ
ಇತ್ತೀಚಿನ ದಿನಗಳಲ್ಲಿ ತೆಂಗಿನ ಚಿಪ್ಪಿನಿಂದ ಬೌಲ್, ಸೌಟು ಸೇರಿದಂತೆ ಅಲಂಕಾರಿಕ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತದೆ. ಈ ತೆಂಗಿನ ಚಿಪ್ಪನ್ನು ಉರುವಲು ಆಗಿ ಬಳಸಲಾಗುತ್ತದೆ. ಹೀಗೆ ಹತ್ತಾರು ಉಪಯೋಗ ಹೊಂದಿರುವ ತೆಂಗಿನ ಚಿಪ್ಪು ಸುಟ್ಟ ನಂತರವು ಪ್ರಯೋಜನವನ್ನು ಹೊಂದಿದೆ. ಈ ತೆಂಗಿನ ಚಿಪ್ಪಿನ ಇದ್ದಿಲ ಪುಡಿಯನ್ನು ತ್ವಚೆ ಹಾಗೂ ಕೂದಲಿನ ಆರೈಕೆಗ ಬಳಸಬಹುದು. ಈ ರೀತಿ ತೆಂಗಿನ ಚಿಪ್ಪಿನ ಇದ್ದಿಲು ಪುಡಿಯನ್ನು ಬಳಸಿದ್ರೆ ಕೂದಲು ಸೊಂಪಾಗಿ ಬೆಳೆಯುತ್ತದೆ.
- ನೈಸರ್ಗಿಕ ಶಾಂಪೂ : ಮಾರುಕಟ್ಟೆಯಲ್ಲಿ ಸಿಗುವ ಶಾಂಪೂ ಬಳಸುವವರೇ ಹೆಚ್ಚಾಗಿದ್ದಾರೆ. ರಾಸಾಯನಿಕಯುಕ್ತ ಶಾಂಪೂ ಬಳಸುವ ಬದಲು ತೆಂಗಿನ ಚಿಪ್ಪಿನ ಬೂದಿಯನ್ನು ಶಾಂಪೂವಾಗಿ ಬಳಸಬಹುದು. ನೀವು ಬಳಸುವ ಶಾಂಪೂಗೆ ತೆಂಗಿನ ಚಿಪ್ಪಿ ಬೂದಿ ಬೆರೆಸಿ ಚೆನ್ನಾಗಿ ಚೆನ್ನಾಗಿ ಕಲಸಿಕೊಳ್ಳಿ. ಇದನ್ನು ಶಾಂಪೂವಾಗಿ ಬಳಸುವುದರಿಂದ ಕೂದಲನ್ನು ಸ್ವಚ್ಛಗೊಳಿಸುವುದಲ್ಲದೆ, ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
- ತೆಂಗಿನ ಚಿಪ್ಪಿನ ಇದ್ದಿಲು ಪುಡಿ ಸ್ಕ್ರಬ್ : ಅತ್ಯುತ್ತಮ ಸ್ಕ್ರಬ್ ಇದಾಗಿದ್ದು, ನೆತ್ತಿಯನ್ನು ಸ್ವಚ್ಛಗೊಳಿಸುತ್ತದೆ. ಎರಡು ಚಮಚ ತೆಂಗಿನ ಚಿಪ್ಪಿನ ಬೂದಿಯನ್ನು ತೆಂಗಿನ ಎಣ್ಣೆಯೊಂದಿಗೆ ಬೆರೆಸಿಕೊಳ್ಳಿ. ಈ ಮಿಶ್ರಣದಿಂದ ನೆತ್ತಿಯನ್ನು ನಿಧಾನವಾಗಿ ಸ್ಕ್ರಬ್ ಮಾಡಿ. ಹೀಗೆ ಮಾಡಿದ್ರೆ ಕೂದಲಿನ ಮೇಲಿನ ಕಲ್ಮಶಗಳನ್ನು ತೆಗೆದುಹಾಕುತ್ತದೆ. ನೆತ್ತಿಯ ಹೆಚ್ಚುವರಿ ಎಣ್ಣೆಯನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.
- ಹೇರ್ ಮಾಸ್ಕ್ : ತೆಂಗಿನ ಕಾಯಿ ಚಿಪ್ಪಿನ ಬೂದಿಯಿಂದ ಹೇರ್ ಮಾಸ್ಕ್ ತಯಾರಿಸಿ ಕೂದಲಿಗೆ ಹಚ್ಚುವುದು ಪರಿಣಾಮಕಾರಿಯಾಗಿದೆ. ಒಂದು ಕಪ್ ನೀರಿಗೆ ಅರ್ಧ ಚಮಚ ಅಡುಗೆ ಸೋಡಾ, ಅರ್ಧ ಚಮಚ ತೆಂಗಿನ ಚಿಪ್ಪಿನ ಬೂದಿಯನ್ನು ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ತಲೆಗೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಿ, ಸ್ವಲ್ಪ ಸಮಯ ಬಿಟ್ಟು ಸ್ನಾನ ಮಾಡಿ. ಈ ನೈಸರ್ಗಿಕ ಹೇರ್ ಮಾಸ್ಕ್ ಹಾನಿಗೊಳಗಾದ ಕೂದಲನ್ನು ಸರಿಪಡಿಸುತ್ತದೆ. ತಲೆ ಹೊಟ್ಟು ಹಾಗೂ ಕೂದಲು ಉದುರುವ ಸಮಸ್ಯೆ ನಿವಾರಿಸಿ, ಆರೋಗ್ಯಕರ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ