Hair Cut Tips: ಹೇರ್ ಕಟ್ ಮಾಡಿಸಬೇಕಾ?; ಜ್ಯೋತಿಷ್ಯದ ಪ್ರಕಾರ ಕೂದಲು ಕತ್ತರಿಸಲು ಸೂಕ್ತ ಸಮಯ ಯಾವುದು?

| Updated By: ಸುಷ್ಮಾ ಚಕ್ರೆ

Updated on: May 26, 2022 | 8:23 PM

ಕೂದಲು ಕಟ್ ಮಾಡುವುದರಿಂದ ನಮ್ಮ ದೇಹದಲ್ಲಿರುವ ನೆಗೆಟಿವ್ ಎನರ್ಜಿ ದೂರವಾಗುತ್ತದೆ. ಅಮಾವಾಸ್ಯೆಯ ಸಮಯದ, 9, 15 ಮತ್ತು 23ನೇ ದಿನಗಳು ನಿಮ್ಮ ಕೂದಲನ್ನು ಕತ್ತರಿಸುವುದು ಒಳ್ಳೆಯದಲ್ಲ. ಅಲ್ಲದೆ, ಗ್ರಹಣ ದಿನಗಳಂದು ಹೇರ್ ಕಟ್ ಮಾಡುವುದು ಒಳ್ಳೆಯದಲ್ಲ.

Hair Cut Tips: ಹೇರ್ ಕಟ್ ಮಾಡಿಸಬೇಕಾ?; ಜ್ಯೋತಿಷ್ಯದ ಪ್ರಕಾರ ಕೂದಲು ಕತ್ತರಿಸಲು ಸೂಕ್ತ ಸಮಯ ಯಾವುದು?
ಹೇರ್ ಕಟ್
Image Credit source: India.com
Follow us on

ಹಳ್ಳಿಗಳಲ್ಲಿ ಈಗಲೂ ಕ್ಷೌರ (Hair Cut) ಮಾಡಲು ದಿನ ನೋಡುತ್ತಾರೆ. ಮಂಗಳವಾರ ಮತ್ತು ತಾವು ಹುಟ್ಟಿದ ದಿನ ಬಹುತೇಕರು ಹೇರ್​ ಕಟ್ ಮಾಡಿಸುವುದಿಲ್ಲ. ಇದೆಲ್ಲ ವಿಚಿತ್ರವಾಗಿ ಕಂಡರೂ ಇದರ ಹಿಂದೆ ಅವರದ್ದೇ ಆದ ನಂಬಿಕೆಗಳು ಇವೆ. ಕ್ಷೌರ ಮಾಡುವಾಗ ದಿನವನ್ನು ನೋಡಬೇಕು ಎಂಬುದು ಸತ್ಯ. ಜ್ಯೋತಿಷ್ಯದ (Astrology) ಪ್ರಕಾರ ಯಾವ ಸಮಯದಲ್ಲಿ ಕೂದಲು ಕಟ್ ಮಾಡಬೇಕು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಈ ಬಗ್ಗೆ ಮೈಪಂಡಿಟ್ ಸಂಸ್ಥಾಪಕ ಮತ್ತು ಸಿಇಒ ಕಲ್ಪೇಶ್ ಶಾ ವಿವರಿಸಿದ್ದು, ಚಂದ್ರನ ಹಂತಗಳು ಮತ್ತು ಕೂದಲಿನ ಆರೋಗ್ಯದ ಪರಸ್ಪರ ಸಂಬಂಧಗಳ ದೀರ್ಘಾವಧಿಯ ಅಧ್ಯಯನವು ನಿಮ್ಮ ಕೇಶವಿನ್ಯಾಸವನ್ನು ವಿನ್ಯಾಸಗೊಳಿಸಲು ಉತ್ತಮ ಸಮಯ ಹುಣ್ಣಿಮೆ ಎಂದು ಸೂಚಿಸುತ್ತದೆ. ಏಕೆಂದರೆ ಹುಣ್ಣಿಮೆ ಬಹಳ ಶಕ್ತಿಯಿಂದ ತುಂಬಿದ ಸಮಯ ಎಂದು ನಂಬಲಾಗಿದೆ.

ಕೂದಲನ್ನು ಕತ್ತರಿಸುವುದು ದೇಹದಿಂದ ತ್ಯಾಜ್ಯ ಅಥವಾ ಋಣಾತ್ಮಕ ಶಕ್ತಿಯನ್ನು ತೊಡೆದುಹಾಕುವ ಒಂದು ಮಾರ್ಗವಾಗಿದೆ. ಇಲ್ಲಿ ವೈದಿಕ ಜ್ಯೋತಿಷ್ಯ ಮತ್ತು ಚಂದ್ರನ ಹಂತಗಳಿಗೆ ಸಂಬಂಧಿಸಿದ ಕೆಲವು ಪ್ರಮುಖ ದಿನಗಳನ್ನು ನಾವು ಚರ್ಚಿಸುತ್ತೇವೆ. ಆ ದಿನ ಜನರು ತಮ್ಮ ಕೂದಲನ್ನು ಕತ್ತರಿಸಬಹುದೆಂದು ಸೂಚಿಸಲಾಗಿದೆ. ಕೂದಲು ಕಟ್ ಮಾಡುವುದರಿಂದ ನಮ್ಮ ದೇಹದಲ್ಲಿರುವ ನೆಗೆಟಿವ್ ಎನರ್ಜಿ ದೂರವಾಗುತ್ತದೆ.

ಇದನ್ನೂ ಓದಿ: Hair Fall: ಕೂದಲು ಉದುರುವ ಸಮಸ್ಯೆಯನ್ನು ಹೋಗಲಾಡಿಸುವುದು ಹೇಗೆ?

ನೀವೇನಾದರೂ ನಿಮ್ಮ ಕೂದಲು ಸೊಂಪಾಗಿ ಬೆಳೆಯಬೇಕು, ವೇಗವಾಗಿ ಬೆಳೆಯಬೇಕು, ಕೂದಲಿನ ಬುಡ ಸದೃಢವಾಗಿರಬೇಕು ಎಂದು ಬಯಸಿದ್ದರೆ ಅವರು ವ್ಯಾಕ್ಸಿಂಗ್ ಕ್ರೆಸೆಂಟ್ (ಹುಣ್ಣಿಮೆಯ ಚಕ್ರದ ಕೊನೆಯ ಏಳು ದಿನಗಳು) ಸಮಯದಲ್ಲಿ ಕೂದಲನ್ನು ಕತ್ತರಿಸಬೇಕು. ಆದರೆ, ಕೂದಲು ನಿಧಾನವಾಗಿ ಬೆಳವಣಿಗೆಯಾಗಬೇಕು ಆದರೆ ಬಲವಾದ ಬೇರುಗಳಿರಬೇಕು ಎಂದು ಬಯಸಿದರೆ ಅಮಾವಾಸ್ಯೆಯ ಸಮಯದ ಕೊನೆಯ ಐದು ದಿನಗಳು ಕೂದಲನ್ನು ಕತ್ತರಿಸಬೇಕು. (Source)

ಆದರೆ, ಅಮಾವಾಸ್ಯೆಯ ಸಮಯದ, 9, 15 ಮತ್ತು 23ನೇ ದಿನಗಳು ನಿಮ್ಮ ಕೂದಲನ್ನು ಕತ್ತರಿಸುವುದು ಒಳ್ಳೆಯದಲ್ಲ. ಅಲ್ಲದೆ, ಗ್ರಹಣ ದಿನಗಳಂದು ಹೇರ್ ಕಟ್ ಮಾಡುವುದು ಒಳ್ಳೆಯದಲ್ಲ. ರಾಶಿ ಚಕ್ರದ ಚಿಹ್ನೆಗಳಿಗೆ ಸಂಬಂಧಿಸಿದಂತೆ ಚಂದ್ರನ ಸ್ಥಾನ ಮತ್ತು ಕೂದಲಿನ ಕತ್ತರಿಸುವುದು ಮುಖ್ಯವಾಗಿದೆ. ಚಂದ್ರ ಮೇಷ ರಾಶಿಯಲ್ಲಿದ್ದಾಗ ಕೂದಲು ಕತ್ತರಿಸುವುದನ್ನು ತಪ್ಪಿಸಬೇಕು. ಏಕೆಂದರೆ ಅದು ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ ಮತ್ತು ರೋಗಗಳು ಹೆಚ್ಚಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಕೂದಲು ಸೀಳುವುದು ಮತ್ತು ಉದುರುವುದನ್ನು ಕಡಿಮೆ ಮಾಡಲು ನೀವು ಬಯಸಿದರೆ, ಚಂದ್ರ ವೃಷಭ, ಮಕರ ಅಥವಾ ಕನ್ಯಾರಾಶಿಯಲ್ಲಿ ಇದ್ದಾಗ ಹೇರ್ ಮಾಡುವುದು ಉತ್ತಮ. ಚಂದ್ರನು ಮಿಥುನ ಅಥವಾ ತುಲಾ ರಾಶಿಯಲ್ಲಿದ್ದಾಗ ಕೂದಲನ್ನು ಗುಂಗುರಾಗಿ (ಕರ್ಲಿ) ಮಾಡಲು ಅನುಕೂಲಕರ ಸಮಯವೆಂದು ಪರಿಗಣಿಸಬಹುದು. ಚಂದ್ರನು ಕುಂಭ ರಾಶಿಯಲ್ಲಿದ್ದಾಗ ಹೇರ್ ಕಟ್ ಮಾಡಲು ಉತ್ತಮ ಸಮಯ. ಸಿಂಹ ರಾಶಿಯ ಚಂದ್ರನು ಕೂದಲಿಗೆ ಬಣ್ಣ ಹಾಕಲು ಮತ್ತು ಅಲಂಕಾರಕ್ಕೆ ಒಳ್ಳೆಯದು. ಆದರೆ, ಧನು ರಾಶಿ ಚಂದ್ರನು ಹೇರ್ಕಟ್ ಸೇರಿದಂತೆ ಕೂದಲಿನೊಂದಿಗೆ ಯಾವುದೇ ಪ್ರಯೋಗಗಳನ್ನು ಮಾಡಲು ಅನುಕೂಲಕರವಾಗಿಲ್ಲ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:19 pm, Thu, 26 May 22