Hair Tips: ತಲೆ ಸ್ನಾನ ಮಾಡುವಾಗ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ
ತಲೆಗೆ ಸ್ನಾನ ಮಾಡುವಾಗ ಕೆಲ ಸೂಕ್ಷ್ಮತೆಗಳ ಬಗ್ಗೆ ತಿಳಿದುಕೊಳ್ಳಬೇಕು. ತಿಳಿಸಿದ ಸೂಕ್ಷ್ಮತೆಗಳ ಬಗ್ಗೆ ಗಮನ ಹರಿಸಿದರೆ ಕೂದಲಿನ ಸಮಸ್ಯೆಗಳನ್ನು ದೂರವಾಗಿಸಬಹುದು.
ಕೂದಲು ಸೌಂದರ್ಯವನ್ನು ಹೆಚ್ಚಿಸುತ್ತದೆ. ಉದ್ದವಾದ, ದಪ್ಪ ಕೂದಲು ಪಡೆಯಲು ಹೆಣ್ಣು ಮಕ್ಕಳು ಪಡುವ ಪರದಾಟ ಅಷ್ಟಿಷ್ಟಲ್ಲ. ಶಾಂಪೂ, ಕಂಡೀಷನರ್, ಎಣ್ಣೆಗಳನೆಲ್ಲ ಬಳಸುತ್ತಾರೆ. ವಾರಕ್ಕೆ ಎರಡರಿಂದ ಮೂರು ಬಾರಿ ತಲೆಗೆ ಎಣ್ಣೆ ಹಾಕಿ ಸ್ನಾನ ಮಾಡುತ್ತಾರೆ. ಆದರೆ ತಲೆ ಸ್ನಾನ ಮಾಡುವಾಗ ಜೊತೆಗೆ ಕೆಲ ತಪ್ಪುಗಳನ್ನೂ ಮಾಡುತ್ತಾರೆ. ತಲೆಗೆ ಸ್ನಾನ ಮಾಡುವಾಗ ಕೆಲ ಸೂಕ್ಷ್ಮತೆಗಳ ಬಗ್ಗೆ ತಿಳಿದುಕೊಳ್ಳಬೇಕು. ಈ ಕೆಳಗೆ ತಿಳಿಸಿದ ಸೂಕ್ಷ್ಮತೆಗಳ ಬಗ್ಗೆ ಗಮನ ಹರಿಸಿದರೆ ಕೂದಲಿನ ಸಮಸ್ಯೆಗಳನ್ನು ದೂರವಾಗಿಸಬಹುದು.
* ತಣ್ಣೀರಿನಲ್ಲಿ ಕೂದಲು ತೊಳೆಯಿರಿ ಕೂದಲನ್ನು ಬಿಸಿ ನೀರಿನಿಂದ ತೊಳೆಯುವುದು ಅಷ್ಟು ಸೂಕ್ತವಲ್ಲ. ತಲೆ ಸ್ನಾನ ಮಾಡುವಾಗ ಬಿಸಿ ನೀರು ಬಳಸಿದರೆ ಕೂದಲಿನ ಬುಡದಲ್ಲಿರುವ ಎಣ್ಣೆಯ ಅಂಶ ಸಂಪೂರ್ಣವಾಗಿ ಹೋಗುವುದು. ಹೀಗಾಗಿ ಬಿಸಿ ನೀರಿನ ಬದಲಿಗೆ ತಣ್ಣೀರನ್ನು ಬಳಸಿ. ತಣ್ಣಗೆ ಇರುವ ನೀರಿನಲ್ಲಿ ಸ್ನಾನ ಮಾಡಿದರೆ ಕೂದಲು ಉದುರುವುದು ಕಡಿಮೆಯಾಗುತ್ತದೆ.
* ಪ್ರತಿ ದಿನ ತಲೆ ಸ್ನಾನ ಮಾಡದಿರಿ ಕೆಲವರಿಗೆ ಪ್ರತಿ ದಿನ ತಲೆ ಸ್ನಾನ ಮಾಡುವ ಅಭ್ಯಾಸವಿರುತ್ತದೆ. ಆದರೆ ಇದು ಒಳ್ಳೆಯ ಅಭ್ಯಾಸವಲ್ಲ. ಪ್ರತಿ ದಿನ ತಲೆ ಸ್ನಾನ ಮಾಡುವುದರಿಂದ ಕೂದಲು ಆರೋಗ್ಯವಾಗಿರುತ್ತದೆ ಎಂದು ಹೇಳುತ್ತಾರೆ. ಇದು ಸತ್ಯಕ್ಕೆ ದೂರವಾದ ಮಾತು. ಪ್ರತಿ ದಿನ ಸ್ನಾನ ಮಾಡುವುದರಿಂದ ತಲೆಯಲ್ಲಿರುವ ಎಣ್ಣೆಯ ಅಂಶ ಸಂಪೂರ್ಣವಾಗಿ ನೀರಿನಲ್ಲಿ ತೊಳೆದು ಹೋಗುತ್ತದೆ. ಹೀಗಾಗಿ ವಾರಕ್ಕೆ ಎರಡು ಅಥವಾ ಮೂರು ಬಾರಿ ತಲೆ ಸ್ನಾನ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಿ.
* ನೆತ್ತಿಗೆ ಕಂಡೀಷನರ್ ಹಾಕಬೇಡಿ ಕಂಡೀಷನರ್ ಬಳಸುವಾಗ ಹೆಚ್ಚು ಜಾಗೃತರಾಗಿರಬೇಕು. ಕೇವಲ ಕೂದಲಿಗೆ ಮಾತ್ರ ಕಂಡೀಷನರ್ ಹಾಕಬೇಕು. ತಲೆಯ ನೆತ್ತಿಗೆ ಕಂಡೀಷನರ್ ಹಾಕಿದರೆ ಕೂದಲು ಉದುರುತ್ತದೆ. ಜೊತೆಗೆ ನೆತ್ತಿಯ ರಂಧ್ರಗಳನ್ನ ಮುಚ್ಚುತ್ತದೆ. ಹೀಗಾಗಿ ಕಂಡೀಷನರ್ ಬಳಕೆ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಬೇಕು. ತಲೆ ಸ್ನಾನ ಮಾಡಿದ ನಂತರ ಸ್ನಾನ ಗೃಹದಲ್ಲಿ ಇದ್ದಾಗಲೇ ಕೂದಲಿಗೆ ಮಾತ್ರ ಕಂಡೀಷನರ್ ಹಚ್ಚಿ. ಸುಮಾರು 6ರಿಂದ 7 ನಿಮಿಷದ ಬಳಿಕ ತಣ್ಣೀರಿನಿಂದ ಕೂದಲನ್ನು ತೊಳೆಯಿರಿ.
* ನೇರವಾಗಿ ಶಾಂಪೂ ಹಾಕಬೇಡಿ ನೇರವಾಗಿ ತಲೆ ಸ್ನಾನ ಮಾಡುವಾಗ ನೆತ್ತಿಗೆ ಶಾಂಪೂ ಹಾಕುತ್ತಾರೆ. ಆದರೆ ಇದು ಸೂಕ್ತವಾದುದಲ್ಲ. ಶಾಂಪೂನ ನೇರವಾಗಿ ತಲೆಗೆ ಹಾಕುವ ಬದಲು ಕೈಯಲ್ಲಿ ನೀರಿನೊಂದಿಗೆ ಸೇರಿಸಿ ನೊರೆ ಮಾಡಿಕೊಳ್ಳಿ. ಆ ಬಳಿಕ ಕೂದಲಿಗೆ ಹಾಕಿ ತೊಳೆಯಿರಿ. ಹೀಗೆ ಮಾಡುವುದರಿಂದ ಕೂದಲು ಸ್ವಚ್ಛವಾಗುತ್ತದೆ. ಶಾಂಪೂ ಹಚ್ಚಿದ ನಂತರ ಚೆನ್ನಾಗಿ ತೊಳೆಯಬೇಕು. ತಲೆಯ ಬುಡದಲ್ಲಿ ಶಾಂಪೂ ಉಳಿದುಕೊಂಡರೆ ಹೊಟ್ಟಾಗುತ್ತದೆ. ಜೊತೆಗೆ ಕೂದಲು ಉದುರುತ್ತದೆ.
ಇದನ್ನೂ ಓದಿ
Vastu Tips: ಧನ ಲಕ್ಷ್ಮೀ ಖುಲಾಯಿಸಬೇಕು ಅಂದರೆ ಮನೆಯಲ್ಲಿ ತಿಜೋರಿ ಇಡುವುದು ಎಲ್ಲಿ ಎಂಬುದನ್ನು ತಿಳಿದುಕೊಳ್ಳೀ
Health Tips: ಮೂಳೆ ಮತ್ತು ಕೀಲು ನೋವಿನ ಸಮಸ್ಯೆ ಇದೆಯೇ? ಈ ಆಹಾರ ಪದ್ಧತಿಯನ್ನು ಅನುಸರಿಸಿ
(Hair Tips four Tricks for head bath)