ಜರ್ಮನಿಯ ಈ ನಗರವನ್ನು ಸೇತುವೆಗಳ ನಗರ ಎಂದು ಕೆರಯುತ್ತಾರೆ; ಏಕೆ ಗೊತ್ತಾ?

ಜರ್ಮನಿಯ ಹ್ಯಾಂಬರ್ಗ್​​ ಜಗತ್ತಿನಲ್ಲೇ ಅತಿ ಹೆಚ್ಚು ಸೇತುವೆಗಳನ್ನು ಹೊಂದಿರುವ ನಗರವಾಗಿದೆ.

ಜರ್ಮನಿಯ ಈ ನಗರವನ್ನು ಸೇತುವೆಗಳ ನಗರ ಎಂದು ಕೆರಯುತ್ತಾರೆ; ಏಕೆ ಗೊತ್ತಾ?
ಹ್ಯಾಂಬರ್ಗ್ ಸೇತುವೆ
Follow us
TV9 Web
| Updated By: ವಿವೇಕ ಬಿರಾದಾರ

Updated on:Oct 09, 2022 | 10:26 PM

ಹ್ಯಾಂಬರ್ಗ್ ಜರ್ಮನಿಯ ಎರಡನೇ ಅತಿದೊಡ್ಡ ನಗರವಾಗಿದೆ. ಜರ್ಮನಿ ದೇಶದ ಅತ್ಯಂತ ಸುಂದರವಾದ ನಗರಗಳಲ್ಲಿ ಒಂದಾಗಿದೆ. ಈ ನಗರ ದ್ವೀಪದಂತಿದ್ದು ಎಲ್ಲ ಕಡೆ ನೀರಿನಿಂದ ಆವೃತವಾಗಿದೆ. ಹ್ಯಾಂಬರ್ಗ್ ನಗರ ಪ್ರಪಂಚದಲ್ಲೇ ಅತಿ ಹೆಚ್ಚು ಸೇತುವೆಗಳನ್ನು ಹೊಂದಿರುವ ನಗರವಾಗಿದೆ. ಆಮ್ಸ್ಟರ್‌ಡ್​ಮ್​ (Amsterdam) ಮತ್ತು ವೆನಿಸ್‌ಗಿಂತ (Venice) ಕಿಂತ ಹೆಚ್ಚು ಸೇತುವೆಗಳು ಇಲ್ಲಿವೆ.

ಹ್ಯಾಂಬರ್ಗ್​ನಲ್ಲಿ ವಿಶ್ವ-ಪ್ರಸಿದ್ಧ ರೆಡ್ ಲೈಟ್ ಡಿಸ್ಟ್ರಿಕ್ಟ್, ಆಧುನಿಕ ಪಬ್‌ಗಳು ಮತ್ತು ನೈಟ್‌ಕ್ಲಬ್‌ಗಳು ಸೇರಿದಂತೆ ರಮಣೀಯ ಸ್ಥಳಗಳು, ಐತಿಹಾಸಿಕ ಸ್ಮಾರಕಗಳು ಮತ್ತು ವಿಶಿಷ್ಟವಾದ ಜನಪ್ರಿಯ ಪ್ರವಾಸಿ ತಾಣಗಳಿವೆ. ಇವು ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಕರೆಯುತ್ತವೆ.

ಜರ್ಮನಿಯ ಅಂಟಾರ್ಟಿಕ ಸಾಗರದ ಉತ್ತರ ಸಮುದ್ರದಿಂದ ಸುಮಾರು 100 ಕಿಮೀ ದೂರದಲ್ಲಿ ಎಲ್ಬೆ ನದಿ ತೀರದಲ್ಲಿದೆ ಹ್ಯಾಂಬರ್ಗ್. ಹ್ಯಾಂಬರ್ಗ್ ಪ್ರಮುಖ ಬಂದರು ನಗರವಾಗಿದೆ. ಇದು ಜರ್ಮನಿಯ ಅತಿದೊಡ್ಡ ಬಂದರಾಗಿದೆ.

ಸೇತುವೆಗಳು

  1. ಕೊಹ್ಲ್ಬ್ರಾಂಡ್ಬ್ರೂಕೆ ಸೇತುವೆ ಕೊಹ್ಲ್ಬ್ರಾಂಡ್ಬ್ರೂಕೆ ಸೇತುವೆಯನ್ನು 1974 ರಲ್ಲಿ ನಿರ್ಮಿಸಲಾಯಿತು. ಇದು ಹ್ಯಾಂಬರ್ಗ್‌ನ ಪ್ರಮುಖ ಹೆಗ್ಗುರುತುಗಳಲ್ಲಿ ಒಂದಾಗಿದೆ. ಇದು 3940 ಮೀ ಉದ್ದವಿದೆ. ಈ ಸೇತುವೆಯನ್ನು ಕಬ್ಬಿಣದ ಕೇಬಲ್​ನಿಂದ ತಾಯಾರಿಸಲಾಗಿದೆ. 1974 ರಿಂದ 1991 ರವರೆಗೆ, ಇದು ವಿಶ್ವದ ಅತಿ ಉದ್ದದ ಕೇಬಲ್ ಸೇತುವೆಯಾಗಿತ್ತು. ಇದು ಜರ್ಮನಿಯ ಎರಡನೇ ಅತಿ ಉದ್ದದ ಸೇತುವೆಯಾಗಿದೆ.
  2. ಹ್ಯಾಂಬರ್ಗ್ ಎಲ್ಬ್ರುಕೆನ್ ಸೇತುವೆ ಹ್ಯಾಂಬರ್ಗ್ ಎಲ್ಬ್ಬ್ರೂಕೆನ್ ಸೇತುವೆಯನ್ನು ಎಲ್ಬೆ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಎಲ್ಬೆ ನದಿಗೆ ಎರಡು ಉಪನದಿಗಳಿದ್ದು, ಉತ್ತರ ಎಲ್ಬೆ ಮತ್ತು ಸುಡೆರೆಲ್ಬೆ.
  3. ಹಾರ್ಬರ್ಗರ್ ಎಲ್ಬ್ಬ್ರೂಕೆ ಸೇತುವೆ ಹಳೆಯ ಹಾರ್ಬರ್ಗರ್ ಎಲ್ಬೆ ಸೇತುವೆಯನ್ನು 1899 ರಲ್ಲಿ ನಿರ್ಮಿಸಲಾಯಿತು. 474 ಮೀ ಉದ್ದದ ಉಕ್ಕಿನ ಕಮಾನು ಸೇತುವೆಯಾಗಿದೆ. ಈ ಸೇತುವೆಯನ್ನು ವಾಹನಗಳು ಸಂಚರಿಸಲು ನಿರ್ಮಿಸಲಾಗಿದೆ. ಇದು ಸುಡೆರೆಲ್ಬೆ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಮೊದಲ ಸೇತುವೆಯಾಗಿದೆ. ಆದರೆ ಈ ಸೇತುವೆ ಮೇಲೆ ಈಗ ನಡೆದುಕೊಂಡು ಮತ್ತು ಸೈಕಲ್​ನಲ್ಲಿ ಮಾತ್ರ ಸಂಚರಿಸಬಹುದಾಗಿದೆ. 1980 ಮತ್ತು 1995 ರ ನಡುವೆ ಸೇತುವೆಗೆ ಆಮೂಲಾಗ್ರವಾಗಿ ದುರಸ್ತಿ ಕಾರ್ಯ ಕೈಗೊಳ್ಳಲಾಯಿತು.
  4. ಕಾಟ್ವಿಕ್-ಬ್ರೂಕ್ ಸೇತುವೆ ಕಾಟ್ವಿಕ್-ಬ್ರೂಕ್ ಸೇತುವೆಯನ್ನು ಸುಡೆರೆಲ್ಬೆ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಕಟ್ವಿಕ್ ಸೇತುವೆಯು 290 ಮೀ ಉದ್ದದ ಲಂಬವಾದ ಲಿಫ್ಟ್ ಸೇತುವೆಯಾಗಿದ್ದು, ರೈಲು ಮತ್ತು ರಸ್ತೆ ಸಾರಿಗೆಗಾಗಿ 70 ಮೀ ಎತ್ತರದ ಪೋರ್ಟಲ್‌ಗಳನ್ನು ಹೊಂದಿದೆ. ಇದು ಎಲ್ಬೆ ಐಲ್ಯಾಂಡ್, ವಿಲ್ಹೆಮ್ಸ್‌ಬರ್ಗ್, ಮೂರ್‌ಬರ್ಗ್​​ನ್ನು ಸಂಪರ್ಕಿಸುತ್ತದೆ. ಇದನ್ನು 21 ಮಾರ್ಚ್, 1973 ರಂದು ಉದ್ಘಾಟಿಸಲಾಯಿತು. 46 ಮೀ ಎತ್ತರದ ವಿಶ್ವದ ಅತಿದೊಡ್ಡ ಲಂಬವಾದ ಲಿಫ್ಟ್ ಸೇತುವೆಯಾಗಿದೆ. ಸೇತುವೆಯ ವಿಶೇಷವೆಂದರೆ ಸೇತುವೆಯ ಮೇಲಿನ ಹಳಿಗಳು ರಸ್ತೆಯ ಕ್ಯಾರೇಜ್‌ವೇ ಮಧ್ಯದಲ್ಲಿವೆ. ಕಾಟ್ವಿಕ್ ಸೇತುವೆಯನ್ನು ರೈಲು ಮತ್ತು ರಸ್ತೆ ಸಾರಿಗೆಗಾಗಿ ಬಳಸುವುದರಿಂದ, ಸರಕು ಸಾಗಣೆ ರೈಲು ಹಾದುಹೋಗುವಾಗ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.
  5. ಬ್ರೂಕ್ಸ್ಬ್ರೂಕ್ ಸೇತುವೆ ಬ್ರೂಕ್ಸ್ಬ್ರೂಕ್ ಸೇತುವೆಯನ್ನು 1887 ಉದ್ಘಾಟಿಸಲಾಯಿತು. ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ಭಾಗಶಃ ಇದನ್ನು ಹಾಳು ಮಾಡಲಾಗಿತ್ತು. ಆದರೆ 2001 ರಲ್ಲಿ ಜೀರ್ಣೋದ್ಧಾರ ಮಾಡಲಾಗಿದೆ.
  6. ಲೊಂಬಾರ್ಡ್ಸ್ಬ್ರೂಕೆ ಮತ್ತು ಕೆನಡಿಬ್ರೂಕೆ ಲೊಂಬಾರ್ಡ್ ಸೇತುವೆಯು ಆಲ್ಸ್ಟರ್ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಇದು ರಸ್ತೆ ಮತ್ತು ರೈಲು ಸೇತುವೆಯಾಗಿದೆ. 1651 ರಲ್ಲಿ ಇದಕ್ಕೆ ಲೊಂಬಾರ್ಡ್ ಪ್ಯಾನ್ ಸೇತುವೆ ಎಂದು ಹೆಸರಿಡಲಾಯಿತು. ಇದು ಮರದ ಸೇತುವೆಯಾಗಿದ್ದು, 1865 ರಲ್ಲಿ ಈ ಸೇತುವೆಯನ್ನು 69 ಮೀಗೆ ವಿಸ್ತರಿಸಲಾಯಿತು.
  7. ಲೊಂಬಾರ್ಡ್ ಸೇತುವೆಯ ಪಕ್ಕದಲ್ಲಿ ಕೆನಡಿ ಸೇತುವೆ ಇದೆ. ಇದನ್ನು 1953 ರಲ್ಲಿ ನಿರ್ಮಿಸಲಾಯಿತು ಏಕೆಂದರೆ ಹಳೆಯ ಲೊಂಬಾರ್ಡ್ ಸೇತುವೆಯಲ್ಲಿ ಜನ ದಟ್ಟಣೆ ಹೆಚ್ಚಾದ ಕಾರಣ, ಇದನ್ನು  ನಿಭಾಯಿಸಲು ನಿರ್ಮಿಸಲಾಯಿತು.  ಸೇತುವೆಯನ್ನು ಮೂಲತಃ ನ್ಯೂ ಲೊಂಬಾರ್ಡ್ಸ್‌ಬ್ರೂಕೆ ಎಂದು ಕರೆಯಲಾಗುತ್ತಿತ್ತು. ಅಮೇರಿಕನ್ ಅಧ್ಯಕ್ಷ ಜಾನ್ ಎಫ್ ಕೆನಡಿ ಅವರ ಹತ್ಯೆಯ ನಂತರ ಅವರ ಗೌರವಾರ್ಥವಾಗಿ 1963 ರಲ್ಲಿ ಕೆನಡಿ ಸೇತುವೆ  ಎಂದು ಮರುನಾಮಕರಣ ಮಾಡಲಾಯಿತು.
  8. ಜೊಲ್ಲೆನ್‌ಬ್ರೂಕೆ ಸೇತುವೆ ಜೊಲ್ಲೆನ್‌ಬ್ರೂಕೆ ಸೇತುವೆ ನಗರದಲ್ಲಿನ ಅತ್ಯಂತ ಹಳೆಯ ಸೇತುವೆಯಾಗಿದ್ದು, ಇದು 1663 ರಕ್ಕಿಂತಲೂ ಹಿಂದಿನದು. 25ಮೀ ಉದ್ದದ ಸೇತುವೆಯು ಮೂರು ವಿಭಿನ್ನ ಗಾತ್ರದ ಕಮಾನುಗಳನ್ನು ಹೊಂದಿದೆ. ಮರಳುಗಲ್ಲು ಬ್ಲಾಕ್ಗಳಿಂದ ಇದನ್ನು ನಿರ್ಮಿಸಲಾಗಿದೆ.
  9. ಟ್ರೋಸ್ಟ್ಬ್ರೂಕೆ ಸೇತುವೆ ದಿ ಟ್ರೋಸ್ಟ್‌ಬ್ರೂಕೆ ಸೇತುವೆ ಇದು ನಿಕೋಲೈಫ್ಲೀಟ್​​ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಇದು  ಸಣ್ಣ ಮತ್ತು ಐತಿಹಾಸಿಕ ಸೇತುವೆಯಾಗಿದೆ. ನಗರದ ನೈಋತ್ಯ ಭಾಗದಲ್ಲಿದೆ. ಇದು ಹ್ಯಾಂಬರ್ಗ್‌ನ ಹಳೆಯ ಮತ್ತು ಹೊಸ ಪಟ್ಟಣಗಳ ಗಡಿಯ ಅಂಚಿನಲ್ಲಿದೆ. 1881 ರಲ್ಲಿ ನಿರ್ಮಿಸಲಾದ ಇದು ಕಲ್ಲಿನ ನಿರ್ಮಾಣವಾಗಿದೆ.
  10. ರೀಸೆಂಡಾಂಬ್ರೂಕೆ ಸೇತುವೆ ಈ ಸೇತುವೆಯನ್ನು 1843 ರಲ್ಲಿ ನಿರ್ಮಿಸಲಾಯಿತು.
  11. ಸ್ಲಾಮಾಟ್ಜೆನ್ಬ್ರೂಕೆ ಸೇತುವೆ ಹ್ಯಾಂಬರ್ಗ್‌ನಲ್ಲಿರುವ ಪ್ರಸಿದ್ಧ ಸೇತುವೆಗಳಲ್ಲಿ ಒಂದಾದ ಸ್ಲಾಮಾಟ್ಜೆನ್‌ಬ್ರೂಕೆ ನ್ಯೂಸ್ಟಾಡ್ ಜಿಲ್ಲೆಯಲ್ಲಿ ಲುಡ್ವಿಗ್-ಎರ್ಹಾರ್ಡ್ ಸ್ಟ್ರೀಟ್‌ನಲ್ಲಿದೆ. ಇದನ್ನು 1959 ರಲ್ಲಿ ಆಲ್ಸ್ಟರ್ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಇದು ರಸ್ತೆ ಸೇತುವೆಯಾಗಿದೆ. ಸೇತುವೆಯು ಗಮನಾರ್ಹವಾದ ಕಲ್ಲಿನ ಕೆತ್ತನೆಯನ್ನು ಹೊಂದಿದೆ.

ಮತ್ತಷ್ಟು ಆಸಕ್ತಿದಾಯಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 10:25 pm, Sun, 9 October 22

ಬೆಂಗಳೂರಿನಲ್ಲಿ ಕ್ರಿಸ್ಮಸ್​ ಸಡಗರ​, ಲೈಟಿಂಗ್ಸ್​ನಲ್ಲಿ ಚರ್ಚ್​ಗಳು ಝಗಮಗ
ಬೆಂಗಳೂರಿನಲ್ಲಿ ಕ್ರಿಸ್ಮಸ್​ ಸಡಗರ​, ಲೈಟಿಂಗ್ಸ್​ನಲ್ಲಿ ಚರ್ಚ್​ಗಳು ಝಗಮಗ
ಶಿವರಾಜ್​ಕುಮಾರ್ ಅವರಿಗೆ ಕ್ಯಾನ್ಸರ್ ಇದೆ. ಅಮೆರಿಕದ ಫ್ಲೋರಿಡಾದ್ಲಿರುವ ಮಿಯಾ
ಶಿವರಾಜ್​ಕುಮಾರ್ ಅವರಿಗೆ ಕ್ಯಾನ್ಸರ್ ಇದೆ. ಅಮೆರಿಕದ ಫ್ಲೋರಿಡಾದ್ಲಿರುವ ಮಿಯಾ
ಎದುರಾಳಿಗಳನ್ನು ಹಣ್ಣುಗಾಯಿ ನೀರುಗಾಯಿ ಮಾಡುವ ಶಪಥ ಮಾಡಿದ ರಜತ್
ಎದುರಾಳಿಗಳನ್ನು ಹಣ್ಣುಗಾಯಿ ನೀರುಗಾಯಿ ಮಾಡುವ ಶಪಥ ಮಾಡಿದ ರಜತ್
ಮನೆಯಲ್ಲಿನ ಶಿವಲಿಂಗ ಎಷ್ಟು ಎತ್ತರ ಇರಬೇಕು, ಪೂಜಾ ವಿಧಾನ ತಿಳಿಯಿರಿ
ಮನೆಯಲ್ಲಿನ ಶಿವಲಿಂಗ ಎಷ್ಟು ಎತ್ತರ ಇರಬೇಕು, ಪೂಜಾ ವಿಧಾನ ತಿಳಿಯಿರಿ
Daily horoscope: ಈ ರಾಶಿಯವರ ಗೃಹ ನಿರ್ಮಾಣದ ಕನಸು ಇಂದು ಇಡೇರುತ್ತದೆ
Daily horoscope: ಈ ರಾಶಿಯವರ ಗೃಹ ನಿರ್ಮಾಣದ ಕನಸು ಇಂದು ಇಡೇರುತ್ತದೆ
ಆತುರದಲ್ಲಿ ಚಿಕನ್ ತಿಂದ ಧನರಾಜ್ ಆಚಾರ್; ಹೇಗಿದೆ ನೋಡಿ ಒದ್ದಾಟ
ಆತುರದಲ್ಲಿ ಚಿಕನ್ ತಿಂದ ಧನರಾಜ್ ಆಚಾರ್; ಹೇಗಿದೆ ನೋಡಿ ಒದ್ದಾಟ
ವೃದ್ಧೆಯನ್ನು ದರದರನೆ ಎಳೆದುಕೊಂಡು ಹೋಗಿ ಕಚ್ಚಿ ಕೊಂದ 7 ಬೀದಿ ನಾಯಿಗಳು
ವೃದ್ಧೆಯನ್ನು ದರದರನೆ ಎಳೆದುಕೊಂಡು ಹೋಗಿ ಕಚ್ಚಿ ಕೊಂದ 7 ಬೀದಿ ನಾಯಿಗಳು
ಚೊಚ್ಚಲ ಏಕದಿನ ಶತಕ ಸಿಡಿಸಿದ ಹರ್ಲೀನ್ ಡಿಯೋಲ್
ಚೊಚ್ಚಲ ಏಕದಿನ ಶತಕ ಸಿಡಿಸಿದ ಹರ್ಲೀನ್ ಡಿಯೋಲ್
ಉಗ್ರಾವತಾರ ತೋರಿಸಿ ಬಿಗ್ ಬಾಸ್ ಮನೆಯ ಗ್ಲಾಸ್ ಒಡೆದು ಹಾಕಿದ ಮಂಜು
ಉಗ್ರಾವತಾರ ತೋರಿಸಿ ಬಿಗ್ ಬಾಸ್ ಮನೆಯ ಗ್ಲಾಸ್ ಒಡೆದು ಹಾಕಿದ ಮಂಜು
ನೋವಿನಲ್ಲೂ ಅಭಿಮಾನಿಗಳನ್ನು ನೋಡಿ ನಗುತ್ತಾ ಕೈ ಬೀಸಿದ ದರ್ಶನ್
ನೋವಿನಲ್ಲೂ ಅಭಿಮಾನಿಗಳನ್ನು ನೋಡಿ ನಗುತ್ತಾ ಕೈ ಬೀಸಿದ ದರ್ಶನ್