Long Pepper: ಅಡುಗೆಯ ಮನೆಯಲ್ಲಿರುವ ಹಿಪ್ಪಲಿಯಲ್ಲಿದೆ ನೂರೆಂಟು ಔಷಧೀಯ ಗುಣ, ಆರೋಗ್ಯಕ್ಕೆ ಬಹಳ ಉಪಯುಕ್ತ
ಮನೆಯ ಹಿತ್ತಲಿನಲ್ಲಿ ಸುಲಭವಾಗಿ ಬೆಳೆಯ ಬಹುದಾದ ಸಸ್ಯಗಳಲ್ಲಿ ಹಿಪ್ಪಲಿ ಅಥವಾ ಪಿಪ್ಪಲಿ ಗಿಡ ಕೂಡ ಒಂದು. ಮಸಾಲೆ ಪದಾರ್ಥಗಳ ಗುಂಪಿಗೆ ಸೇರಿದ ಈ ಹಿಪ್ಪಲಿಯನ್ನು ಉದ್ದ ಮೆಣಸು ಎಂದು ಕರೆಯುತ್ತಾರೆ. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಬಂದಾಗ ಈ ಹಿಪ್ಪಲಿಯಿಂದ ಮನೆ ಮದ್ದನ್ನು ತಯಾರಿಸಿ ಕಾಯಿಲೆಯನ್ನು ಗುಣಪಡಿಸಿಕೊಳ್ಳಬಹುದು.
ನಮ್ಮ ಮನೆಯ ಸುತ್ತ ಮುತ್ತಲಿನಲ್ಲಿರುವ ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯಗಳ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಅಡುಗೆ ಮನೆಯಲ್ಲಿರುವ ಸಾಂಬಾರು ಪದಾರ್ಥಗಳ ಸಾಲಿಗೆ ಸೇರುವ ಈ ಹಿಪ್ಪಲಿಯನ್ನು ಪಿಪ್ಪಲಿಯೆಂದು ಕರೆಯುವುದಿದೆ. ಆಯುರ್ವೇದದಲ್ಲಿ ಹೇರಳವಾಗಿ ಬಳಸುವ ಈ ಹಿಪ್ಪಲಿಯೂ ಔಷಧೀಯ ಗುಣಗಳ ಅಗರವಾಗಿದೆ. ಕರಿಮೆಣಸಿನ ಕಾಳನ್ನು ಪೋಣಿಸಿದಂತೆ ಕಾಣುವ ಈ ಹಿಪ್ಪಲಿಯೂ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ.
ಹಿಪ್ಪಲಿ ಮತ್ತು ಶುಂಠಿಯನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಪುಡಿ ಮಾಡಿ ಕಷಾಯ ತಯಾರಿಸಿ ಎರಡು ಚಮಚದಷ್ಟು ದಿನಕ್ಕೆ ಮೂರು ಬಾರಿ ಸೇವಿಸಿದರೆ ಜ್ವರವು ಗುಣಮುಖವಾಗುತ್ತದೆ.
ಹಿಪ್ಪಲಿ ಪುಡಿ, ಕಾಳು ಮೆಣಸಿನ ಪುಡಿ, ಜೇಷ್ಠ ಮಧುವಿನ ಪುಡಿ ಸಮ ಪ್ರಮಾಣದಲ್ಲಿ ಬೆರೆಸಿ, ಅರ್ಧ ಚಮಚದಷ್ಟು ವೀಳ್ಯದೆಲೆರಸ ಹಾಗೂ ಜೇನುತುಪ್ಪ ಸೇರಿಸಿ ಕುಡಿದರೆ ಅಸ್ತಮಾವು ಕಡಿಮೆಯಾಗುತ್ತದೆ.
ಒಂದು ಚಮಚ ಹಿಪ್ಪಲಿ ಪುಡಿಯನ್ನು ತುಪ್ಪ ಮತ್ತು ಜೇನುತುಪ್ಪದಲ್ಲಿ ಸೇರಿಸಿ ಖಾಲಿ ಹೊಟ್ಟೆಯಲ್ಲಿ ದಿನಕ್ಕೆರಡು ಬಾರಿ ಸೇವಿಸಿದರೆ ಬಾಯಿಯ ದುರ್ವಾಸನೆಯೂ ದೂರರಾಗುತ್ತದೆ.