Skin care in winter: ಹೊಳೆಯುವ ತ್ವಚೆಗಾಗಿ ಹಸಿ ಹಾಲಿನ ಫೇಸ್ ಮಾಸ್ಕ್ ಪ್ರಯತ್ನಿಸಿ

| Updated By: Rakesh Nayak Manchi

Updated on: Dec 07, 2022 | 6:01 AM

ನಿಮ್ಮ ಅಡುಗೆಮನೆಯಲ್ಲಿ ಹಸಿ ಹಾಲಿನಿಂದ ನಿಮ್ಮ ಮುಖವನ್ನು ಹೊಳಪು ಮತ್ತು ಮೃದುಗೊಳಿಸಬಹುದು. ಪ್ರತಿದಿನ ಕೇವಲ ಒಂದು ಚಮಚ ಹಸಿ ಹಾಲನ್ನು ಸೇವಿಸುವುದರಿಂದ ಹಲವು ಪ್ರಯೋಜನಗಳನ್ನು ಪಡೆಯಬಹುದು.

Skin care in winter: ಹೊಳೆಯುವ ತ್ವಚೆಗಾಗಿ ಹಸಿ ಹಾಲಿನ ಫೇಸ್ ಮಾಸ್ಕ್ ಪ್ರಯತ್ನಿಸಿ
Skin care in winter: ಹೊಳೆಯುವ ತ್ವಚೆಗಾಗಿ ಹಸಿ ಹಾಲಿನ ಫೇಸ್ ಮಾಸ್ಕ್ ಪ್ರಯತ್ನಿಸಿ
Follow us on

ಚಳಿಗಾಲದಲ್ಲಿ ಚರ್ಮದ ಆರೈಕೆ (Skin care in winter) ಬಹಳ ಮುಖ್ಯವಾಗಿದೆ. ಏಕೆಂದರೆ ಈ ಋತುವಿನಲ್ಲಿ ಚರ್ಮವು ಶುಷ್ಕ ಮತ್ತು ನಿರ್ಜೀವವಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಅನೇಕ ಮಹಿಳೆಯರು ಮನೆಯಲ್ಲಿ ತಯಾರಿಸಿದ ಸೌಂದರ್ಯ ವರ್ಧಕಗಳ (Cosmetics) ಮೇಲೆ ಅವಲಂಬಿತರಾಗುತ್ತಾರೆ. ಮಾರುಕಟ್ಟೆಯಲ್ಲಿ ಲಭ್ಯವಾಗುವ ರಾಸಾಯನಿಕ ಭರಿತ ಉತ್ಪನ್ನಗಳು ಚರ್ಮದ ಮೇಲೆ ಯಾವುದೇ ನಿರ್ದಿಷ್ಟ ಪರಿಣಾಮವನ್ನು ಬೀರುವುದಿಲ್ಲ. ಆದ್ದರಿಂದ ನೀವು ನಿಮ್ಮ ತ್ವಚೆಯನ್ನು ಇನ್ನಷ್ಟು ಕಾಂತಿಯುತವಾಗಿಸಲು ಹಸಿ ಹಾಲನ್ನು (Raw Milk) ಸಹ ಬಳಸಬಹುದು. ಇದು ನಿಮ್ಮ ಮುಖದ ಸೌಂದರ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಪ್ರತಿದಿನ ಕೇವಲ ಒಂದು ಚಮಚ ಹಸಿ ಹಾಲನ್ನು ಸೇವಿಸುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು.

ಹಸಿ ಹಾಲನ್ನು ಮುಖಕ್ಕೆ ಹಚ್ಚಿದರೆ ಮುಖದಲ್ಲಿರುವ ಸತ್ತ ಜೀವಕೋಶಗಳು ಬೇಗನೆ ನಿವಾರಣೆಯಾಗುತ್ತದೆ. ಹಸಿ ಹಾಲನ್ನು ತ್ವಚೆಯ ಮೇಲೆ ಹಚ್ಚುವುದರಿಂದ ಮುಖ ಫ್ರೆಶ್ ಆಗುತ್ತದೆ. ಜೊತೆಗೆ ಹಾಲು ಚರ್ಮವನ್ನು ಆಳವಾಗಿ ಸ್ವಚ್ಛಗೊಳಿಸುತ್ತದೆ. ಹಸಿ ಹಾಲಿನಲ್ಲಿ ಲ್ಯಾಕ್ಟಿಕ್ ಆಮ್ಲ ಅಧಿಕವಾಗಿರುತ್ತದೆ. ಅದರ ಸಹಾಯದಿಂದ ನೀವು ಚರ್ಮವನ್ನು ಎಫ್ಫೋಲಿಯೇಟ್ ಮಾಡಬಹುದು.

ಇದನ್ನೂ ಓದಿ: Weight Loss: ಹಾಲು ಕುಡಿಯುವ ವಿಧಾನವನ್ನು ಸ್ವಲ್ಪ ಬದಲಿಸಿದರೂ ಸಾಕು, ತೂಕ ಇಳಿಸಿಕೊಳ್ಳಬಹುದು

ರಾತ್ರಿ ಮಲಗುವಾಗ ಹಸಿ ಹಾಲನ್ನು ಮುಖಕ್ಕೆ ಹಚ್ಚಿದರೆ ಹೊಳೆಯುವ ತ್ವಚೆ ನಿಮ್ಮದಾಗುತ್ತದೆ. ಹಾಲಿನಲ್ಲಿ ಲ್ಯಾಕ್ಟಿಕ್ ಆಮ್ಲ ಇರುವುದರಿಂದ ಇದು ಚರ್ಮವನ್ನು ಬಿಗಿಗೊಳಿಸುತ್ತದೆ. ಇದು ಟ್ಯಾನಿಂಗ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಮೈಬಣ್ಣವನ್ನು ಹೊಳೆಯುವಂತೆ ಮಾಡಲಿದೆ. ನೀವು ಹಸಿ ಹಾಲನ್ನು ಮಾಯಿಶ್ಚರೈಸರ್ ಆಗಿಯೂ ಬಳಸಬಹುದು. ಪ್ರತಿದಿನ ಹಸಿ ಹಾಲಿನಿಂದ ಮುಖಕ್ಕೆ ಮಸಾಜ್ ಮಾಡುವುದರಿಂದ ಸುಕ್ಕುಗಳು ಕಡಿಮೆಯಾಗುತ್ತವೆ ಮತ್ತು ವಯಸ್ಸಾಗುವಿಕೆಯ ಸಮಸ್ಯೆಯಿಂದ ದೂರವಿರಬಹುದು.

ಹಸಿ ಹಾಲನ್ನು ಹಚ್ಚುವುದರಿಂದ ಮೊಡವೆ ಸಮಸ್ಯೆಯೂ ನಿವಾರಣೆಯಾಗುತ್ತದೆ. ಮೊಡವೆ ನಿವಾರಣೆಗಾಗಿ ಇದಕ್ಕೆ ಉಪ್ಪು ಸೇರಿಸಿ. ಕಪ್ಪು ವರ್ತುಲಗಳನ್ನು ಕಡಿಮೆ ಮಾಡಲು ಹಸಿ ಹಾಲನ್ನು ಹತ್ತಿ ಪ್ಯಾಡ್‌ನಲ್ಲಿ ತೆಗೆದುಕೊಂಡು ಕಣ್ಣಿನ ಸುತ್ತ ಹಚ್ಚಿದರೆ ಕಪ್ಪು ವರ್ತುಲಗಳು ಕಡಿಮೆಯಾಗುತ್ತವೆ. ಹಸಿ ಹಾಲಿನೊಂದಿಗೆ ಫೇಶಿಯಲ್ ಟೋನಿಂಗ್ ಮಾಡುವುದರಿಂದ ಮುಖದಲ್ಲಿರುವ ಡೆಡ್ ಸ್ಕಿನ್ ಲೇಯರ್ ನಿವಾರಣೆಯಾಗುತ್ತದೆ.

ಹಸಿ ಹಾಲಿನ ಫೇಸ್ ಪ್ಯಾಕ್: ನೀವು ಹಸಿ ಹಾಲಿನೊಂದಿಗೆ ಫೇಸ್ ಪ್ಯಾಕ್ ತಯಾರಿಸಬಹುದು. ಹಾಲಿನಲ್ಲಿ ಬೇಳೆ ಹಿಟ್ಟು ಮತ್ತು ಜೇನುತುಪ್ಪವನ್ನು ಬೆರೆಸಿ ಮುಖಕ್ಕೆ ಹಚ್ಚಿ ಮತ್ತು 10 ರಿಂದ 20 ನಿಮಿಷಗಳ ನಂತರ ಮುಖವನ್ನು ತೊಳೆಯಿರಿ. ನಿತ್ಯವೂ ಹೀಗೆ ಮಾಡಿದರೆ ಮುಖದ ಮೇಲೆ ಹೊಳಪು ಬರುವುದರ ಜೊತೆಗೆ ಕಲೆಗಳು ಮಾಯವಾಗುತ್ತವೆ. ನಿಮ್ಮ ಚರ್ಮವು ಎಣ್ಣೆಯುಕ್ತವಾಗಿದ್ದರೆ ನೀವು ಹಸಿ ಹಾಲನ್ನು ಮುಖಕ್ಕೆ ಹಚ್ಚಬಾರದು. ಬದಲಿಗೆ ಬಿಸಿ ಮಾಡಿದ ನಂತರ ಮುಖಕ್ಕೆ ಹಾಲನ್ನು ಹಚ್ಚಿಕೊಳ್ಳಬಹುದು.

ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ