ನೀವೂ ಕೆಲಸದಿಂದ ಸುಸ್ತಾಗಿ ಬಂದಿದ್ದೀರಾ? ಹಾಗಿದ್ದರೆ ಸುಲಭವಾಗಿ ಮಾಡುವ ತಿಂಡಿಗಳು ಇಲ್ಲಿವೆ

ನೀವೂ ಪ್ರತಿ ದಿನ ಕೆಲಸಕ್ಕೆ ಹೋಗುವ ಅವಸರದಲ್ಲಿ ಸರಿಯಾಗಿ ಆಹಾರ ತಯಾರಿಸಲಾಗುತ್ತಿಲ್ಲವೇ?  ಹಾಗೂ ಕೆಲಸದಿಂದ ಬಂದು ತುಂಬಾ ಸುಸ್ತಾಗಿರುತ್ತೀರಾ?

ನೀವೂ ಕೆಲಸದಿಂದ ಸುಸ್ತಾಗಿ ಬಂದಿದ್ದೀರಾ? ಹಾಗಿದ್ದರೆ ಸುಲಭವಾಗಿ ಮಾಡುವ ತಿಂಡಿಗಳು ಇಲ್ಲಿವೆ
ಸಾಂದರ್ಭಿಕ ಚಿತ್ರImage Credit source: NDTV Food
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on: Dec 06, 2022 | 6:10 PM

ಚಳಿಗಾಲವಂತೂ ನಿಮಗೆ ಸೋಮಾರಿತನವನ್ನುಂಟುಮಾಡುತ್ತದೆ. ಅದಲ್ಲದೇ ನೀವೂ ಪ್ರತಿ ದಿನ ಕೆಲಸಕ್ಕೆ ಹೋಗುವ ಅವಸರದಲ್ಲಿ ಸರಿಯಾಗಿ ಆಹಾರ ತಯಾರಿಸಲಾಗುತ್ತಿಲ್ಲವೇ?  ಹಾಗೂ ಕೆಲಸದಿಂದ ಬಂದು ತುಂಬಾ ಸುಸ್ತಾಗಿರುತ್ತೀರಾ? ಹಾಗಿದ್ದರೆ ಅತ್ಯಂತ ಸುಲಭವಾಗಿ ಮತ್ತು ತ್ವರಿತವಾಗಿ ಮಾಡಬಹುದಾದ ಕೆಲವು ಆಹಾರಗಳು ಇಲ್ಲಿವೆ.

ಉಪ್ಪಿಟ್ಟು:

ಈ ದಕ್ಷಿಣ ಭಾರತದ ಜನಪ್ರಿಯ ತಿಂಡಿಗಳಲ್ಲಿ ಉಪ್ಪಿಟ್ಟು ಪ್ರಮುಖ ಸ್ಥಾನದಲ್ಲಿದೆ. ಇದನ್ನು ಕೇವಲ 10 ನಿಮಿಷಗಳಲ್ಲಿ ತಯಾರಿಸಬಹುದಾಗಿದೆ. ಇದು ನಿಮ್ಮ ಆರೋಗ್ಯಕ್ಕೂ ಒಳ್ಳೆಯದು. ಆದ್ದರಿಂದ ನೀವೂ ತುಂಬಾ ಸುಸ್ತಾಗಿದ್ದಾಗ, ಅಥವಾ ಸಮಯವಿಲ್ಲದಿರುವಾಗ ಅತ್ಯಂತ ಸುಲಭವಾಗಿ ಉಪ್ಪಿಟ್ಟು ತಯಾರಿಸಬಹುದಾಗಿದೆ.

ಮೊಸರನ್ನ:

ನಿಮಗೆ ತ್ವರಿತವಾಗಿ ಹಾಗೂ ಸುಲಭವಾಗಿ ಸಿಗುವ ಆಹಾರಗಳು ಎಂದಾಕ್ಷಣ ಅದು ನಿಮ್ಮ ಆರೋಗ್ಯಕ್ಕೆ ಎಷ್ಟು ಸೂಕ್ತ ಎಂದು ತಿಳಿದುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಮೊಸರನ್ನವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ದೇಹಕ್ಕೆ ಶಕ್ತಿ ನೀಡುತ್ತದೆ. ಬೇಯಿಸಿದ ಅನ್ನಕ್ಕೆ ಸ್ವಲ್ಪ ಮೊಸರು ,ಕ್ಯಾರೆಟ್, ಹಸಿರು ಮೆಣಸಿನಕಾಯಿ, ಶುಂಠಿ, ಉಪ್ಪು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ. ಸಾಸಿವೆ, ಕಡಲೆ ಬೇಳೆ, ಉದ್ದಿನಬೇಳೆ, ಕರಿಬೇವು, ಕೆಂಪು ಮೆಣಸಿನಕಾಯಿ ಮತ್ತು ಹಿಂಗ್‌ನೊಂದಿಗೆ ಉತ್ತಮವಾದ ತಡ್ಕಾವನ್ನು ತಯಾರಿಸಿ ಮತ್ತು ಅದನ್ನು ನಿಮ್ಮ ಮೊಸರು ಅನ್ನಕ್ಕೆ ಸುರಿಯಿರಿ.

ಮಸಾಲಾ ತರಕಾರಿ ಖಿಚಡಿ:

ನಿಮ್ಮಲ್ಲಿ ಸಾಕಷ್ಟು ಸಮಯ ಇಲ್ಲದಿರುವಾಗ ಅಥವಾ ನಿಮಗೆ ಅಡುಗೆ ಮಾಡಲು ಮನಸ್ಸಿಲ್ಲದ್ದಿದ್ದಾಗ ಅನ್ನ- ಸಂಬಾರು ಬೇರೆ ಬೇರೆಯಾಗಿ ಮಾಡುವ ಬದಲಾಗಿ ಪ್ರೆಶರ್ ಕುಕ್ಕರ್ ತೆಗೆದುಕೊಳ್ಳಿ ಮತ್ತು ಎಲ್ಲಾ ಪದಾರ್ಥಗಳನ್ನು ಒಂದೊಂದಾಗಿ ಹಾಕಿ. ಐದು ಸೀಟಿಗಳವರೆಗೆ ಬಿಡಿ ಮತ್ತು ನಿಮ್ಮ ಖಿಚಡಿ ಸಿದ್ಧವಾಗಿದೆ.

ಇದನ್ನು ಓದಿ: ಅನಾನಸ್​ ಹಣ್ಣಿನ ಮೇಲಿನ ಎಲೆಗಳನ್ನು ಎಸೆಯುವ ಮುನ್ನ ಯೋಚಿಸಿ, ಇಲ್ಲಿದೆ ಉಪಯೋಗಿಸುವ ಬಗೆ

ಲೆಮನ್ ರೈಸ್: ನಿಮಗೆ ಎಷ್ಟೇ ಸುಸ್ತಾಗಿದ್ದರೂ ಸಹ ಅತ್ಯಂತ ಸುಲಭವಾಗಿ ಲೆಮನ್ ರೈಸ್ ಮಾಡಿ ತಿನ್ನಿ. ಇದರಲ್ಲಿನ ಹುಳಿಯ ಅಂಶವೂ ನಿಮಗೆ ಒತ್ತಡದಿಂದ ಮುಕ್ತಿ ನೀಡುತ್ತದೆ. ಆದ್ದರಿಂದ ಲೆಮನ್ ರೈಸ್ ಗೆ ಬೇಕಾಗುವ ಮಸಾಲಾ ಪದಾರ್ಥಗಳು ಮಾರುಕಟ್ಟೆಯಲ್ಲಿ ಲಭ್ಯವಿರುವುದ್ದರಿಂದ ಅತ್ಯಂತ ಸುಲಭವಾಗಿ ನೀವೂ ತ್ವರಿತವಾಗಿ ತಯಾರಿಸಬಹುದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: