Microwave Oven Day 2022: ಮೈಕ್ರೊವೇವ್ ಸ್ವಚ್ಚವಾಗಿಡಲು ಸಲಹೆ ಇಲ್ಲಿವೆ

ಮೈಕ್ರೋವೇವ್ ಅನ್ನು ಯಾವಾಗ ಕಂಡುಹಿಡಿಯಲಾಯಿತು? ಎಂಬ ಪ್ರಶ್ನೆಗೆ ಹಲವಾರು ವರದಿಗಳ ಪ್ರಕಾರ ಅಮೇರಿಕನ್ ಇಂಜಿನಿಯರ್ ಪರ್ಸಿ ಸ್ಪೆನ್ಸರ್ ಕಂಡುಹಿಡಿದ ಎಂದು ಹೇಳಲಾಗುತ್ತದೆ.

Microwave Oven Day 2022: ಮೈಕ್ರೊವೇವ್ ಸ್ವಚ್ಚವಾಗಿಡಲು ಸಲಹೆ ಇಲ್ಲಿವೆ
ಸಾಂದರ್ಭಿಕ ಚಿತ್ರImage Credit source: NDTV FOOD
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on: Dec 06, 2022 | 7:06 PM

ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಒಂದಕ್ಕೊಂದು ಪರ್ಯಾಯ ಉಪಕರಣಗಳು ಬರುತ್ತಿರುವುದನ್ನು ಕಾಣಬಹುದು. ಪ್ರಾರಂಭದಲ್ಲಿ ಒಲೆಯಲ್ಲಿ ಆಹಾರಗಳನ್ನು ತಯಾರಿಸಲಾಗುತ್ತಿತ್ತು. ಆದರೆ ಇಂದೂ ಮೈಕ್ರೋವೇವ್ ಓವನ್ (Microwave Oven) ತನಕ ಬಂದು ತಲುಪಿದೆ. ಆದ್ದರಿಂದ ಅವುಗಳನ್ನು ಬಳಸುವುದರ ಜೊತೆಗೆ ಆವುಗಳನ್ನು ಸ್ವಚ್ಚವಾಗಿ ಇಟ್ಟುಕೊಳ್ಳುವುದು ನಿಮ್ಮದೇ ಕರ್ತವ್ಯವಾಗಿದೆ. ಮೈಕ್ರೋವೇವ್ ಅನ್ನು ಯಾವಾಗ ಕಂಡುಹಿಡಿಯಲಾಯಿತು? ಎಂಬ ಪ್ರಶ್ನೆಗೆ ಹಲವಾರು ವರದಿಗಳ ಪ್ರಕಾರ ಅಮೇರಿಕನ್ ಇಂಜಿನಿಯರ್ ಪರ್ಸಿ ಸ್ಪೆನ್ಸರ್ ಕಂಡುಹಿಡಿದ ಎಂದು ಹೇಳಲಾಗುತ್ತದೆ.

ಮೈಕ್ರೋವೇವ್ ಸ್ವಚ್ಛಗೊಳಿಸಲು  ಸಲಹೆಗಳು ಇಲ್ಲಿವೆ:

ನಿಂಬೆ ನೀರಿನಿಂದ ಸ್ಟೀಮ್ ಮಾಡಿ:

ಒಂದು ಬೌಲ್ ನೀರನ್ನು ತೆಗೆದುಕೊಂಡು ಅದರಲ್ಲಿ 1 ನಿಂಬೆ ರಸವನ್ನು ಮಿಶ್ರಣ ಮಾಡಿ. ಇದನ್ನು 10 ನಿಮಿಷಗಳ ಕಾಲ ಮೈಕ್ರೊವೇವ್‌ನಲ್ಲಿ ಇಟ್ಟು ಕುದಿಸಿ. ನಂತರ ಬೌಲ್ ಹೊರತೆಗೆದು, ಒಂದು ಸ್ಪಂಜ್ ಅಥವಾ ಬಟ್ಟೆಯಲ್ಲಿ ಸುತ್ತಲೂ ಚೆನ್ನಾಗಿ ಸ್ವಚ್ಛಗೊಳಿಸಿ.

ಅಡಿಗೆ ಸೋಡಾ:

ನೀವೂ ಸಾಕಷ್ಟು ದಿನಗಳಿಂದ ಓವನ್ ಬಳಸುತ್ತಿದ್ದರೆ, ಅದರಲ್ಲಿನ ಸಾಕಷ್ಟು ಆಹಾರಗಳ ಕಲೆಗಳು ಗಟ್ಟಿಯಾಗಿ ಹಾಗೆಯೇ ನಿಲ್ಲುವುದ್ದರಿಂದ ಕಲೆಗಳನ್ನು ಸ್ವಚ್ಚಗೊಳಿಸುವುದು ತುಂಬಾ ಕಷ್ಟದ ಕೆಲಸ. ಅಡಿಗೆ ಸೋಡಾ ಮತ್ತು ನೀರು ಸೇರಿಸಿ ದಪ್ಪವಾದ ಪೇಸ್ಟ್ ಮಾಡಿ ಮತ್ತು ಇವುಗಳನ್ನು 5-10 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಒದ್ದೆಯಾದ ಸ್ಪಂಜಿನೊಂದಿಗೆ ಕಲೆಗಳನ್ನು ಸ್ಕ್ರಬ್ ಮಾಡಿ.

ಕ್ಲೀನಿಂಗ್ ಸ್ಪ್ರೇ :

ಸ್ಪ್ರೇ ಬಾಟಲಿಯಲ್ಲಿ ನಿಂಬೆ ರಸ ಮತ್ತು ಬಿಳಿ ವಿನೆಗರ್ ಹಾಕಿ ಮಿಶ್ರಣ ಮಾಡಿ. ನಂತರ ಈ ಮಿಶ್ರಣವನ್ನು ಓವನ್ ಒಳಗೆಡ ಸ್ಪ್ರೇ ಮಾಡಿ ಮತ್ತು ಸುಮಾರು 5 ನಿಮಿಷಗಳ ಕಾಲ ಹಾಗೆಯೇ ಬಿಡಿ ಮತ್ತು ಒದ್ದೆಯಾದ ಬಟ್ಟೆಯಿಂದ ಸ್ವಚ್ಛಗೊಳಿಸಿ.

ಇದನ್ನು ಓದಿ: ಚಳಿಗಾಲದಲ್ಲಿ ನಿಮ್ಮನ್ನು ಬೆಚ್ಚಗಿಡುವುದರ ಜೊತೆಗೆ ಸ್ಟೈಲಿಶ್ ಲುಕ್ ನೀಡುವ ಜೀನ್ಸ್ ಕಲೆಕ್ಷನ್ ಇಲ್ಲಿದೆ

ಡಿಶ್ ಸೋಪ್ ಬಳಸಿ :

ಮೈಕ್ರೋವೇವ್‌ನ ಗಾಜಿನ ಬಾಗಿಲು ಜಿಡ್ಡಿನಂತಾಗುತ್ತದೆ. ಇದರಿಂದಾಗಿ ವಾಸನೆಗಳು ಉಂಟಾಗುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಸೋಪ್ ಸ್ವಲ್ಪ ಹೊತ್ತಿನ ತನಕ ನೀರಿನಲ್ಲಿ ಹಾಕಿ ಇಡಿ. ನಂತರ ಒಂದು ಸ್ಪಾಂಜ್ ಅನ್ನು ಸೋಪಿನ ನೀರಿನಲ್ಲಿ ಅದ್ದಿ ಅದರಿಂದ ಸ್ವಚ್ಛಗೊಳಿಸಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ