Health benefits of Star Anise: ಆಹಾರದಲ್ಲಿ ಅತ್ಯಗತ್ಯವಾಗಿರುವ ಚಕ್ರಮೊಗ್ಗಿನ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದಿದೆಯಾ?

| Updated By: ಅಕ್ಷತಾ ವರ್ಕಾಡಿ

Updated on: Jan 03, 2024 | 7:03 PM

ನಿಮ್ಮ ಮಸಾಲೆ ಡಬ್ಬಿಗಳಲ್ಲಿ ನೀವು ಚಕ್ರದಂತ ಒಂದು ಪದಾರ್ಥವನ್ನು ನೋಡಿರುತ್ತೀರಾ ಅದಕ್ಕೆ ಕೆಲವರು ಚಕ್ರಮೊಗ್ಗು ಅಥವಾ ಸ್ಟಾರ್ ಹೂವು (Star Anise) ಎಂದು ಕರೆಯುತ್ತಾರೆ. ಈ ಸ್ಟಾರ್ ಸೋಂಪು ನಮ್ಮ ಎಲ್ಲಾ ಭಕ್ಷ್ಯಗಳಿಗೆ ಉತ್ತಮ ಪರಿಮಳವನ್ನು ನೀಡುವುದು ಮಾತ್ರವಲ್ಲದೆ, ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಇದನ್ನು ಆಹಾರದಲ್ಲಿ ಏಕೆ ಸೇರಿಸಬೇಕು ಎಂಬುದನ್ನು ತಿಳಿದುಕೊಳ್ಳಿ.

Health benefits of Star Anise: ಆಹಾರದಲ್ಲಿ ಅತ್ಯಗತ್ಯವಾಗಿರುವ ಚಕ್ರಮೊಗ್ಗಿನ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದಿದೆಯಾ?
Follow us on

ಅಡುಗೆ ಮನೆಯ ಕಪಾಟುಗಳಲ್ಲಿ ತರತರದ ಮಸಾಲೆ ಪದಾರ್ಥಗಳನ್ನು ನೋಡಿರುತ್ತೇವೆ. ಚಕ್ಕೆ, ಲವಂಗ, ಮೊಗ್ಗು, ಏಲಕ್ಕಿ, ಕಾಳುಮೆಣಸು, ದಾಲ್ಚಿನಿ ಹೀಗೆ ಮಸಾಲೆಗಳ ಡಬ್ಬಿಯೇ ಇರುತ್ತದೆ. ಇದರಲ್ಲಿ ನೀವು ಚಕ್ರದಂತ ಒಂದು ಪದಾರ್ಥವನ್ನು ನೋಡಿರುತ್ತೀರಾ ಅದಕ್ಕೆ ಕೆಲವರು ಚಕ್ರಮೊಗ್ಗು ಅಥವಾ ಸ್ಟಾರ್ ಹೂವು (Star Anise) ಎಂದು ಕರೆಯುತ್ತಾರೆ. ಈ ಸ್ಟಾರ್ ಸೋಂಪು ನಮ್ಮ ಎಲ್ಲಾ ಭಕ್ಷ್ಯಗಳಿಗೆ ಉತ್ತಮ ಪರಿಮಳವನ್ನು ನೀಡುವುದು ಮಾತ್ರವಲ್ಲದೆ, ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಇದನ್ನು ಆಹಾರದಲ್ಲಿ ಏಕೆ ಸೇರಿಸಬೇಕು ಎಂಬುದನ್ನು ತಿಳಿದುಕೊಳ್ಳಿ.

ಚಕ್ರಮೊಗ್ಗುಗಳು ಎಂದರೇನು?

ಇದು ನಕ್ಷತ್ರಾಕಾರದ ಮಸಾಲೆಯಾಗಿದ್ದು ರುಚಿಯಲ್ಲಿ ಸಿಹಿಯಾಗಿದ್ದರೂ, ಖಾರವಾದ ಭಕ್ಷ್ಯಗಳ ರುಚಿಯನ್ನು ಹೆಚ್ಚಿಸಲು ಇದನ್ನು ಬಳಸಲಾಗುತ್ತದೆ. ಇದನ್ನು ವರ್ಷಗಳಿಂದ ಚೀನೀ ಔಷಧಿಯಾಗಿಯೂ ಬಳಸಲಾಗುತ್ತಿದೆ. “ಸ್ಟಾರ್ ಸೋಂಪು ವಿವಿಧ ರೀತಿಯ ಭಕ್ಷ್ಯಗಳಲ್ಲಿ ಬಳಸುವ ಒಂದು ರೀತಿಯ ಮಸಾಲೆ. ಇದರ ವಿಶಿಷ್ಟವಾದ ಲೈಕೋರೈಸ್ ತರಹದ ಪರಿಮಳವು ಸಿಹಿ ಮತ್ತು ಖಾರದ ಭಕ್ಷ್ಯಗಳಿಗೆ ರುಚಿ ನೀಡುತ್ತದೆ. ಇದನ್ನು ಹೆಚ್ಚಾಗಿ ಸೂಪ್ ಗಳು, ಪಲ್ಯಗಳು ಮತ್ತು ಸಾರುಗಳಿಗೆ ಒಟ್ಟಾರೆಯಾಗಿ ಸೇರಿಸಲಾಗುತ್ತದೆ.

ಚಕ್ರಮೊಗ್ಗುಗಳ ಪ್ರಯೋಜನಗಳ ಬಗ್ಗೆ ತಿಳಿದಿದೆಯಾ?

ಸ್ಟಾರ್ ಸೋಂಪು ಸೋಂಕುಗಳಿಗೆ ಚಿಕಿತ್ಸೆ, ಉರಿಯೂತದ ಪರಿಸ್ಥಿತಿಗಳ ವಿರುದ್ಧ ಹೋರಾಡುವುದು ಮತ್ತು ಹಾರ್ಮೋನುಗಳ ಸಮತೋಲನವನ್ನು ಕಾಪಾಡುವಂತಹ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಈ ಬಗ್ಗೆ ಹೆಲ್ತ್ ಶಾಟ್ಸ್ ಆಹಾರ ತಜ್ಞೆ ವೀಣಾ ವಿ ಅವರು ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದು, ಆಹಾರದಲ್ಲಿ ಚಕ್ರಮೊಗ್ಗುಗಳನ್ನು ಏಕೆ ಸೇರಿಸಬೇಕು ಅದನ್ನು ಹೇಗೆ ಬಳಸಬಹುದು ಎಂದು ತಿಳಿಸಿಕೊಟ್ಟಿದ್ದಾರೆ.

ಚಕ್ರಮೊಗ್ಗುಗಳು ವೈದ್ಯಕೀಯ ಪ್ರಯೋಜನಗಳೇನು? ಇದು ಒದಗಿಸುವ ಹಲವಾರು ಔಷಧೀಯ ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ

1. ಉರಿಯೂತದ ಪರಿಸ್ಥಿತಿಗಳು / ಅಸ್ವಸ್ಥತೆಗಳ ವಿರುದ್ಧ ಹೋರಾಡುತ್ತದೆ:

ಸೋಂಕುಗಳ ವಿರುದ್ಧ ಹೋರಾಡಲು ಚಕ್ರಮೊಗ್ಗುಗಳು ಉತ್ತಮ ಮಸಾಲೆಗಳಲ್ಲಿ ಒಂದಾಗಿದೆ. ಅಧ್ಯಯನಗಳ ಪ್ರಕಾರ, ಬ್ಯಾಕ್ಟೀರಿಯಾದ ಸೋಂಕುಗಳನ್ನು ಒಳಗೊಂಡಂತೆ ನಿರಂತರ ಸೋಂಕುಗಳನ್ನು ಗುಣಪಡಿಸುವಲ್ಲಿಈ ಮಸಾಲೆ ಪರಿಣಾಮಕಾರಿ ಎಂದು ಕಂಡು ಬಂದಿದೆ.

2. ಹಾರ್ಮೋನುಗಳ ಸಮತೋಲನವನ್ನು ಕಾಪಾಡುತ್ತದೆ:

ಚಕ್ರಮೊಗ್ಗುಗಳು ಅಥವಾ ಸ್ಟಾರ್ ಸೋಂಪು ಅನೆಥೋಲ್ ಅನ್ನು ಹೊಂದಿರುತ್ತದೆ, ಇದು ನಮ್ಮ ದೇಹದಲ್ಲಿ ಋತುಚಕ್ರದ ಸೆಳೆತವನ್ನು ನಿಯಂತ್ರಿಸಲು ಮತ್ತು ಇತರ ಹಾರ್ಮೋನುಗಳ ಬದಲಾವಣೆಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.

3. ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ:

ಚಕ್ರಮೊಗ್ಗುಗಳು ಕ್ವೆರ್ಸೆಟಿನ್ ಮತ್ತು ಲಿನಾಲೂಲ್ ನಂತಹ ಉತ್ತಮ ಉತ್ಕರ್ಷಣ ನಿರೋಧಕಗಳಿಂದ ತುಂಬಿದೆ, ಇವು ಜೀವಕೋಶಗಳನ್ನು ರಕ್ಷಿಸುವ ಮೂಲಕ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುವ ಮೂಲಕ ಫ್ರೀ ರಾಡಿಕಲ್ ಗಳ ವಿರುದ್ಧ ಹೋರಾಡುತ್ತದೆ.

ಆಹಾರದಲ್ಲಿ ಸ್ಟಾರ್ ಸೋಂಪನ್ನು ಹೇಗೆ ಬಳಸಲಾಗುತ್ತದೆ?

ಸ್ಟಾರ್ ಸೋಂಪನ್ನು ವಿವಿಧ ಆಹಾರಗಳಲ್ಲಿ ಬೇರೆ ಬೇರೆ ರುಚಿಗಳಿಗೆ ಬಳಸಬಹುದು. ಚಹಾ, ಪಲ್ಯ ಇನ್ನು ಕೆಲವೊಮ್ಮೆ ಇದನ್ನು ಉಪ್ಪಿನಕಾಯಿಯಲ್ಲಿಯೂ ಸೇರಿಸಲಾಗುತ್ತದೆ. ಹಣ್ಣುಗಳು ಮತ್ತು ಚಟ್ನಿಗಳನ್ನು ಸಂರಕ್ಷಿಸಲು ಸಹ ಇದನ್ನು ಬಳಸಲಾಗುತ್ತದೆ. ಕೆಲವೊಮ್ಮೆ ಬಿರಿಯಾನಿಯಲ್ಲಿಯೂ ಸಹ ಬಳಸುತ್ತಾರೆ. ಇನ್ನು ಈ ಚಕ್ರಮೊಗ್ಗುಗಳನ್ನು ಬೇಕಿಂಗ್ ನಲ್ಲಿ ಬಳಸಬಹುದು, ಕುಕೀಗಳು, ಕೇಕ್ ಗಳು ಮತ್ತು ಬ್ರೆಡ್ ಗೆ ವಿಶಿಷ್ಟ ರುಚಿಯನ್ನು ಇದು ಸೇರಿಸುತ್ತದೆ.

ಹೆಚ್ಚು ಸ್ಟಾರ್ ಸೋಂಪು ಬಳಸುವುದರಿಂದ ಉಂಟಾಗುವ ಅಡ್ಡಪರಿಣಾಮಗಳು ಯಾವುವು?

ಅತಿಯಾದ ಸೇವನೇ ಯಾವುದರಲ್ಲಿಯೂ ಒಳ್ಳೆಯದಲ್ಲ. ಹಾಗಾಗಿ ಇದರಲ್ಲಿಯೂ ಈ ಅಂಶವನ್ನು ಮರೆಯಬಾರದು. ಈ ಮಸಾಲೆಯನ್ನು ಅತಿಯಾಗಿ ಸೇವಿಸುವುದರಿಂದ ಕೆಲವು ಅಪಾಯಗಳಿವೆ. ಇದನ್ನು ಮಿತವಾಗಿ ಬಳಸಬೇಕು, ಇಲ್ಲದಿದ್ದರೆ ಇದು ಅಲರ್ಜಿ, ಸಣ್ಣ ಸೆಳೆತ, ವಾಕರಿಕೆಗೆ ಕಾರಣವಾಗಬಹುದು. ಇದಲ್ಲದೆ, ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆಯೂ ಸಹ ಪರಿಣಾಮ ಬೀರಬಹುದು.

ಇನ್ನಷ್ಟು ಜೀವನಶೈಲಿಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ