ಚಳಿಗಾಲದಲ್ಲಿ ಚಳಿ ಹೆಚ್ಚಾದಂತೆ ಅನೇಕರು ಉಷ್ಣತೆಗಾಗಿ ರೂಮ್ ಹೀಟರ್‌ಗಳನ್ನು ಬಳಸುತ್ತಾರೆ. ಆದರೆ ರೂಂ ಹೀಟರ್‌ಗಳನ್ನು ಬಳಸುವುದರಿಂದ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಎಸಿ ಬಳಸುವುದರಿಂದ ಯಾವ ರೀತಿಯ ಆರೋಗ್ಯಕ್ಕೆ ತೊಂದರೆ ಆಗುತ್ತದೆಯೋ ಅದೇ ರೀತಿ ಹೀಟರ್ಗಳಿಂದಲೂ ತೊಂದರೆ ಉಂಟಾಗುತ್ತದೆ. ರೂಂ ಹೀಟರ್‌ಗಳು ನಿಮ್ಮ ಆರೋಗ್ಯದ ಮೇಲೆ ಯಾವ ರೀತಿಯಲ್ಲಿ ನೆಗೆಟಿವ್ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
ಶುಷ್ಕತೆ:
ಹೀಟರ್‌ಗಳು ಗಾಳಿಯ ಆರ್ದ್ರತೆಯನ್ನು ತೀವ್ರವಾಗಿ ಕಡಿಮೆ ಮಾಡುತ್ತದೆ. ಇದು ಒಣ ಚರ್ಮ, ಕಣ್ಣು ನೋವು, ಗಂಟಲು ನೋವು ಮತ್ತು ಸೈನಸ್‌ಗೆ ಕಾರಣವಾಗುತ್ತದೆ. ಇದು ಅಸ್ವಸ್ಥತೆ, ಕಿರಿಕಿರಿಯನ್ನು ಉಂಟುಮಾಡಬಹುದು ಮತ್ತು ಉಸಿರಾಟದ ಸೋಂಕುಗಳಿಗೆ ಕಾರಣವಾಗಬಹುದು.
ಕಾರ್ಬನ್ ಮಾನಾಕ್ಸೈಡ್ ವಿಷ:
ದೋಷಯುಕ್ತ ಇಂಧನದಿಂದ ಕೂಡಿದ ಹೀಟರ್‌ಗಳು ಕಾರ್ಬನ್ ಮಾನಾಕ್ಸೈಡ್ ಅನ್ನು ಸೋರಿಕೆ ಮಾಡಬಹುದು. ಇದು ಬಣ್ಣರಹಿತ, ವಾಸನೆಯಿಲ್ಲದ ಅನಿಲವಾಗಿದ್ದು, ಆರೋಗ್ಯಕ್ಕೆ ಮಾರಕವಾಗಬಹುದು. ಇದರ ಆರಂಭಿಕ ಲಕ್ಷಣಗಳು ತಲೆನೋವು, ತಲೆ ತಿರುಗುವಿಕೆ, ವಾಕರಿಕೆ ಮತ್ತು ಆಯಾಸವನ್ನು ಒಳಗೊಂಡಿರುತ್ತದೆ.
ಇದನ್ನೂ ಓದಿ: ಬಿಡುವಿಲ್ಲದ ಬದುಕಲ್ಲೂ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?
ಬೆಂಕಿಯ ಅಪಾಯಗಳು:
ಅತಿಯಾಗಿ ಬಿಸಿಯಾದ ಹೀಟರ್‌ಗಳನ್ನು ಸುಡುವ ವಸ್ತುಗಳ ಬಳಿ ಇಡುವುದರಿಂದ ಸುಲಭವಾಗಿ ಬೆಂಕಿ ಹೊತ್ತಿಕೊಳ್ಳಬಹುದು.
ಅಲರ್ಜಿ ಮತ್ತು ಆಸ್ತಮಾ:
ಶುಷ್ಕ ಗಾಳಿಯು ಧೂಳು ಮತ್ತು ಪರಾಗ ಕಣಗಳನ್ನು ಪ್ರಚೋದಿಸುವ ಮೂಲಕ ಅಲರ್ಜಿ ಮತ್ತು ಆಸ್ತಮಾ ಸಮಸ್ಯೆಯನ್ನು ಇನ್ನಷ್ಟು ಹದಗೆಡಿಸುತ್ತದೆ.
ಕಣ್ಣು ಮತ್ತು ಚರ್ಮದ ಕಿರಿಕಿರಿ:
ಹೀಟರ್‌ಗಳಿಂದ ಒಣ ಗಾಳಿ ಮತ್ತು ಧೂಳಿನ ಕಣಗಳು ಕಣ್ಣಿನ ಸಮಸ್ಯೆ ಮತ್ತು ಕಿರಿಕಿರಿಯನ್ನು ಉಂಟುಮಾಡಬಹುದು.
ಇದನ್ನೂ ಓದಿ: ನಿದ್ರೆ ಮಾಡಲು ಪರದಾಡುತ್ತೀರಾ?; ನಿದ್ರಾಹೀನತೆ ಕ್ಯಾನ್ಸರ್ಗೂ ಕಾರಣವಾದೀತು ಎಚ್ಚರ!
ಅಧಿಕ ಬಿಸಿಯಾಗುವುದು:
ತುಂಬಾ ಬಿಸಿಯಾಗಿರುವ ರೂಮಿನಲ್ಲಿ ಇರುವುದರಿಂದ ದೇಹದ ನಿರ್ಜಲೀಕರಣ, ತಲೆತಿರುಗುವಿಕೆ ಮತ್ತು ಶಾಖದ ಏರಿತಕ್ಕೆ ಕಾರಣವಾಗಬಹುದು.
ನಿದ್ರಾ ಭಂಗ:
ಶುಷ್ಕ ಗಾಳಿಯು ನಿದ್ರಾಹೀನತೆಗೆ ಕಾರಣವಾಗಬಹುದು. ಇದರಿಂದ ದಿನವಿಡೀ ಆಯಾಸ ಉಂಟಾಗಿ ಆರೋಗ್ಯವನ್ನು ಹಾಳು ಮಾಡುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ