ಊಟ ಮಾಡದಿದ್ದರೆ ನಿಮ್ಮ ಉತ್ಪಾದಕತೆ ಮೇಲೆ ಯಾವ ರೀತಿಯ ಪರಿಣಾಮವಾಗುತ್ತದೆ?

|

Updated on: Jan 03, 2024 | 5:30 PM

ಸರಿಯಾಗಿ ಆಹಾರ ಸೇವಿಸದಿದ್ದರೆ ಆಯಾಸ ಮತ್ತು ಸೋಮಾರಿತನವನ್ನು ಅನುಭವಿಸಬೇಕಾಗುತ್ತದೆ. ಇದು ದಿನವಿಡೀ ನಿಮ್ಮ ಉತ್ಪಾದಕತೆಯ ಮೇಲೆ ಪರಿಣಾಮ ಬೀರುತ್ತದೆ. ಇವು ಅನಿಯಮಿತ ಊಟ ಅಥವಾ ಉಪಹಾರ, ರಾತ್ರಿಯ ಊಟ ಅಥವಾ ಊಟವನ್ನು ಬಿಟ್ಟುಬಿಡುವುದರಿಂದಾಗುವ ದುಷ್ಪರಿಣಾಮಗಳಾಗಿವೆ.

ಊಟ ಮಾಡದಿದ್ದರೆ ನಿಮ್ಮ ಉತ್ಪಾದಕತೆ ಮೇಲೆ ಯಾವ ರೀತಿಯ ಪರಿಣಾಮವಾಗುತ್ತದೆ?
ಸಾಂದರ್ಭಿಕ ಚಿತ್ರ
Follow us on

ಆಧುನಿಕತೆಯ ಬಿಡುವಿಲ್ಲದ ಜೀವನಶೈಲಿಯಲ್ಲಿ ಕೆಲವರಿಗೆ ಊಟ ಮಾಡಲು ಕೂಡ ಸಮಯ ಸಿಗುವುದಿಲ್ಲ. ಊಟ ಸ್ಕಿಪ್ ಮಾಡುವುದು ಹಲವರಿಗೆ ಅಭ್ಯಾಸವಾಗಿ ಬಿಟ್ಟಿರುತ್ತದೆ. ಆದರೆ, ಬೆಳಗ್ಗೆ, ಮಧ್ಯಾಹ್ನ, ಸಂಜೆ ಅಥವಾ ರಾತ್ರಿ ಉತ್ತಮ ಆಹಾರ ಸೇವಿಸುವುದು ನಮ್ಮ ಆರೋಗ್ಯಕ್ಕೆ ಮಾತ್ರವಲ್ಲ ಉತ್ಪಾದಕತೆಗೂ ಅತ್ಯಂತ ಅಗತ್ಯವಾಗಿದೆ. ಬೆಳಿಗ್ಗೆ ನಮ್ಮ ಆಫೀಸಿಗೆ ತಲುಪುವ ಭರದಲ್ಲಿ ಸರಿಯಾಗಿ ತಿಂಡಿ ತಿನ್ನಲು ಆಗುವುದಿಲ್ಲ. ಕೆಲವರಿಗೆ ಬೆಳಗ್ಗೆ ತಿಂಡಿ ತಿನ್ನುವ ಅಭ್ಯಾಸವೇ ಬಿಟ್ಟುಹೋಗುತ್ತದೆ. ಮಧ್ಯಾಹ್ನವೂ ಇದೇ ರೀತಿ ಮಾಡಿದರೆ ನಿಮ್ಮ ಆರೋಗ್ಯ ಹದಗೆಡುತ್ತದೆ.

ಸರಿಯಾಗಿ ಆಹಾರ ಸೇವಿಸದಿದ್ದರೆ ಆಯಾಸ ಮತ್ತು ಸೋಮಾರಿತನವನ್ನು ಅನುಭವಿಸಬೇಕಾಗುತ್ತದೆ. ಇದು ದಿನವಿಡೀ ನಿಮ್ಮ ಉತ್ಪಾದಕತೆಯ ಮೇಲೆ ಪರಿಣಾಮ ಬೀರುತ್ತದೆ. ಇವು ಅನಿಯಮಿತ ಊಟ ಅಥವಾ ಉಪಹಾರ, ರಾತ್ರಿಯ ಊಟ ಅಥವಾ ಊಟವನ್ನು ಬಿಟ್ಟುಬಿಡುವುದರಿಂದಾಗುವ ದುಷ್ಪರಿಣಾಮಗಳಾಗಿವೆ.

ಇದನ್ನೂ ಓದಿ: ಊಟವಾದ ಬಳಿಕ ಇನ್ಸುಲಿನ್ ಲೆವೆಲ್ ಜಾಸ್ತಿಯಾಗುತ್ತಿದೆಯೇ? ಚಿಂತಿಸಬೇಡಿ!

ಸೆಲೆಬ್ರಿಟಿ ಪೌಷ್ಟಿಕತಜ್ಞ ನ್ಮಾಮಿ ಅಗರ್ವಾಲ್ ಪ್ರಕಾರ, ಈ ಅಭ್ಯಾಸವು ನಮ್ಮ ದೇಹದ ಮೇಲೆ ನೇರ ಪರಿಣಾಮ ಬೀರುತ್ತದೆ. ತನ್ನ ಇನ್‌ಸ್ಟಾಗ್ರಾಮ್ ಪುಟದಲ್ಲಿನ ವೀಡಿಯೊದಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಅವರು, ಅನಿಯಮಿತವಾಗಿ ತಿನ್ನುವುದು ನಮ್ಮ ಶಕ್ತಿಯ ಮಟ್ಟವನ್ನು ಕಡಿಮೆ ಮಾಡುತ್ತದೆ. ಸರಿಯಾಗಿ ಆಹಾರವನ್ನು ಸೇವಿಸದಿರುವುದು ಅಥವಾ ಊಟವನ್ನು ನಿರ್ಲಕ್ಷಿಸುವುದು ನಮ್ಮ ತಲೆಯನ್ನು ತಿರುಗಿಸುವಂತೆ ಮಾಡುತ್ತದೆ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಕುಸಿತ ಉಂಟುಮಾಡುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಚಳಿಗಾಲದಲ್ಲಿ ಹೃದಯಾಘಾತದ ಅಪಾಯದಿಂದ ಪಾರಾಗುವುದು ಹೇಗೆ?

ನಮ್ಮ ಮೆದುಳು ಗ್ಲೂಕೋಸ್‌ನಿಂದ ಶಕ್ತಿಯನ್ನು ಪಡೆಯುತ್ತದೆ. ನಾವು ಊಟವನ್ನು ಬಿಟ್ಟುಬಿಡುವ ಮೂಲಕ ನಮ್ಮ ಮೆದುಳಿಗೆ ಆಹಾರವನ್ನು ನೀಡದಿದ್ದಾಗ ಅದರಿಂದ ಆರೋಗ್ಯದಲ್ಲಿ ತೊಂದರೆ ಉಂಟಾಗುತ್ತದೆ. ಹಾಗೇ, ಇದು ಸೋಮಾರಿತನ ಮತ್ತು ಆಲಸ್ಯದ ಭಾವನೆಯನ್ನು ಪ್ರಚೋದಿಸುತ್ತದೆ. ಇದರಿಂದಾಗಿ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದು ಅತ್ಯಗತ್ಯ ಎಂದು ಅವರು ಇನ್​ಸ್ಟಾಗ್ರಾಂ ವಿಡಿಯೋದಲ್ಲಿ ಹೇಳಿದ್ದಾರೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:29 pm, Wed, 3 January 24