ನಿಮ್ಮ ಕಣ್ಣುಗಳ ಆರೋಗ್ಯ ಹೆಚ್ಚಿಸಲು ಈ ರೀತಿ ಮಾಡಿ ನೋಡಿ
ಸಿಟ್ರಸ್ ಹಣ್ಣುಗಳಲ್ಲಿ ಕಂಡುಬರುವ ವಿಟಮಿನ್ ಸಿ ಕಣ್ಣುಗಳಲ್ಲಿನ ರಕ್ತನಾಳಗಳನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಕಣ್ಣುಗಳ ಆರೋಗ್ಯಕ್ಕೆ ಸತು ಮತ್ತು ವಿಟಮಿನ್ ಇ ಸೇರಿದಂತೆ ಸೂಕ್ಷ್ಮ ಪೋಷಕಾಂಶಗಳ ಸರಿಯಾದ ಸಮತೋಲನವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ.
ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದರಲ್ಲಿ ಸಮತೋಲಿತ ಆಹಾರದ ಪಾತ್ರವೂ ಮಹತ್ವದ್ದು. ಹಣ್ಣುಗಳು ಮತ್ತು ತರಕಾರಿಗಳು ಕಣ್ಣಿನ ಆರೋಗ್ಯಕ್ಕೆ ಪೂರಕವಾದ ವಿಟಮಿನ್ಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತದೆ. ಪಾಲಕ್ ಮತ್ತು ಕೇಲ್‌ನಂತಹ ಹಸಿರು ಸೊಪ್ಪಿನಲ್ಲಿ ಲುಟೀನ್ ಸಮೃದ್ಧವಾಗಿದೆ. ಕೊಬ್ಬಿನ ಮೀನು (ಸಾಲ್ಮನ್, ಮ್ಯಾಕೆರೆಲ್)ನಂತಹ ಒಮೆಗಾ-3 ಕೊಬ್ಬಿನಾಮ್ಲಗಳು ಅಧಿಕವಾಗಿರುವ ಆಹಾರವನ್ನು ಸೇವಿಸುವುದು ಆರೋಗ್ಯಕರ ರೆಟಿನಾಕ್ಕೆ ಕೊಡುಗೆ ನೀಡುತ್ತದೆ. ಇದರಿಂದ ಕಣ್ಣುಗಳು ಒಣಗುವುದನ್ನು ತಪ್ಪಿಸಬಹುದು. ಸಿಟ್ರಸ್ ಹಣ್ಣುಗಳಲ್ಲಿ ಕಂಡುಬರುವ ವಿಟಮಿನ್ ಸಿ ಕಣ್ಣುಗಳಲ್ಲಿನ ರಕ್ತನಾಳಗಳನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಕಣ್ಣುಗಳ ಆರೋಗ್ಯಕ್ಕೆ ಸತು ಮತ್ತು ವಿಟಮಿನ್ ಇ ಸೇರಿದಂತೆ ಸೂಕ್ಷ್ಮ ಪೋಷಕಾಂಶಗಳ ಸರಿಯಾದ ಸಮತೋಲನವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ಬಾದಾಮಿ ಮತ್ತು ಸೂರ್ಯಕಾಂತಿ ಬೀಜಗಳು ವಿಟಮಿನ್ ಇಯ ಅತ್ಯುತ್ತಮ ಮೂಲಗಳಾಗಿವೆ. ಸಾಕಷ್ಟು ಪ್ರಮಾಣದ ನೀರನ್ನು ಕುಡಿಯುವುದರಿಂದ ಕಣ್ಣುಗಳು ಒಣಗದಂತೆ ತಡೆಯಬಹುದು. ದೀರ್ಘಾವಧಿಗೆ ಟಿವಿ, ಮೊಬೈಲ್, ಕಂಪ್ಯೂಟರ್ಗಳನ್ನು ನೋಡುತ್ತಿರುವುದರಿಂದಲೂ ಕಣ್ಣಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕಾಗಿ 20-20-20 ನಿಯಮ ಅಂದರೆ ಪ್ರತಿ 20 ನಿಮಿಷಗಳ ಕಾಲ 20 ಸೆಕೆಂಡ್‌ಗಳ ಕಾಲ 20 ಅಡಿ ದೂರದಲ್ಲಿರುವ ಯಾವುದನ್ನಾದರೂ ನೋಡುವುದನ್ನು ರೂಢಿಸಿಕೊಳ್ಳಿ. ಇದು ದೀರ್ಘಕಾಲದ ಕಂಪ್ಯೂಟರ್ ಬಳಕೆಗೆ ಸಂಬಂಧಿಸಿದ ಕಣ್ಣಿನ ಆಯಾಸವನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಕಣ್ಣಿನ ಕ್ಯಾನ್ಸರ್ ಲಕ್ಷಣಗಳೇನು? ಅದನ್ನು ತಡೆಗಟ್ಟುವುದು ಹೇಗೆ?
ಬಿಸಿಲಿಗೆ ಹೋಗುವಾಗ UV ರಕ್ಷಣೆಯೊಂದಿಗೆ ಸನ್‌ಗ್ಲಾಸ್‌ಗಳನ್ನು ಧರಿಸುವ ಮೂಲಕ ನಿಮ್ಮ ಕಣ್ಣುಗಳನ್ನು ಹಾನಿಕಾರಕ UV ಕಿರಣಗಳಿಂದ ರಕ್ಷಿಸುವುದು ಸರಳವಾದ ಆದರೆ ಪರಿಣಾಮಕಾರಿ ಅಭ್ಯಾಸವಾಗಿದೆ. UV ಕಿರಣಗಳಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಕಣ್ಣಿನ ಪೊರೆಗಳು ಮತ್ತು ಇತರ ಕಣ್ಣಿನ ಸಮಸ್ಯೆಗಳಿಗೆ ಕಾರಣವಾಗಬಹುದು.
ಹಣ್ಣುಗಳು ಮತ್ತು ಕ್ಯಾರೆಟ್‌ಗಳು ಮತ್ತು ಗೆಣಸಿನಂತಹ ತರಕಾರಿಗಳು, ಕೊಬ್ಬಿನ ಮೀನು, ಅಗಸೆ ಬೀಜಗಳು ಮತ್ತು ವಾಲ್‌ನಟ್‌ಗಳಂತಹ ಒಮೆಗಾ-3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿರುವ ಆಹಾರಗಳನ್ನು ತಿನ್ನುವುದು ಕಣ್ಣುಗಳ ಆರೋಗ್ಯಕ್ಕೆ ಕೊಡುಗೆ ನೀಡುತ್ತದೆ. ಇದಲ್ಲದೆ, ವಿಟಮಿನ್ ಎ-ಭರಿತ ಆಹಾರಗಳಾದ ಮೊಟ್ಟೆಗಳು ಮತ್ತು ಡೈರಿ ಉತ್ಪನ್ನಗಳು ಮತ್ತು ವಿಟಮಿನ್ ಸಿ ಮತ್ತು ಇ ತುಂಬಿದ ಆಹಾರಗಳಾದ ಸಿಟ್ರಸ್ ಹಣ್ಣುಗಳು, ಕ್ಯಾಪ್ಸಿಕಂ ಮತ್ತು ಸೀಡ್ಸ್ ಸರಿಯಾದ ದೃಷ್ಟಿಯನ್ನು ಕಾಪಾಡಿಕೊಳ್ಳಲು ಮತ್ತು ಒಟ್ಟಾರೆ ಕಣ್ಣಿನ ಆರೋಗ್ಯವನ್ನು ಬೆಂಬಲಿಸಲು ಸಹಾಯ ಮಾಡುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ