ರಾತ್ರಿ 9 ಗಂಟೆ ಮೇಲೆ ಊಟ ಮಾಡುತ್ತೀರಾ?; ಈ ಅಪಾಯದ ಬಗ್ಗೆ ಎಚ್ಚರವಿರಲಿ
ತಡರಾತ್ರಿಯ ಊಟವು ಮಹಿಳೆಯರಲ್ಲಿ ಅಪಧಮನಿಕಾಠಿಣ್ಯ, ಬೊಜ್ಜು, ಅಸಹಜ ಲಿಪಿಡ್ ಪ್ರೊಫೈಲ್‌ಗಳು ಮತ್ತು ಮೆಟಾಬಾಲಿಕ್ ಸಿಂಡ್ರೋಮ್‌ಗೆ ಕಾರಣವಾಗುತ್ತದೆ ಎಂದು ಅಧ್ಯಯನ ತಿಳಿಸಿದೆ.
ಹೊಸ ಹೊಸ ರೀತಿಯ ಉದ್ಯೋಗ, ಜೀವನಶೈಲಿಯಿಂದಾಗಿ ನಮ್ಮ ಊಟ, ನಿದ್ರೆಯ ಸಮಯವೂ ಬದಲಾಗುತ್ತಿದೆ. ನಮ್ಮ ಊಟ ಹಾಗೂ ನಿದ್ರೆ ಕೂಡ ಆರೋಗ್ಯದ ವಿಷಯದಲ್ಲಿ ಬಹಳ ಮುಖ್ಯ ಪರಿಣಾಮ ಬೀರುತ್ತದೆ ಎಂಬುದು ನಿಮಗೆ ತಿಳಿದಿರಲಿ. ಇತ್ತೀಚಿನ ಅಧ್ಯಯನವೊಂದು ನಮ್ಮ ಊಟದ ಸಮಯವು ಹೃದಯ ರಕ್ತನಾಳದ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಸಿದೆ. ನೇಚರ್ ಕಮ್ಯುನಿಕೇಷನ್ಸ್‌ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ರಾತ್ರಿ 9 ಗಂಟೆಯ ನಂತರ ಊಟ ಮಾಡುವವರಿಗೆ ಸ್ಟ್ರೋಕ್ ಅಥವಾ ಪಾರ್ಶ್ವವಾಯು ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.
ನಮ್ಮ ದೇಹವು ಸಿರ್ಕಾಡಿಯನ್ ಚಕ್ರಗಳನ್ನು ಅನುಸರಿಸುತ್ತದೆ. ಇದು ನಮ್ಮ ನಿದ್ರೆಯ ಮತ್ತು ಊಟ ಮತ್ತಿತರ ಎಲ್ಲ ದಿನನಿತ್ಯದ ಕಾರ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ಹೃದಯ ಮತ್ತು ರಕ್ತನಾಳಗಳ ಕಾರ್ಯಗಳನ್ನು ಕೂಡ ನಿಯಂತ್ರಿಸುತ್ತದೆ. ಆಹಾರ ಸೇವನೆ ಮತ್ತು ಉಪವಾಸದ ಸಮಯಗಳಲ್ಲಿನ ಬದಲಾವಣೆಗಳು ಮತ್ತು ಹೃದಯರಕ್ತನಾಳದ ಕಾಯಿಲೆಯ (CVD) ಸಂಭವದ ನಡುವಿನ ಸಂಬಂಧವನ್ನು ಅಧ್ಯಯನವು ತಿಳಿಸಿದೆ. ಜಾಗತಿಕ ರೋಗ ಮತ್ತು ಸಾವಿಗೆ CVD ಪ್ರಮುಖ ಕಾರಣವಾಗಿರುವುದರಿಂದ, ದೋಷಯುಕ್ತ ಆಹಾರ ಪದ್ಧತಿಗಳು ಪಾರ್ಶ್ವವಾಯುಗೆ ಕಾರಣವಾಗಲಿದೆ ಎಂದು ಅಧ್ಯಯನ ತಿಳಿಸಿದೆ.
ಇದನ್ನೂ ಓದಿ: ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ; ಇಲ್ಲಿದೆ ಕಾರಣ
ನಮ್ಮ ಚಯಾಪಚಯ ಮತ್ತು ಹೃದಯರಕ್ತನಾಳದ ಆರೋಗ್ಯವನ್ನು ಕಾಪಾಡಿಕೊಳ್ಳಲು ಊಟದ ಪ್ರಾಮುಖ್ಯತೆಯನ್ನು ಸಂಶೋಧನೆ ಎತ್ತಿ ತೋರಿಸುತ್ತದೆ. ತಡರಾತ್ರಿಯ ಊಟವು ಮಹಿಳೆಯರಲ್ಲಿ ಅಪಧಮನಿಕಾಠಿಣ್ಯ, ಬೊಜ್ಜು, ಅಸಹಜ ಲಿಪಿಡ್ ಪ್ರೊಫೈಲ್‌ಗಳು ಮತ್ತು ಮೆಟಾಬಾಲಿಕ್ ಸಿಂಡ್ರೋಮ್‌ಗೆ ಕಾರಣವಾಗುತ್ತದೆ ಎಂದು ಅಧ್ಯಯನ ತಿಳಿಸಿದೆ.
ಇದನ್ನೂ ಓದಿ: ಸ್ಟ್ರೋಕ್ ಆಗಿದೆ ಎಂಬುದರ ಲಕ್ಷಣಗಳಿವು
ರಾತ್ರಿ 9 ಗಂಟೆಯ ನಂತರ ಆಹಾರ ಸೇವಿಸುವುದರಿಂದ ಶೇ. 28ರಷ್ಟು ಪಾರ್ಶ್ವವಾಯುವಿನ ಅಪಾಯ ಉಂಟಾಗುತ್ತದೆ ಎಂದು ಅಧ್ಯಯನ ತಿಳಿಸಿದೆ. ಈ ಅಧ್ಯಯನವು ಊಟದ ಸಮಯ-ಹೃದಯನಾಳದ ಆರೋಗ್ಯಕ್ಕೆ ಇರುವ ಸಂಬಂಧದ ಮೇಲೆ ಬೆಳಕು ಚೆಲ್ಲುತ್ತದೆ. ರಾತ್ರಿ ಪಾಳಿಯ ಕೆಲಸ ಮತ್ತು ಇತರ ಜೀವನಶೈಲಿಯ ಅಂಶಗಳಿಂದ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತಿದೆ. ಊಟದ ಸಮಯ, ಸಿರ್ಕಾಡಿಯನ್ ಲಯಗಳು ಮತ್ತು ಒಟ್ಟಾರೆ ಆರೋಗ್ಯದ ನಡುವಿನ ಸಂಕೀರ್ಣ ಸಂಬಂಧದ ಕುರಿತು ಹೆಚ್ಚಿನ ಸಂಶೋಧನೆಗೆ ಈ ಅಧ್ಯಯನವು ಒತ್ತಾಯಿಸಿದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ