Eye Care: ಊದಿಕೊಂಡ ನಿಮ್ಮ ಕಣ್ಣುಗಳ ಸಮಸ್ಯೆಗೆ ತ್ವರಿತ ಪರಿಹಾರಗಳು

| Updated By: shruti hegde

Updated on: Aug 26, 2021 | 12:57 PM

ಸಾಮಾನ್ಯವಾಗಿ ಕಣ್ಣುಗಳು ಊದಿಕೊಳ್ಳುವ ಸಮಸ್ಯೆ ಜನರಲ್ಲಿ ಆಗಾಗ ಕಂಡು ಬರುತ್ತವೆ. ನಿದ್ರೆ ಸರಿಯಾಗದಿದ್ದಾಗ, ಕಣ್ಣಿಗೆ ಹೆಚ್ಚು ಆಯಾಸ ಉಂಟಾದಾಗ ಈ ಸಮಸ್ಯೆ ಹೆಚ್ಚು ಕಾಣಿಸುತ್ತದೆ.

Eye Care: ಊದಿಕೊಂಡ ನಿಮ್ಮ ಕಣ್ಣುಗಳ ಸಮಸ್ಯೆಗೆ ತ್ವರಿತ ಪರಿಹಾರಗಳು
ಸಾಂಕೇತಿಕ ಚಿತ್ರ
Follow us on

ಅತಿಸೂಕ್ಷ್ಮ ಅಂಗವಾದ ಕಣ್ಣಿನ ಸುರಕ್ಷತೆಯ ಬಗ್ಗೆ ಹೆಚ್ಚು ಕಾಳಜಿವಹಿಸುವುದು ಉತ್ತಮ. ಸಾಮಾನ್ಯವಾಗಿ ಕಣ್ಣುಗಳು ಊದಿಕೊಳ್ಳುವ ಸಮಸ್ಯೆ ಜನರಲ್ಲಿ ಆಗಾಗ ಕಂಡು ಬರುತ್ತವೆ. ನಿದ್ರೆ ಸರಿಯಾಗದಿದ್ದಾಗ, ಕಣ್ಣಿಗೆ ಹೆಚ್ಚು ಆಯಾಸ ಉಂಟಾದಾಗ ಈ ಸಮಸ್ಯೆ ಹೆಚ್ಚು ಕಾಣಿಸುತ್ತದೆ. ಕಣ್ಣಿನ ಆರೋಗ್ಯದ ಕುರಿತಾಗಿ ಹೆಚ್ಚು ನಿರ್ಲಕ್ಷ್ಯ ತೋರುವುದು ಒಳಿತಲ್ಲ. ಹಾಗಿರುವಾಗ ಕಣ್ಣಿನ ಸುರಕ್ಷತೆಗಾಗಿ ಊದಿಕೊಂಡ ಕಣ್ಣು ಹಾಗೂ ಉರಿತಕ್ಕೊಳಗಾದ ಕಣ್ಣಿನ ಸಮಸ್ಯೆ ಪರಿಹಾರಕ್ಕಾಗಿ ತ್ವರಿತ ಪರಿಹಾರ ಕ್ರಮಗಳು ಈ ಕೆಳಗಿನಂತಿವೆ.

ಕೋಲ್ಡ್ ಕಂಪ್ರೆಸ್
ಉರಿಯೂತ ಅಥವಾ ಊತಕ್ಕೆ ಒಳಗಾದ ಕಣ್ಣಿನ ಸಮಸ್ಯೆ ಪರಿಹಾರಕ್ಕಾಗಿ ಕೋಲ್ಡ್ ಕಂಪ್ರೆಸ್ ಬಳಸುವುದು ಉತ್ತಮ. ಇದರಿಂದ ಕಣ್ಣು ತಣ್ಣನೇಯ ಅನುಭವ ಪಡೆಯುತ್ತದೆ. ಚರ್ಮದ ಮೇಲೆ ಕೋಲ್ಡ್ ಕಂಪ್ರೆಸ್ ಅನ್ವಯಿಸುವುದರಿಂದ ರಕ್ತದ ಹರಿವನ್ನು ಕಡಿಮೆ ಮಾಡಬಹುದು. ಐಸ್​ಪ್ಯಾಕ್​, ಕೋಲ್ಡ್ ಆದ ತರಕಾರಿಯಂಥಹ ಯಾವುದೇ ವಸ್ತುವನ್ನು ಬಳಸಬಹುದು.

ಸೌತೆಕಾಯಿ
ಸೌತೆಕಾಯಿಯನ್ನು ಹೋಳುಗಳನ್ನಾಗಿ ಮಾಡಿ ಅವುಗಳನ್ನು ಕಣ್ಣಿನ ಮೇಲೆ ಇಟ್ಟುಕೊಂಡು ಅರ್ಧ ನಿಮಿಷಗಳ ಕಾಲ ಹಾಗೆಯೇ ಇರಿ. ಇದರಿಂದ ಕಣ್ಣು ತಣ್ಣನೇಯ ಅನುಭವ ಪಡೆಯುತ್ತದೆ. ಕೆಂಪಾದ ಕಣ್ಣು ಮತ್ತು ಹೆಚ್ಚು ಆಯಾಸದಿಂದ ಊದಿಕೊಂಡಿರುವ ಕಣ್ಣಿನ ಆರೋಗ್ಯಕ್ಕೆ ಇದು ಸಹಾಯಕ.

ಆಲೂಗಡ್ಡೆ ಚೂರುಗಳು
ಮನೆಯಲ್ಲಿ ಸೌತೆಕಾಯಿ ಇಲ್ಲದಿದ್ದರೆ, ಅದರ ಬದಲಿಗೆ ಆಲೂಗಡ್ಡೆಯನ್ನು ಬಳಸಬಹುದು. ಸಣ್ಣ ಆಲೂಗಡ್ಡೆಯನ್ನು ತೆಗೆದುಕೊಂಡು ತೆಳುವಾಗಿ ಕತ್ತರಿಸಿ. ಅದನ್ನು 10- 20 ನಿಮಿಷಗಳ ಕಾಲ ಮುಚ್ಚಿದ ಕಣ್ಣುಗಳ ಮೇಲೆ ಇಟ್ಟುಕೊಳ್ಳಿ. ನಂತರ ಕಣ್ಣನ್ನು ತಣ್ಣೀರಿನಿಂದ ತೊಳೆಯಿರಿ.

ಅಲೋವೆರಾ ಜೆಲ್
ಉರಿಯೂತದ ಲಕ್ಷಣಗಳಿಂದಾಗಿ ಉಬ್ಬಿದ ಕಣ್ಣುಗಳು ಮತ್ತು ಕೆಂಪಾದ ಕಣ್ಣಿನಿಂದ ಪರಿಹಾರ ಕಂಡುಕೊಳ್ಳಲು ಸಹಾಯವಾಗುತ್ತದೆ. ಕಣ್ಣಿನಲ್ಲಿ ಬಿದ್ದ ಧೂಳಿನಿಂದ ಕಿರಿಕಿರಿ ಅನುಭವಿಸುತ್ತಿದ್ದರೂ ಈ ಔಷಧದಿಂದ ಪರಿಹಾರ ಪಡೆದುಕೊಳ್ಳಬಹುದು. ಆದರೆ ಮನೆಯಲ್ಲಿ ಬೆಳೆಸಿದ ನೈಸರ್ಗಿಕ ಅಲೋವೆರಾವನ್ನು ಬಳಸಿ.

ಇದನ್ನೂ ಓದಿ:

Health Tips: ಕಣ್ಣಿನ ಮೇಲೆ ಬಿಳಿ ಕಲೆ ಇದೆಯೇ? ಇದು ಈ ಕಾಯಿಲೆಯ ಮುನ್ಸೂಚನೆ ಎಚ್ಚರ ಇರಲಿ

Eye Care: ಕಣ್ಣುಗಳ ಆರೋಗ್ಯ ಕಾಪಾಡಲು ಹೀಗೆ ಮಾಡಿ

(Health Tips quick remedies for swollen eyes check in kannada)