ಬೇಸಿಗೆಯ ಹೀಟ್​ನಿಂದ ತಪ್ಪಿಸಿಕೊಳ್ಳೋಕೆ ಗುಲಾಬಿ ಹೂವು ಸಹಕಾರಿ!

ಬೇಸಿಗೆ ಸಮಯದಲ್ಲಿ ಜ್ಯೂಸ್​ ಹಾಗೂ ಎಳನೀರು ಕುಡಿಯೋಕೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಇದರ ಜತೆಗೆ ಸಾಕಷ್ಟು ಡ್ರಿಂಕ್​ಗಳು ಸೂರ್ಯನ ಕಿರಣಗಳಿಂದ ರಕ್ಷಣೆ ನೀಡಬಲ್ಲವು.

ಬೇಸಿಗೆಯ ಹೀಟ್​ನಿಂದ ತಪ್ಪಿಸಿಕೊಳ್ಳೋಕೆ ಗುಲಾಬಿ ಹೂವು ಸಹಕಾರಿ!
Follow us
ರಾಜೇಶ್ ದುಗ್ಗುಮನೆ
| Updated By: ಆಯೇಷಾ ಬಾನು

Updated on: Mar 30, 2021 | 6:42 AM

ಬೇಸಿಗೆಯನ್ನು ಅನೇಕರು ದ್ವೇಷಿಸುತ್ತಾರೆ. ಇದಕ್ಕೆ ಕಾರಣ, ಸುಡುವ ಬಿಸಿಲು. ಬಿಸಿಲು ಜಾಸ್ತಿ ಆದರೆ, ತಲೆಸುತ್ತಿ ಬೀಳುವ ಸಾಧ್ಯತೆ ಇರುತ್ತದೆ. ಬೇಸಿಗೆಯಲ್ಲಿ ನೀರು ಕಡಿಮೆ ಕುಡಿದರೆ ನಿರ್ಜಲೀಕರಣ ಕೂಡ ಉಂಟಾಗುತ್ತದೆ. ಬಿಸಿಲಿನ ಹೀಟ್​ ಕಡಿಮೆ ಮಾಡಿಕೊಳ್ಳಬೇಕಾದರೆ ಕೆಲವು ಟೆಕ್ನಿಕ್​ಗಳನ್ನು ನೀವು ಉಪಯೋಗಿಸಬಹುದು.

ಬೇಸಿಗೆ ಸಮಯದಲ್ಲಿ ಜ್ಯೂಸ್​ ಹಾಗೂ ಎಳನೀರು ಕುಡಿಯೋಕೆ ಹೆಚ್ಚು ಆದ್ಯತೆ ನೀಡುತ್ತೇವೆ. ಇದರಿಂದ ನೀವು ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರಿನ ಅಂಶ ಪೂರೈಕೆ ಮಾಡಿದಂತೆ ಆಗುತ್ತದೆ. ಇದರ ಜತೆಗೆ ಸಾಕಷ್ಟು ಡ್ರಿಂಕ್​ಗಳು ಬಿಸಿಲಿನಿಂದ ನಿಮಗೆ ರಕ್ಷಣೆ ನೀಡಬಲ್ಲವು. ಅವು ಯಾವವು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಬಿಸಿಲಿಗೆ ಗುಲಾಬಿ ಜ್ಯೂಸ್​! ಗುಲಾಬಿ ಹೂವನ್ನು ಬೇಸಿಗೆಯ ಹೀಟ್​ನಿಂದ ತಪ್ಪಿಸಿಕೊಳ್ಳಲು ಬಳಕೆ ಮಾಡಬಹುದು ಎನ್ನುವ ಬಗ್ಗೆ ನಿಮಗೆ ತಿಳಿದಿದೆಯೇ? ಹೌದು, ಗುಲಾಬಿ ದಳವನ್ನು ಬಳಕೆ ಮಾಡಿಕೊಂಡು ಸಿದ್ಧಪಡಿಸುವ ಪಾನೀಯ ಸಾಕಷ್ಟು ಸಹಕಾರಿ. ಇದನ್ನು ಮಾಡುವ ವಿಧಾನದ ಬಗ್ಗೆ ಇಲ್ಲಿದೆ ಮಾಹಿತಿ.

ಗುಲಾಬಿ ಎಸಳನ್ನು ಕಿತ್ತು ತನ್ನಿ. ಅದರ ಮೇಲಿರುವ ಧೂಳನ್ನು ಸ್ವಚ್ಛವಾಗಿ ತೊಳೆದು ತೆಗೆಯಿರಿ. ಗುಲಾಬಿ ಎಸಳನ್ನು ಒಂದು ಗ್ಲಾಸ್​ಗೆ ಹಾಕಿ. ಇದಕ್ಕೆ ತುಳಸಿ ಬೀಜವನ್ನು ಸೇರಿಸಿ. ತೆಂಗಿನಕಾಯಿ ಸಕ್ಕರೆ (coconut sugar) ಬೆರೆಸಿ, ಸ್ವಲ್ಪ ಲಿಂಬು ಹಿಂಡಿ. ನಂತರ ಅದಕ್ಕೆ ನೀರು ಹಾಕಿ, ಆಗಾಗ ಕುಡಿಯುತ್ತಿರಿ. ಇದರಿಂದ ಮೊಡವೆ ಕಡಿಮೆ ಆಗುತ್ತದೆ. ಬಿಸಿಲಿನಿಂದ ಉಂಟಾಗುವ ಹೀಟ್​ ಕೂಡ ಕಡಿಮೆ ಮಾಡುತ್ತದೆ.

ಗುಲ್ಕನ್​ ಬೇಸಿಗೆಯಲ್ಲಿ ಗುಲ್ಕನ್​ ಬಳಕೆ ಮಾಡುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಗುಲ್ಕನ್​ ಅಂಗಡಿಯಲ್ಲಿ ದೊರೆಯುತ್ತದೆ. ಇದರ ಜತೆಗೆ ನೀವು ಮನೆಯಲ್ಲೇ ಇದನ್ನು ಸಿದ್ಧಪಡಿಸಬಹುದು. ಗುಲ್ಕನ್​ ತಯಾರಿಸಲು ಗುಲಾಬಿ ದಳವನ್ನು ತೆಗೆದುಕೊಳ್ಳಿ. ಅದನ್ನು ಗ್ಲಾಸ್​ ಜಾರ್​ಗೆ ಹಾಕಿ. ನಂತರ ಒಂದು ಲೇಯರ್​ ಸಕ್ಕರೆ ಹಾಕಿ. ನಂತರ ಮತ್ತೊಂದು ಲೇಯರ್​ ಗುಲಾಬಿ ಎಲೆ ಹಾಕಿ. ಇದನ್ನು ನಿತ್ಯ 6 ಗಂಟೆಗಳಕಾಲ ಬಿಸಿಲಿನಲ್ಲಿ ಇರಿಸಿ. ಒಂದು ತಿಂಗಳಲ್ಲಿ ಗುಲ್ಕನ್​ ಸಿದ್ಧವಾಗುತ್ತೆ. ಹಾಲಿಗೆ ಬೆರೆಸಿ ಗುಲ್ಕನ್​ ಸೇವಿಸಬಹುದು. ಇದು ದೇಹವನ್ನು ತಂಪಾಗಿ ಇರಿಸುವುದರ ಜತೆಗೆ ಆ್ಯಸಿಡಿ ಕಡಿಮೆ ಮಾಡುತ್ತದೆ.

ಇದನ್ನೂ ಓದಿ: Health Tips: ಬೊಜ್ಜು ಕರಗಿಸಲು ಮೆಂತ್ಯ ಉಪಯೋಗಿಸಿ; ಆರೋಗ್ಯಕರ ಜೀವನಕ್ಕೆ ಮನೆಯಲ್ಲೇ ಮದ್ದು

ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?