ಸಿಹಿ ಗೆಣಸು ಆರೋಗ್ಯಕರವೇ? ಪ್ರಯೋಜನಗಳು ಮತ್ತು ಅಡ್ಡಪರಿಣಾಮಗಳ ಬಗ್ಗೆ ಮಾಹಿತಿ ಇಲ್ಲಿದೆ

|

Updated on: Jun 23, 2023 | 6:25 AM

ಸಿಹಿ ಗೆಣಸಿನಲ್ಲಿರುವ ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳು ಕರುಳಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಜೊತೆಗೆ ಅಡ್ಡ ಪರಿಣಾಮಗಳ ಬಗ್ಗೆ ಇಲ್ಲಿದೆ ಮಾಹಿತಿ.

ಸಿಹಿ ಗೆಣಸು ಆರೋಗ್ಯಕರವೇ? ಪ್ರಯೋಜನಗಳು ಮತ್ತು ಅಡ್ಡಪರಿಣಾಮಗಳ ಬಗ್ಗೆ ಮಾಹಿತಿ ಇಲ್ಲಿದೆ
ಸಿಹಿ ಗೆಣಸು
Follow us on

ಸಿಹಿ ಗೆಣಸು ಕಾರ್ಬೋಹೈಡ್ರೇಟ್‌ ಮತ್ತು ಕ್ಯಾಲೋರಿಗಳಿಂದ ತುಂಬಿದ್ದರೂ, ಇದು ತುಂಬಾ ಆರೋಗ್ಯಕರವಾಗಿದೆ. ವಿವಿಧ ರೀತಿಯ ಸಿಹಿ ಗೆಣಸು ಅಂದರೆ ಬಿಳಿ ಅಥವಾ ಕೆನೆ ಬಣ್ಣದ ಮತ್ತು ಹಳದಿ, ಕೆಂಪು ಅಥವಾ ನೇರಳೆ ಬಣ್ಣದ ಗೆಣಸುಗಳನ್ನು ಕಾಣಬಹುದು. ಸಿಹಿ ಗೆಣಸು ಪ್ರೋಟೀನ್, ವಿಟಮಿನ್ ಎ, ವಿಟಮಿನ್ ಸಿ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕಬ್ಬಿಣ ಇತ್ಯಾದಿಗಳಿಂದ ತುಂಬಿದೆ ಎಂದು ಅಧ್ಯಯನಗಳು ಸೂಚಿಸಿವೆ. ಒಂದು ಸಿಹಿಗೆಣಸು 112 ಕ್ಯಾಲೋರಿಗಳು,0.07 ಗ್ರಾಂ ಕೊಬ್ಬುಮ, 26 ಗ್ರಾಂ ಕಾರ್ಬೋಹೈಡ್ರೇಟ್​​​ ಮತ್ತು 3.9 ಗ್ರಾಂ ಫೈಬರನ್ನು ಒಳಗೊಂಡಿದೆ.

ಸಿಹಿ ಗೆಣಸಿನ ಪ್ರಯೋಜನಗಳೇನು?

  • ಸಿಹಿ ಗೆಣಸಿನಲ್ಲಿರುವ ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳು ಕರುಳಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.
  • ಸಿಹಿ ಗೆಣಸು ವಿವಿಧ ಆಂಟಿಆಕ್ಸಿಡೆಂಟ್‌ಗಳನ್ನು ಒಳಗೊಂಡಿದ್ದು, ಇದು ಕೆಲವು ಕ್ಯಾನ್ಸರ್‌ಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.
  • ಸಿಹಿ ಗೆಣಸು ಬೀಟಾ-ಕ್ಯಾರೋಟಿನ್‌ನಲ್ಲಿ  ಸಮೃದ್ಧವಾಗಿದೆ, ಇದು ನಿಮ್ಮ ಕಣ್ಣುಗಳನ್ನು ಆರೋಗ್ಯಕರವಾಗಿಡಲು ಪ್ರಯೋಜನಕಾರಿಯಾಗಿದೆ.
  • ನೇರಳೆ ಸಿಹಿ ಗೆಣಸು ಸೇವಿಸುವುದರಿಂದ ಮೆದುಳಿನ ಕಾರ್ಯವನ್ನು ಸುಧಾರಿಸಬಹುದು.

ಇದನ್ನೂ ಓದಿ: ಮಾವಿನ ಹಣ್ಣಿನ ಗೊರಟೆಯಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜಗಳಿವೆ ಎಂದು ತಿಳಿದಿದೆಯೇ?

ಸಿಹಿ ಗೆಣಸಿನ ಅಡ್ಡಪರಿಣಾಮಗಳು ಯಾವುವು?

  • ಬಹಳ ಅಪರೂಪವಾಗಿದ್ದರೂ, ಕೆಲವರಿಗೆ ಸಿಹಿ ಗೆಣಸು ತೀವ್ರ ಅಲರ್ಜಿಗೆ ಕಾರಣವಾಗಬಹುದು.
  • ಸಿಹಿ ಗೆಣಸಿನಲ್ಲಿ ಕಾರ್ಬೋಹೈಡ್ರೇಟ್ ಅಧಿಕವಾಗಿರುವುದರಿಂದ ಮಧುಮೇಹಿಗಳು ಮಿತವಾಗಿ ಅಥವಾ ಅವರ ವೈದ್ಯರ ಸಲಹೆ ತೆಗೆದುಕೊಂಡು ಸೇವಿಸಬೇಕು.
  • ಮೂತ್ರಪಿಂಡದ ಕಲ್ಲುಗಳಿಂದ ಬಳಲುತ್ತಿರುವವರು ಸಿಹಿ ಗೆಣಸು ಎಚ್ಚರಿಕೆಯಿಂದ ಸೇವಿಸಬೇಕು.
  • ಹೊಟ್ಟೆಯ ಅಸ್ವಸ್ಥತೆಯಿಂದ ಬಳಲುತ್ತಿರುವಾಗ ಹೆಚ್ಚು ಸಿಹಿ ಗೆಣಸುಗಳನ್ನು ತಿನ್ನುವುದು ಅತಿಸಾರ, ಹೊಟ್ಟೆ ನೋವು ಮತ್ತು ಉಬ್ಬುವಿಕೆಗೆ ಕಾರಣವಾಗಬಹುದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: