- Kannada News Lifestyle Healthy relationship tips to balance your personal and professional life details in kannada
Relationship tips: ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನ ಬ್ಯಾಲೆನ್ಸ್ ಮಾಡಲು ಸಿಂಪಲ್ ಟಿಪ್ಸ್
ಅತಿಯಾದ ಕೆಲಸದಿಂದಾಗಿ ಹಲವು ಬಾರಿ ತಿಂಗಳುಗಟ್ಟಲೆ ನಮ್ಮ ಕುಟುಂಬವನ್ನು ಭೇಟಿ ಮಾಡಲು ಸಾಧ್ಯವಾಗುವುದಿಲ್ಲ. ನೀವೂ ಹೀಗೆ ಮಾಡಿದರೆ ಇನ್ಮುಂದೆ ನಿಮ್ಮ ಈ ಅಭ್ಯಾಸವನ್ನು ಬದಲಾಯಿಸಿಕೊಳ್ಳಬೇಕು. ಇದಕ್ಕಾಗಿ ನಿಮ್ಮ ವೃತ್ತಿಪರ ಜೀವನವು ನಿಮ್ಮ ವೈಯಕ್ತಿಕ ಜೀವನವನ್ನು ಸಮತೋಲನ ಮಾಡಿಕೊಳ್ಳಬೇಕು.
Updated on:Jan 28, 2023 | 9:39 PM

ಒತ್ತಡದ ಹಾಗೂ ಬ್ಯುಸಿ ವೃತ್ತಿ ಜೀವನದ ನಡುವೆ ಕುಟುಂಬಕ್ಕೆ ಕೊಂಚ ಸಮಯ ನೀಡುವುದು ಬಲುಕಷ್ಟವಾಗಿದೆ. ಹೀಗಿದ್ದಾಗ ನಿಮ್ಮ ಪ್ರೀತಿಪಾತ್ರರು ನಿಮ್ಮ ಪ್ರೀತಿಯಿಂದ ವಂಚಿತರಾಗುತ್ತಾರೆ. ಹೀಗಿದ್ದಾಗ ನಿಮ್ಮ ವೃತ್ತಿಪರ ಜೀವನ ಮತ್ತು ನಿಮ್ಮ ವೈಯಕ್ತಿಕ ಜೀವನವನ್ನು ಸಮತೋಲನ ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕಾಗಿ ಇಂದಿನಿಂದಲೇ ತಯಾರಿ ನಡೆಸಬೇಕು.

ವ್ಯಕ್ತಿ ಬೆಳೆಯುತ್ತಿದ್ದಂತೆ ಉದ್ಯೋಗದಲ್ಲಿ ಬ್ಯುಸಿಯಾಗಿರುತ್ತಾನೆ. ವೃತ್ತಿಪರ ಜೀವನದಿಂದಾಗಿ ನಾವು ನಮ್ಮ ವೈಯಕ್ತಿಕ ಜೀವನದಿಂದ ದೂರವಾಗುತ್ತೇವೆ. ಹೀಗೆ ಯಾವತ್ತಿಗೂ ಮಾಡಬಾರದು. ನಿಮ್ಮ ಜೀವನವನ್ನು ಸಮತೋಲನದಲ್ಲಿಟ್ಟುಕೊಳ್ಳಬೇಕು. ಇದಕ್ಕೆ ಸಹಾಯಕವಾಗುವ ಕೆಲವು ಸುಲಭವಾದ ವಿಧಾನಗಳು ಇಲ್ಲಿವೆ.

ಅತಿಯಾದ ಕೆಲಸದಿಂದಾಗಿ ಹಲವು ಬಾರಿ ತಿಂಗಳುಗಟ್ಟಲೆ ಕುಟುಂಬವನ್ನು ಭೇಟಿ ಮಾಡಲು ಸಾಧ್ಯವಾಗುವುದಿಲ್ಲ. ನೀವೂ ಹೀಗೆ ಮಾಡುತ್ತಿದ್ದರೆ ಇನ್ಮುಂದೆ ನಿಮ್ಮ ಈ ಅಭ್ಯಾಸವನ್ನು ಬದಲಾಯಿಸಿಕೊಳ್ಳಬೇಕು. ಕಾಲಕಾಲಕ್ಕೆ ಮನೆಯವರೊಂದಿಗೆ ಮಾತನಾಡುತ್ತಿರಿ. ಹೀಗೆ ಮಾಡುವುದರಿಂದ ನೀವು ನಿಮ್ಮ ಜೀವನವನ್ನು ಸಮತೋಲನದಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ.

ಕೆಲಸದ ಜೊತೆಗೆ ನೀವು ನಿಮಗಾಗಿ ಸಮಯವನ್ನು ಮೀಸಲಿಡಬೇಕು. ಕುಟುಂಬದೊಂದಿಗೆ ತಿಂಗಳಿಗೊಮ್ಮೆಯಾದರೂ ನೀವು ಖಂಡಿತವಾಗಿಯೂ ರಜಾದಿನಗಳಲ್ಲಿ ಹೊರಗೆ ಹೋಗಬೇಕು. ಹೀಗೆ ಮಾಡುವುದರಿಂದ ನಿಮ್ಮ ಜೀವನವನ್ನು ಚೆನ್ನಾಗಿ ಸಮತೋಲನದಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಜೀವನವನ್ನು ಸರಿಯಾದ ರೀತಿಯಲ್ಲಿ ಸಮತೋಲನಗೊಳಿಸುವುದು ಬಹಳ ಮುಖ್ಯ.

ಕೆಲವೊಮ್ಮೆ ವರ್ಷಗಳಿಂದ ಸ್ನೇಹಿತರನ್ನು ಭೇಟಿಯಾಗಲು ಸಾಧ್ಯವಾಗುವುದಿಲ್ಲ. ನೀವೂ ಹೀಗೆ ಮಾಡಿದರೆ ಸ್ನೇಹ ಬಳಗ ದೂರವಾಗಬಹುದು. ಕೆಲವೊಮ್ಮೆ ನೀವು ನಿಮ್ಮ ಬಾಲ್ಯದ ಸ್ನೇಹಿತರೊಂದಿಗೆ ಸಂದೇಶಗಳ ಮೂಲಕ ಮಾತನಾಡುತ್ತಿರಬೇಕು. ಇಲ್ಲವಾದರೆ ತಿಂಗಳಿಗೊಮ್ಮೆ ಸ್ನೇಹಿತರಿಗೂ ಒಂದು ದಿನ ಮೀಸಲಿಟ್ಟು ಪ್ರವಾಸ ಕೈಗೊಳ್ಳಬೇಕು, ಪಾರ್ಟಿ ಆಯೋಜಿಸಬೇಕು. (ಸುದ್ದಿ ಮೂಲ: herzindagi)

ನೀವು ಕುಟುಂಬದ ಬದ್ಧತೆಯನ್ನು ಹೊಂದಿದ್ದರೆ, ಕೆಲಸದಿಂದ ಹೊರಬರಲು ಸಾಧ್ಯವಾಗದಿದ್ದರೆ, ನೀವು ನಿಮ್ಮ ಕೆಲಸವನ್ನು ಮನೆಯಿಂದಲೇ ಮಾಡಬಹುದು ಮತ್ತು ಉಳಿದ ಸಮಯವನ್ನು ನಿಮ್ಮ ಕುಟುಂಬದೊಂದಿಗೆ ಕಳೆಯಬಹುದು.
Published On - 9:19 pm, Sat, 28 January 23




