AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Beauty Tips: ನಿಮ್ಮ ಸೌಂದರ್ಯವನ್ನು ಹೆಚ್ಚಿಸಲು ಇಲ್ಲಿದೆ 10 ಸಲಹೆ

ಚರ್ಮದಿಂದ ಹಿಡಿದು ಕೂದಲಿನವರೆಗೆ, ಸೌಂದರ್ಯವನ್ನು ಲಘುವಾಗಿ ಪರಿಗಣಿಸಲಾಗುವುದಿಲ್ಲ. ಹಾಗಾಗಿ ತಜ್ಞರಾದ ಶಹನಾಜ್ ಹುಸೇನ್ ಅವರು ನಮ್ಮ ದಿನಚರಿಯಲ್ಲಿ ಸೌಂದರ್ಯವನ್ನು ಹೆಚ್ಚಿಸಲು ಕೆಲವು ಸಲಹೆಗಳನ್ನು ಹಂಚಿಕೊಂಡಿದ್ದಾರೆ! ಈ ಬಗ್ಗೆ ಮಾಹಿತಿ ಇಲ್ಲಿದೆ.

Beauty Tips: ನಿಮ್ಮ ಸೌಂದರ್ಯವನ್ನು ಹೆಚ್ಚಿಸಲು ಇಲ್ಲಿದೆ 10 ಸಲಹೆ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: May 15, 2023 | 11:30 AM

Share

ಬೆಸಗೆಯಲ್ಲಿ ಸೌಂದರ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ತುಂಬಾ ಉತ್ತಮ. ನಮ್ಮ ದಿನ ನಿತ್ಯದ ಜೀವನ ಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಕೆಲವರು ತಮ್ಮ ಚರ್ಮ, ಕೂದಲು ಮತ್ತು ಆರೋಗ್ಯಕರ ಸೌಂದರ್ಯದ ಆರೈಕೆಯ ಬಗ್ಗೆ ಹಿಂದೆಂದಿಗಿಂತಲೂ ಹೆಚ್ಚು ಕಾಳಜಿ ವಹಿಸುತ್ತಾರೆ ಮತ್ತು ಅದರ ಬಗ್ಗೆ ಹೆಚ್ಚು ತಿಳಿದುಕೊಂಡಿದ್ದಾರೆ. ಆದರೆ ಕೆಲವರು ಹೆಚ್ಚಿನ ಆರೈಕೆ ಮಾಡಿಕೊಳ್ಳುವುದಿಲ್ಲ, ಜೊತೆಗೆ ಅದನ್ನು ನಿರ್ಲಕ್ಷಿಸುತ್ತಾರೆ. ಹಾಗಾಗಿ ಸೌಂದರ್ಯದ ಬಗ್ಗೆ ಕೆಲವು ಒಳ್ಳೆಯ ಅಭ್ಯಾಸಗಳನ್ನು ಬೆಳೆಸಿಕೊಳ್ಳುವುದು ಉತ್ತಮವಾಗಿದೆ. ಸೌಂದರ್ಯವನ್ನು ರಕ್ಷಿಸಲು ಮತ್ತು ಹೆಚ್ಚುವರಿ ಆರೈಕೆ ಮಾಡಲು ತಜ್ಞರಾದ ಶಹನಾಜ್ ಹುಸೇನ್ ಕೆಲವು ಸಲಹೆಗಳು ನೀಡಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

10 ಬ್ಯೂಟಿ ಸಲಹೆಗಳು ಇಲ್ಲಿವೆ:

-ನಿಮ್ಮ ಕೂದಲನ್ನು ಸ್ವಚ್ಛವಾಗಿರಿಸಿಕೊಳ್ಳಿ ಮತ್ತು ಕೂದಲಿಗೆ ಶಾಂಪೂ ಹಾಕುವುದನ್ನು ನಿರ್ಲಕ್ಷಿಸಬೇಡಿ. ನಿಮ್ಮ ಕೂದಲು ಅತ್ಯುತ್ತಮವಾಗಿ ಕಾಣಲು ಮತ್ತು ಆರೋಗ್ಯಕರವಾಗಿರಲು ಇದು ಬಹಳ ಮುಖ್ಯ. ಅದರಲ್ಲಿಯೂ ಉತ್ತಮವಾದ ಮತ್ತು ನೈಸರ್ಗಿಕ ಶಾಂಪೂ ಬಳಸುವುದು ಇನ್ನು ಉತ್ತಮ. ಕೂದಲನ್ನು ತೊಳೆದ ನಂತರ ಅದನ್ನು ಟವೆಲ್​​​ನಲ್ಲಿ ಸುತ್ತಿ ತೇವಾಂಶವನ್ನು ಸಂಪೂರ್ಣವಾಗಿ ಹಿರಲು ಬಿಡಿ. ಅತಿಯಾಗಿ ಕೂದಲನ್ನು ಉಜ್ಜುವುದನ್ನು ತಪ್ಪಿಸಿ. ಇದು ಕೂದಲನ್ನು ಜಿಗುಟು ಮತ್ತು ಶುಷ್ಕವಾಗಿಸುತ್ತದೆ. ಹಾಗಾಗಿ ಒದ್ದೆಯಾದ ಕೂದಲನ್ನು ಉಜ್ಜುವುದನ್ನು ತಪ್ಪಿಸಿ. ಅಲ್ಲದೆ ಅಗಲವಾದ ಹಲ್ಲಿನ ಬಾಚಣಿಗೆಯನ್ನು ಬಳಸುವುದು ಉತ್ತಮ.

-ಮೊಡವೆಗಳು ಅಥವಾ ದದ್ದು ಇರುವ ಚರ್ಮದ ಮೇಲೆ ಸ್ಕ್ರಬ್ ಗಳನ್ನು ಬಳಸುವುದನ್ನು ತಪ್ಪಿಸಿ. ಸೂಕ್ಷ್ಮ, ಶುಷ್ಕ, ನಿರ್ಜಲೀಕರಣಗೊಂಡ ಚರ್ಮದ ಮೇಲೆ ಸ್ಕ್ರಬ್ ಗಳನ್ನು ಬಳಸಬಾರದು, ಏಕೆಂದರೆ ಅವು ತೈಲ ಮತ್ತು ತೇವಾಂಶ ವಿರುವ ಚರ್ಮವನ್ನು ಕ್ಷೀಣಿಸುತ್ತವೆ. ಅಲ್ಲದೆ ಚರ್ಮ ತುಂಬಾ ಶುಷ್ಕವಾಗಿದ್ದರೆ ಅದು ಸಿಪ್ಪೆ ಸುಲಿಯಲು ಸಹ ಕಾರಣವಾಗಬಹುದು.

-ವಾರಕ್ಕೊಮ್ಮೆಯಾದರೂ ಫೇಸ್ ಮಾಸ್ಕ್ ಹಾಕಿಕೊಳ್ಳಿ. ನಿಮ್ಮ ಚರ್ಮವು ಎಣ್ಣೆಯುಕ್ತ ವಾಗಿದ್ದರೆ, ಫೇಸ್ ಮಾಸ್ಕ್ ಅನ್ನು ಹೆಚ್ಚಾಗಿ ಅನ್ವಯಿಸುವುದು ಒಳ್ಳೆಯದು. ಫೇಸ್ ಮಾಸ್ಕ್ ಗಳು ಚರ್ಮವನ್ನು ಆಳವಾಗಿ ಶುದ್ಧೀಕರಿಸಲು ಮತ್ತು ಬಿಗಿಗೊಳಿಸಲು ಸಹಾಯ ಮಾಡುತ್ತವೆ. ಅಲ್ಲದೆ ವಯಸ್ಸಾದಂತೆ ಕಾಣುವ ಚರ್ಯೆಯನ್ನು ವಿಳಂಬಗೊಳಿಸಲು ಸಹಾಯ ಮಾಡುತ್ತವೆ. ಚರ್ಮದ ಪ್ರಕಾರಕ್ಕೆ ಅನುಗುಣವಾಗಿ ಮಾಸ್ಕ್ ಅನ್ನು ಆರಿಸಿಕೊಳ್ಳುವುದು ಉತ್ತಮ.

ಇದನ್ನೂ ಓದಿ:Beauty Tips For Winter: ಚಳಿಗಾಲದಲ್ಲಿ ನಿಮ್ಮ ತ್ವಚೆಯ ಆರೈಕೆಗೆ ಹೆಚ್ಚಿನ ಆದ್ಯತೆ ನೀಡಿ, ಇಲ್ಲಿವೆ ಬ್ಯೂಟಿ ಟಿಪ್ಸ್

-ಪ್ರತಿದಿನ ರಾತ್ರಿ ನಿಮ್ಮ ಮುಖವನ್ನು ಸ್ವಚ್ಛಗೊಳಿಸಲು ಮರೆಯದಿರಿ, ಮೇಕಪ್​​​ನ್ನು ಹಾಗೂ ಹಗಲಿನಲ್ಲಿ ಸಂಗ್ರಹವಾಗಿರುವ ಎಲ್ಲಾ ಮಾಲಿನ್ಯಕಾರಕಗಳನ್ನು ತೆಗೆದುಹಾಕಲು ಇದು ಸಹಾಯ ಮಾಡುತ್ತದೆ. ಶುಷ್ಕ ಚರ್ಮಕ್ಕಾಗಿ ಕ್ರೀಮ್ ಅಥವಾ ಜೆಲ್ ಆಧಾರಿತ ಕ್ಲೆನ್ಸರ್ ಬಳಸಿ ಮತ್ತು ಎಣ್ಣೆಯುಕ್ತ ಚರ್ಮವಿರುವವರು ಹಾಲಿನಿಂದ ತಯಾರಾದ ಉತ್ಪನ್ನಗಳನ್ನು ಬಳಸುವುದು ಉತ್ತಮ. ಹೀಗೆ ಮಾಡುವುದರಿಂದ ಮುಖವು ಕಲೆಗಳಿಂದ ಮುಕ್ತವಾಗಿ ಹೊಳೆಯುವ ಚರ್ಮವು ನಿಮ್ಮದಾಗುತ್ತದೆ. ನೀವು ಹೆಚ್ಚು ಮೇಕಪ್ ಮಾಡಿಕೊಂಡಿದ್ದಲ್ಲಿ ತೇವವಾದ ಹತ್ತಿ ಉಣ್ಣೆಯೊಂದಿಗೆ ಕ್ರೀಮ್ ಅನ್ನು ತೆಗೆಯಿರಿ. ಇದರಿಂದ ಚರ್ಮದಿಂದ ತೇವಾಂಶವು ಕಡಿಮೆಯಾಗುವುದಿಲ್ಲ.

-ಬಿಸಿಲಿನಲ್ಲಿ ಹೊರಗೆ ಹೋಗುವ ಮೊದಲು ಸನ್ ಸ್ಕ್ರೀನ್ ಬಳಸಿ. ಹೆಚ್ಚು ಸಮಯದವರೆಗೆ ಬಿಸಿಲಿನಲ್ಲಿ ಇರಬೇಕಾದರೆ ಹೆಚ್ಚಿನ ಎಸ್ಪಿಎಫ್ ಹೊಂದಿರುವ ಸನ್ಸ್ಕ್ರೀನ್ ಅನ್ನು ಆರಿಸಿ. ನೀವು ಮನೆಗೆ ಹಿಂದಿರುಗಿದಾಗ, ಮಾಯಿಶ್ಚರೈಸರ್ ಬಳಸಿ, ಏಕೆಂದರೆ ಸೂರ್ಯನ ಕಿರಣಗಳು ಚರ್ಮವನ್ನು ಟ್ಯಾನ್ ಮಾಡುವುದು ಮಾತ್ರವಲ್ಲದೆ ತೇವಾಂಶವನ್ನು ಕಡಿಮೆ ಮಾಡುತ್ತದೆ. ಪ್ರತಿದಿನ ನಿಮ್ಮ ಕೈ, ಕಾಲು ಮತ್ತು ಮುಖಕ್ಕೆ ಕ್ರೀಮ್ ಹಚ್ಚಿಕೊಳ್ಳಿ. ರಾತ್ರಿ ಹಚ್ಚಿದ ಮೇಲೆ ಅದನ್ನು ಬೆಳಿಗ್ಗೆ ತೊಳೆದು ಸ್ನಾನ ಮಾಡಿ ಬಳಿಕ, ಮತ್ತೆ ಹಚ್ಚಿಕೊಳ್ಳಿ.

-ಉತ್ತಮ ಸನ್ ಗ್ಲಾಸ್ ತೆಗೆದುಕೊಳ್ಳಿ. ಅವು ನಿಮ್ಮ ಕಣ್ಣುಗಳನ್ನು ಸೂರ್ಯನಿಂದ ರಕ್ಷಿಸುವುದಲ್ಲದೆ, ಗಾಳಿಯಲ್ಲಿನ ಕೊಳಕು ಮತ್ತು ಮಾಲಿನ್ಯಕಾರಕಗಳಿಂದ ರಕ್ಷಿಸುತ್ತವೆ. ಅವು ಇಲ್ಲವಾದಲ್ಲಿ ಕಾಲಾಂತರದಲ್ಲಿ ಕಣ್ಣುಗಳ ಸುತ್ತಲೂ ಸುಕ್ಕುಗಳು ಮೂಡಿಬರುತ್ತವೆ.

ಇದೆಲ್ಲದರ ಜೊತೆ ಪ್ರತಿನಿತ್ಯವೂ ಮೊಳಕೆಯೊಡೆದ ಧಾನ್ಯಗಳು ಮತ್ತು ಬೇಳೆಕಾಳುಗಳನ್ನು ಸೇವಿಸಿ (ಉದಾಹರಣೆಗೆ ಹೆಸರುಕಾಳು ಮತ್ತು ಕಡಲೆ). ಅವು ಆರೋಗ್ಯಕರ ಕೂದಲು ಮತ್ತು ಚರ್ಮಕ್ಕೆ ಪೋಷಕಾಂಶಗಳನ್ನು ಹೊಂದಿರುವ ಭಂಡಾರವಾಗಿದೆ. ಸೌತೆಕಾಯಿ, ಟೊಮೆಟೊ, ನಿಂಬೆಹಣ್ಣಿನ ರಸ, ಚಿಟಿಕೆ ಉಪ್ಪು ಮತ್ತು ಮೆಣಸನ್ನು ಸೇರಿಸಿ, ಅವುಗಳ ರುಚಿಯನ್ನು ಹೆಚ್ಚಿಸಿ ಕೊಂಡು ಅದನ್ನು ಸೇವಿಸಬಹುದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್